ಐದು ತಿಂಗಳ ಬಳಿಕ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಏರಿಕೆ 

ಕೊಡಗು ಸಹಜವಾಗಿಯೇ ಪ್ರವಾಸಿ ಜಿಲ್ಲೆಯೂ ಆಗಿರುವುದರಿಂದ ಭಾಗಮಂಡಲ, ತಲಕಾವೇರಿ ಜೊತೆಗೆ ಬೇರೆ ಪ್ರವಾಸಿ ತಾಣಗಳನ್ನು ನೋಡಬಹುದೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

news18-kannada
Updated:September 27, 2020, 8:40 PM IST
ಐದು ತಿಂಗಳ ಬಳಿಕ ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಭಕ್ತರ ಸಂಖ್ಯೆ ಏರಿಕೆ 
ತಲಕಾವೇರಿ
  • Share this:
ಕೊಡಗು(ಸೆಪ್ಟೆಂಬರ್​. 27): ಕೊರೋನಾ ಅನ್‍ಲಾಕ್ ಆದರೂ ಕೊಡಗು ಜಿಲ್ಲೆಯಲ್ಲಿ ತೀವ್ರ ಮಳೆ ಸುರಿದು ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅನಾಹುತ ಸಂಭವಿಸಿತ್ತು. ಹೀಗಾಗಿ ಲಾಕ್ ಡೌನ್ ನಿಂದ ಐದು ತಿಂಗಳ ಬಳಿಕ ತಲಕಾವೇರಿ, ಭಾಗಮಂಡಲ ಸೇರಿದಂತೆ ಪ್ರಮುಖ ದೇವಾಲಯಗಳು ತೆರೆದರೂ ಭಕ್ತರ ಸಂಖ್ಯೆಯಲ್ಲಿ ಕೊರತೆ ಇತ್ತು. ಆದರೆ, ಈಗ ಕೊಡಗು ಜಿಲ್ಲೆಯಲ್ಲಿ ಮಳೆಯೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದ್ದು, ತಲಕಾವೇರಿಗೆ ಆಗಮಿಸುವ ಭಕ್ತರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆದು ಐದು ತಿಂಗಳ ಬಳಿಕವಾದರೂ ಬರಲು ಅವಕಾಶ ಸಿಕ್ಕಿದ್ದು ಖುಷಿ ಎನ್ನುತ್ತಿದ್ದಾರೆ ಭಕ್ತರು. ಲಾಕ್ ಡೌನ್ ಆಗಿದ್ದರಿಂದ ತಮ್ಮ ಕುಲದೇವರ ಆಸ್ಥಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಬಳಿಕ ಲಾಕ್ ಡೌನ್ ಸಡಿಲಿಕೆಯಾದರೂ ಕೊಡಗಿನಲ್ಲಿ ತೀವ್ರ ಮಳೆಯಾಗಿ ತಲಕಾವೇರಿಯಲ್ಲಿ ಭೂಕುಸಿತವಾಗಿದ್ದು ಇದೆಲ್ಲವೂ ತೀವ್ರ ನೋವು ತರಿಸಿತ್ತು. ಜೊತೆಗೆ ಇಲ್ಲಿಗೆ ಬರದಂತಹ ಸ್ಥಿತಿ ಆಗಿತ್ತು. ಆದರೀಗ ಮಳೆಯೂ ಕಡಿಮೆ ಆಗಿರುವುದರಿಂದ ತಲಕಾವೇರಿಗೆ ಬಂದು ಪೂಜೆ ಸಲ್ಲಿಸಲು ಅವಕಾಶ ಸಿಕ್ಕಿರುವುದಕ್ಕೆ ಭಕ್ತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ತಲಕಾವೇರಿಯಲ್ಲಿ ಭಾರೀ ಪ್ರಮಾಣದಲ್ಲಿ ಮಂಜು ಸುರಿಯುತ್ತಿರುವುದು ಕೂಡ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುವ ಭಕ್ತರು ಮತ್ತು ಪ್ರವಾಸಿಗರು ತಲಕಾವೇರಿಯಲ್ಲಿ ಕಾವೇರಿ ಮಾತೆಯ ದರ್ಶನ ಪಡೆಯುವ ಜೊತೆಗೆ ಅಲ್ಲಿನ ಹಿಮಚ್ಚಾದಿತ ಪರಿಸರ ಅನುಭವಿಸಿ ಸಂತಸ ಪಡುತಿದ್ದಾರೆ. ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೂ ವಾರದ ಕೊನೆಯ ದಿನವಾದ್ದರಿಂದ ಹಿಂದಿಗಿಂತ ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದರು.

ಕಾವೇರಿ ಮಾತೆಗೆ ಕೇವಲ ಕೊಡಗಿನಲ್ಲಿ ಅಷ್ಟೇ ಅಲ್ಲ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲೂ ಭಕ್ತರಿದ್ದಾರೆ. ಕೊಡಗು ಪ್ರವಾಸೋದ್ಯಮ ಜಿಲ್ಲೆಯೂ ಆಗಿರುವುದರಿಂದ ಕಾವೇರಿ ಮಾತೆಯ ದರ್ಶನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇನ್ನು ಕೊಡಗು ಸಹಜವಾಗಿಯೇ ಪ್ರವಾಸಿ ಜಿಲ್ಲೆಯೂ ಆಗಿರುವುದರಿಂದ ಭಾಗಮಂಡಲ ತಲಕಾವೇರಿ ಜೊತೆಗೆ ಬೇರೆ ಪ್ರವಾಸಿ ತಾಣಗಳನ್ನು ನೋಡಬಹುದೆಂದು ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ.

ತಲಕಾವೇರಿಯಲ್ಲಿ ಭಾರೀ ಪ್ರಮಾಣದ ಮಂಜು ಸುರಿಯುತ್ತಿದ್ದು, ಆಗಿಂದಾಗ್ಗೆ ಬಿಟ್ಟು ಬಿಟ್ಟು ಮಳೆ ಕೂಡ ಸುರಿಯುತ್ತಿದೆ. ಹೀಗಾಗಿ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಂದ ಬರುತ್ತಿರುವ ಜನರು ತಲಕಾವೇರಿಯ ಪರಿಸರವನ್ನು ಎಂಜಾಯ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಯಡಿಯೂರಪ್ಪ ಕುಟುಂಬದಿಂದ ವ್ಯಾಪಕ ಭ್ರಷ್ಟಾಚಾರ - ಕಾಂಗ್ರೆಸ್ ಸೋಲಿಸಿದ ಬಗ್ಗೆ ಜನರ ಮರುಕ ; ಸಿದ್ಧರಾಮಯ್ಯ

ಇನ್ನು ಅಕ್ಟೋಬರ್ ತಿಂಗಳ 17 ರಂದು ತುಲಾ ಸಂಕ್ರಮಣದಂದು ಕಾವೇರಿ ತೀರ್ಥೋದ್ಭವವೂ ಇರುವುದರಿಂದ ಈಗಾಗಲೇ ವಿವಿಧ ಪೂಜಾ ಕೈಂಕರ್ಯ ಗಳು ಇರುವುದರಿಂದ ಸಹಜವಾಗಿಯೇ ತಲಕಾವೇರಿ ಮತ್ತು ಭಾಗಮಂಡಲದ ಭಗಂಡೇಶ್ವರ ದೇವಾಲಯಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
ಒಟ್ಟಿನಲ್ಲಿ ಕೊರೋನಾ ಲಾಕ್‍ಡೌನ್ ಮತ್ತು ಭಾರೀ ಪ್ರಮಾಣದ ಮಳೆಯಿಂದ ಭೂಕುಸಿತ ಸಂಭವಿಸಿದ್ದರಿಂದ ಐದು ತಿಂಗಳಿಂದ ಭಕ್ತರಿಲ್ಲದೆ ಬಿಕೋ ಎನ್ನುತ್ತಿದ್ದ ಭಾಗಮಂಡಲ ಮತ್ತು ತಲಕಾವೇರಿ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ.
Published by: G Hareeshkumar
First published: September 27, 2020, 8:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading