ದಶಕದಿಂದ ಸೂರಿಲ್ಲ, ಮಳೆ ಬಂದ್ರೆ ನೀರಿನಲ್ಲೇ ಇರೋ ಗತಿ ; ಗುಡಿಸಲವಾಸಿಗಳ ವ್ಯಥೆ

ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಮನೆ ನೀಡಿಲ್ಲ. ನಮಗೊಂದು ಮನೆ ಕೊಡಿ ಎಂದು ಕಣ್ಣೀರು ಹಾಕುತ್ತಾ ಅಂಗಲಾಚುತ್ತಿದ್ದಾರೆ

news18-kannada
Updated:October 25, 2020, 6:13 PM IST
ದಶಕದಿಂದ ಸೂರಿಲ್ಲ, ಮಳೆ ಬಂದ್ರೆ ನೀರಿನಲ್ಲೇ ಇರೋ ಗತಿ ; ಗುಡಿಸಲವಾಸಿಗಳ ವ್ಯಥೆ
ಪ್ರವಾಹ ಸಂತ್ರಸ್ತರು
  • Share this:
ರಾಯಚೂರು(ಅಕ್ಟೋಬರ್​. 25): ಈ ವರ್ಷ ಮಳೆ ಹೆಚ್ಚು, ಮಳೆಯಿಂದಾಗಿ ಗುಡಿಸಲು ವಾಸಿಗಳು ತತ್ತರಿಸಿದ್ದಾರೆ. ಮಳೆಯ ಸಂದರ್ಭದಲ್ಲಿ ರಾತ್ರಿಯೆಲ್ಲ ಮಳೆಯಲ್ಲಿಯೇ ಕುಳಿತುಕೊಳ್ಳುವಂತ ಸ್ಥಿತಿ ಈ ಕುಟುಂಬದಾಗಿದೆ. ರಾಯಚೂರು ತಾಲೂಕಿನ ಜೆ-ಮಲ್ಲಾಪುರ ಗ್ರಾಮದ ತಾಯಮ್ಮ ಎಂಬ ಮಹಿಳೆಯ ಕರುಣಾಜನಕ ಕಥೆ. ಮೂರು ಮಕ್ಕಳು‌ ಹಾಗು ಗಂಡನೊಂದಿಗೆ ರಾಯಚೂರಿನಲ್ಲಿದ್ದಳು. ಗಂಡ ಜಿಂದಪ್ಪ ಅಕಾಲಿಕ ಮರಣವನ್ನಪ್ಪಿದ್ದ, ಇದರಿಂದಾಗಿ ಆಕೆ ತವರು ಮನೆ ಮಲ್ಲಾಪುರದಲ್ಲಿ ಬಂದು ವಾಸವಾಗಿದ್ದಾಳೆ. ತವರ ಮನೆಯವರು ವಾಸಕ್ಕಾಗಿ ಒಂದಿಷ್ಟು ಜಾಗವನ್ನು ನೀಡಿದ್ದಾರೆ. ಇದೇ ಜಾಗದಲ್ಲಿ ಹತ್ತು ವರ್ಷದ ಹಿಂದಿನಿಂದ ವಾಸವಾಗಿದ್ದಾಳೆ. ಇದರಲ್ಲಿ ಇಬ್ಬರು ಮಕ್ಕಳು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ. ಈಗ ಮಗ ವೆಂಕಟೇಶ್ ಹಾಗು ತಾನು ಇದೇ ಗುಡಿಸಲಿನಲ್ಲಿ ವಾಸವಾಗಿದ್ದಾಳೆ. ಈ ಗುಡಿಸಲು ಸಹ ಹರಕು ಮುರುಕಾಗಿದೆ. ಯಾವಾಗ ಬೀಳುತ್ತೊ ಎಂಬ ಸ್ಥಿತಿಯಲ್ಲಿ ಇಬ್ಬರು ಕೂಲಿ ಮಾಡಿ ಬದುಕುವ ಇವರು ಇದೇ ಗುಡಿಸಲಿನಲ್ಲಿರಬೇಕಾದ ಅನಿವಾರ್ಯತೆ ಇದೆ.

ಈ ವರ್ಷ ಅಧಿಕ ಮಳೆಯಾಗಿದ್ದರಿಂದ ಮಳೆಯಲ್ಲಿ ಗುಡಿಸಲಿನಲ್ಲಿ ನೆನೆದುಕೊಂಡು ಇರಬೇಕು. ಈ ಮಧ್ಯೆ ತಾಯಮ್ಮ ನನಗೊಂದು ಸೂರು ಕೊಡಿ ಎಂದು ಹಲವು ಬಾರಿ ಮನವಿ ಮಾಡಿಕೊಂಡರೂ ಇಲ್ಲಿಯವರೆಗೂ ಮನೆ ನೀಡಿಲ್ಲ.

ಈ ಮಧ್ಯೆ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರಾಗಿದೆ ಎಂದು ಒಂದು ವರ್ಷದಿಂದ ಹೇಳುತ್ತಿದ್ದಾರೆ. ಮನೆ ನೀಡಿಲ್ಲ. ನಮಗೊಂದು ಮನೆ ಕೊಡಿ ಎಂದು ಕಣ್ಣೀರು ಹಾಕುತ್ತಾ ಅಂಗಲಾಚುತ್ತಿದ್ದಾರೆ.

ಇದೇ ಗ್ರಾಮದಲ್ಲಿ ಇಂಥ ಹತ್ತಾರು ಕುಟುಂಬಗಳಿವೆ. ಅವರೆಲ್ಲರೂ ಮನೆಗಾಗಿ ಕಾಯಿಯುತ್ತಿದ್ದಾರೆ. ಸರಕಾರ ಗುಡಿಸಲು ಮುಕ್ತ ರಾಜ್ಯ ಮಾಡುವುದಾಗಿ ಹೇಳಿದ್ದು, ಈ ಹೇಳಿಕೆ ಕೇವಲ ಹೇಳಿಕೆಗೆ ಸೀಮಿತವಾಗಿದೆ. ಸ್ವಾತಂತ್ರ್ಯ ಬಂದು 8 ದಶಕವಾಗುತ್ತಾ ಬಂದರೂ ಇನ್ನೂ ಜನರು ವಾಸಿಸಲು ಒಂದು ಮನೆ ಇಲ್ಲದೆ ಇರುವುದು ವಿಪರ್ಯಾಸವಾಗಿದೆ.

ಇದನ್ನೂ ಓದಿ : ಸಾಲು ರಜೆ ಹಿನ್ನಲೆ ಭರಚುಕ್ಕಿ ಸೊಬಗ ಕಣ್ತುಂಬಿಕೊಳ್ಳಲು ಮುಂದಾದ ಜನ; ಕೋವಿಡ್​ ಸುರಕ್ಷತೆಗೆ ಡೋಂಟ್​ ಕೇರ್​

ಬಸವ, ಅಂಬೇಡ್ಕರ್, ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಗಳಿದ್ದರೂ ಈ ಯೋಜನೆಗಳು ಸಮರ್ಪಕವಾಗಿ ಜಾರಿಯಾಗದೆ ಇರುವುದು ಕಂಡು ಬಂದಿದೆ. ಬಲಾಡ್ಯರಿಗೆ ಇನ್ನಷ್ಟು ಮನೆಗಳು ಸಿಗುತ್ತಿವೆ. ಬಡವರಿಗೆ ಮನೆಗಳೇ ಇಲ್ಲ, ಇದಕ್ಕೆ ಜೆ ಮಲ್ಲಾಪುರದ ತಾಯಮ್ಮ ಸಾಕ್ಷಿಯಾಗಿದ್ದಾಳೆ.
ಇದು ಕೇವಲ ತಾಯಮ್ಮಳೊಬ್ಬಳ ಕಥೆಯಲ್ಲಾ, ಜಿಲ್ಲೆಯಲ್ಲಿ ಬಹುತೇಕ ಗುಡಿಸಲು ವಾಸಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ, ಈಗಲೂ ಗ್ರಾಮ ಪಂಚಾಯತ್ ಮನೆ ನೀಡಿ ಮಳೆಯ ಸಂದರ್ಭದಲ್ಲಿ ನೆಮ್ಮದಿಯಿಂದ ಇರುವಂತೆ ಮಾಡುತ್ತಾರೊ ಕಾದು ನೋಡಬೇಕು.
Published by: G Hareeshkumar
First published: October 25, 2020, 5:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading