ಮೊಮ್ಮಗಳನ್ನು ಮರಳಿ ಮನೆಗೆ ಕರೆದೊಯ್ಯಲು ಹರಸಾಹಸ ಪಡುತ್ತಿರುವ ವೃದ್ಧ ದಂಪತಿ, ಕಾರವಾರದಲ್ಲೊಂದು ಕರುಣಾಜನಕ ಕಥೆ !

ಕೆಲ ತಿಂಗಳ ಹಿಂದೆ ಕೃಷ್ಣಪ್ಪ ಕಟ್ಟಿಮನಿ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದಾಗ ಮಗುವನ್ನ ನೋಡಿಕೊಳ್ಳಲು ಯಾರು ಇಲ್ಲದಾಗ ವೃದ್ದ ದಂಪತಿಗೆ ತಿಳಿಸಿ ಕಾರವಾರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿತ್ತು. ಇದೀಗ ಆರೋಗ್ಯವಾಗಿ ಬಂದಿರುವ ಈ ದಂಪತಿ ತಮ್ಮ ಮಗುವನ್ನ ತಮಗೆ ನೀಡಿ ಎಂದು ಅಂಗಲಾಚುತ್ತಿದ್ದಾರೆ. 

ನೊಂದ ವೃದ್ಧ ದಂಪತಿ

ನೊಂದ ವೃದ್ಧ ದಂಪತಿ

  • Share this:
ಕಾರವಾರ: ಮಕ್ಕಳೆಂದ್ರೆ ಯಾರಿಗೆ ಪ್ರೀತಿ ಇಲ್ಲ ಹೇಳಿ.  ಮಕ್ಕಳಿಗಾಗಿ ತಮ್ಮ ಸರ್ವಸ್ವವನ್ನೆ ತ್ಯಾಗ ಮಾಡುವ ಕುಟುಂಬದವರಿದ್ದಾರೆ.  ವೃದ್ಧ ದಂಪತಿ, ತಂದೆ ತಾಯಿ ಕಳೆದುಕೊಂಡ ಅನಾಥವಾಗಿದ್ದ ಆ ಶಿಶುವೊಂದಕ್ಕೆ ಹಾಲು ಕುಡಿಸಿ ದೊಡ್ಡವಳನ್ನಾಗಿ ಮಾಡಿದ್ದರು. ಕೆಲ ತಿಂಗಳ ಹಿಂದೆ ಅಜ್ಜನಿಗೆ ಅನಾರೋಗ್ಯ ಅಂತಾ ಆಕೆಯನ್ನ ಬಾಲಮಂದಿರಕ್ಕೆ ಸೇರಿಸಿದ್ರು. ಆದ್ರೀಗ ಆ ಮಗುವನ್ನ ಪಡೆಯುವ ಹಂಬಲದಲ್ಲಿ ರೋಧಿಸುತ್ತಿರುವ ಮನಕಲಕುವ ಘಟನೆ ಕಾರವಾರದಲ್ಲಿ   ನಡೆದಿದೆ.

ಉತ್ತರಕನ್ನಡ ಜಿಲ್ಲೆಯ ಕಾರವಾರದ ಶಿರವಾಡ ಗ್ರಾಮದ ವೃದ್ಧ ದಂಪತಿ. ಹೆಸರು ಗೌರಮ್ಮ ಮತ್ತು ಕೃಷ್ಣಪ್ಪ. ಕಳೆದ ಮೂವತ್ತು ವರ್ಷಗಳಿಂದ ಕಾರವಾರದಲ್ಲಿರುವ ರಾಯಚೂರು ಮೂಲದ ಈ ದಂಪತಿಗೆ ಮಗಳೊಬ್ಬಳಿದ್ದಳು. ಆಕೆ ಮತ್ತು ಆಕೆಯ ಪತಿ  ಏಚ್ಐವಿ ಕಾಯಿಲೆಯಿಂದ  ಸಾವನ್ನಪ್ಪಿದ್ದಾರೆ. ಸಾಯುವ ಮುನ್ನ ಮಗಳ  ಮೂರು ತಿಂಗಳ ಶಿಶು ಅನಾಥಳಾಗಿದ್ದರಿಂದ ಈ ವೃದ್ಧ ದಂಪತಿ ಸಾಕಿದ್ದಾರೆ.  ಈಗ ಮಗುವಿಗೆ 11 ವರ್ಷ ವಯಸ್ಸು. ಮೂರನೇ ತರಗತಿಯಲ್ಲಿ ಓದುತ್ತಿದ್ದಾಳೆ.

ಮೂರು ತಿಂಗಳ ಮಗುವನ್ನ ಈ ಅಜ್ಜಅಜ್ಜಿ ಜತನದಿಂದ ಕಾಪಾಡಿ ದೊಡ್ಡ ಮಾಡಿದ್ದಾರೆ. ಇವರಿಗೆ ಮಗಳನ್ನ ಬಿಟ್ಟಿರಲಾರದ ಸಂಬಂಧ.  ಹೀಗಿರುವಾಗಿ ಕಳೆದ ಕೆಲ ತಿಂಗಳ ಹಿಂದೆ ಕೃಷ್ಣಪ್ಪ ಕಟ್ಟಿಮನಿ ಅನಾರೋಗ್ಯಕ್ಕೀಡಾಗಿದ್ದರು. ಹೀಗಾಗಿ ಅವರಿಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾದಾಗ ಮಗುವನ್ನ ನೋಡಿಕೊಳ್ಳಲು ಯಾರು ಇಲ್ಲದಾಗ ವೃದ್ದ ದಂಪತಿಗೆ ತಿಳಿಸಿ ಕಾರವಾರದ ಬಾಲಕಿಯರ ಬಾಲಮಂದಿರಕ್ಕೆ ಸೇರಿಸಲಾಗಿತ್ತು. ಇದೀಗ ಆರೋಗ್ಯವಾಗಿ ಬಂದಿರುವ ಈ ದಂಪತಿ ತಮ್ಮ ಮಗುವನ್ನ ತಮಗೆ ನೀಡಿ ಎಂದು ಅಂಗಲಾಚುತ್ತಿದ್ದಾರೆ.

ಬಾಲಕಿ ಚಿಕ್ಕವಳಿದ್ದಾಗಲೇ ತಂದೆ ತಾಯಿಯನ್ನ  ಕಳೆದುಕೊಂಡಿದ್ದರಿಂದ  ಅಜ್ಜಅಜ್ಜಿ ಪೋಷಣೆ ಮಾಡಿದ್ದಾರೆ. ಮಗುವಿಗಾಗಿ ಕಾರವಾರ ಬ್ಯಾಂಕುಗಳಲ್ಲಿ ಹಣವನ್ನ ಕೂಡ ಡಿಪಾಸಿಟ್ ಮಾಡಿಟ್ಟಿದ್ದೇವೆ. ಹೀಗಾಗಿ ತಮ್ಮ ಮೊಮ್ಮಗಳು ತಮಗೆ ಬೇಕು. ಇಲ್ಲದಿದ್ದಲ್ಲಿ ತಾವು ಪ್ರಾಣ ಕಳೆದುಕೊಳ್ಳುತ್ತೇವೆ. ತಮ್ಮ ಮಗುವನ್ನ ತಮಗೆ ನೀಡಿ ಎಂದರೂ ಬಾಲಮಂದಿರದಲ್ಲಿ ನೀಡುತ್ತಿಲ್ಲ. ಮಗು ಅಜ್ಜಅಜ್ಜಿ ಬೇಕು ಎಂದು ಅಳುತ್ತಿದೆ.

ಹೀಗಾಗಿ ಮಗುವನ್ನ ತಮಗೆ ನೀಡಿದರೇ ತಾವೂ ಊರಿಗೆ ತೆರಳ್ತೇವೆ. ಭಿಕ್ಷೆ ಬೇಡಿಯಾದರೂ ಮಗುವನ್ನ ಸಾಕುತ್ತೇವೆ ಎಂದು ಹೇಳ್ತಾರೆ. ಆದ್ರೆ ಈ ಬಗ್ಗೆ ಅಧಿಕಾರಿಗಳನ್ನ ವಿಚಾರಿಸಿದ್ರೆ, ಮಗುವಿಗೆ ಯಾರು ಆಶ್ರಯ ಇಲ್ಲದ ಕಾರಣಕ್ಕಾಗಿ ಬಾಲಮಂದಿರಕ್ಕೆ ಸೇರಿಸಲಾಗಿತ್ತು. ಅಜ್ಜಅಜ್ಜಿಗೆ ವಯಸ್ಸಾಗಿರುವ ಕಾರಣಕ್ಕಾಗಿ ಕುಟುಂಬದವರು ಬೇರೆಯಾರು ಇದ್ದಾರೆ ಎಂಬುದು ವಿಚಾರಿಸಲಾಗಿದೆ.  ಅಕ್ಕ ಅಂತಾ ಹೇಳಿ ಒಬ್ಬರು ಬಂದಿದ್ದಾರೆ. ಆದ್ರೆ ಅಕ್ಕನನ್ನ ಮಗು ಗುರುತಿಸುತ್ತಿಲ್ಲ. ಹೀಗಾಗಿ ಮಗುವಿನ  ಸುರಕ್ಷತಾ ಹಿತದೃಷ್ಟಿಯಿಂದ  ಬಾಲಮಂದಿರದಲ್ಲಿ ಇಟ್ಟುಕೊಂಡಿದ್ದೇವೆ. ಸಾಮಾಜಿಕ ತನಿಖಾ ವರದಿ ಬಂದ ನಂತರ ಅಜ್ಜಅಜ್ಜಿ ಜೊತೆ ಮಗುವನ್ನ  ಬಿಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಒಟ್ಟಿನಲ್ಲಿ ಸಾಕಿ ಸಲುಹಿದ ಮೊಮ್ಮಗಳು ಬಾಲಮಂದಿರಲ್ಲಿ ಇರಲು ಅಜ್ಜಅಜ್ಜಿಗೆ ಇಷ್ಟವಿಲ್ಲ. ಮಗು ತಮ್ಮ ಜೊತೆ ಇರಲಿ. ನಾವು ಏನಾದರೂ ಮಾಡಿ ಮಗುವನ್ನ ದೊಡ್ಡ ಮಾಡ್ತೇವೆ. ತಮ್ಮ ಮಗುವನ್ನ ಬಿಟ್ಟುಬಿಡಿ ಎಂದು ಅಂಗಲಾಚುತ್ತಿರುವ ದೃಶ್ಯ ಮನಕರಗುವಂತೆ ಮಾಡುತ್ತಿದೆ.
Published by:Soumya KN
First published: