Anekal: ಶಿಥಿಲಾವಸ್ಥೆಯತ್ತ ಸಾಗುತ್ತಿದ್ದ ಸರ್ಕಾರಿ ಶಾಲೆಗೆ ಹಳೆ ವಿದ್ಯಾರ್ಥಿಗಳಿಂದ ಹೈ ಟೆಕ್ ಸ್ಪರ್ಶ.

Government School: ಹಲವು ವರ್ಷಗಳ ಹಿಂದೆ ಬಳ್ಳೂರು ಶಾಲೆ ಅವ್ಯವಸ್ಥೆಯ ಅಗರವಾಗಿತ್ತು. ಸೂಕ್ತ ಕೊಠಡಿಗಳಿಲ್ಲದೆ ಮಕ್ಕಳು ದೂರದ ಊರುಗಳಿಗೆ ನಡೆದು ಸಾಗಬೇಕಿತ್ತು. ಇದ್ದಂತಹ ಕೊಠಡಿಗಳು ಸುಣ್ಣ ಬಣ್ಣ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದವು.

ಶಿಥಿಲಾವಸ್ಥೆಯಲ್ಲಿದ್ದ ಶಾಲೆ

ಶಿಥಿಲಾವಸ್ಥೆಯಲ್ಲಿದ್ದ ಶಾಲೆ

  • Share this:
ಸರ್ಕಾರಿ ಶಾಲೆ(Government School) ಅಂದ್ರೆ ಜನ ಮೂಗು ಮುರಿಯುತ್ತಾರೆ. ಅದ್ರಲ್ಲು ಪೋಷಕರು ತಮ್ಮ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಬೇಕು ಎಂದು ಪ್ರತಿಷ್ಠಿತ ಖಾಸಗಿ ಶಾಲೆಗಳತ್ತ(Private School) ಮುಖ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆ ಹಳೆ ವಿದ್ಯಾರ್ಥಿಗಳು ಶಿಥಿಲಾವಸ್ಥೆಯತ್ತ ಸಾಗುತ್ತಿದ್ದ ಗಡಿನಾಡ ಕನ್ನಡ ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.

ಹೌದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಗಡಿ ಗ್ರಾಮ ಬಳ್ಳೂರು ಮಾದರಿ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಶಿಥಿಲಾವಸ್ಥೆಯಲ್ಲಿದ್ದ ಶಾಲೆಗೆ ಮರುಜೀವ ಜೀವ ನೀಡಿದ್ದಾರೆ. ಸುತ್ತಲು ಕಾಂಪೌಂಡ್, ಕಾಂಪೌಂಡ್ ಮೇಲೆ ಸ್ವಚ್ಚತೆ ಬಗ್ಗೆ ಸಂದೇಶ ಸಾರುವ ಕಲರ್ ಪುಲ್ ಚಿತ್ರಗಳು. ನೂತನವಾಗಿ ನಿರ್ಮಾಣಗೊಂಡಿರುವ ಕೊಠಡಿಗಳು, ಖಾಸಗಿ ಶಾಲೆಯನ್ನು ಮೀರಿಸುವಂತಂಹ ಹೈ ಟೆಕ್ ಶೌಚಾಲಯ, ಟೈಲ್ಸ್ ನಿಂದ ನಿರ್ಮಿಸಿದ ಶಾಲಾ ಅವರಣ ಸುಸಜ್ಜಿತ ಸಭಾಂಗಣ, ಆಡುಗೆ ಮನೆ ನಿರ್ಮಿಸಿದ್ದಾರೆ.

ಆದ್ರೆ ಹಲವು ವರ್ಷಗಳ ಹಿಂದೆ ಬಳ್ಳೂರು ಶಾಲೆ ಅವ್ಯವಸ್ಥೆಯ ಅಗರವಾಗಿತ್ತು. ಸೂಕ್ತ ಕೊಠಡಿಗಳಿಲ್ಲದೆ ಮಕ್ಕಳು ದೂರದ ಊರುಗಳಿಗೆ ನಡೆದು ಸಾಗಬೇಕಿತ್ತು. ಇದ್ದಂತಹ ಕೊಠಡಿಗಳು ಸುಣ್ಣ ಬಣ್ಣ ಇಲ್ಲದೆ ಶಿಥಿಲಾವಸ್ಥೆ ತಲುಪಿದ್ದವು. ಇದರಿಂದ ನಿಯಮಿತವಾಗಿ ಶಾಲೆಗೆ ದಾಖಲಾಗುತ್ತಿದ್ದ ಮಕ್ಕಳ ಸಂಖ್ಯೆಯು ಇಳಿಮುಖದತ್ತ ಸಾಗಿತ್ತು. ಆದ್ರೆ ಬಳ್ಳೂರು ಶಾಲೆ ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಅಭಿವೃದ್ಧಿ ಮಾಡುವುದರ ಜೊತೆಗೆ ಮಾದರಿ ಶಾಲೆಯಾಗಿ ನಿರ್ಮಿಸುವ ಮೂಲಕ ಖಾಸಗಿ ಶಾಲೆಯನ್ನು ಮೀರಿಸುವಂತಿದೆ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳಾದ ವಸಂತ್, ನಾರಾಯಣರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿವಾದದ ಕಿಡಿ ಹೊತ್ತಿಸಿದ 2ನೇ ತರಗತಿಯ ಈ ಕವಿತೆ; ಅದರಲ್ಲಿ ಅಂತಹದ್ದೇನಿದೆ?

ಇನ್ನೂ ಸರ್ಕಾರಿ ಶಾಲೆ ಎಂದರೆ ಸಾಮಾನ್ಯವಾಗಿ ಜನ ಸಾಮಾನ್ಯರಲ್ಲಿ ಒಂದು ರೀತಿಯ ಕಿಳರಿಮೆ ಮನೆ ಮಾಡಿದೆ. ಇದನ್ನು ಹೊಗಲಾಡಿಸಬೇಕು. ಜೊತೆಗೆ ನಾವು ವಿದ್ಯಾಭ್ಯಾಸ ಮಾಡಿದ ಶಾಲೆಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಹಳೆ ವಿದ್ಯಾರ್ಥಿಗಳು ಸೇರಿ ಶಾಲೆಯನ್ನು ಅಭಿವೃದ್ಧಿ ಮಾಡಲಾಗಿದೆ. ಶಾಲೆಯನ್ನು ಸುಮಾರು 20 ಲಕ್ಷ ವೆಚ್ಚದಲ್ಲಿ ಎರಡು ಸುಸಜ್ಜಿತ ಕೊಠಡಿಗಳು, ವಿಶಾಲವಾದ ಸಭಾಂಗಣ ಮತ್ತು ವ್ಯವಸ್ಥಿತ ಆಡುಗೆ ಮನೆ ನಿರ್ಮಿಸಲಾಗಿದೆ. ಎನ್ ಜಿ ಓ ಗಳ ನೆರವಿನಿಂದ ಮಕ್ಕಳಿಗೆ ಹೈ ಟೆಕ್ ಶೌಚಾಲಯ ನಿರ್ಮಿಸಲಾಗಿದೆ.

ವಿದ್ಯಾರ್ಥಿಗಳಿಗೆ ಅಗತ್ಯವಾದ ಆದುನಿಕ ಶೈಲಿಯ ಡೆಸ್ಕ್ಗಳನ್ನು ಒದಗಿಸಲಾಗಿದೆ. ಶಾಲೆಯ ಸುತ್ತಲೂ ಕಾಂಪೌಂಡ್ ನಿರ್ಮಿಸಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಚಿತ್ರ ಮತ್ತು ಸಂದೇಶಗಳನ್ನು ಮುದ್ರಿಸಲಾಗಿದೆ. ಶಾಲಾ ಅವರಣಕ್ಕೆ ಟೈಲ್ಸ್ ಹಾಕಿಸಲಾಗಿದೆ. ಒಟ್ಟಾರೆ ಮಕ್ಕಳ‌ಕಲಿಕೆ ಪೂರಕವಾದ ವಾತವರಣ ಕಲ್ಪಿಸಲು ನಮ್ಮ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಕಲ ರೀತಿಯಲ್ಲಿ ಸಿದ್ದರಿದ್ದಾರೆ.

ಇದರ ಪರಿಣಾಮವಾಗಿ ಮಕ್ಕಳ ಕಲಿಕೆಗೆ ಉತ್ತಮ ವಾತಾವರಣ ಇರುವುದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಆನೇಕಲ್ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ಅಂದರೆ ನಾನೂರಕ್ಕೂ ವಿದ್ಯಾರ್ಥಿಗಳು ಬಳ್ಳೂರು ಮಾದರಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಚಾರ ಎಂದು ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಮಧುಕುಮಾರ್, ಆಶೋಕ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯರಿ ದೊರೆ ಅಕ್ಕತಲೆ, ದೈವ ದರ್ಬಾರ ಅಕ್ಕತಲೆ ಪರಾಕ್: ಕಾರ್ಣಿಕದ ನುಡಿಯ ರಾಜಕೀಯ ವಿಶ್ಲೇಷಣೆ ಹೇಗಿದೆ ಗೊತ್ತಾ.?
.
ಒಟ್ನಲ್ಲಿ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿಲ್ಲ ಎಂದು ರಾಜ್ಯಾದ್ಯಂತ ಅದೆಷ್ಟೋ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳ ಹೊಡೆತಕ್ಕೆ ಬಾಗಿಲು ಬಂದ್ ಆಗಿವೆ. ಇಂತಹ ಸನ್ನಿವೇಶದಲ್ಲಿ ರಾಜ್ಯದ ಗಡಿ ಸರ್ಕಾರಿ ಶಾಲೆ ಹಳೆಯ ವಿದ್ಯಾರ್ಥಿಗಳ ನೆರವಿನ ಮೂಲಕ ಅಭಿವೃದ್ಧಿ ಕಾಣುವುದರ ಜೊತೆಗೆ ಖಾಸಗಿ ಶಾಲೆಗಳಿಗಿಂತ ಯಾವುದರಲ್ಲು ಕಡಿಮೆ ಇಲ್ಲದಂತೆ ಮಕ್ಕಳ ದಾಖಲಾತಿ ಪಡೆಯುತ್ತಿರುವುದು ಸರ್ಕಾರಿ ಶಾಲೆಗಳಿಗೆ ಮಾದರಿಯಾಗಿದೆ.

ವರದಿ : ಆದೂರು ಚಂದ್ರು 
Published by:Sandhya M
First published: