ಕಲಬುರ್ಗಿಯನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೋನಾಘಾತ; ಒಂದೇ ದಿನ ನೂರು ಸೋಂಕು ದೃಢ

ಈ ಎಲ್ಲ ನೂರು ಜನರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ.  ಹೀಗಾಗಿ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳವಾರ ಸಂಜೆ ಪರೀಕ್ಷೆಯ ವರದಿ ಕೈಸೇರಿದ್ದು ಇಡೀ ಜಿಲ್ಲೆ ತತ್ತರಿಸುವಂತಾಗಿದೆ. ಒಂದೇ ದಿನ ಸೋಂಕಿತರ ಸಂಖ್ಯೆ ಸೆಂಚುರಿ ಬಾರಿಸಿದ್ದು, ರಾಜ್ಯದ ಪಟ್ಟಿಯಲ್ಲಿ ಕಲಬುರ್ಗಿ ಎರಡನೇಯ ಸ್ಥಾನಕ್ಕೇರಿದೆ.

news18-kannada
Updated:June 3, 2020, 7:28 AM IST
ಕಲಬುರ್ಗಿಯನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಕೊರೋನಾಘಾತ; ಒಂದೇ ದಿನ ನೂರು ಸೋಂಕು ದೃಢ
ವಲಸೆ ಕಾರ್ಮಿಕರು (ಸಾಂದರ್ಭಿಕ ಚಿತ್ರ)
  • Share this:
ಕಲಬುರ್ಗಿ (ಜೂ.03): ದೇಶದಲ್ಲೇ ಮೊದಲ ಕೊರೋನಾ ಸಾವು ಕಂಡ ಕುಖ್ಯಾತಿಗೆ ಒಳಗಾಗಿರುವ ಕಲಬುರ್ಗಿ ಜಿ‌ಲ್ಲೆಯಲ್ಲಿ ಮಾರಣಾಂತಿಕ ಕೊರೋನಾ ರುದ್ರನರ್ತನವಾಡುತ್ತಿದೆ. ಪರಿಣಾಮ ಮಂಗಳವಾರ ಒಂದೇ ದಿನ ಜಿಲ್ಲೆಯಲ್ಲಿ ನೂರಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದ್ದು ಆರೋಗ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.

ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 405ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿಗೆ ಒಳಗಾದವರ ಪೈಕಿ 19 ಮಕ್ಕಳು, 32 ಮಹಿಳೆಯರು, 49 ಪುರುಷರು ಸೇರಿದ್ದಾರೆ.

ಈ ಎಲ್ಲ ನೂರು ಜನರೂ ಮಹಾರಾಷ್ಟ್ರದಿಂದ ವಾಪಸ್ಸಾದ ವಲಸಿಗರಾಗಿದ್ದಾರೆ.  ಹೀಗಾಗಿ ಎಲ್ಲರನ್ನೂ ಸಾಂಸ್ತಿಕ ಕ್ವಾರಂಟೈನ್ ಮಾಡಲಾಗಿತ್ತು. ಮಂಗಳವಾರ ಸಂಜೆ ಪರೀಕ್ಷೆಯ ವರದಿ ಕೈಸೇರಿದ್ದು ಇಡೀ ಜಿಲ್ಲೆ ತತ್ತರಿಸುವಂತಾಗಿದೆ. ಒಂದೇ ದಿನ ಸೋಂಕಿತರ ಸಂಖ್ಯೆ ಸೆಂಚುರಿ ಬಾರಿಸಿದ್ದು, ರಾಜ್ಯದ ಪಟ್ಟಿಯಲ್ಲಿ ಕಲಬುರ್ಗಿ ಎರಡನೇಯ ಸ್ಥಾನಕ್ಕೇರಿದೆ.

ಮುಂಬೈಯಿಂದ ನಿನ್ನೆಯೂ ವಲಸಿಗರ ಆಗಮನ:

ಮುಂಬೈಯಿಂದ ಮಂಗಳವಾರವೂ ಸಹ ಕಲಬುರ್ಗಿಗೆ ಆಗಮಿಸಿರುವ ಉದ್ಯಾನ್ ಎಕ್ಸ್ ಪ್ರೆಸ್ ರೈಲಿನಲ್ಲಿ ಮತ್ತೆ ಸುಮಾರು 119 ವಲಸಿಗರು ಆಗಮಿಸಿದ್ದಾರೆ. ಕಲಬುರ್ಗಿ, ಬೀದರ್, ಬಸವಕಲ್ಯಾಣ, ಯಾದಗಿರಿಗೆ ಸೇರಿದ ವಲಸಿಗರು ಉದ್ಯಾನ್ ಎಕ್ಸ್ ಪ್ರೆಸ್ ಮೂಲಕ ಆಗಮಿಸಿದ್ದಾರೆ.

ಹೀಗೆ ಬಂದ ವಲಸಿಗರು ನೇರವಾಗಿ ಕ್ವಾರಂಟೈನ್ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಸಾರಿಗೆ ಬಸ್ ಮೂಲಕ ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಿಕೊಡಲಾಗಿದೆ. ಏಳು ದಿನಗಳ ಕಾಲ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ಗೆ ಸೂಚಿಸಲಾಗಿದೆ. ವಲಸಿಗರ ಆಗಮನ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನಿನ್ನೆ ಇದೇ ರೈಲಿನಲ್ಲಿ 90 ಜನ ವಲಸಿಗರ ಆಗಮಿಸಿದ್ದರು.

ಇದನ್ನೂ ಓದಿ : ಮೋದಿ-ಟ್ರಂಪ್ ಮಾತುಕತೆ; ಚೀನಾ ಗಡಿ ವಿವಾದ, ಅಮೆರಿಕದ ಹಿಂಸಾಚಾರ ಸೇರಿದಂತೆ ಮಹತ್ವದ ಚರ್ಚೆ

First published: June 3, 2020, 7:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading