ಲಾಕ್​ಡೌನ್ ಮುಂದುವರಿಕೆ ಬೇಡ, ಹಂತ ಹಂತವಾಗಿ ಅನ್​ಲಾಕ್ ಮಾಡಿ: ಸತೀಶ್ ಜಾರಕಿಹೊಳಿ ಸಲಹೆ

ಒಟ್ಟಿನಲ್ಲಿ ಸತೀಶ್ ಜಾರಕಿಹೋಳಿ ವಿರೋಧ ಪಕ್ಷದದಲ್ಲಿ ಇದ್ದು ಸರ್ಕಾರದ ಕೆಲಸಗಳನ್ನ ಪರಿಶೀಲನೆ ಮಾಡುತ್ತಿರುವ ಕೆಲಸವೇನೊ ಒಳ್ಳೆಯದೆ ಆದ್ರೆ ಬೆಂಬಲಿಗರು ಮಾತ್ರ ಕೊರೋನಾ ಸಂದರ್ಭದಲ್ಲೂ ಭೇಟಿಗೆ ಆಗಮಿಸಿ ಸಾಮಾಜೀಕ ಅಂತರ ಮರೆತಿದ್ದು ಸಾರ್ವಜನಿಕರ ಕಣ್ಣಿಗೆ ಗುರಿಯಾಗಿದ್ದಾರೆ.

ಸತೀಶ್ ಜಾರಕಿಹೊಳಿ.

ಸತೀಶ್ ಜಾರಕಿಹೊಳಿ.

  • Share this:
ಬೆಳಗಾವಿ: ರಾಜ್ಯದಲ್ಲಿ ಕೊರೋನಾ ಹೆಚ್ಚಳವಾಗಿರುವ ಹಿನ್ನಲೆ ಕಳೆದ ಒಂದು ತಿಂಗಳಿನಿಂದಲು ರಾಜ್ಯದಲ್ಲಿ ಲಾಕಡೌನ್ ಹೇರಲಾಗಿದೆ. ಒಂದು ತಿಂಗಳಾದ್ರು ಕೊರೊನಾ ಮಾತ್ರ ಪೂರ್ತಿ ಪ್ರಮಾಣದಲ್ಲಿ ಇನ್ನು ಹತೋಟಿಗೆ ಬಂದಿದೆ ಸರ್ಕಾರ ಜೂನ್ 7 ರ ಬಳಿಕ ಮತ್ತೆ ಲಾಕಡೌನ್ ವಿಸ್ತರಣೆ ಮಾಡಲು ಮುಂದಾಗಿದ್ದು ಇದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೋಳಿ ವಿರೋಧ ವ್ಯಕ್ತಪಡಿಸಿದ್ದು  ಹಂತ ಹಂತವಾಗಿ ಜೂನ್ 30 ರೋಳಗಾಗಿ ಸಂಪೂರ್ಣ ಲಾಕಡೌನ್ ತೆಗೆದುಹಾಕಬೇಕೆಂದು ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ  ಪ್ರವಾಸ ಕೈಗೊಂಡಿರುವ ಸತೀಶ್ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿ ಕೊರೊನಾ ನಿರ್ವಹಣೆ ಕುರಿತು ವೈದ್ಯರು ಹಾಗೂ ತಾಲೂಕಾಡಳಿದ ಜೊತೆ ಸಭೆ ನಡೆಸಿದ್ರು. ಕೊರೊ‌ನಾ ಸೋಂಕಿರಿಗೆ ನೀಡುತ್ತಿರುವ ಚಿಕಿತ್ಸೆ ಕುರಿತು ಪರಿಶೀಲನೆ ನಡೆಸಿ ಬಳಿಕ ವೈದ್ಯರು ಹಾಗೂ ತಾಲೂಕಾಡಳಿತ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದಿದಿದ್ದಾರೆ.

ಇದೆ ವೇಳೆ ಮಾದ್ಯಮಗಳ ಜೋತೆ ಮಾತನಾಡಿದ ಸತೀಶ್ ಜಾರಕಿಹೋಳಿ ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿದ್ದ ವೇಳೆ ಸರ್ಕಾರ ಸಂಪೂರ್ಣ ವಿಫಲವಾಗಿತ್ತು ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳದ ಹಿನ್ನಲೆ ಎಲ್ಲೆಡೆಯೂ ಸಮಸ್ಯೆ ಆಗಿತ್ತು ಆದ್ರೆ ಈಗ ಪರಿಸ್ಥಿತಿ ಸದ್ಯ ಹತೋಟಿಗೆ ಬಂದಿದೆ. ಮೂರನೆ ಅಲೆ ಬಂದಾಗ ಎಲ್ಲವೂ ಸರಿ ಹೋಗಬೇಕು ಈಗಿನಿಂದಲೆ ಕ್ರಮಗಳನ್ನ ಕೈಗೊಳ್ಳುವಂತೆ ಜಿಲ್ಲೆಯಾದ್ಯಂತ ಭೇಟಿ ನೀಡಿ ಸೂಚನೆ ನೀಡಿದ್ದೇವೆ. ಮುಂದೆ ಮತ್ತೆ ಸರ್ಕಾರ ಲಾಕಡೌನ್ ವಿಸ್ತರಣೆ ಮಾಡಬಾರದು ಹಂತ ಹಂತವಾಗಿ ಕೆಲವು ಮಾರ್ಗಸೂಚಿಗಳನ್ನ ಜಾರಿ ಮಾಡಿ ಜೂನ್ 30 ರ ರೋಳಗಾಗಿ ಸಂಪೂರ್ಣ ಲಾಕಡೌನ್ ತೆರುವು ಮಾಡಬೇಕು ಎಂದಿದ್ದಾರೆ.

ನ್ನು ಕೊರೊನಾದಿಂದಾಗಿ ಸಾವನ್ನಪ್ಪಿದ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಜೋತೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರ ಬಿಲ್ ಗಳನ್ನ ಸರ್ಕಾರವೆ ಭರಿಸಬೇಕು ಎಂದಿದ್ದಾರೆ.
ಕೊರೊನಾ ನಿಯಮ ಗಾಳಿಗೆ ತೂರಿದ ಬೆಂಬಲಿಗರು

ಇನ್ನು ಸತೀಶ್ ಜಾರಕಿಹೋಳಿ ಆಸ್ಪತ್ರೆಗೆ ಆಗಮಿಸಿದ್ದ ವೇಳೆ ಸತೀಶ್ ಅವರ ನೂರಾರು ಬೆಂಬಲಿಗರು ಆಸ್ಪತ್ರೆಗೆ ಲಗ್ಗೆ ಇಟ್ಟಿದ್ರು. ಕರೊನಾ ಲಾಕಡೌನ್ ನಿಯಮ ಗಾಳಿಗೆ ತೂರಿ ಶಾಸಕರ ಭೇಟಿಗೆ ಬಂದು ಸಾಮಾಜೀಕ ಅಂತರವನ್ನೆ ಮರೆತು ಬಿಟ್ರು. ಕೊರೊನಾ ಲೆಕ್ಕಿಸದೆ ಸತೀಶ್ ಜೋತೆ ಸೆಲ್ಟಿ ತೆಗೆಸಿಕೊಳ್ಳಲು ಸಾಹಸ ಪಟ್ಟಿದ್ದಾರೆ‌. ಇನ್ನು ಜನರಿಗೆ ಮಾದರಿಯಾ ಗಬೇಕಿದ್ದ ಶಾಸಕರಿಂದಲೆ ಕೊರೊನಾ ರೂಲ್ಸ್  ಬ್ರೇಕ್ ಆಗಿದೆ. ನೂರಾರು ಕಾರ್ಯಕರ್ತರು ಜಮಾಯಿಸಿದ್ರು ಬರಬೇಡಿ ಸಾಮಾಜೀಕ ಅಂತರ ಕಾಪಾಡಿಕೋಳ್ಳಿ ಎಂದು ಸೌಜ್ಯಕ್ಕೂ ಸಹ ಸತೀಶ್ ಹೇಳಲೆ ಇಲ್ಲಾ ಬದಲಾಗಿ ಕಾರ್ಯಕರ್ತರ ಜೋತೆಗೆ ಮಾತನಾಡುತ್ತ ಅಲ್ಲಿಯೆ ನಿಂತಿದ್ರು.

ಇದನ್ನೂ ಓದಿ: Baba Ramdev | ಅಲೋಪಥಿಯನ್ನು ಮೂರ್ಖ ವಿಜ್ಞಾನ ಎಂದ ಬಾಬಾ ರಾಮದೇವ್ ವಿರುದ್ಧ ಸಿಡಿದೆದ್ದ ವೈದ್ಯರು

ಒಟ್ಟಿನಲ್ಲಿ ಸತೀಶ್ ಜಾರಕಿಹೋಳಿ ವಿರೋಧ ಪಕ್ಷದದಲ್ಲಿ ಇದ್ದು ಸರ್ಕಾರದ ಕೆಲಸಗಳನ್ನ ಪರಿಶೀಲನೆ ಮಾಡುತ್ತಿರುವ ಕೆಲಸವೇನೊ ಒಳ್ಳೆಯದೆ ಆದ್ರೆ ಬೆಂಬಲಿಗರು ಮಾತ್ರ ಕೊರೋನಾ ಸಂದರ್ಭದಲ್ಲೂ ಭೇಟಿಗೆ ಆಗಮಿಸಿ ಸಾಮಾಜೀಕ ಅಂತರ ಮರೆತಿದ್ದು ಸಾರ್ವಜನಿಕರ ಕಣ್ಣಿಗೆ ಗುರಿಯಾಗಿದ್ದಾರೆ. ಇನ್ನಾದ್ರು ಶಾಸಕರು ಎಚ್ಚೆತ್ತುಕೊಂಡು ತಮ್ಮ ಬೆಂಬಲಿಗರಿಗೆ ಹಾಗೂ ಕಾರ್ಯಕರ್ತರಿಗೆ ಬುದ್ದಿ ಹೇಳಬೇಕು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:MAshok Kumar
First published: