news18-kannada Updated:January 8, 2021, 9:07 PM IST
ಡಿಸಿಎಂ ಅಶ್ವತ್ಥ್ ನಾರಾಯಣ
ರಾಮನಗರ: ಕೊರೋನಾ ವ್ಯಾಕ್ಸಿನೇಷನ್ ನೀಡುವ ಪೂರ್ವ ಸಿದ್ದತೆ ಬಗ್ಗೆ ಇಂದು ಡ್ರೈ ರನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 8405 ಮಂದಿಗೂ ಹೆಚ್ಚು ನೋಂದಾಯಿತರಿದ್ದಾರೆ. ಇನ್ನೂ 10 ದಿನದಲ್ಲಿ ವ್ಯಾಕ್ಸಿನೇಷನ್ ಬರುವ ಸೂಚನೆ ಇದೆ. ಈಗಾಗಲೇ ವ್ಯಾಕ್ಸಿನೇಷನ್ ಹಂಚಿಕೆ ಕೆಲಸ ನಡೆಯುತ್ತಿದೆ ಎಂದು ಡಿಸಿಎಂ ಅಶ್ವತ್ಥ್ ನಾರಾಯಣ ಅವರು ತಿಳಿಸಿದರು. ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು ಡಿಸಿಎಂ ಅಶ್ವತ್ಥ್ ನಾರಾಯಣ ಅವರು ಕೋವಿಡ್ ಡ್ರೈ ರನ್ ಗೆ ಚಾಲನೆ ನೀಡಿದರು. ಆರೋಗ್ಯ ಇಲಾಖೆ ಸಿಬ್ಬಂದಿಗೆ ಸ್ವತಃ ಡಿಸಿಎಂ ಅವರೇ ಕೊರೋನಾ ಲಸಿಕೆ ಹಾಕುವ ಪ್ರಾತ್ಯಕ್ಷಿಕೆ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಎಸ್.ಪಿ.ಗಿರೀಶ್, ಡಿಹೆಚ್ಓ ಡಾ.ನಿರಂಜನ್ ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಅಶ್ವತ್ಥ್ ನಾರಾಯಣ ಅವರು, ಎರಡು ಹಂತದಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್ ವ್ಯಾಕ್ಸಿನೇಷನ್ ನೀಡಲಾಗುತ್ತೆ. ಮೊದಲು ಒಂದು ಡೋಸ್ ವ್ಯಾಕ್ಸಿನ್ ಕೊಟ್ಟ 28 ದಿನಗಳ ನಂತರ ಮತ್ತೊಂದು ಡೋಸ್ ವ್ಯಾಕ್ಸಿನ್ ನೀಡಲಾಗುತ್ತೆ ಎಂದು ಹೇಳಿದರು.
ಇದನ್ನು ಓದಿ: Video | ಗಂಗಾ ನದಿಯಲ್ಲಿ ಡಾಲ್ಫಿನ್ ಮೀನಿಗೆ ದೊಣ್ಣೆ, ಕೊಡಲಿಯಿಂದ ಹೊಡೆದ ಕೊಂದ ಸ್ಥಳೀಯರು!
ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಪಕ್ಷದ ಮುಖಂಡರಲ್ಲಿ ಭಿನ್ನಮತವಿದೆ ಎಂದು ಹೇಳಲಾಗುತ್ತಿತ್ತು. ಈ ವಿಚಾರವಾಗಿ ಮಾತನಾಡಿದ ಅವರು, ರಾಮನಗರ ಜಿಲ್ಲಾ ಬಿಜೆಪಿಯಲ್ಲಿ ಭಿನ್ನಮತವಿಲ್ಲ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಪಕ್ಷದಿಂದ ನಾವು. ರಾಮನಗರದಲ್ಲಿ ರುದ್ರೇಶ್, ಅಶ್ವತ್ಥ್ ನಾರಾಯಣ ಎಲ್ಲರೂ ಒಂದೇ. ಇಲ್ಲಿ ಯಾರೂ ಸಹ ದೊಡ್ಡವರಲ್ಲ. ಪಕ್ಷದ ವಿರುದ್ಧ ಯಾರು ಹೋಗಲು ಸಾಧ್ಯವಿಲ್ಲ. ಬಿಜೆಪಿ ಮುಖಂಡ ಎಂ.ರುದ್ರೇಶ್ ಹಾಗೂ ಅಶ್ವತ್ಥ್ ನಾರಾಯಣ ಎಂಬ ಯಾವುದೇ ಬಣಗಳು ಇಲ್ಲ. ಎಲ್ಲರೂ ಬಿಜೆಪಿ ಪಕ್ಷದ ಕಾರ್ಯಕರ್ತರೇ ಎಂದು ರಾಮನಗರದಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ ಹೇಳಿಕೆ ನೀಡಿದರು.
ಬಿಜೆಪಿಯ ಒಳಜಗಳದಿಂದ ಸೋತ ಅಭ್ಯರ್ಥಿಗಳು
ಹೌದು, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 200 ರಕ್ಕೂ ಹೆಚ್ಚು ಕಡೆಗಳಲ್ಲಿ ಗೆಲುವು ಸಾಧಿಸಿದ್ದಾರೆ. ಆದರೆ 1000 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಕಾಂಗ್ರೆಸ್ ಬೆಂಬಲಿತರು ಜಯಗಳಿಸಿ ಮೊದಲ ಸ್ಥಾನದಲ್ಲಿದ್ದರೆ, 600ಕ್ಕೂ ಹೆಚ್ಚು ಕಡೆಗಳಲ್ಲಿ ಜೆಡಿಎಸ್ ಬೆಂಬಲಿತರು ಜಯಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಆದರೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಅಶ್ವತ್ಥ್ ನಾರಾಯಣ ಹಾಗೂ ಎಂ.ರುದ್ರೇಶ್ ನಡುವಿನ ರಾಜಕೀಯ ಜಗಳದಿಂದಾಗಿ ಜಿಲ್ಲೆಯ ಹಲವೆಡೆ ಬಿಜೆಪಿ ಬೆಂಬಲಿತರು ಸೋಲು ಕಂಡಿದ್ದಾರೆ. ಜಿಲ್ಲೆಯಲ್ಲಿ ಬಿಜೆಪಿ ಪಕ್ಷ ಬೆಳೆಯಲು ರುದ್ರೇಶ್ ಪಾತ್ರವೂ ಇದೇ. ಅಶ್ವತ್ಥ್ ನಾರಾಯಣ ಅವರ ಪಾತ್ರವೂ ಇದೇ. ಆದರೆ ಪ್ರತಿಷ್ಠೆ ವಿಚಾರದಲ್ಲಿ ಈ ಇಬ್ಬರು ಮುಖಂಡರು ಪರಸ್ಪರ ಕಿತ್ತಾಡುತ್ತಿರುವ ಹಿನ್ನೆಲೆಯಲ್ಲಿ ಅದು ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ಕಾರ್ಯಕರ್ತರ ಆರೋಪವಾಗಿದೆ.
ವರದಿ : ಎ.ಟಿ.ವೆಂಕಟೇಶ್
Published by:
HR Ramesh
First published:
January 8, 2021, 9:07 PM IST