• Home
  • »
  • News
  • »
  • district
  • »
  • ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯ ಅವಾಂತರ; ಪಕ್ಕದ ಬೆಡ್​ನಲ್ಲಿ ಮೃತದೇಹವಿದ್ದರೂ ಸೋಂಕಿತರು ಅಲ್ಲೇ ಊಟ ಮಾಡಬೇಕಾದ ಪರಿಸ್ಥಿತಿ!

ಚಿಕ್ಕಮಗಳೂರು ಕೋವಿಡ್ ಆಸ್ಪತ್ರೆಯ ಅವಾಂತರ; ಪಕ್ಕದ ಬೆಡ್​ನಲ್ಲಿ ಮೃತದೇಹವಿದ್ದರೂ ಸೋಂಕಿತರು ಅಲ್ಲೇ ಊಟ ಮಾಡಬೇಕಾದ ಪರಿಸ್ಥಿತಿ!

ಕೋವಿಡ್ ಕೇರ್ ಸೆಂಟರ್​ನಲ್ಲಿ ಸಂಬಂಧಿಕರಿಂದ ತುಂಬಿರುವುದು.

ಕೋವಿಡ್ ಕೇರ್ ಸೆಂಟರ್​ನಲ್ಲಿ ಸಂಬಂಧಿಕರಿಂದ ತುಂಬಿರುವುದು.

ಜಿಲ್ಲಾಸ್ಪತ್ರೆ ಯಲ್ಲಿ ನಡೆದಿರೋ ಪ್ರಕರಣ ವೈದ್ಯರ ಕಣ್ ತಪ್ಪಿಸಿ ಈ ರೀತಿ ನಡೆದಿದೆ, ಮುಂದೆ ಈ ರೀತಿ ಆಗದಂತೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಸರ್ಜನ್ ಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್​​ಒ ಹೇಳಿದ್ದಾರೆ.

  • Share this:

ಚಿಕ್ಕಮಗಳೂರು: ಮೃತದೇಹ, ಸೋಂಕಿತರು, ಸೋಂಕಿತರ ಸಂಬಂಧಿಕರು ಎಲ್ಲರೂ ಒಂದೇ ಜಾಗದಲ್ಲಿ ಇರುತ್ತಾರೆ ಅಂದರೆ ಅದು ಕಾಫಿನಾಡ ಚಿಕ್ಕಮಗಳೂರಲ್ಲಿ ಮಾತ್ರ ಅನ್ಸುತ್ತೆ. ಯಾಕಂದ್ರೆ, ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳು, ರೋಗಿಗಳ ಜೊತೆ ಸಂಬಂಧಿಕರು, ಮೃತದೇಹಗಳೂ ಅಲ್ಲೆ, ಸೋಂಕಿತರ ಊಟ-ತಿಂಡಿಯೂ ಅಲ್ಲೆ ಹೀಗೆ ಒಂದೇ ಜಾಗದಲ್ಲಿ ಎಲ್ಲರೂ ಹೀಗಿದ್ದಾರೆ ಅಂದ್ರೆ ಕೊರೋನಾ ಹೆಚ್ಚಾಗದೆ ಕಡಿಮೆ ಹೇಗಾಗುತ್ತೆ ಎಂದು ಜಿಲ್ಲೆಯ ಜನ ಆಸ್ಪತ್ರೆ ಸಿಬ್ಬಂದಿ ಹಾಗೂ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 


ಅಧಿಕಾರಿಗಳಿಗೆ ಸೋಂಕಿತರ ಆರೋಗ್ಯದ ಬಗ್ಗೆ ಇರೋ ಕಾಳಜಿಗೆ ಇದೊಂದು ವಿಡಿಯೋ ಸಾಕು. ಸೋಂಕಿತರಿಗೆ ಸಿಗ್ತಿರೋ ರಾಯಲ್ ಟ್ರೀಟ್ಮೆಂಟ್‍ಗೆ ಈ ದೃಶ್ಯ ಬೆಸ್ಟ್ ಎಕ್ಸಾಂಪಲ್. ಜನ  ಮನೆಯಿಂದ ಹೊರಬರೋದಕ್ಕೂ ನೂರಾರು ಕಾನೂನು ಕಟ್ಟಳೆಗಳು. ಆದ್ರೆ, ಸೋಂಕಿತರಿಗಾದ್ರು ಸರಿಯಾಗಿ ಚಿಕಿತ್ಸೆ ಸಿಗುತ್ತಾ?. ಅದೂ ಇಲ್ಲ. ಸೋಂಕಿತರ ಈ ವಾರ್ಡಿಗೆ ಸಂಬಂಧಿಕರು ಬಂದು ಹೋಗಲು ನೋ ಅಬ್ಜಕ್ಷನ್. ಮಾಸ್ಕ್ ಒಂದೊಂದ್ರಿ ಸಾಕು. ಪಿಪಿಇ ಕಿಟ್ ಅವಶ್ಯಕತೆಯೇ ಇಲ್ಲ. ಪಕ್ಕದಲ್ಲಿ ಮೃತದೇಹ ಇದ್ದರೂ ನೋ ಪ್ರಾಬ್ಲಂ. ಅಲ್ಲೇ ಊಟ-ತಿಂಡಿ ಎಲ್ಲಾ ಮಾಡಬಹುದು. ನರಳಾಡೋರು ನರಳಾಡ್ತಾನೆ ಇರ್ತಾರೆ, ಸೋಂಕಿತರ ಸಂಬಂಧಿಕರು ಬಿಟ್ರೆ ಹೇಳೋರಿಲ್ಲ, ಕೇಳೋರಿಲ್ಲ. ಇನ್ನು ಸೋಂಕಿನಿಂದ ಸತ್ತವರ ಶವವನ್ನ ಪ್ಯಾಕ್ ಮಾಡೋಕು ಪಿಪಿಇ ಕಿಟ್ ಬೇಡ. ಜೀವ ಉಳಿಸೋ ಆಸ್ಪತ್ರೆಯಲ್ಲಿನ ನರಕ ದರ್ಶನ ಸ್ಥಳಿಯರನ್ನ ಕಂಗೆಡಿಸಿದೆ.


ಹಾಗಂತ. ಇಲ್ಲಿ ಅಧಿಕಾರಿಗಳದ್ದು ಮಾತ್ರ ತಪ್ಪಿದ್ದೆ ಅಂತಲ್ಲ. ಸೋಂಕಿತರ ಸಂಬಂಧಿಕರದ್ದೂ ಅಷ್ಟೇ ತಪ್ಪು ಇದೆ. ಆದ್ರೆ, ತನ್ನವರಿಗೆ ಸೋಂಕು ತಗುಲಿದೆ ಅಂತ ಗೊತ್ತಿದ್ರು, ಆತಂಕದಲ್ಲಿ ಇರುವ ಸಂಬಂಧಿಗಳು ಹೇಗೆ ಜಾಗೃತಿ ವಹಿಸಬೇಕು ಅನ್ನೋ ಸಣ್ಣ ಯೋಜನೆ ಕೂಡ ಮಾಡದಿರೋದು ಮತ್ತೊಂದು ದುರಂತ. ಈ ಮಧ್ಯೆಯೂ ಕೆಲವರ ಅಸಡ್ಡೆ ಗುಟ್ಟಾಗೇನು ಉಳಿದಿಲ್ಲ. ಆದ್ರೆ, ಈ ತಪ್ಪುಗಳು ಆಗದಂತೆ ಸರಿ ಮಾಡಬೇಕಾದ ಕರ್ತವ್ಯ ಅಧಿಕಾರಿಗಳದ್ದಾಗಿರುತ್ತದೆ. ಒಳಗಡೆ ಎಲ್ಲಾ ಸರಿ ಇದೆ ಅನ್ನೋ ಅಧಿಕಾರಿಗಳು ನಿಜಕ್ಕೂ ಯಾವ ರೀತಿ ನಡೆದುಕೊಳ್ತಿದ್ದಾರೆ ಅನ್ನೋದು ಬಟಾಬಯಲಾಗಿದೆ. ಇಂತಹಾ ಘಟನೆ ಎರಡು ಬಾರಿ ನಡೆದ್ರು ಅಧಿಕಾರಿಗಳು ಮಾತ್ರ ಮತ್ತೇ ಈಗಾಗದಂತೆ ಎಚ್ಚರ ವಹಿಸುತ್ತೇನೆ ಅಂತಾರೆ.


ಇದನ್ನು ಓದಿ: ಕೊರೋನಾ ಲಸಿಕೆಗಳಿಗೆ ಏಕರೂಪದ ಬೆಲೆ ನಿಗದಿಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ!


ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರೋ ಡಿಎಚ್ ಓ ಡಾ.ಉಮೇಶ್ ಜಿಲ್ಲಾಸ್ಪತ್ರೆ ಸೇರಿದಂತೆ ಎಲ್ಲಾ ತಾಲೂಕು ಆಸ್ಪತ್ರೆಗಳಿಗೆ ಪತ್ರ ಬರೆದಿದ್ದೇನೆ. ಸೋಂಕಿತರ ಸಂಬಂಧಿಕರಿಗೆ ವಾರ್ಡ್ ನಲ್ಲಿ ಅವಕಾಶ ನೀಡಬಾರದು ಎಂದು ಪತ್ರದಲ್ಲಿ ಉಲ್ಲೇಖ ಮಾಡಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ, ಇನ್ನು ಜಿಲ್ಲಾಸ್ಪತ್ರೆ ಯಲ್ಲಿ ನಡೆದಿರೋ ಪ್ರಕರಣ ವೈದ್ಯರ ಕಣ್ ತಪ್ಪಿಸಿ ಈ ರೀತಿ ನಡೆದಿದೆ, ಮುಂದೆ ಈ ರೀತಿ ಆಗದಂತೆ ಕ್ರಮಕೈಗೊಳ್ಳುವಂತೆ ಜಿಲ್ಲಾ ಸರ್ಜನ್ ಗೆ ಸೂಚನೆ ನೀಡಿದ್ದೇನೆ ಎಂದಿದ್ದಾರೆ, ಮುಂದೆ ಈ ರೀತಿ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.


ಒಟ್ಟಾರೆ, ವರ್ಷದಿಂದ ವೈದ್ಯರು ಹಗಲಿರುಳು ದುಡಿಯುತ್ತಿದ್ದಾರೆ. ಅವರ ಬಗ್ಗೆ ಗೌರವವಿದೆ. ಆದರೆ, ನರಳಾಡೋ ಸೋಂಕಿತರಿಗೆ ಒಳಗಡೆ ಒಂದೊಳ್ಳೆ ಚಿಕಿತ್ಸೆ ಸಿಗಬೇಕಲ್ವಾ. ಒಳಗಡೆ ಹೋಗಿರೋ ಸೋಂಕಿತರ ಸಂಬಂಧಿಗಳಿಗೂ ತಿಳಿ ಹೇಳ್ಬೇಕು. ಮೃತದೇಹ ಪ್ಯಾಕ್ ಮಾಡ್ತಿರೋ ಸಿಬ್ಬಂದಿ ಜೀವದ ಮೇಲೂ ಕಾಳಜಿ ಇದೆ. ಅದೇ ರೀತಿ ಸೋಂಕಿತರು, ಅವರ ಸಂಬಂಧಿಗಳ ಮೇಲೂ ಕೂಡ. ಒಬ್ಬರಲ್ಲ ಒಬ್ಬರಿಗೆ ಪ್ರತಿಯೊಬ್ಬರು ಅನಿವಾರ್ಯ. ಅಗತ್ಯ. ಇನ್ನಾದ್ರು ಹೀಗಾಗದಂತೆ ಆಸ್ಪತ್ರೆ ಸಿಬ್ಬಂದಿಗಳು, ಅಧಿಕಾರಿಗಳು ಎಚ್ಚರ ವಹಿಸಬೇಕಿದೆ.

Published by:HR Ramesh
First published: