news18-kannada Updated:April 21, 2021, 10:37 AM IST
ಚಿಕ್ಕಮಗಳೂರಿನಲ್ಲಿ ಅವಧಿಮೀರಿದ ಗ್ಲೂಕೋಸ್ ಪ್ಯಾಕೇಟ್ ಪತ್ತೆ ಮಾಡಿದ ಒಬ್ಬ ಗ್ರಾಹಕ
ಚಿಕ್ಕಮಗಳೂರು: 2012ರ ಏಪ್ರಿಲ್ ತಿಂಗಳಲ್ಲಿ ತಯಾರಾಗಿರುವ ಗ್ಲೂಕೋಸ್ ಪ್ಯಾಕೇಟನ್ನ 2021ರ ಏಪ್ರಿಲ್ ತಿಂಗಳ ಲೇಬಲ್ ಹಾಕಿ 9 ವರ್ಷದ ಹಳೇ ಗ್ಲೂಕೋಸನ್ನ ಮಾರಾಟ ಮಾಡುತ್ತಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. ನಗರದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜೆನರಿಕ್ ಮೆಡಿಸನ್ ಮೆಡಿಕಲ್ ಸ್ಟೋರ್‍ನಲ್ಲಿ ಈ ರೀತಿಯ ಗ್ಲೂಕೋಸ್ ಪ್ಯಾಕೇಟ್ ಪತ್ತೆಯಾಗಿದೆ. ಮೊನ್ನೆ ಸೋಮವಾರ ಚಿಕ್ಕಮಗಳೂರು ನಗರದ ಗುರು ಎಂಬುವರು ಗ್ಲೂಕೋಸ್ ಪ್ಯಾಕೇಟ್ ಖರೀದಿಸಿದ್ದಾರೆ. 26 ರೂಪಾಯಿ ಇದ್ದ ಗ್ಲೂಕೋಸ್‍ಗೆ 13 ರೂಪಾಯಿ ತೆಗೆದುಕೊಂಡಿದ್ದಾರೆ. ಗುರು ಆಸ್ಪತ್ರೆಗೆ ಬಂದು ನೋಡಿದಾಗ ಲೇಬಲ್ ಹಚ್ಚಿರುವುದು ಪತ್ತೆಯಾಗಿದೆ. ಲೇಬಲ್ ತೆಗೆದು ನೋಡಿದಾಗ ಅದರ ಮೇಲದ್ದ 2012ನೇ ಇಸವಿಗೆ ಬ್ಲಾಕ್ ಮಾರ್ಕರ್‍ನಂದ ರಬ್ ಮಾಡಿ ಅದರ ಮೇಲೆ 2021ನೇ ಇಸವಿಯ ಲೇಬಲ್ ಹಚ್ಚಿರುವುದು ಕಂಡು ಬಂದಿದೆ. ಇದನ್ನ ಮಕ್ಕಳು ರೋಗಿಗಳಿಗೆ ಕೊಟ್ಟರೆ ಕಥೆ ಏನೆಂದು ಖರೀದಿಸಿದ ಗುರು ಕೂಡ ಕಂಗಾಲಾಗಿದ್ದಾರೆ.
ಒಂಬತ್ತು ವರ್ಷ ಹಿಂದಿನ ಗ್ಲೂಕೋಸ್ ಇದರ ವಾಯಿದೆ ಇರೋದೇ 24 ತಿಂಗಳು. ಇದರ ವಾಯಿದೆ ಮುಗಿದು 7 ಏಳು ವರ್ಷಗಳೇ ಕಳೆದಿವೆ. ಇದನ್ನ ಹೇಗೆ ಮಾರಾಟ ಮಾಡುತ್ತಿದ್ದಾರೆ? ಜಿಲ್ಲಾಡಳಿತ ಹಾಗೂ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಹಕರಾಗಿ ಗುರು ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು, ಈ ಗ್ಲೂಕೋಸ್ ಅನ್ನ ತುಂಬಾ ನಾಜೂಕುತನ ಪ್ರದರ್ಶಿಸಿ ಮಾರಾಟ ಮಾಡಲಾಗ್ತಿರೋದ್ರಿಂದ ಅಷ್ಟುಸುಲಭವಾಗಿ ಯಾರಿಗೂ ಇದು ಅವಧಿ ಮೀರಿದ್ದು ಅಂತಾ ಗೊತ್ತಾಗುತ್ತಿಲ್ಲ. ಎಕ್ಸ್ಪೈರಿ ಡೇಟ್ ಮೀರಿರೋ ಹಳೆಯ ಗ್ಲುಕೋಸ್ ಬಾಟಲಿಯ ಮೇಲೆ ಹೊಸ ಲೆಬಲ್ ಹಾಕಿ ಜನರನ್ನ ಯಾಮಾರಿಸ್ತಿದ್ದಾರೆ. ಆ ಲೇಬಲ್ ಕಿತ್ತುಹಾಕಿದ್ರೆ, ಮಾರ್ಕರ್ ಪೆನ್ನಲ್ಲಿ ರಬ್ ಮಾಡಿರೋವ ಗ್ಲುಕೋಸಿನ ಅಸಲಿ ದಿನಾಂಕ ಗೊತ್ತಾಗುತ್ತದೆ. ಈ ಕುರಿತು ಜಿಲ್ಲಾ ಸರ್ಜನ್ ಹತ್ತಿರ ಕೇಳಿದ್ರೆ, ಈಗಷ್ಟೇ ನನಗೆ ಈ ವಿಚಾರ ತಿಳಿದಿದೆ, ಈ ಬಗ್ಗೆ ವಿಚಾರಿಸುತ್ತೇನೆ ಎಂದಿದ್ದಾರೆ. ಅಲ್ಲದೆ, ಮೆಡಿಕಲ್ ಸ್ಟೋರ್ಗೆ ಭೇಟಿ ನೀಡಿ ಔಷಧಗಳನ್ನ ಪರಿಶೀಲನೆ ಮಾಡಿ, ಕಂಪನಿ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಆಶ್ವಾಸನೆ ನೀಡಿದ್ದಾರೆ.
ಇದನ್ನೂ ಓದಿ: ದೆಹಲಿಯಲ್ಲಿ ಕಣ್ಣೀರು ಹಾಕುತ್ತಾ ಕುಳಿತಿದ್ದ ಬಾಗಲಕೋಟೆ ಅಜ್ಜಿ; ಯೋಧನ ಸಮಯ ಪ್ರಜ್ಞೆಯಿಂದ ಕರುಳು ಬಳ್ಳಿ ಸೇರಿದ ಹಿರಿಯ ಜೀವ
ಅವಧಿ ಮೀರಿರುವ ಗ್ಲೂಕೋಸ್ ಕಾಫಿನಾಡಲ್ಲಿ ಮಾರಾಟ ಆಗ್ತಿರೋದನ್ನ ಕಂಡು ಇಲ್ಲಿಯ ಜನರು ಕಂಗಲಾಗಿದ್ದಾರೆ. ಅದು ಕೂಡ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಜೆನೆರಿಕ್ ಮೆಡಿಕಲ್ ಕೇಂದ್ರದಲ್ಲಿ ಗ್ಲೂಕೋಸ್ ಗೋಲ್ಮಾಲ್ ಜನರನ್ನ ಶಾಕ್ಗೆ ಒಳಗಾಗುವಂತೆ ಮಾಡಿದೆ. ಜಿಲ್ಲಾಸ್ಪತ್ರೆ ಕೇಂದ್ರದಲ್ಲೇ ಹೀಗಾದ್ರೆ ಬೇರೆ ಖಾಸಗಿ ಮೆಡಿಕಲ್ ಸ್ಟೋರ್ಗಳಲ್ಲಿ ಯಾವ ರೀತಿಯ ಗೋಲ್ಮಾಲ್ ನಡೆಯುತ್ತಿರಬಹುದು ಅನ್ನೋದರ ಬಗ್ಗೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಈ ಗೋಲ್ಮಾಲ್ ಕೇವಲ ಗ್ಲೂಕೋಸ್‍ಗೆ ಮಾತ್ರ ಸೀಮಿತಾನಾ, ಅಥವಾ ಬೇರೆ ಬೇರೆ ಮಾತ್ರೆ, ಔಷಧಿಗಳಲ್ಲೂ ಇದೇ ರೀತಿಯ ಗೋಲ್ಮಾಲ್ ನಡೆದಿದ್ಯಾ ಅನ್ನೋದು ಕೂಡ ಯಕ್ಷ ಪ್ರಶ್ನೆಯಾಗಿದೆ.
ವರದಿ: ವೀರೇಶ್ ಹೆಚ್ ಜಿ
Published by:
Vijayasarthy SN
First published:
April 21, 2021, 10:37 AM IST