HOME » NEWS » District » NOW SIDDARAMAIAH SEARCH FOR HIS DEFEAT REASON SAYS CT RAVI RHHSN VCTV

ಸಿದ್ದರಾಮಯ್ಯ ರಾಜ ಮರ್ಯಾದೆ ಹುಡುಕಬೇಕಿತ್ತು, ಎರಡೂವರೇ ವರ್ಷದ ಬಳಿಕ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ; ಸಿ.ಟಿ.ರವಿ ವ್ಯಂಗ್ಯ

ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೆ, ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ರೆ ಬಾದಾಮಿಯಲ್ಲೂ ನೀವು ಸೋಲಬೇಕಿತ್ತು ಎಂದು ಕುಟುಕಿದ್ದಾರೆ.

news18-kannada
Updated:December 19, 2020, 7:25 AM IST
ಸಿದ್ದರಾಮಯ್ಯ ರಾಜ ಮರ್ಯಾದೆ ಹುಡುಕಬೇಕಿತ್ತು, ಎರಡೂವರೇ ವರ್ಷದ ಬಳಿಕ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ; ಸಿ.ಟಿ.ರವಿ ವ್ಯಂಗ್ಯ
ಸಿ.ಟಿ. ರವಿ.
  • Share this:
ಚಿಕ್ಕಮಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ಹಳೇ ಮಾತಿಗೂ ಈಗಿನ ಮಾತಿಗೂ ತುಂಬಾ ವ್ಯಾತ್ಯಾಸವಿದೆ. ಯಾಕೆ ಅರುಳು-ಮರುಳಾ, ಘಳಿಗೆಗೊಮ್ಮೆ ಬಣ್ಣ ಬದಲಿಸಿದರೆ ನಮ್ಮ ಕಡೆ ಗೋಸುಂಬೆ ಅಂತಾರೆ. ಸಿದ್ದರಾಮಯ್ಯನವರು ಗೋಸುಂಬೆ ರೀತಿ ಆಡಬಾರದು, ಸಿದ್ದರಾಮಯ್ಯ ರಾಜ ಮರ್ಯಾದೆಯ ರಾಜ ಗೌರವ ಹುಡುಕಬೇಕಿತ್ತು. ಆದರೆ ಎರಡೂವರೇ ವರ್ಷದ ಬಳಿಕ ಸಿದ್ದರಾಮಯ್ಯ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಲೇವಡಿ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಈಗ ಏಕೆ ತಾಜ್ ವೆಸ್ಟ್ ಎಂಡ್ ಕಥೆ ತೆಗೆಯುತ್ತಿದ್ದಾರೆ. ತಾಜ್ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಾದ ಮೇಲೆ ತಾನೇ ಲೋಕಸಭೆ ಎಲೆಕ್ಷನ್ ಒಟ್ಟಿಗೆ ಮಾಡಿದ್ದು, ಅಧಿಕಾರಿ ಹಂಚಿಕೊಂಡು ತನ್ನವರನ್ನ ಮಂತ್ರಿ ಮಾಡುವಾಗ ವೆಸ್ಟ್ ಎಂಡ್ ಅಡ್ರೆಸ್ ಗೊತ್ತಿರಲಿಲ್ವಾ? ನಾವು ಸ್ಪಷ್ಟವಾಗಿದ್ದೇವೆ. ಎಂದಿಗೂ ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ. ಅಂದು ಜೆಡಿಎಸ್ ಜೊತೆ ನಿಂತು ಬೆಂಬಲಿಸಿದವರು ಯಾರೆಂದು ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಗದಗ ದಿಂಗಾಲೇಶ್ವರ ಮಠಕ್ಕೆ ಡಿಕೆಶಿ ದಿಢೀರ್ ಭೇಟಿ; ರಾಜಕೀಯೇತರ ಉದ್ದೇಶ ಎಂದ ಶ್ರೀಗಳು

ಎರಡೂವರೆ ವರ್ಷಗಳ ಬಳಿಕ ಸಿದ್ದರಾಮಯ್ಯ ತಮ್ಮ ಸೋಲಿಗೆ ಕಾರಣ ಹುಡುಕುತ್ತಿದ್ದಾರೆ. ಒಮ್ಮೆ ಉಗಿದಿದ್ದನ್ನ ಯಾರೂ ಬಾಯಿಗೆ ಹಾಕಿಕೊಳ್ಳುವುದಿಲ್ಲ. ಆವತ್ತು ಎಲ್ಲಾ ಮಾಡಿ ಈಗ ಕೈಗೆಟಕದ ದ್ರಾಕ್ಷಿ ಹುಳಿ ಎಂದು ನರಿ ಕಥೆ ಹೇಳಿದ್ರೆ ಯಾರು ಕೇಳ್ತಾರೆ. ಸೋಲಿನ ಬಗ್ಗೆ ಕಾರಣ ಗೊತ್ತಿತ್ತು, ಮತ್ತೇಕೆ ಜೆಡಿಎಸ್ ಜೊತೆ ಸರ್ಕಾರ ಮಾಡಿದಿರಿ. ನಮಗೆ ಜನಾಭಿಪ್ರಾಯ ಬಂದಿಲ್ಲ. ವಿರೋಧ ಪಕ್ಷದಲ್ಲಿ ಇರುತ್ತೇವೆಂದು ವಿರೋಧ ಪಕ್ಷದಲ್ಲಿ ಕೂರಬೇಕಿತ್ತು. ಬಿಜೆಪಿಯನ್ನ ಅಧಿಕಾರದಿಂದ ದೂರ ಇಡಬೇಕೆಂದು ಒಟ್ಟಿಗೆ ಆದರು. ಯಾವ ಮುಖ ಇಟ್ಟುಕೊಂಡು ಒಪ್ಪಿಕೊಂಡರು, ಸಿದ್ದರಾಮಯ್ಯನವರದ್ದು ನೈತಿಕ ರಾಜಕಾರಣನಾ ಎಂದು ವ್ಯಂಗ್ಯವಾಡಿದರು.

ಬಿಜೆಪಿ-ಜೆಡಿಎಸ್ ಜೊತೆ ಒಳಒಪ್ಪಂದ ಮಾಡಿಕೊಂಡಿದ್ದರೆ ಬಾದಾಮಿಯಲ್ಲೂ ನೀವು ಗೆಲ್ಲುತ್ತಿರಲಿಲ್ಲ. ಬಾದಾಮಿಯಲ್ಲಿ ನೀವು ಗೆದ್ದಿದ್ದು ಕೇವಲ ಸಾವಿರ ಚಿಲ್ಲರೆ ಮತಗಳಿಂದ. ಅದು ಮುಖ್ಯಮಂತ್ರಿ ಆದವರಿಗೆ ಗೌರವ ತರುವ ಗೆಲುವೇ ಅಲ್ಲ. ಸಿದ್ದರಾಮಯ್ಯನವರು ಅವರ ಸೋಲಿಗೆ ಕಾರಣ ಹುಡುಕಿದ್ದಾರೆ. ಆದರೆ, ಅವರ ಸರ್ಕಾರ ಅಧಿಕಾರ ಕಳೆದುಕೊಂಡಿದ್ದಕ್ಕೆ ಕಾರಣ ಹುಡುಕಬೇಕಿತ್ತು. ದುರಹಂಕಾರ, ಭ್ರಷ್ಟಾಚಾರ, ಕೆಟ್ಟ ಆಡಳಿತದಿಂದ ಸೋತಿದ್ದಾರೆ. ನಾವು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ. ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದ್ರೆ ಬಾದಾಮಿಯಲ್ಲೂ ನೀವು ಸೋಲಬೇಕಿತ್ತು ಎಂದು ಕುಟುಕಿದ್ದಾರೆ.
Published by: HR Ramesh
First published: December 19, 2020, 7:23 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories