ರಾಯಚೂರು; ಕ್ಷುಲ್ಲಕ ಕಾರಣಕ್ಕೆ ಒಂದು ಕೊಲೆ, ಮತ್ತೊಬ್ಬರು ಆತ್ಮಹತ್ಯೆಗೆ ಶರಣು!

ರಾಯಚೂರಿನಲ್ಲಿ ಕೇವಲ 40 ಸಾವಿರ ರೂಪಾಯಿಗಾಗಿ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದ್ದರೆ, ಗಂಡ ನನ್ನ ಬಳಿ ಸರಿಯಾಗಿ ಮಾತನಾಡಿಸುತ್ತಿಲ್ಲ, ನನ್ನೊಂದಿಗೆ ಹೆಚ್ಚು ಕಾಲಕಳೆಯುತ್ತಿಲ್ಲ ಎಂಬ ಕಾರಣಕ್ಕೆ ಗೃಹಿಣಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ರಾಯಚೂರು: ಇಂದು ಜಗತ್ತು ಎಷ್ಟು ಸೂಕ್ಷ್ಮವಾಗಿದೆ ಎನ್ನುವುದಕ್ಕೆ ಇಲ್ಲಿ ಎರಡು ಘಟನೆಗಳು ಸಾಕ್ಷಿಯಾಗಿವೆ. ಕೇವಲ 40 ಸಾವಿರ ರೂಪಾಯಿಗಾಗಿ ವ್ಯಕ್ತಿಯೊಬ್ಬನ ಕೊಲೆ ಮಾಡಲಾಗಿದೆ. ಇದೊಂದು ಘಟನೆಯಾದರೆ ತನ್ನ ಗಂಡ ನನ್ನನ್ನು ಸರಿಯಾಗಿ ಮಾತನಾಡಿಸುತ್ತಿಲ್ಲ, ನನ್ನೊಂದಿಗೆ ಹೆಚ್ಚು ಕಾಲಕಳೆಯುತ್ತಿಲ್ಲ ಎಂಬ ಕಾರಣಕ್ಕೆ ಗೃಹಿಣಿಯೊಬ್ಬಳು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆಯೂ ನಡೆದಿದೆ. ಈ ಎರಡು ಘಟನೆಗಳು ರಾಯಚೂರು ಜಿಲ್ಲೆಯಲ್ಲಿ ಒಂದೇ ದಿನ ನಡೆದಿದ್ದು, ಈ ಎರಡೂ ಘಟನೆಗಳ ಬಗ್ಗೆ ರಾಯಚೂರಿನ ಜನ ವಿಷಾಧ ವ್ಯಕ್ತಪಡಿಸಿದ್ದಾರೆ.

ಘಟನೆ 1: ಲಿಂಗಸಗೂರು ತಾಲೂಕಿನ‌ ಕಿಲಾರಹಟ್ಟಿ ಗ್ರಾಮದಲ್ಲಿ ಶರಣಗೌಡ 45 ಎಂಬುವವರು ಅದೇ ಗ್ರಾಮದ ಸಂಗನಗೌಡ ಎಂಬುವವರಿಗೆ 40 ಸಾವಿರ ರೂಪಾಯಿಯನ್ನು ಕೈಗಡ ಸಾಲವಾಗಿ ಕೊಟ್ಟಿದ್ದ. ಹಲವು ದಿನಗಳಿಂದ ಈ ಹಣಕ್ಕಾಗಿ ಸಂಗನಗೌಡನನ್ನು ಕೇಳಿದರೂ ನೀಡಿರಲಿಲ್ಲ. ಈ ಮಧ್ಯೆ ನಿನ್ನೆ ಮುಂಜಾನೆ ಸಂಗನಗೌಡ ಶರಣಗೌಡನಿಗೆ ನಿನ್ನ ಕೊಡುತ್ತೀನಿ ಬಾ ಎಂದು ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಸಂಗನಗೌಡನೊಂದಿಗೆ ಶರಣಪ್ಪ, ಅಮರಪ್ಪ, ಹನುಮಪ್ಪ, ದುರ್ಗಪ್ಪ, ಹನುಮಪ್ಪ ಹಾಗೂ ಶಾಂತಪ್ಪ ಎಂಬುವವರು ಸಹ ಸೇರಿದ್ದಾರೆ.

ಈ ಸಂದರ್ಭದಲ್ಲಿ ಸಂಗನಗೌಡ ಕುರಿ‌ಮರಿಗಳನ್ನು ಕೊಡಲು ಕೇಳಿದ್ದಾನೆ. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಕಲ್ಲು ತೆಗೆದುಕೊಂಡು ಶರಣಗೌಡನ ತಲೆಯ ಮೇಲೆ ಹಾಕಿ ಕೊಲೆ ಮಾಡಲಾಗಿದೆ. ಮೊದಲು ಈ ಪ್ರಕರಣ ಹೇಗಾಯಿತು ಎಂದು ತಿಳಿದಿರಲಿಲ್ಲ. ನಿಧಾನವಾಗಿ ವಿಚಾರಣೆ ಆರಂಭಿಸಿದಾಗ ಕೇವಲ 40 ಸಾವಿರ ರೂಪಾಯಿಗೆ ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಆರು ಜನ ಆರೋಪಿಗಳನ್ನು  ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ 2: ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶರಣಬಸವ ಕಾಲೋನಿಯಲ್ಲಿರುವ ಗೃಹಣಿಯೊಬ್ಬರು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀಣಾ ಶರಣಬಸವ (35) ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೀಣಾ ಹಾಗು ಶರಣಬಸವನಿಗೆ ಮದುವೆಯಾಗಿ 9 ವರ್ಷವಾಗಿದೆ. ಈಗ ಒಂದು ಮಗು ಸಹ ಇದೆ.

ಇದನ್ನೂ ಓದಿ: Rahul Gandhi: ರಾಹುಲ್‌ ಗಾಂಧಿಗೆ ಮಹಿಳೆ ಹೇಳಿದ ದೂರನ್ನು ತಪ್ಪಾಗಿ ಅನುವಾದಿಸಿದ ಪುದುಚೇರಿ ಸಿಎಂ!

ಖಾಸಗಿಯಾಗಿ ಕೆಲಸ ಮಾಡುವ ಶರಣಬಸವ ತನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ,  ನನ್ನ ಭಾವನೆಗಳಿಗೆ ಬೆಲೆ ಕೊಡ್ತಿಲ್ಲ, ಹೀಗಾಗಿ ನನಗೆ ಬದುಕೋಕೆ ಆಗ್ತಿಲ್ಲ. ನನ್ನ ಸಾವಿಗೆ ನಾನೇ ಕಾರಣ, ನನ್ನ ಗಂಡನಿಗೆ ಹಿಂಸೆ ನೀಡಬೇಡಿ ಎಂದು ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ನನ್ನೊಂದಿಗೆ ಮಾತನಾಡುತ್ತಿಲ್ಲ, ನಾನು ಸತ್ತ ಮೇಲಾದರೂ ಖುಷಿಯಾಗಿರು ನನಗೆ ಪ್ರೀತಿ ಮಾಡೋರೆ ಇಲ್ಲ. ನನ್ನೊಂದಿಗೆ ಕಾಲ‌ ಕಳೆಯುವವರು ಇಲ್ಲ. ಶರಣುಗೆ ತನ್ನದೆ ಚಿಂತೆ ನನ್ನ ಬಗ್ಗೆ ಕಾಳಜಿ ಇಲ್ಲ. ಹಾಗೆಯೆ ಮಗುವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಎರಡು ಪುಟ  ಡೆತ್ನೋ​​ಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣವನ್ನು ಸಿಂಧನೂರು ನಗರ ಠಾಣೆಯಲ್ಲಿ ದಾಖಲಿಸಿಕೊಂಡಿದ್ದಾರೆ. ಮೃತಳ ತಾಯಿ ಆತ್ಮಹತ್ಯೆಗೆ ಶರಣಬಸವನೇ ಕಾರಣ ಎಂಬ ದೂರು ನೀಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Published by:MAshok Kumar
First published: