ಅಧಿಕಾರಿಗಳ ಎಡವಟ್ಬಿನಿಂದ ನೆರೆ ಸಂತ್ರಸ್ತರ ಹೊಟ್ಟೆ ಸೇರಬೇಕಿದ ಆಹಾರ ಧಾನ್ಯಗಳು ಹುಳುಗಳ ಪಾಲಾಗಿವೆ..!

ಗದಗ ಜಿಲ್ಲೆಯ ನವಗ್ರಾಮದ ಪಶು ಆಸ್ಪತ್ರೆಯ ಕೊಠಡಿಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆಂದು ನೀಡಿದ 380 ಕಿಟ್ ಗಳು ಸುಮಾರು 10 ತಿಂಗಳಿಂದ ವಿತರಣೆ ಮಾಡದೆ ಅಲ್ಲಿಯೇ ಕೊಳೆತು ನಾರುತ್ತಿವೆ.

ಪ್ರಾವಾಹ ನಿರಾಶ್ರಿತರು.

ಪ್ರಾವಾಹ ನಿರಾಶ್ರಿತರು.

  • Share this:
ಗದಗ: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪ್ರವಾಹ ಪೀಡಿತರಿಗೆ ಸಂತ್ರಸ್ಥರಿಗೆ ಸೇರಬೇಕಿದ್ದ ಸರ್ಕಾರದ ಆಹಾರ ಧಾನ್ಯಗಳು ಇದೀಗ ವ್ಯರ್ಥವಾಗಿ ಮಣ್ಣು ಪಾಲಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.

ಕಳೆದ ವರ್ಷ ಪ್ರವಾಹದ ವೇಳೆ ಜಿಲ್ಲೆಯಲ್ಲಿ ನರಗುಂದ ಹಾಗೂ ರೋಣ ತಾಲೂಕಿನ ವಾಸನ, ಕೊಣ್ಣೂರ, ಮೆಣಸಗಿ, ಹೊಳೆ ಆಲೂರು ಸೇರಿದಂತೆ 42 ಗ್ರಾಮಗಳಿಗೆ ಮಲಪ್ರಭೆ ಹಾಗು ಬೆಣ್ಣೆ ಹಳ್ಳದ ಪ್ರವಾಹದ ನೀರು ನುಗ್ಗಿ ಜಲಾವೃತ ಗೊಂಡಿದವು. ಆ ಗ್ರಾಮಗಳ ಜನರ ಬದುಕನ್ನೇ  ಜಲಾಸುರನು ಕಿತ್ತುಕೊಂಡಿದ್ದ.

ಅನ್ನ ನೀರು ಸಿಗದೆ ಅದೆಷ್ಟೋ ಜನ ಪರದಾಡಿದ್ದರು. ವಸತಿ ವ್ಯವಸ್ಥೆ ಇಲ್ಲದೆ ಅದೆಷ್ಟು ಕುಟುಂಬಗಳು ರಸ್ತೆ ಬದಿಯಲ್ಲಿ ತಾಡಪಾಲ ಗುಡಿಸಲು ಹಾಕಿ ಮನೆ ಮಾಡಿಕೊಂಡುಜೀವನ ಸಾಗಿಸಿರುವ ಉದಾಹರಣೆಗಳು ಸಹ ಸಾಕಷ್ಟಿವೆ. ಆದರೆ, ಇಂತಹ ನಿರಾಶ್ರಿತರಿಗೆಂದು ನೀಡಬೇಕಿದ್ದ ದಿನಸಿ ಕಿಟ್ ಗಳನ್ನು ಜಿಲ್ಲೆಯ ಅಧಿಕಾರಿಗಳು ವ್ಯರ್ಥ ಮಾಡಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.

ಗದಗ ಜಿಲ್ಲೆಯ ರೋಣ ತಾಲೂಕಿನ ನವಗ್ರಾಮ ಮೆಣಸಗಿದಲ್ಲಿ ಇಂತಹದೊಂದು ಘಟನೆ ನಡೆದಿದೆ. ನವಗ್ರಾಮದ ಪಶು ಆಸ್ಪತ್ರೆಯ ಕೊಠಡಿಯಲ್ಲಿ ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆಂದು ನೀಡಿದ 380 ಕಿಟ್ ಗಳು ಸುಮಾರು 10 ತಿಂಗಳಿಂದ ವಿತರಣೆ ಮಾಡದೆ ಅಲ್ಲಿಯೇ ಕೊಳೆತು ನಾರುತ್ತಿವೆ. ಇದು ಜಿಲ್ಲಾಡಳಿತ,ಗ್ರಾಮ ಪಂಚಾಯತ್ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯಕ್ಕೆ 380 ಕುಟುಂಬಕ್ಕೆ ಸೇರಬೇಕಿದ ಕಿಟ್ ಗಳು ಹಾಳಾಗಿವೆ. ಬಡ ಜನರ  ಹೊಟ್ಟೆ ಸೇರಬೇಕಿದ್ದ ಆಹಾರ ಧಾನ್ಯಗಳು ಹುಳುಗಳ ಪಾಲಾಗುವಂತೆ ಮಾಡಿದ್ದಾರೆ ಹೀಗಾಗಿ ಅಧಿಕಾರಿಗಳ ವಿರುದ್ಧ ನೆರೆ ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಈಗ ದಿನವೊಂದರಲ್ಲಿ 11 ಸಾವಿರಕ್ಕೂ ಹೆಚ್ಚು ಕೇಸ್ ಗಳು, 3 ಲಕ್ಷದ ಗಡಿ ದಾಟಿದ ಕೊರೋನಾ ಪೀಡಿತರ ಸಂಖ್ಯೆ

ಪ್ರವಾಹ ಮುಗಿದು ಹತ್ತು ತಿಂಗಳು ಗತಿಸಿದ್ದರೂ ಈ ಆಹಾರದ ಕಿಟ್‌ ಜನರಿಗೆ ಮುಟ್ಟಿಲ್ಲ. ಸರ್ಕಾರ ನೀಡಿದ ಕಿಟ್ ನಲ್ಲಿ 10 ಕೆಜಿ ಅಕ್ಕಿ, 1 ಲೀಟರ್ ಅಡುಗೆ ಎಣ್ಣೆ, 1  ಕೆಜಿ ಉಪ್ಪು, ತೊಗರಿ ಬೆಳೆ, 5 ಲೀಟರ್ ಸೀಮೆ ಎಣ್ಣೆ  ನೀಡಲಾಗಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಇವೆಲ್ಲ ಇಂದು ಕೊಳೆತು ವ್ಯರ್ಥವಾಗಿದ್ದು, ಸರ್ಕಾರ ಕೂಡಲೇ ನಿರ್ಲಕ್ಷ್ಯ ತೋರಿದ‌ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

 
First published: