ಹಾಸನ : ಸಾಹಿತಿ ಬೇಲೂರು ಕೃಷ್ಣಮೂರ್ತಿ ನಿಧನ : ಕಂಬನಿ ಮಿಡಿದ ಗಣ್ಯರು

ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿದ್ದ ಸಾಹಿತಿ ಬೇಲೂರು ಕೃಷ್ಣಮೂರ್ತಿ ಅವರು ನೂರು ನಾಟಕಗಳನ್ನು ಬರೆದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನೂರು ಕೃತಿಗಳ ಸರದಾರ ಎಂಬ ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಗಿತ್ತು.

ಸಾಹಿತಿ ಬೇಲೂರು ಕೃಷ್ಣಮೂರ್ತಿ

ಸಾಹಿತಿ ಬೇಲೂರು ಕೃಷ್ಣಮೂರ್ತಿ

 • Share this:
  ಹಾಸನ(ಸೆಪ್ಟೆಂಬರ್​.08): ನಾಟಕಕಾರ, ಸಾಹಿತಿ ಹಾಗೂ ಭಾರತ ಸೇವಾದಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ ಬೇಲೂರು ಕೃಷ್ಣಮೂರ್ತಿ ಅವರ ನಿಧನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಂಬನಿ ಮಿಡಿದು ಶ್ರದ್ಧಾಂಜಲಿ ಅರ್ಪಿಸಿತು. ಮೃತ ಬೇಲೂರು ಕೃಷ್ಣಮೂರ್ತಿ ಅವರ ದೇಹವನ್ನು ಹಾಸನದಲ್ಲಿರುವ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿಗೆ ದಾನವಾಗಿ ನೀಡಲಾಗುವುದು. ಹಲವು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ ಕೃಷ್ಣಮೂರ್ತಿಯವರು ಉಡುಪಿಯಲ್ಲಿರುವ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರದಲ್ಲಿ ಹಾಸನದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ಸುಮಾರು 10-45ಕ್ಕೆ ಕೊನೆ ಉಸಿರೆಳೆದರು. ಅಂತಿಮ ದರ್ಶನ ಮಾಡಲು ಅವರ ಪ್ರಾರ್ಥಿವ ಶರೀರವನ್ನು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದ ಆವರಣಕ್ಕೆ ತರಲಾಯಿತು. ಬೇಲೂರು ಕೃಷ್ಣಮೂರ್ತಿ ಅವರು ನಾಟಕಕಾರರು ಹಿರಿಯ ಸಾಹಿತಿಗಳು ಹಾಗೂ ಭಾರತ ಸೇವಾದಳ ಸಂಸ್ಥೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರು ಮತ್ತು ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯರು ಸಹ ಆಗಿದ್ದರು.

  ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಂಡಿದ್ದ ಅವರು, ನೂರು ನಾಟಕಗಳನ್ನು ಬರೆದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ನೂರು ಕೃತಿಗಳ ಸರದಾರ ಎಂಬ ಬಿರುದು ನೀಡಿ ಸನ್ಮಾನಿಸಿ ಅಭಿನಂದಿಸಲಾಗಿತ್ತು. ಅವರ ಜೀವನದ ತತ್ವ ಸಿದ್ಧಾಂತಗಳು ಇಂದಿನ ಯುವ ಪೀಳಿಗೆ ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಪೂರಕವಾಗಲಿ.

  ಭಾರತ ಸೇವಾದಳದ ಹಿರಿಯ ಕಾರ್ಯಕರ್ತರು ಆದಂತಹ ಇವರು ಸೇವಾದಳದ ಅತ್ಯುನ್ನತ ತರಬೇತಿಯಾದ ಕೇಂದ್ರ ನಾಯಕ ತರಬೇತಿ ಪಡೆದು ರಾಜ್ಯದಲ್ಲಿಯೇ ಪ್ರಪ್ರಥಮವಾಗಿ ಜಿಲ್ಲಾ ಸಂಘಟಕರಾಗಿ ಸೇವೆ ಸಲ್ಲಿಸಿದ್ದರು. ವೃತ್ತಿಯನ್ನು ಆಯ್ಕೆ ಮಾಡಿಕೊಂಡು ಶಾಲೆಯಲ್ಲಿ ಸೇವಾದಳವನ್ನು ಬೆಳೆಸಿದ್ದಾರೆ.

  ಇದನ್ನೂ ಓದಿ : ಕಬ್ಬಿನ ಹೊಲದಲ್ಲಿ ಅಕ್ರಮವಾಗಿ ಗಾಂಜಾ - ತೆಲಂಗಾಣಕ್ಕೆ ಅಕ್ರಮ ಸಾಗಾಟಕ್ಕೆ ಕಡಿವಾಣಕ್ಕೆ ಮುಂದಾದ ಪೊಲೀಸರು

  ಡಾ .ನಾ.ಸು. ಹರ್ಡೀಕರ್ ರವರ ಜೀವನ ಚರಿತ್ರೆಯನ್ನು ಕುರಿತು ಹಲವಾರು ಪುಸ್ತಕಗಳನ್ನು ಬರೆದವರು ಹಾಗೂ ಹರ್ಡಿಕರ್ ರವರ ಒಡನಾಡಿಗಳು​ ಹಾಗೂ ನೇತಾಜಿ ಸುಭಾಷ್ ಚ್ಂದ್ರ ಬೋಸ್ ರವರ ಒಡನಾಡಿಗಳಾದ​ ಐಎನ್ಎ ರಾಮ್ ರಾವ್ ರವರ​ ಪಟ್ಟಾ ಶಿಷ್ಯಂದಿರು ಸಹ ಆಗಿದ್ದರು. ಸೇವಾದಳದ ಪ್ರತಿ ಕಾರ್ಯಕ್ರಮದಲ್ಲಿ ಮತ್ತು ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಿದ್ದರು. ಸೇವಾದಳದ ಸ್ವಯಂ ಸೇವಕರು ಆಗಿದ್ದಂತಹ ಇವರು ಬೇಲೂರಿನಲ್ಲಿರುವ ಡಾ. ನಾ.ಸು. ಹರ್ಡೀಕರ್ ರವರ ಪ್ರತಿಮೆಯ ಸ್ಥಾಪನೆಗೆ ಕಾರಣಕರ್ತರು ಸಹ ಆಗಿದ್ದರು.ಇವರನ್ನು ಕಳೆದುಕೊಂಡಂತಹ ಇವರ ಕುಟುಂಬ ವರ್ಗಕ್ಕೆ ದು:ಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡುವುದರೊಂದಿಗೆ ಅವರ ಆತ್ಮಕ್ಕೆ ಶಾಂತಿಯನ್ನು ನೀಡಲೆಂದು ಹಾರೈಸಲಾಯಿತು.

  ​ಅವರ ಆಸೆಯಂತೆ ಸ್ವಗ್ರಹಕ್ಕೆ ಹೋಗಿ ನಂತರ ಸಂಜೆ ವೇಳೆಗೆ ಹಾಸನದ ಶ್ರೀ ಧರ್ಮಸ್ಥಳ ಆಯುರ್ವೇದ ಕಾಲೇಜಿಗೆ ಕೃಷ್ಣಮೂರ್ತಿಯವರ ಮೃತ ದೇಹವನ್ನು ದಾನ ಮಾಡಲಾಗುವುದು ಎಂದು ಮೃತರ ಸೊಸೆ ನಾಗಲಕ್ಷ್ಮಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
  Published by:G Hareeshkumar
  First published: