ಗದಗ (ಫೆಬ್ರವರಿ 08); ವಿಷಪೂರಿತ ನಾಗರ ಹಾವಿನೊಂದಿಗೆ ಸರಸವಾಡಿ ವೃದ್ಧ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ರೋಣ ಪಟ್ಟಣದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮಕ್ತುಮ್ ಸಾಬ ರಾಜೆಖಾನ್ (75) ಎಂದು ಗುರುತಿಸಲಾಗಿದೆ. ಈತ ಹಲವಾರು ವರ್ಷಗಳಿಂದ ಹಾವು ಹಿಡಿಯುವುದರಲ್ಲಿ ನಿಪುಣನಾಗಿದ್ದ. ಹಲವಾರು ಹಾವುಗಳನ್ನು ರಕ್ಷಣೆ ಮಾಡಿ ಕಾಡಿಗೆ ಅಥವಾ ನಗರದ ಹೊರವಲಯದಲ್ಲಿ ಬಿಟ್ಟು ಬರುತ್ತಿದ್ದ. ಆದರೆ, ಇಂದು ಆತನ ಎಂದಿನ ಕೆಲಸವೇ ಆತನ ಜೀವಕ್ಕೆ ಕುತ್ತಾಗಿದ್ದು ಮಾತ್ರ ವಿಪರ್ಯಾಸ.
ರೋಣ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ಇಂದು ಹಾವು ಕಾಣಿಸಿಕೊಂಡಿತ್ತು. ಹೀಗಾಗಿ ಕೂಡಲೇ ಮಕ್ತುಮ್ ಸಾಬ ರಾಜೆಖಾನ್ ಗೆ ಕರೆ ಮಾಡಲಾಗಿತ್ತು. ಸ್ಥಳಕ್ಕೆ ಬಂದಿದ್ದ ರಾಜೆಖಾನ್ ಹಾವನ್ನು ಹಿಡಿದಿದ್ದರು. ಕೂಡಲೇ ಅದನ್ನು ಅಲ್ಲಿಂದ ಬೇರೆಡೆ ಸಾಗಿಸಿದ್ದರೆ ಸಮಸ್ಯೆ ಇರುತ್ತಿರಲಿಲ್ಲ.
ಇದನ್ನೂ ಓದಿ: ಕೊನೆಗೂ ಬಳ್ಳಾರಿಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯನ್ನು ಘೋಷಿಸಿದ ಸರ್ಕಾರ; ಹೊಸಪೇಟೆ ಕಾರ್ಯಸ್ಥಾನ!
ಆದರೆ, ಹಾವನ್ನು ಹಿಡಿದಿದ್ದ ರಾಜೆಖಾನ್ ಅದರ ಜೊತೆಗೆ ಆಟವಾಡುವ ಮೂಲಕ ಸಾರ್ವಜನಿಕರಿಗೆ ಪುಕ್ಕಟೆ ಮನರಂಜನೆ ನೀಡಲು ಮುಂದಾಗಿದ್ದರು. ಆದರೆ, ಈ ವೇಳೆ ನಾಗರ ಹಾವು ಅಚಾನಕ್ಕಾಗಿ ಅವರನ್ನು ಕಚ್ಚಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ