ಕಾರವಾರ: ಕೋವಿಡ್ ಸಂಕಷ್ಟದ ಕಾಲದಲ್ಲಿ ಬಡ ಜನರ ಪಾಲಿಗೆ ಕೆಲವೊಬ್ಬರು ಸಹಾಯಕ್ಕೆ ನಿಂತು ಬೆನ್ನೆಲುಬಾಗುತ್ತಿದ್ದಾರೆ. ಸ್ವಯಂ ಸ್ಪೂರ್ತಿಯಿಂದ ಸೇವೆ ನೀಡುವ ಮೂಲಕ ಅನೇಕ ಸಮಾಜ ಸೇವಕರು ಬಡವರ ಪಾಲಿಗೆ ಆಶಾ ಕಿರಣವಾಗುತ್ತಿದ್ದಾರೆ. ಕಾರವಾರದಲ್ಲಿ ನೌಕಾ ಸೇನೆಯ ಮಾಜಿ ಸೈನಿಕ ವಿ.ಕೆ ಸಿಂಗ್ ಕೋವಿಡ್ ಸೋಂಕಿತರಾಗಿ ಹೋಂ ಐಸೋಲೇಷನ್ನಲ್ಲಿರುವವರಿಗೆ ಉಚಿತ ಔಷದ ನೀಡಿ ಸಲಹೆ ಸೂಚನೆ ನೀಡುವ ಮೂಲಕ ಸಹಾಯಕ್ಕೆ ನಿಂತಿದ್ದಾರೆ. ಮೂಲತಃ ಉತ್ತರ ಪ್ರದೇಶದವರಾದ ಇವರ ಹೆಸರು ಕಾರವಾರದಲ್ಲಿ ಭಾರತೀಯ ಕದಂಬನೌಕಾ ಸೇನೆಯ ನಿವೃತ್ತ ಸೈನಿಕರಾಗಿದ್ದಾರೆ. ಇವರು ಕಾರವಾರ ನೆಲದ ಪ್ರೀತಿ ಅಭಿಮಾದಿಂದ ಬದುಕು ಕಟ್ಟಿಕೊಳ್ಳಲು ಕಾರವಾರದಲ್ಲೆ ನೆಲೆಸಿದ್ದಾರೆ.
ನಿವೃತ್ತರಾಗಿ ನಾಲ್ಕು ವರ್ಷ ಮುಗಿದ್ರು ಕಾರವಾರದಲ್ಲೇ ಜೀವನ ಮಾಡುತ್ತಿರುವ ಇವರು ಹಲವಾರು ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಈಗ ಕೋವಿಡ್ ಸೋಂಕಿತರಿಗಾಗಿ ಇವರ ಮನ ಮಿಡಿಯುತ್ತಿದೆ. ಸೋಂಕಿಗೆ ಒಳಗಾಗಿ ಹೋಂ ಐಸೋಲೇಷನ್ ನಲ್ಲಿ ಇದ್ದು ಸಮಸ್ಯೆ ಎದುರಿಸುತ್ತಿರುವವರ ಪಾಲಿಗೆ ಆಶಾಕಿರಣರಾಗಿದ್ದಾರೆ. ಔಷದಿ ಖರೀದಿಸಲು ಹಣ ಇಲ್ಲದ ಬಡವರ ಪಾಲಿಗೆ ಬೆನ್ನೆಲುಬಾಗಿದ್ದಾರೆ. ವೈದ್ಯರ ಸಲಹೆ ಪಡೆದು ಸೋಂಕಿತರಿಗೆ ಬೇಕಾದ ಉಚಿತ ಔಷದ ತಲುಪಿಸಿ ಮಾನವೀಯತೆ ಮೆರೆಯುತ್ತಿದ್ದಾರೆ. ಇಲ್ಲಿಯವರೆಗೂ ಸುಮಾರು ನೂರಕ್ಕೂ ಹೆಚ್ಚು ಸೋಂಕಿತರ ಮನೆ ಬಾಗಿಲಿಗೆ ತೆರಳಿ ಉಚಿತ ಔಷದಿ ನೀಡಿದ್ದಾರೆ.
ಇದನ್ನೂ ಓದಿ: ಎರಡು ಬೇರೆ ಬೇರೆ ಲಸಿಕೆ ಪಡೆಯುವುದು ಸೇಫ್.. ವ್ಯಾಕ್ಸಿನ್ ಕಾಕ್ಟೇಲ್ಗೆ OK ಎಂದ ಕೋವಿಡ್ ತಜ್ಞ ವೈದ್ಯ!
ಕಳೆದ ಒಂದು ತಿಂಗಳ ಹಿಂದೆ ತಮ್ಮ ಮೊಬೈಲ್ ನಂಬರ್ ನೊಂದಿಗೆ ಪತ್ರಿಕೆಯ ಮೂಲಕ ಸಹಾಯಕ್ಕಾಗಿ ಸಂಪರ್ಕಿಸುವಂತೆ ಪ್ರಕಟಣೆ ನೀಡಿದ್ದರು. ನೀಡಿದ ಮರುದಿನದಿಂದಲೇ ಇವರಿಗೆ ಹೋಂ ಐಸೋಲೇಷನ್ ನಲ್ಲಿ ಇರುವ ನೂರಾರು ಸೋಂಕಿತರು ಸಹಾಯಕ್ಕಾಗಿ ಫೋನಾಯಿಸಿದ್ದಾರೆ. ಕಳೆದ ಒಂದುವರೆ ತಿಂಗಳಿಂದ ಎಲೆಮರೆಯ ಕಾಯಿಯಂತೆ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ತಮ್ಮ ಸ್ವಂತ ಖರ್ಚಿನಲ್ಲೆ ತಮ್ಮ ವಾಹನ ಮೂಲಕ ದೂರ ದೂರ ತೆರಳಿ ಸೋಂಕಿತರಿಗೆ ಬೇಕಾದ ಔಷದಿ ನೀಡಿ ಬರುತ್ತಿದ್ದಾರೆ.
ಇನ್ನೂ ಕಳೆದ ಒಂದುವರೆ ತಿಂಗಳ ಹಿಂದೆ ವಿ.ಕೆ ಸಿಂಗ್ ಕುಟುಂಬ ಕೋವಿಡ್ ಸೋಂಕಿಗೆ ಒಳಗಾಗಿದ್ದರು ಈ ಸಂದರ್ಭದಲ್ಲಿ ಔಷದಿಗಾಗಿ ಪಡಬಾರದ ಕಷ್ಟ ಪಟ್ಟಿದ್ದಾರೆ.ಕೆಲವೊಂದು ಔಷದಿ ಸರಕಾರಿ ಆಸ್ಪತ್ರೆಯಲ್ಲಿ ಸಂಗ್ರಹ ಇಲ್ಲದೆ ಇರೋದ್ರಿಂದ ಸಮಸ್ಯೆ ಎದುರಿಸುವಂತಾಗಿತ್ತು. ಸೋಂಕಿಗೆ ಒಳಗಾಗಿ ಎರಡು ದಿನ ಕಳೆದ್ರು ಕೂಡಾ ಔಷದಿ ಸಿಗದೆ ಇರೋದ್ರಿಂದ ಸಮಸ್ಯೆಗೆ ಒಳಗಾಗಿದ್ರು. ಬಳಿಕ ಸ್ನೇಹಿತರ ಸಹಾಯ ಪಡೆದು ವೈದ್ಯರ ಸಲಹೆ ಮೇರೆಗೆ ಫಾರ್ಮಸಿ ಯಿಂದ ಬೇಕಾದ ಔಷದಿಯನ್ನ ಪಡೆದುಕೊಂಡು ಮನೆಯಲ್ಲೆ ಆರೈಕೆ ಮಾಡಿಕೊಂಡು ಕೋವಿಡ್ ನಿಂದ ಗುಣಮುಖರಾದ್ರು. ಅಂದು ತಾವು ಪಟ್ಟ ಕಷ್ಟ ಬೇರೆಯವರು ಪಡಬಾರದು ಎನ್ನುವ ನಿಟ್ಟಿನಲ್ಲಿ ದೃಡ ನಿರ್ಧಾರ ಮಾಡಿ ಹೋಂ ಐಸೋಲೇಷನ್ ನಲ್ಲಿ ಇರುವ ಸೋಂಕಿತರಿಗೆ ಉಚಿತ ಔಷದಿ ನೀಡುವ ಕಾರ್ಯ ಮಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ