HOME » NEWS » District » ONE PAIR BULLS PULL 15 TONE SUGARCANE ON BULLOCK RH RGM

ಸಕ್ಕರೆನಾಡು ಮಂಡ್ಯದಲ್ಲಿ ಜೋಡೆತ್ತುಗಳ ಕಮಾಲ್;15 ಟನ್ ಭಾರದ ಕಬ್ಬಿನ ಗಾಡಿ ಎಳೆದ ಎತ್ತುಗಳು

ಈ ಜೋಡೆತ್ತುಗಳು 15 ಟನ್ ಭಾರದ ಎತ್ತಿನಗಾಡಿ ಎಳೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಜೋಡೆತ್ತುಗಳ ಬಲ ನೋಡಿ ಫುಲ್ ಫಿದಾ ಆಗಿರೋದಂತೂ ಸುಳ್ಳಲ್ಲ.

news18-kannada
Updated:November 22, 2020, 8:14 PM IST
ಸಕ್ಕರೆನಾಡು ಮಂಡ್ಯದಲ್ಲಿ ಜೋಡೆತ್ತುಗಳ ಕಮಾಲ್;15 ಟನ್ ಭಾರದ ಕಬ್ಬಿನ ಗಾಡಿ ಎಳೆದ ಎತ್ತುಗಳು
ಎತ್ತಿನಗಾಡಿಗೆ 15 ಟನ್ ಕಬ್ಬು ತುಂಬಿರುವುದು.
  • Share this:
ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಜೋಡೆತ್ತುಗಳು ಮತ್ತೆ ಸದ್ದು ಮಾಡುತ್ತಿವೆ. ಅಂದ್ಹಾಗೆ, ಈ ಬಾರಿ ಹವಾ ಸೃಷ್ಟಿಸಿರೋದು ಎಲೆಕ್ಷನ್ ಜೋಡೆತ್ತುಗಳಲ್ಲ. ಬದಲಿಗೆ ಅಸಲಿ ಜೋಡೆತ್ತುಗಳು. ಈ ಜೋಡೆತ್ತುಗಳ ಸಾಧನೆ ಒಂದೆಡೆ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿದ್ರೆ, ಮತ್ತೊಂದೆಡೆ ಸಾರ್ವಜನಿಕರ ಆಕ್ರೋಶಕ್ಕೂ ತುತ್ತಾಗಿದೆ.

ಹೌದು, ಸಕ್ಕರೆ ನಾಡು ಮಂಡ್ಯ ಅಂದ್ರೆ, ಕಬ್ಬಿಗೆ ಪ್ರಸಿದ್ಧಿ. ಇಲ್ಲಿ ಎತ್ತಿನ ಗಾಡಿಯಲ್ಲಿ ಕಬ್ಬು ಏರುವುದು ಸರ್ವೇ ಸಾಮಾನ್ಯ. ಸಾಮಾನ್ಯವಾಗಿ ಎತ್ತಿನಗಾಡಿಗೆ 5 ರಿಂದ 8 ಟನ್ ಒಳಗೆ ಕಬ್ಬನ್ನು ತುಂಬುತ್ತಾರೆ. ಆದರೆ, ಮಂಡ್ಯ ತಾಲೂಕಿನ ಹೆಚ್.ಮಲ್ಲಿಗೆರೆ ಗ್ರಾಮದ ವಿನಾಯಕ ಗೆಳೆಯರ ಬಳಗದ ಯುವಕರು ಎತ್ತಿನಗಾಡಿಗೆ 15.68 ಟನ್ ಕಬ್ಬು ತುಂಬಿ ಸಾಧನೆ ಮಾಡಿದ್ದಾರೆ. ಈ ಕಬ್ಬಿನ ಗಾಡಿಯನ್ನು ಎಳೆದ ಜೋಡೆತ್ತುಗಳು ನೋಡುಗರನ್ನು ನಿಬ್ಬೆರಗು ಮಾಡಿವೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಈ ಎತ್ತುಗಳ ಶಕ್ತಿಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಇನ್ನು ಮಂಡ್ಯ ಜಿಲ್ಲೆಯಲ್ಲಿ ಇಲ್ಲಿವರೆಗೆ 12 ಟನ್ ತುಂಬಿರುವುದು ಅದೇ ಸಾಧನೆ ಎನ್ನಲಾಗಿತ್ತು. ಆದರೆ, ಮಲ್ಲಿಗೆರೆಯ ಯುವಕರ ತಂಡ 14.55 ಟನ್ ಕಬ್ಬು ತುಂಬಿ ಹಳೆಯ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. ಇಷ್ಟು ಟನ್ ಕಬ್ಬು ತುಂಬಿದ ಎತ್ತಿನ ಗಾಡಿಯನ್ನು ಹುರುಗಲವಾಡಿ ಗ್ರಾಮದ ಶರತ್ ಎಂಬುವವರ ಜೋಡೆತ್ತುಗಳು ಮೂರು ಕಿಲೋಮೀಟರ್ ಎಳೆದು ಸೈ ಎನ್ನಿಸಿಕೊಂಡಿವೆ. ಈ ಜೋಡೆತ್ತುಗಳನ್ನು ಶರತ್ ಅವರು ಕಳೆದ ತಿಂಗಳಷ್ಟೇ 2.90 ಲಕ್ಷ ಹಣ ನೀಡಿ ಖರೀದಿ ಮಾಡಿದ್ದರು. ನಿನ್ನೆ 15.68 ಟನ್ ಕಬ್ಬಿನ ಗಾಡಿಯನ್ನು ಈ ಜೋಡೆತ್ತುಗಳು ಎಳೆಯುವಾಗ ಜನರು ಶಿಳ್ಳೆ ಚಪ್ಪಾಳೆ ಹೊಡೆಯುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಇಷ್ಟು ಬಲಶಾಲಿ ಎತ್ತುಗಳು ಇವೆಯಾ ಎಂದು ಎಲ್ಲರೂ ಬಾಯಿಯ ಮೇಲೆ ಬೆಳೆರಳು ಇಟ್ಟುಕೊಂಡಿದ್ದಾರೆ.

ಇದನ್ನು ಓದಿ: ಜ್ಯುವೆಲ್ಲರಿ ಶಾಪ್ ಮೇಲೆ ನಕಲಿ ರೈಡ್ ಮಾಡಿ ಅರೆಸ್ಟ್ ಆದ ಕಾನ್ಸ್‌ಟೇಬಲ್!

ಮತ್ತೊಂದೆಡೆ, ಈ ಸಾಧನೆ ಪ್ರಾಣಿ ದಯಾ ಸಂಘದವರ ಕೆಂಗಣ್ಣಿಗೆ ಗುರಿಯಾಗಿದೆ. ಯುವಕರು ತಮ್ಮ ಕ್ರೇಜ್ ಗಾಗಿ ಮೂಕ ಪ್ರಾಣಿಗಳನ್ನ ಈ ರೀತಿ ದಂಡಿಸೋದು ಎಷ್ಟು ಸರಿ ಅನ್ನೋ ಪ್ರಶ್ನೆ ಎತ್ತಿದ್ದಾರೆ. ಮನುಷ್ಯರೇನೋ ಮಾತಿನ ಮೂಲಕ ತಮ್ಮ ನೋವು ತೋರ್ಪಡಿಸ್ತಾರೆ. ಆದರೆ, ಮೂಕ ಪ್ರಾಣಿಗಳು ಯಾವ ರೀತಿ ತಮ್ಮ ವೇದನೆ ನಿವೇದಿಸಿಕೊಳ್ತಾವೆ?. ದುಡಿಯೋ ಎತ್ತುಗಳನ್ನ ಈ ರೀತಿ ಅರ್ಥ ಹೀನವಾಗಿ ನೋಡಿಸಿಕೊಳ್ಳೋದು ಎಷ್ಟು ಸರಿ ಅಂತಿದ್ದಾರೆ.
Youtube Video

ಒಟ್ಟಾರೆ ಈ ಜೋಡೆತ್ತುಗಳು 15 ಟನ್ ಭಾರದ ಎತ್ತಿನಗಾಡಿ ಎಳೆಯುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ಜೋಡೆತ್ತುಗಳ ಬಲ ನೋಡಿ ಫುಲ್ ಫಿದಾ ಆಗಿರೋದಂತೂ ಸುಳ್ಳಲ್ಲ.
Published by: HR Ramesh
First published: November 22, 2020, 8:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories