ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಶ್ನಿಸಿ ಯಾರೂ ನ್ಯಾಯಾಲಯಕ್ಕೆ ಹೋಗದಂತ ನಿಯಮ ರೂಪಿಸಲಾಗಿದೆ; ಸಚಿವ ನಾರಾಯಣಗೌಡ

ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆಯಾ ಜಿಲ್ಲಾ ಸಚಿವರಿಗೆ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನವನ್ನು ನೀಡಿದ್ದಾರಲ್ಲದೆ, ಅನುದಾನವನ್ನೂ ನೀಡಿದ್ದಾರೆ. ಕೊರೋನಾ ಇದೀಗ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಮುಂದಿನ ಹದಿನೈದು, ಒಂದು ತಿಂಗಳವರೆಗೆ ಬಹುತೇಕ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ಹೇಳಿದರು. 

news18-kannada
Updated:August 26, 2020, 4:50 PM IST
ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಪ್ರಶ್ನಿಸಿ ಯಾರೂ ನ್ಯಾಯಾಲಯಕ್ಕೆ ಹೋಗದಂತ ನಿಯಮ ರೂಪಿಸಲಾಗಿದೆ; ಸಚಿವ ನಾರಾಯಣಗೌಡ
ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ನಗರಸಭೆ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಚಿವ ನಾರಾಯಣಗೌಡ ಶಿಲಾನ್ಯಾಸ ನೆರವೇರಿಸಿದರು.
  • Share this:
ಪುತ್ತೂರು; ರಾಜ್ಯದ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆಗೆ ಸಂಬಂಧಪಟ್ಟಂತೆ ಹಲವರು ನ್ಯಾಯಾಲಯಕ್ಕೆ ಹೋದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಅಧ್ಯಕ್ಷ-ಉಪಾಧ್ಯಕ್ಷ ಆಯ್ಕೆ ಪ್ರಕ್ರಿಯೆ ವಿಳಂಬವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಇನ್ನು ಯಾವುದೇ ಕಾರಣಕ್ಕೂ ಸರಕಾರ ಹೊರಡಿಸಿದ ಮೀಸಲಾತಿ ಪಟ್ಟಿಯನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಹೋಗದಂತೆ ನಿಯಮದಲ್ಲಿ ಬದಲಾವಣೆ ತರಲಾಗಿದೆ. ಇದನ್ನು ಹೈಕೋರ್ಟ್​ಗೂ ಕೂಡಾ ಸಲ್ಲಿಸಲಾಗಿದೆ ಎಂದು ಸಚಿವ ನಾರಾಯಣಗೌಡ ಅವರು ಹೇಳಿದರು.

ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ನಗರಸಭೆ ಆಡಳಿತ ಕಚೇರಿಯ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಸಚಿವ ನಾರಾಯಣಗೌಡ, ಮುಂದಿನ ಹದಿನೈದು ದಿನಗಳಲ್ಲಿ ಈ ಕುರಿತ ತೀರ್ಪು ಬರುವ ಸಾಧ್ಯತೆಯಿದ್ದು, ಬಳಿಕ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ರಾಜ್ಯದಾದ್ಯಂತ ಆರಂಭಗೊಳ್ಳುವ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

ಇದನ್ನು ಓದಿ: ಮಂಗಳೂರು-ಬೆಂಗಳೂರು ಹೆದ್ದಾರಿಯ ಗುಂಡಿ ಮುಚ್ಚಲು ಸೂಚನೆ, ಮಳೆ ಬಳಿಕ ಚತುಷ್ಫಥ ಕಾಮಗಾರಿ ಆರಂಭ; ಕಟೀಲ್

ಬೆಳೆ ನಷ್ಟ ಪರಿಹಾರದ ಕುರಿತಂತೆ ಮಾಹಿತಿ ನೀಡಿದ ಸಚಿವ ನಾರಾಯಣಗೌಡ ಅವರು ಕೇಂದ್ರ ಸರಕಾರ ರೈತರಿಗಾದ ಬೆಳೆಗಳ ನಷ್ಟಕ್ಕೆ ಪರಿಹಾರವನ್ನು ನೀಡುವುದಕ್ಕೋಸ್ಕರ ಮೊಬೈಲ್ ಆ್ಯಪ್ ಸಿದ್ಧಪಡಿಸಿದೆ. ಕೇಂದ್ರ ಸರಕಾರ ನೀಡುವ ಪರಿಹಾರ ನೇರವಾಗಿ ರೈತನ ಬ್ಯಾಂಕ್ ಅಕೌಂಟ್ ಗೇ ಪಾವತಿಯಾಗಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ವ್ಯವಸ್ಥೆಯನ್ನು ಸರಕಾರ ಮಾಡಿದೆ. ಇಲ್ಲದೇ ಹೋದಲ್ಲಿ ನಷ್ಟ ಪರಿಹಾರದಲ್ಲೂ ಮಧ್ಯವರ್ತಿಗಳ ಕಾಟ ಇರುವ ಕಾರಣಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರಕಾರ ಈ ತೀರ್ಮಾನಕ್ಕೆ ಬಂದಿದೆ. ಆ್ಯಪ್ ನಲ್ಲಿ ಬೆಳೆಗಳ ನಷ್ಟ ಪರಿಹಾರದ ದಾಖಲೆಗಳನ್ನು ತುಂಬಿಸುವ ಸಂದರ್ಭದಲ್ಲಿ ಕೆಲವು ತಾಂತ್ರಿಕ ತೊಂದರೆ ಎದುರಾಗುವ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ಬಿಟ್ಟು ಬೇರೆ ಯಾವುದೇ ಸರಕಾರವಿದ್ದರೂ, ಕೊರೊನಾವನ್ನು ಈ ರೀತಿಯಲ್ಲಿ ನಿಯಂತ್ರಣಕ್ಕೆ ತರಲು ಸಾಧ್ಯವಾಗುತ್ತಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಎಲ್ಲಾ ಕ್ರಮಗಳನ್ನು ಕೈಗೊಂಡಿದ್ದಾರೆ. ಆಯಾ ಜಿಲ್ಲಾ ಸಚಿವರಿಗೆ ತಮ್ಮ ಕ್ಷೇತ್ರದಲ್ಲಿ ಕೋವಿಡ್ ನಿಯಂತ್ರಣಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶನವನ್ನು ನೀಡಿದ್ದಾರಲ್ಲದೆ, ಅನುದಾನವನ್ನೂ ನೀಡಿದ್ದಾರೆ. ಕೊರೋನಾ ಇದೀಗ ರಾಜ್ಯದಲ್ಲಿ ನಿಯಂತ್ರಣಕ್ಕೆ ಬರುತ್ತಿದ್ದು, ಮುಂದಿನ ಹದಿನೈದು, ಒಂದು ತಿಂಗಳವರೆಗೆ ಬಹುತೇಕ ನಿಯಂತ್ರಣಕ್ಕೆ ಬರಲಿದೆ ಎಂದು ಅವರು ಹೇಳಿದರು.
Published by: HR Ramesh
First published: August 26, 2020, 4:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading