ಬಂಟ್ವಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು ಋಣ ತೀರಿಸಿದ ಹಳೆಯ ವಿದ್ಯಾರ್ಥಿಗಳು; ಮಾದರಿ ಕಾರ್ಯ

ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿನ ಕಳೆದ ಶೈಕ್ಷಣಿಕ ವರುಷದ ಪಾಸ್ ಔಟ್ ಆದ ವಿದ್ಯಾರ್ಥಿಗಳೇ ಇಂತಹ ಮೆಚ್ಚುಗೆಯ ಕೆಲಸವನ್ನ ಮಾಡಿದ್ದಾರೆ. ಎನ್​​ಎಸ್​​ಎಸ್​​ನಲ್ಲಿದ್ದ ಇಲ್ಲಿನ ದ್ವಿತೀಯ ಪಿಯುಸಿ 7 ಮಂದಿ ವಿದ್ಯಾರ್ಥಿಗಳು ಬಣ್ಣ ಮಂಕಾಗಿದ್ದ ತಮ್ಮ ಕಾಲೇಜು ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವ ಇರಾದೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರ ಬಳಿ ವ್ಯಕ್ತಪಡಿಸಿದ್ದಾರೆ.

ಬಂಟ್ವಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು

ಬಂಟ್ವಾಳದ ಸರ್ಕಾರಿ ಪದವಿ ಪೂರ್ವ ಕಾಲೇಜು

  • Share this:
ಬಂಟ್ವಾಳ(ಸೆ.03): ವಿದ್ಯೆ ಕಲಿತ ಶಾಲಾ ಕಾಲೇಜಿನ ಋಣ ತೀರಿಸಲು ಎಲ್ಲರೂ ಕಾತರರಾಗಿರುತ್ತಾರೆ. ಆದರೆ, ಅದ್ಹೇಗೆ ತೀರಿಸಬೇಕು ಅನ್ನೊದೆ ಹೆಚ್ಚಿನವರಿಗೆ ಇರೋ ಗೊಂದಲ. ಹೀಗಿರುವಾಗ ಇಲ್ಲೊಂದಿಷ್ಟು ವಿದ್ಯಾರ್ಥಿಗಳು ಸೇರಿ ತಾವು ಪಾಸ್ ಔಟ್ ಆಗಿ ಹೋಗುತ್ತಿದ್ದಂತೆಯೆ ವಿದ್ಯಾ ದೇಗುಲವನನ್ನ ಬೆಳಗುವಂತೆ ಮಾಡಿದ್ದಾರೆ. ವಿದ್ಯೆ ಕಲಿಸಿದ ಗುರು, ಹೆತ್ತು ಸಲಹಿದ ತಂದೆ ತಾಯಂದಿರ ಋಣ ಅನ್ನೋದು ಯಾವತ್ತೂ ತೀರಿಸಲಾಗದ್ದು. ಅಂತೆಯೇ ಶಿಕ್ಷಣ ನೀಡೋ ನಾಲ್ಕು ಗೋಡೆಗಳ ನಡುವಿನ ಶಾಲಾ ಕಾಲೇಜುಗಳು ಅಷ್ಟೇ. ಅವುಗಳು ಮಕ್ಕಳ ಪಾಲಿನ ದೇಗುಲವೆ ಸರಿ. ಅವುಗಳ ಋಣ ತೀರಿಸಲು ಜನ್ಮಪೂರ್ತಿ ಶ್ರಮಪಟ್ಟರೂ ಅದು ಎಳ್ಳಷ್ಟೇ. ಅಂತೆಯೇ ಇಲ್ಲೊಂದು ವಿದ್ಯಾರ್ಥಿಗಳ ತಂಡ ತಾವು ಕಲಿತು ನಿರ್ಗಮಿಸುತ್ತಿದ್ದಂತೆ ತಮ್ಮ ಕಾಲೇಜನ್ನ ಪಳಪಳನೆ ಹೊಳೆಯುವಂತೆ ಮಾಡಿದ್ದಾರೆ. ಈ ಮೂಲಕ ಮನಸ್ಸಿದ್ದರೆ ಕೇವಲ ಧನ ಮಾತ್ರವಲ್ಲದೇ ತನು-ಮನದಿಂದಲೂ ಋಣ ತೀರಿಸಲು ಪ್ರಯತ್ನಪಡಬಹುದು ಅನ್ನೋದನ್ನ ತೋರಿಸಿಕೊಟ್ಟಿದ್ದಾರೆ.

ಹೌದು, ಇದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜು. ಇಲ್ಲಿನ ಕಳೆದ ಶೈಕ್ಷಣಿಕ ವರುಷದ ಪಾಸ್ ಔಟ್ ಆದ ವಿದ್ಯಾರ್ಥಿಗಳೇ ಇಂತಹ ಮೆಚ್ಚುಗೆಯ ಕೆಲಸವನ್ನ ಮಾಡಿದ್ದಾರೆ. ಎನ್​​ಎಸ್​​ಎಸ್​​ನಲ್ಲಿದ್ದ ಇಲ್ಲಿನ ದ್ವಿತೀಯ ಪಿಯುಸಿ 7 ಮಂದಿ ವಿದ್ಯಾರ್ಥಿಗಳು ಬಣ್ಣ ಮಂಕಾಗಿದ್ದ ತಮ್ಮ ಕಾಲೇಜು ಕಟ್ಟಡಕ್ಕೆ ಸುಣ್ಣ ಬಣ್ಣ ಬಳಿಯುವ ಇರಾದೆಯನ್ನ ಕಾಲೇಜಿನ ಪ್ರಾಂಶುಪಾಲರಾದ ಯೂಸುಫ್ ಅವರ ಬಳಿ ವ್ಯಕ್ತಪಡಿಸಿದ್ದಾರೆ.

ಅತ್ತ ಪ್ರಾಂಶುಪಾಲರು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ವಿದ್ಯಾರ್ಥಿಗಳು ಉಪನ್ಯಾಸಕರ ಸಹಕಾರದಿಂದ ಹಣ ಒಟ್ಟುಗೂಡಿಸಿ ಪೇಂಟ್ ಹಾಗೂ ಬಣ್ಣ ಬಳಿಯಲು ಬೇಕಾದ ಪರಿಕರಗಳನ್ನ ಖರೀದಿಸಿ ತಂದಿದ್ದಾರೆ. ನಂತರ ಮೂರೇ ದಿನಗಳಲ್ಲಿ ಇಡೀ ಕಾಲೇಜು ಕಟ್ಟಡಕ್ಕೆ ಬಣ್ಣ ಬಳಿದಿದ್ದಾರೆ. ವಿದ್ಯಾರ್ಥಿಗಳ ಈ ರೀತಿಯ ಅಳಿಲಸೇವೆ ಗುರುವೃಂದವನ್ನೂ ತಲೆದೂಗುವಂತೆ ಮಾಡಿದೆ.

ಇದನ್ನೂ ಓದಿ: ಸಾಧು ಸಂತರು, ಮಠಾಧೀಶರಿಗೆ ಟೋಲ್​ ವಿನಾಯಿತಿಗೆ ಆಗ್ರಹ - ಡಾ. ಆರೂಢಭಾರತೀ ಸ್ವಾಮೀಜಿ ದಿಗಂಬರ ಪ್ರತಿಭಟನೆ

ಇನ್ನೇನು ಪಿಯುಸಿ ಮುಗಿಸಿ ಬೇರೆಡೆ ಉನ್ನತ ವಿದ್ಯಾಭ್ಯಾಸಕ್ಕೆ ತೆರಳೋ ವಿದ್ಯಾರ್ಥಿಗಳು ತಮ್ಮ ಹಿಂದಿನ ಶೈಕ್ಷಣಿಕ ಸಂಸ್ಥೆಗಳನ್ನ ಮರೆಯುವುದೇ ಜಾಸ್ತಿ. ಆದರೆ ಬಿ. ಮೂಡ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸೂರ್ಯ, ರಕ್ಷಿತ್, ಚಿತ್ರೇಶ್, ಧೀರಜ್, ಸಂಪತ್, ಲವೇಶ್ ಹಾಗೂ ಭುವನೇಶ್ ಬಂಗೇರ ಪಿಯುಸಿ ಮುಗಿಸಿ ನಿರ್ಗಮಿಸೋ ಮುನ್ನ ತಮ್ಮ ವಿದ್ಯಾ ದೇಗುಲವನ್ನ ಬೆಳಗುವಂತೆ ಮಾಡಿ ಊರಿಗೆ ಮಾದರಿಯಾಗಿದ್ದಾರೆ.
Published by:Ganesh Nachikethu
First published: