ವರ್ಗಾವಣೆಗೊಂಡಿರುವ ಜಿಪಂ ಸಿಇಒ ಮೇಲಿನ ತನಿಖೆಗೆ ಲಿಖಿತ ಆದೇಶವೆ ಬಂದಿಲ್ಲ; ಮೈಸೂರು ಪ್ರಾದೇಶಿಕ ಆಯುಕ್ತ

ಇದೆಲ್ಲದರ ನಡುವೆ ನಂಜನಗೂಡು ಟಿಹೆಚ್ಓ ಡಾ. ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ, ನಂಜನಗೂಡು ಪ್ರಭಾರ ಟಿಹೆಚ್ಓ ಆಗಿ ಡಾ. ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ (ಸೀನಿಯರ್ ಮೆಡಿಕಲ್ ಆಫೀಸರ್) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ಇಂದಿನಿಂದ ಪ್ರಬಾರ ಟಿಹೆಚ್ಓ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

news18-kannada
Updated:August 24, 2020, 5:58 PM IST
ವರ್ಗಾವಣೆಗೊಂಡಿರುವ ಜಿಪಂ ಸಿಇಒ ಮೇಲಿನ ತನಿಖೆಗೆ ಲಿಖಿತ ಆದೇಶವೆ ಬಂದಿಲ್ಲ; ಮೈಸೂರು ಪ್ರಾದೇಶಿಕ ಆಯುಕ್ತ
ನಂಜನಗೂಡಿಗೆ ಹೊಸದಾಗಿ ಬಂದಿರುವ ಪ್ರಭಾರ ಟಿಹೆಚ್ಓ ಡಾ. ಈಶ್ವರ್.
  • Share this:
ನಂಜನಗೂಡು ಟಿಹೆಚ್ಓ ನಾಗೇಂದ್ರ  ಆತ್ಮಹತ್ಯೆ ಪ್ರಕರಣ ಬಿಸಿ ಇನ್ನು ಆರಿಲ್ಲ. ನಿನ್ನೆ ವೈದ್ಯರು ಮುಷ್ಕರ ಹಿಂಪಡೆದು ಇಂದಿನಿಂದ ಕರ್ತವ್ಯಕ್ಕೆ ಹಾಜರಾದರೆ, ಇಂದಿನಿಂದ ಮೈಸೂರಿನ ಪಿಡಿಓಗಳು ಕರ್ತವ್ಯ ಬಿಟ್ಟು ವರ್ಗಾವಣೆಗೊಂಡಿರುವ ಮೈಸೂರು ಜಿಪಂ ಸಿಇಒ ಪ್ರಶಾಂತ್ ಕುಮಾರ್ ಮಿಶ್ರಾ ಪರ ಹೋರಾಟಕ್ಕಿಳಿದಿದ್ದಾರೆ. ಸಿಇಒ ಮೇಲಿನ ತನಿಖೆಗೆ ಲಿಖಿತ ಆದೇಶವೇ ಬಾರದೆ ತನಿಖೆಯ ಹಾದಿ ಇನ್ನು ಆರಂಭದ ಹಂತದಲ್ಲೆ ನಿಂತಿದೆ. ಈ ಜೊತೆಗೆ ನಂಜನಗೂಡಿಗೆ ಪ್ರಭಾರ ಟಿಹೆಚ್ಓ ನೇಮಕವಾಗಿದ್ದಾರೆ.

ಹೌದು, ನಂಜನಗೂಡು ಟಿಎಚ್​ಓ ನಾಗೇಂದ್ರ ಆತ್ಮಹತ್ಯೆ ಪ್ರಕರಣದ ಆರೋಪಿತ ಸಿಇಒ ಪರ ಮೈಸೂರು ಪಿಡಿಒ ಕ್ಷೇಮಾಭಿವೃದ್ಧಿ ಸಂಘ ನಿಂತಿದೆ. ಸಿಇಓ ವರ್ಗಾವಣೆ ರದ್ದಿಗೆ ಆಗ್ರಹಿಸಿದ ಪಿಡಿಓಗಳು ಇಂದು ಮೈಸೂರಿನಲ್ಲಿ ಬೃಹತ್​ ರ್ಯಾಲಿ ನಡೆಸುವ ಉದ್ದೇಶ ಹೊಂದಿದ್ದರು. ಕೊರೋನಾ ಕಾರಣ ನೀಡಿದ ಪೊಲೀಸರು ರ್ಯಾಲಿಗೆ ಅನುಮತಿ ನಿರಾಕರಿಸಿದ್ದರು. ಪೊಲೀಸರ ಅನುಮತಿ ನಿರಾಕರಣೆಯ ನಡುವೆಯೇ 100ಕ್ಕೂ ಹೆಚ್ಚು ಪಿಡಿಓಗಳು ಪ್ರಾದೇಶಿಕ ಆಯುಕ್ತ ಪ್ರಕಾಶ್ ಅವರಿಗೆ ಮನವಿ ಸಲ್ಲಿಸಿದರು. ವರ್ಗಾವಣೆ ಆದೇಶ ರದ್ದು ಪಡಿಸಿ ಸಿಇಒರನ್ನು ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲು ಮನವಿ ಮಾಡಿದರು. ಸಿಇಒ ಮೇಲೆ ಇನ್ನು ಆರೋಪ ಮಾತ್ರ ಇದೆ. ಅವರು ಪ್ರಾಮಾಣಿಕ ಅಧಿಕಾರಿಯಾಗಿದ್ದಾರೆ. ಹೀಗಾಗಿ ಅವರ ವರ್ಗಾವಣೆ ರದ್ದು ಮಾಡಿ ಕರ್ತವ್ಯಕ್ಕೆ ನಿಯೋಜಿಸಿದ ಎಂದು ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಾಯಾಪ್ಪ ನಿಯಫಗ ಮನವಿ ಮಾಡಿತು.

ಇದನ್ನು ಓದಿ: ಕಪಿಲ್ ಸಿಬಲ್ ಬಳಿಕ ಗುಲಾಮ್ ನಬಿ ಆಜಾದ್ ಯೂ ಟರ್ನ್; ರಾಹುಲ್ ಗಾಂಧಿ ಆ ರೀತಿ ಮಾತನಾಡಿಲ್ಲ

ಈ ನಡುವೆ ಟಿಎಚ್​ಓ ನಾಗೇಂದ್ರ ಆತ್ಮಹತ್ಯೆ ಪ್ರಕರಣ ತನಿಖೆಯ ಹೊಣೆ ಹೊತ್ತಿರುವ ಪ್ರಾದೇಶಿಕ ಆಯುಕ್ತರಿಗೆ ಈವರೆಗೂ ಯಾವುದೇ ಲಿಖಿತ ಆದೇಶವೇ ಬಂದಿಲ್ಲ. ಸಿಇಒ ಮೇಲಿನ ಆರೋಪದ ತನಿಖೆಗೆ ಆದೇಶ ಬಂದಿಲ್ಲ ಅಂತ ಸ್ವತಃ ಮೈಸೂರು ಪ್ರಾದೇಶಿಕ ಆಯುಕ್ತ ಪ್ರಕಾಶ್ ಹೇಳಿದ್ದಾರೆ. 7 ದಿನದ ಒಳಗಾಗಿ ತನಿಖೆ ನಡೆಸುವಂತೆ ಆದೇಶಿಸಿರುವ ಸಿಎಂ ಬಿಎಸ್​ವೈ ಅವರ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ ಯಾವುದೇ ಲಿಖಿತ ಆದೇಶ ಬಂದಿಲ್ಲ. ಆದೇಶ ಬಂದ 7 ದಿನದ ಒಳಗಾಗಿ ತನಿಖೆ ಮಾಡಿ ಮುಗಿಸುತ್ತೇವೆ ಎಂದು ಮೈಸೂರಿನ ಪ್ರಾದೇಶಿಕ ಆಯುಕ್ತರು ತಿಳಿಸಿದ್ದಾರೆ. ಜೊತೆಗೆ ಇಂದು ಪಿಡಿಓಗಳು ಮನವಿ ಸಲ್ಲಿಸಿದ್ದಾರೆ. ಆ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದು ಪ್ರಾದೇಶಿಕ ಆಯುಕ್ತ ಪ್ರಕಾಶ್ ಹೇಳಿದ್ದಾರೆ.

ಇದೆಲ್ಲದರ ನಡುವೆ ನಂಜನಗೂಡು ಟಿಹೆಚ್ಓ ಡಾ. ನಾಗೇಂದ್ರ ಆತ್ಮಹತ್ಯೆ ಹಿನ್ನೆಲೆಯಲ್ಲಿ, ನಂಜನಗೂಡು ಪ್ರಭಾರ ಟಿಹೆಚ್ಓ ಆಗಿ ಡಾ. ಈಶ್ವರ್ ನೇಮಕವಾಗಿದ್ದಾರೆ. ಟಿ.ನರಸೀಪುರ ತಾಲ್ಲೂಕಿನ ಮೂಗೂರಿನಲ್ಲಿ ಎಸ್ಎಂಓ (ಸೀನಿಯರ್ ಮೆಡಿಕಲ್ ಆಫೀಸರ್) ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈಶ್ವರ್ ಇಂದಿನಿಂದ ಪ್ರಬಾರ ಟಿಹೆಚ್ಓ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಒಟ್ಟಿನಲ್ಲಿ 5 ದಿನವೇ ಟಿಹೆಚ್ಓ ನಾಗೇಂದ್ರ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿದೆ.
Published by: HR Ramesh
First published: August 24, 2020, 5:57 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading