BSY: ಯಡಿಯೂರಪ್ಪ ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಪ್ರಶ್ನೆಯೇ ಇಲ್ಲ; ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್

ಯಡಿಯೂರಪ್ಪ ಅವರನ್ನು ರಾಜಕೀಯದಿಂದ ದೂರ ಇಡುವ ಆಲೋಚನೆ ಕೂಡ ಇದರಲ್ಲಿ ಇಲ್ಲದಂತಿಲ್ಲ. ಈ ವಿಚಾರವಾಗಿ ಮಾತನಾಡಿರುವ ಅರುಣ್ ಸಿಂಗ್ ಅವರು ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲು ಸ್ವತಂತ್ರರು, ಆದರೆ, ಚುನಾವಣೆ ಮಾತ್ರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಅರುಣ್​ ಸಿಂಗ್​

ಅರುಣ್​ ಸಿಂಗ್​

 • Share this:
  ದಾವಣಗೆರೆ: ಯಡಿಯೂರಪ್ಪ (BS Yediyurappa) ರಾಜ್ಯ ಪ್ರವಾಸ ಆರಂಭಿಸಲು ಗ್ರೀನ್ ಸಿಗ್ನಲ್ ನೀಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ಹಿರಿಯ ನಾಯಕ ಅವರು ಪ್ರವಾಸ ಮಾಡಬಹುದು. ಅದಕ್ಕೆ ಗ್ರೀನ್ ಸಿಗ್ನಲ್ ನೀಡುವ ಅವಶ್ಯಕತೆ ಇಲ್ಲ ಎಂದು ದಾವಣಗೆರೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ (BJP State In charge Arun Singh) ಹೇಳಿದರು. ಬಿಜೆಪಿ ವಿಭಾಗೀಯ ಪ್ರಭಾರಿಗಳು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅರುಣ್ ಸಿಂಗ್ ಅವರು, ಈಗಾಗಲೇ ಬಗ್ಗೆ ಹಲವಾರು ಸಲ ಈ ಬಗ್ಗೆ ಹೇಳಿರುವೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಒಳ್ಳೆಯ ಕೆಲಸ ನಡೆಯುತ್ತಿದೆ. ಸಮಾಜದ ಎಲ್ಲ ಜನಾಂಗದ ಬಗ್ಗೆ ಗಮನ ಹರಿಸುತ್ತಿದ್ದಾರೆ. ಜನರಿಗೆ ಅನುಕೂಲ ಆಗುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

  ಎರಡು ದಿನಗಳ ಕಾಲ ದಾವಣಗೆರೆ ಸಭೆಯಲ್ಲಿ ಪಕ್ಷದ ವಿಚಾರ ಚಿಂತನೆ ನಡೆಯಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಈಗಾಗಲೇ ಹೇಳಲಾಗಿದೆ ಎಂದು ಮತ್ತೊಮ್ಮೆ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದರು.

  ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಹೈಕಮಾಂಡ್ ಆದೇಶದಂತೆ ರಾಜೀನಾಮೆ ನೀಡಿದ್ದರು. ಆ ಬಳಿಕ ಬಿಎಸ್​ವೈ ಶಿಫಾರಸ್ಸಿನಂತೆ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಲಾಯಿತು. ಆ ಬಳಿಕ ರಾಜಕೀಯವಾಗಿ ಪ್ರಸ್ತುತವಾಗಿರಲಿ ಯಡಿಯೂರಪ್ಪ ಅವರು ಮುಂದಿನ ಚುನಾವಣೆಗೆ ಪಕ್ಷ ಸಂಘಟನೆ ಹೆಸರಿನಲ್ಲಿ ರಾಜ್ಯ ಪ್ರವಾಸ ಯೋಜನೆ ಹಮ್ಮಿಕೊಂಡಿದ್ದರು. ಆದರೆ, ಇದಕ್ಕೆ ಏಕಾಏಕಿ ಬಿಜೆಪಿ ಹೈಕಮಾಂಡ್ ತಣ್ಣೀರೆರಚಿತು. ಈ ವಿಷಯವಾಗಿ ಸ್ವತಃ ಅಮಿತ್ ಶಾ ಅವರೇ ಮುಂದಿನ ವಿಧಾನಸಭೆ ಚುನಾವಣೆ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ ಎಂದು ಘೋಷಿಸಿಬಿಟ್ಟರು. ಅಲ್ಲಿಗೆ ಬಿಎಸ್​ವೈ ಅವರ ಯೋಜನೆಯೇ ತಲೆಕೆಳಗಾಯಿತು. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆ ತಮ್ಮ ನೇತೃತ್ವದಲ್ಲಿಯೇ ನಡೆಯಬೇಕು ಎಂದು ಬಿಎಸ್​ವೈ ಕಂಡಿದ್ದ ಕನಸು ಭಗ್ನವಾಯಿತು. ಅಷ್ಟೇ ಅಲ್ಲದೇ ಇದು ಯಡಿಯೂರಪ್ಪ ಅವರನ್ನು ರಾಜಕೀಯದಿಂದ ದೂರ ಇಡುವ ಆಲೋಚನೆ ಕೂಡ ಇದರಲ್ಲಿ ಇಲ್ಲದಂತಿಲ್ಲ. ಈ ವಿಚಾರವಾಗಿ ಮಾತನಾಡಿರುವ ಅರುಣ್ ಸಿಂಗ್ ಅವರು ಯಡಿಯೂರಪ್ಪ ರಾಜ್ಯ ಪ್ರವಾಸ ಕೈಗೊಳ್ಳಲು ಸ್ವತಂತ್ರರು, ಆದರೆ, ಚುನಾವಣೆ ಮಾತ್ರ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

  ಸಿದ್ದರಾಮಯ್ಯ ದೇವಸ್ಥಾನದ ಬದಲು ಮಸೀದಿ ಬಗ್ಗೆ ಮಾತಾಡುತ್ತಾರೆ. ಈಗ ಕಾಂಗ್ರೆಸ್ ನಾಯಕರು ದೇವಸ್ಥಾನದ ಬಗ್ಗೆ ಮಾತಾಡುತ್ತಿದ್ದಾರೆ. ಬಿಜೆಪಿ ದೇವಸ್ಥಾನ ನಿರ್ಮಿಸುತ್ತದೆ. ದೇವಸ್ಥಾನ ಉಳಿಸುವ ಕೆಲಸ ಮಾಡುತ್ತಿದೆ. ದೇವಸ್ಥಾನಗಳ ಬಗ್ಗೆ ಸಿದ್ದರಾಮಯ್ಯ ಅವರು ಈಗ ದೇವಸ್ಥಾನಗಳ ಬಗ್ಗೆ ಮಾತಾಡುತ್ತಿದ್ದಾರೆ. ಅವರು ಮಸೀದಿಗಳ ಬಗ್ಗೆ ಹೆಚ್ಚು ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ಬಗ್ಗೆ ವ್ಯಂಗ್ಯವಾಡಿದರು. 

  ದಾವಣಗೆರೆಯಲ್ಲಿ ಬಿಜೆಪಿ ವಿಭಾಗೀಯ ಪ್ರಭಾರಿಗಳು ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯ ಬಿಜೆಪಿ‌ಉಸ್ತುವಾರಿ ಅರುಣ್ ಸಿಂಗ್, ಸಂಘಟನಾ ಕಾರ್ಯದರ್ಶಿ ಅರುಣ್‌ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ವಿವಿಧ ವಿಭಾಗೀಯ ಪ್ರಭಾರಿಗಳು, ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಭಾಗಿಯಾಗಿದ್ದರು.

  ಇದನ್ನು ಓದಿ: ದೇಗುಲ ತೆರವಿಗೆ ಬಿಜೆಪಿ ನಾಯಕರಲ್ಲೇ ತೀವ್ರ ಅಸಮಾಧಾನ: ಬಿಎಸ್​ವೈ ಮೊರೆ ಹೋದ್ರಾ ತಹಶೀಲ್ದಾರ್​​?

  ಸಿದ್ದರಾಮಯ್ಯ ಒಬ್ಬ ನಾಸ್ತಿಕ; ಕಟೀಲ್

  ದಾವಣಗೆರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ ಮಾತನಾಡಿ, ಸಿದ್ದರಾಮಯ್ಯ ಅವರು ಒಬ್ಬ ನಾಸ್ತಿಕ. ಅವರಿಂದ ನಾವು ಪಾಠ ಕಲಿಯಬೇಕಿಲ್ಲ. ಅತ್ಯಂತ ಹೆಚ್ಚು ದೇವಸ್ಥಾನ ಕಟ್ಟಿದ್ದು ಬಿಜೆಪಿ. ಹಿಂದೂ ದೇವಾಲಯ ನಾಶ ಮಾಡಿದ ಟಿಪ್ಪು ಜಯಂತಿ ಮಾಡಿದವರು, ಟಿಪ್ಪು ಜಯಂತಿ ಮೂಲಕ ಖುಷಿಪಟ್ಟವರು ಸಿದ್ದರಾಮಯ್ಯ ಎಂದು ಆರೋಪಿಸಿದರು.
  Published by:HR Ramesh
  First published: