ದಿನಾಂಕ18 ಆದರೂ ಆಗಿಲ್ಲ ಸಾರಿಗೆ ನೌಕರರಿಗೆ ಜುಲೈ ಸಂಬಳ..! ಮಾಯವಾದ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ

ಇಲ್ಲಿಯವರೆಗೆ ಹಿಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಜಿ ಸಿಎಂ ಬಿಎಸ್​ವೈ ಅವರಿಗೆ ಆಪ್ತರಾಗಿದ್ದ ಕಾರಣ ಕಳೆದ ಒಂದೂವರೆ ವರ್ಷದಿಂದ ನಾಲ್ಕು ಸಾರಿಗೆ ನಿಗಮಗಳಿಗೆ ಆದಾಯವಿಲ್ಲದಿದ್ದರೂ  ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರು. ಆದರೆ ನೂತನ ಸಾರಿಗೆ ಸಚಿವರು ಸಿಎಂ ಬಳಿ ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಒಂದನೇ ತಾರೀಕಿಗೆ ಮನೆ ಬಾಡಿಗೆ ಕಟ್ಟಬೇಕು ಕರೆಂಟ್ ಬಿಲ್, ವಾಟರ್ ಬಿಲ್ ಕಟ್ಟಬೇಕು, ಮನೆ ಮಾಲೀಕರು ಕಿರಿಕಿರಿ ಶುರು ಮಾಡುತ್ತಾರೆ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಕಟ್ಟಲಿಲ್ಲ ಅಂದರೆ ಆನ್​ಲೈನ್​ ಕ್ಲಾಸ್ ಬಂದ್ ಮಾಡ್ತಾರೆ. ಇಷ್ಟೆಲ್ಲ ತೊಂದರೆ ಇದ್ದರು ಸರ್ಕಾರ ಮಾತ್ರ ನಮಗೆ ಸರಿಯಾಗಿ ಸಂಬಳ ನೀಡುತ್ತಿಲ್ಲ ಎಂದು ಸಾರಿಗೆ ಇಲಾಖೆ ನೌಕರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸರ್ಕಾರ ಹಾಗೂ ಸಾರಿಗೆ ಇಲಾಖೆ ನೌಕರರ ಜಟಾಪಟಿ ಈ ವರ್ಷದ ಆರಂಭದಲ್ಲಿ ತಾರಕಕ್ಕೆ ಮುಟ್ಟಿತ್ತು, ಆದರೂ ಎಚ್ಚೆತ್ತುಕೊಳ್ಳದ ಸರ್ಕಾರ ನೌಕರರ ಸಂಬಳಸ ವಿಚಾರದಲ್ಲಿ ಕಣ್ಣಾ- ಮುಚ್ಚಾಲೆಯಾಡುತ್ತಿದೆ.

ದಿನಾಂಕ 18 ಬಂದರೂ ಜುಲೈ ತಿಂಗಳ ಸಂಬಳ ಇನ್ನು ಸಾರಿಗೆ ನೌಕರರ ಕೈ ಸೇರಿಲ್ಲ. ಹೀಗಾಗಿ ಮನೆಯಲ್ಲಿ ಹೆಂಡತಿ ಮಕ್ಕಳು ವರಮಹಾಲಕ್ಷ್ಮೀ ಹಬ್ಬಕ್ಕೆ ಹಣ ಮತ್ತು ಮಕ್ಕಳು ಬಟ್ಟೆ ಬರೆ ಕೇಳಿದರೆ ನೌಕರರು ಕಣ್ಣು ಬಾಯಿ ಬಿಡುವಂತಾಗಿದೆ. ಸಪ್ಪೆ ಮೊರೆ ಹಾಕಿಕೊಂಡು ಹಣವಿಲ್ಲದ ಲಕ್ಷ್ಮೀಯನ್ನು ಬರ ಮಾಡಿಕೊಳ್ಳಬೇಕಿದೆ.

KSRTC, BMTC. ಕಲ್ಯಾಣ ಕರ್ನಾಟಕ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಸೇರಿ 1 ಲಕ್ಷದ 30 ಸಾವಿರ ನೌಕರರು ಇದ್ದಾರೆ ಇವರೆಲ್ಲರು ಈ ಬಾರಿ ಹಣ ವಿಲ್ಲದೆ ಹಬ್ಬ ಆಚರಣೆ ಮಾಡುವಂತಾಗಿದೆ. ಈ ಬಗ್ಗೆ ಮಾತಾನಾಡಿದ ಸಾರಿಗೆ ನೌಕರರ ಮುಖಂಡ ಆನಂದ್ ನೂತನ ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳು ಕೂಡಲೇ ಸಂಬಳ ಬಿಡುಗಡೆ ಮಾಡಿ ಎಂದು ಮನವಿ ಮಾಡಿದರು.

ಇನ್ನೂ ವರಮಹಾಲಕ್ಷ್ಮೀ ಹಬ್ಬಕೂ ಸಾರಿಗೆ ನೌಕರರಿಗೆ ಸಂಬಳ ಆಗುವ ಲಕ್ಷಣ ಕಾಣುತ್ತಿಲ್ಲ. ಈ ತಿಂಗಳ ಸಾರಿಗೆ ನೌಕರರ ಸಂಬಳಕ್ಕಾಗಿ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂದು ಮೂಲಗಳು ಹೇಳಿವೆ. ಇಲ್ಲಿಯವರೆಗೆ ಹಿಂದಿನ ಸಾರಿಗೆ ಸಚಿವ ಲಕ್ಷ್ಮಣ ಸವದಿ ಮಾಜಿ ಸಿಎಂ ಬಿಎಸ್​ವೈ ಅವರಿಗೆ ಆಪ್ತರಾಗಿದ್ದ ಕಾರಣ ಕಳೆದ ಒಂದೂವರೆ ವರ್ಷದಿಂದ ನಾಲ್ಕು ಸಾರಿಗೆ ನಿಗಮಗಳು ಆದಾಯವಿಲ್ಲದಿದ್ದರೂ  ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಿಸಿಕೊಂಡಿದ್ದರು. ಆದರೆ ನೂತನ ಸಾರಿಗೆ ಸಚಿವರು ಸಿಎಂ ಬಳಿ ನೌಕರರ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕಿದೆ.

ಒಂದು ವೇಳೆ ಶ್ರೀ ರಾಮುಲು ಮನವಿ ಮಾಡಿದರು ಸಿಎಂ ಹೇಗೆ ಸ್ಪಂದಿಸುತ್ತಾರೋ ಗೊತ್ತಿಲ್ಲ ಅರ್ಧ ಸಂಬಳಕ್ಕೆ ಹಣ ಕೊಟ್ಟು ಅರ್ಧ ಸಂಬಳ ಸಾರಿಗೆ ನಿಗಮಗಳಿಂದ ಹೊಂದಿಸಿಕೊಳ್ಳಲು ಹೇಳುತ್ತಾರೋ ಗೊತ್ತಿಲ್ಲ. ಇತ್ತ 1 ಲಕ್ಷದ 30 ಸಾವಿರ ನೌಕರರು ಈ ತಿಂಗಳು ಸಂಬಳ ಸಕಾಲಕ್ಕೆ ಬರುತ್ತದೆಯೋ ಇಲ್ಲವೋ ಎನ್ನುವ ಆತಂಕದಲ್ಲಿದ್ದಾರೆ.

ಇದನ್ನೂ ಓದಿ: ನೇತಾಜಿ ಅವರಿಗೆ ಅವಮಾನ ಮಾಡಲಾಗಿದೆ ಎಂದ ಟಿಎಂಸಿ; ಕಾಂಗ್ರೆಸ್​ ಟ್ವೀಟ್​ ವಿರುದ್ದ ಅಸಮಾಧಾನ

ನಾಲ್ಕು ಸಾರಿಗೆ ನಿಮಗಳಿಗೆ ವೇತನ ನೀಡಲು 326 ಕೋಟಿ ಹಣ ಬೇಕು. ತಿಂಗಳು ಪೂರ್ತಿ ಕೆಲಸ ಮಾಡಿ ಸರಿಯಾಗಿ ಸಂಬಳವಿಲ್ಲ ಎಂದರೆ ಹೇಗೆ ಎಂದು ನೌಕರರು ಸರ್ಕಾರದ ವಿರುದ್ಧ ‌ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ. ಈ ಬಗ್ಗೆ ಸಾರಿಗೆ ಸಚಿವ ಶ್ರೀ ರಾಮುಲು ಅವರನ್ನು ಮಾತನಾಡಿಸಿದ ನ್ಯೂಸ್​ 18ಗೆ ಪರಿಶೀಲಿಸುತ್ತೇನೆ ಎಂದಷ್ಟೇ ಹೇಳಿ ಸಚಿವರು ಭರವಸೆ ನೀಡಿದ್ದಾರೆ. ಇನ್ನು KSRTC ಎಂಡಿ ಶಿವಯೋಗಿ ಕಳಸದ್ ಆದಷ್ಟು ಬೇಗ ವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: