ಸಿದ್ದಾರೂಢರ ಐಕ್ಯಸ್ಥಳ ಹುಬ್ಬಳ್ಳಿಗೆ ಸಿಕ್ಕಷ್ಟು ಮಹತ್ವ, ಅವರ ಹುಟ್ಟೂರಿಗೆ ಸಿಗಲಿಲ್ಲ!

ಸಿದ್ಧಾರೂಢರು ಹದಿನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಿದ್ದರು. ಈ ದೇಶದ ಮೂವತ್ತೊಂದು ರಾಜರುಗಳು ಸಿದ್ಧಾರೂಢರ ಪರಮ ಭಕ್ತರಾಗಿದ್ದರೆಂದು ಅವರ ಬಗ್ಗೆ ಬಲ್ಲವರು ಹೇಳುತ್ತಾರೆ. ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕಿದಷ್ಟು ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ.

ಸಿದ್ಧಾರೂಢ ಶ್ರೀಗಳು.

ಸಿದ್ಧಾರೂಢ ಶ್ರೀಗಳು.

  • Share this:
ಬೀದರ್; ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠ ಕೂಡ ಒಂದು. ಕೇವಲ ರಾಜ್ಯದಲ್ಲಷ್ಟೇ ಅಲ್ಲ, ದೇಶ- ವಿದೇಶಗಳಲ್ಲೂ ಈ ಮಠದ ಭಕ್ತರಿದ್ಧಾರೆ. ಸಿದ್ಧಾರೂಢ ಸ್ವಾಮೀಜಿಗಳ ಐಕ್ಯಸ್ಥಳವಾದ ಹುಬ್ಬಳ್ಳಿಯ ಸಿದ್ಧಾರೂಢ ಮಠಕ್ಕೆ ಕೋಟ್ಯಾಂತರ ಜನರು ಭಕ್ತರಿದ್ದು, ಸಾವಿರಾರು ಕೋಟಿ ಆಸ್ತಿ ಇದೆ. ಆದರೆ ಈ ಪವಾಡ ಪುರುಷನ ಹುಟ್ಟೂರು ಯಾವುದು ಅಂತ ಅದೇಷ್ಟೋ ಭಕ್ತರಿಗೆ ಗೊತ್ತಿಲ್ಲ.

ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ಸಿದ್ಧಾರೂಢರು ಹುಬ್ಬಳ್ಳಿಯಲ್ಲಿ ನೆಲೆನಿಂತು ಕೋಟ್ಯಾಂತರ ಭಕ್ತರನ್ನು ಹೊಂದಿರುವ ಪವಾಡ ಪುರುಷರು. ಹೌದು ಅವರ ಜನ್ಮ ಸ್ಥಳ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಳಕಾಪುರ ಗ್ರಾಮ. ಸಿದ್ದಾರೂಢರು ತಮ್ಮ ಏಳನೇಯ ವಯಸ್ಸಿನಲ್ಲಿಯೇ ಮನೆ ಬಿಟ್ಟು ಲೋಕ ಕಲ್ಯಾಣಕ್ಕಾಗಿ ದೇಶ ಸಂಚಾರ ಕೈಗೊಂಡರು. ಸುಮಾರು 35 ವರ್ಷಗಳ ಕಾಲ ದೇಶ ಸಂಚಾರ ಮಾಡಿದ ಸಿದ್ದಾರೂಢರು ತಮ್ಮ 42 ನೇ ವಯಸ್ಸಿಗೆ ಅಂದರೆ 1877ರಲ್ಲಿ ಹುಬ್ಬಳ್ಳಿಗೆ ಬಂದು ನೆಲೆಯೂರಿದರು. ಅಲ್ಲಿ ಸಾಕಷ್ಟು ಪವಾಡಗಳನ್ನು ಮಾಡುತ್ತಾ ಕಷ್ಟ ಅಂತಾ ಬಂದ ಭಕ್ತರ ಕಷ್ಟಗಳನ್ನ ನೇರವೇರಿಸುತ್ತಾ ನೆಲೆ ನಿಂತರು. ರಾಜ್ಯ, ದೇಶ ಸೇರಿದಂತೆ ವಿದೇಶದಲ್ಲಿಯೂ ಲಕ್ಷಾಂತರ ಭಕ್ತರನ್ನು ಸಿದ್ದಾರೂಢರು ಹೊಂದಿದ್ದಾರೆ. ಆದರೆ ಅವರ ಹುಟ್ಟು ಮಾತ್ರ ಅದೆಷ್ಟೋ ಜನರಿಗೆ ಗೊತ್ತಿಲ್ಲ.

ಸಿದ್ಧಾರೂಢರು ಹುಟ್ಟಿದ ಮನೆ ಅಂದು ಹೇಗಿತ್ತೋ ಹಾಗೆಯೇ ಇವತ್ತಿಗೂ ಕಾಪಾಡಿಕೊಂಡು ಬರಲಾಗಿದೆ. ಇನ್ನೂ ಸಿದ್ದಾರೂಢರ ಸಾಕಿದ ಪ್ರೀತಿಯ ನಾಯಿ ಸಮಾಧಿ ಸಹ ಮನೆ ಆವರಣದಲ್ಲಿದೆ. ಈ ನಾಯಿಯ ಬಗ್ಗೆ ಹೇಳಬೇಕೆಂದರೆ ಸಿದ್ಧಾರೂಢರು ಊರನ್ನು ಬಿಟ್ಟು ಹೋಗುವಾಗ ಅವರ ಜೊತೆಗೆ ಹೋಗಿತ್ತು. ನಂತರ ಅವರು ಹುಬ್ಬಳ್ಳಿಗೆ ಹೋಗಿ ಅಲ್ಲಿ ನೆಲೆ ನಿಲ್ಲುವವರೆಗೂ ಕೂಡಾ ಅವರ ಜೊತೆಗೆ ಇತ್ತು. ಬಳಿಕ ಸಾಯುವ ಮುನ್ನಮೂಲ ಮನೆಗೆ ಬಂದು ಕೊನೆಯುಸಿರೆಳೆದಿತ್ತು. ಹೀಗಾಗಿ ಈ ನಾಯಿಗೂ ಕೂಡಾ ಇಲ್ಲಿ ಸಮಾಧಿ ಮಾಡಲಾಗಿದೆ. ನಾಯಿಯ ಸಮಾಧಿಗೆ ಪ್ರತಿ ದಿನ ಪೂಜೆ ಮಾಡಲಾಗುತ್ತದೆ.

ಇದನ್ನು ಓದಿ: ಗ್ರಾಪಂ ಚುನಾವಣಾ ಪ್ರಚಾರಕ್ಕೆ ಹೋದ ಸಂಸದೆ ಶೋಭಾ ಕರಂದ್ಲಾಜೆಗೆ ಗ್ರಾಮಸ್ಥರಿಂದ ತರಾಟೆ

ಸಿದ್ಧಾರೂಢ ಸ್ವಾಮೀಜಿಗಳು ಐಕ್ಯರಾಗುವ ಕೊನೆಗಳಿಗೆವರೆಗೂ ಅವರು ತಮ್ಮ ಜನ್ಮಸ್ಥಳವನ್ನು ರಹಸ್ಯವಾಗಿಟ್ಟಿದ್ದರಂತೆ. ಸರ್ವಾಂತರಯಾಮಿಯಾಗಿ ಊರೂರು ಸುತ್ತುತ್ತಿದ್ದ ಶ್ರೀಗಳು ಹುಬ್ಬಳ್ಳಿಯನ್ನ ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡಿದ್ದರು. ಅವರ ಮೂಲಸ್ಥಳವಾದ ಚಳಕಾಪುರದಲ್ಲೂ ಕೂಡ ಹುಬ್ಬಳ್ಳಿ ಮತ್ತು ಧಾರವಾಡದಿಂದ ಪ್ರತಿ ವರ್ಷ ನಡೆಯುವ ಅವರ ಜಯಂತಿಯಂದೂ ಜನ ಭಾಗಿಯಾಗುತ್ತಾರೆ. ಆದರೆ ಅವರು ಲಿಂಗೈಕ್ಯವಾದ ಸ್ಥಳಕ್ಕೆ ಸಿಕ್ಕಷ್ಟೂ ಪ್ರಾಮುಖ್ಯತೆ ಇಂದು ಅವರ ಜನ್ಮಸ್ಥಳಕ್ಕೆ ಸಿಕ್ಕಿಲ್ಲ.

ಸಿದ್ಧಾರೂಢರು ಹದಿನಾಲ್ಕು ಭಾಷೆಗಳನ್ನು ಸುಲಲಿತವಾಗಿ ಮಾತನಾಡುತ್ತಿದ್ದರು. ಈ ದೇಶದ ಮೂವತ್ತೊಂದು ರಾಜರುಗಳು ಸಿದ್ಧಾರೂಢರ ಪರಮ ಭಕ್ತರಾಗಿದ್ದರೆಂದು ಅವರ ಬಗ್ಗೆ ಬಲ್ಲವರು ಹೇಳುತ್ತಾರೆ. ಹುಬ್ಬಳ್ಳಿಯಲ್ಲಿರುವ ಶ್ರೀಗಳ ಐಕ್ಯಸ್ಥಳಕ್ಕೆ ಸಿಕ್ಕಿದಷ್ಟು ಮನ್ನಣೆ ಅವರ ಹುಟ್ಟೂರು ಚಳಕಾಪುರಕ್ಕೆ ಸಿಕ್ಕಿಲ್ಲ.
Published by:HR Ramesh
First published: