ಲಾಕ್​ಡೌನ್​​ ಎಫೆಕ್ಟ್​​​; ಹಳ್ಳಿಗೆ ಬಾರದ ಬಸ್ಸು; ಆಟೋ ಹತ್ತಲು ಬೇಕು 600 ರೂಪಾಯಿ 

ಸಾರಿಗೆ ಸಂಚಾರವಿಲ್ಲದೇ ಇರುವುದರಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಡಿಕೇರಿ ಸೇರಿದಂತೆ ನಗರ ಪಟ್ಟಣಗಳಿಗೆ ಹೋಗಬೇಕಾಗಿರುವುದರಿಂದ ಜನರು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಆದರೆ ಬಸ್ಸುಗಳ ಸಂಚಾರವಿಲ್ಲದೆ ಇರುವುದನ್ನೇ ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು 10 ಕಿಲೋ ಮೀಟರ್ ಹೋಗಲು ವ್ಯಕ್ತಿಯೊಬ್ಬರಿಂದ 300 ರೂಪಾಯಿ ವಸೂಲಿ ಮಾಡುತ್ತಿದ್ದಾರೆ.

news18-kannada
Updated:May 27, 2020, 7:53 PM IST
ಲಾಕ್​ಡೌನ್​​ ಎಫೆಕ್ಟ್​​​; ಹಳ್ಳಿಗೆ ಬಾರದ ಬಸ್ಸು; ಆಟೋ ಹತ್ತಲು ಬೇಕು 600 ರೂಪಾಯಿ 
ಸಾಂದರ್ಭಿಕ ಚಿತ್ರ
  • Share this:
ಕೊಡಗು(ಮೇ 27): ಕೊರೋನಾ ಮಹಾಮಾರಿಗೆ ಬ್ರೇಕ್ ಹಾಕುವುದಕ್ಕೆ ಸರ್ಕಾರ ದೇಶದಲ್ಲಿ ಎರಡು ತಿಂಗಳಿಗೂ ಹೆಚ್ಚಿನ ಕಾಲ ಲಾಕ್ ಡೌನ್ ಮಾಡಿ ಕೆಲವೇ ದಿನಗಳ ಹಿಂದೆಯಷ್ಟೇ ಸಡಿಲಿಕೆ ಮಾಡಿದೆ. ಪಟ್ಟಣ, ನಗರ ಪ್ರದೇಶಗಳಿಗೆ ಬೆರಳೆಣಿಕೆಯಷ್ಟು ಮಾತ್ರವೇ ಬಸ್ಸುಗಳು ಓಡಾಡುತ್ತಿವೆ. ಆದರೆ ಗ್ರಾಮೀಣ ಪ್ರದೇಶಗಳಿಗೆ ಬಸ್ಸುಗಳ ಸಂಚಾರವಿಲ್ಲದೆ ಅಲ್ಲಿನ ಜನರು ಪಡುತ್ತಿರುವ ಪರಿಪಾಟಲು ಅಷ್ಟಿಷ್ಟಲ್ಲ. ಅದನ್ನು ನೀವು ಒಮ್ಮೆ ನೋಡಿ.

ಕೊರೋನಾ ವೈರಸ್ ಇಡೀ ಜಗತ್ತಿನಲ್ಲಿ ಲಕ್ಷಾಂತರ ಜನರ ಪ್ರಾಣವನ್ನು ಬಲಿ ಪಡೆಯುತ್ತಿದೆ. ಈ ಮಾರಣಹೋಮ ನಿಯಂತ್ರಿಸುವುದಕ್ಕಾಗಿಯೇ ದೇಶದಲ್ಲಿ ಲಾಕ್‍ಡೌನ್ ಅನಿವಾರ್ಯವೆಂದು ಸರ್ಕಾರ ಲಾಕ್ ಡೌನ್ ಮಾಡಿತ್ತು. ಆದರೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದರಿಂದ ಇದೀಗ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬಸ್ಸುಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಪಟ್ಟಣ ನಗರ ಸೇರಿದಂತೆ ಪ್ರಮುಖ ಊರುಗಳಿಗೆ ಮಾತ್ರವೇ ಬಸ್ಸುಗಳು ಓಡಾಡುತ್ತಿವೆ. ಆದರೆ ಹಳ್ಳಿಗಳಿಗೆ ಸರ್ಕಾರಿ ಬಸ್ಸುಗಳು ಸಂಚರಿಸದೇ ಇರುವುದರಿಂದ ಗ್ರಾಮೀಣ ಭಾಗದ ಜನರು ಪಡಬಾರದ ಕಷ್ಟಪಡುತ್ತಿದ್ದಾರೆ.

ಗುಡ್ಡುಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗಕ್ಕೆ ಖಾಸಗೀ ಬಸ್ಸುಗಳ ಸಂಚಾರವೇ ಪ್ರಮುಖ ಸಾರಿಗೆ. ಮತ್ತೊಂದೆಡೆ ಸರ್ಕಾರಿ ಸಾರಿಗೆ ಬಸ್ಸುಗಳು ಓಡಾಡುತ್ತಿದ್ದ ಗ್ರಾಮಗಳಿಗೂ ಬಸ್ಸುಗಳು ಓಡಾಡುತ್ತಿಲ್ಲ. ಇದರಿಂದ ಜನರು ಅಗತ್ಯ ವಸ್ತುಗಳನ್ನು ಕೊಳ್ಳಲು, ಅನಾರೋಗ್ಯದ ಸಮಸ್ಯೆ ಕಾಡಿದರೆ ಆಸ್ಪತ್ರೆಗೆ ಹೋಗಲು ಸಾರಿಗೆ ಇಲ್ಲದೆ ನರಕಯಾತನೆ ಅನುಭವಿಸುತ್ತಿದ್ದಾರೆ. ಮಡಿಕೇರಿಯಿಂದ ಕೇವಲ 10, 12 ಕಿಲೋಮೀಟರ್ ದೂರದಲ್ಲಿರುವ ಗ್ರಾಮಗಳಿಗೂ ಬಸ್ಸುಗಳ ಸಂಚಾರವಿಲ್ಲದಂತೆ ಆಗಿದೆ. ಹೀಗಾಗಿ ನಾಪೋಕ್ಲು, ಮಾದಾಪುರ, ಗಾಳೀಬೀಡು, ಒಣಚಲು ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರು ತಮ್ಮ ಚಿಕ್ಕಪುಟ್ಟ ಮಕ್ಕಳನ್ನು ನಡೆಸಿಕೊಂಡೇ ತಿರುಗಾಡುತ್ತಿದ್ದಾರೆ ಎನ್ನುತ್ತಿದ್ದಾರೆ ಗಾಳಿಬೀಡು ಗ್ರಾಮದ ಸೋಮಯ್ಯ.

HAL Tejas: ಎರಡನೇ ಸ್ಕ್ವಾಡ್ರನ್ ಅಭಿವೃದ್ಧಿಪಡಿಸಿದ ಭಾರತೀಯ ಸೇನೆ; ನೀವು ತಿಳಿದುಕೊಳ್ಳಲೇಬೇಕಾದ ಕೆಲವು ಮಹತ್ವದ ಅಂಶಗಳು

ಸಾರಿಗೆ ಸಂಚಾರವಿಲ್ಲದೇ ಇರುವುದರಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಮಡಿಕೇರಿ ಸೇರಿದಂತೆ ನಗರ ಪಟ್ಟಣಗಳಿಗೆ ಹೋಗಬೇಕಾಗಿರುವುದರಿಂದ ಜನರು ಆಟೋಗಳನ್ನೇ ಆಶ್ರಯಿಸಬೇಕಾಗಿದೆ. ಆದರೆ ಬಸ್ಸುಗಳ ಸಂಚಾರವಿಲ್ಲದೆ ಇರುವುದನ್ನೇ ಬಂಡವಾಳವಾಗಿಸಿಕೊಂಡಿರುವ ಆಟೋ ಚಾಲಕರು 10 ಕಿಲೋ ಮೀಟರ್ ಹೋಗಲು ವ್ಯಕ್ತಿಯೊಬ್ಬರಿಂದ 300 ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ವಾಪಸ್ ಅದೇ ಆಟೋದಲ್ಲಿ ಮತ್ತೆ ಗ್ರಾಮಕ್ಕೆ ತಲುಪಬೇಕಾದರೂ ಪುನಃ 300 ರೂಪಾಯಿ ಕೊಡಬೇಕಾಗಿದೆ. ಹೀಗಾಗಿ ಗ್ರಾಮೀಣ ಭಾಗದ ಜನರು ಇನ್ನಿಲ್ಲದಂತೆ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ. ಸರ್ಕಾರ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳನ್ನು ಓಡಿಸುವಂತೆ ಜನರು ಒತ್ತಾಯಿಸುತ್ತಿದ್ದಾರೆ ಒಣಚಲು ಗ್ರಮಸ್ಥರು.

ಒಟ್ಟಿನಲ್ಲಿ ದೇಶದಲ್ಲಿ ಎರಡು ತಿಂಗಳ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಿದ್ದರೂ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಚಾರವಿಲ್ಲದೆ ಜನರು ಇನ್ನೂ ಸಂಪೂರ್ಣ ಲಾಕ್ ಡೌನ್ ಅನುಭವಿಸುತ್ತಿದ್ದಾರೆ. ಇನ್ನಾದರೂ ಗ್ರಾಮೀಣ ಭಾಗಗಳಲ್ಲಿ ಬಸ್ಸುಗಳನ್ನು ಬಿಡುವ ಮೂಲಕ ಜನರ ಸಮಸ್ಯೆಗೆ ಒಂದಿಷ್ಟು ಪರಿಹಾರ ನೀಡುತ್ತಾ ಎನ್ನೋದು ಜನರ ನಿರೀಕ್ಷೆ.
First published: May 27, 2020, 7:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading