ಫೀಸ್ ಬೇಡ ಎಂದ ಖಾಸಗಿ ಶಾಲೆ; ಮನೆ ಮನೆಗೆ ತೆರಳಿ ಉಚಿತ ಶಿಕ್ಷಣ ನೀಡುತ್ತಿರುವ ಗಡಿ ಶಾಲೆ

8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳೂ ಸೇರಿ ಶಾಲೆಯಲ್ಲಿ ಬರೊಬ್ಬರಿ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪೋಷಕರ ಬಳಿ ಮೊಬೈಲ್ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳ ಮನೆಗೆ ಹೋಗಿ ಇಲ್ಲಿನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ಪಾರ್ಶ್ವಮತಿ ಕನ್ಯಾ ವಿದ್ಯಾಲಯ

ಪಾರ್ಶ್ವಮತಿ ಕನ್ಯಾ ವಿದ್ಯಾಲಯ

  • Share this:
ಚಿಕ್ಕೋಡಿ(ಡಿಸೆಂಬರ್​. 03): ರಾಜ್ಯದಲ್ಲಿ ಕೊರೋನಾ ಅಬ್ಬರ ಶುರುವಾದಾಗಿನಿಂದ ಎಲ್ಲಾ ರಂಗದ ಮೇಲೂ ಸಹ ಪೆಟ್ಟು ಬಿದ್ದಿದೆ. ಅದರಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳ ಕಥೆಯಂತೂ ಹೇಳತೀರದು. ಕೆಲವು ಕಡೆ ಆನ್ ಲೈನ್ ಶಿಕ್ಷಣದ ಹೆಸರಿನಲ್ಲಿ ಫೀಸು ಕಟ್ಟಲೇ ಬೇಕು ಅಂತ ಕೆಲ ಖಾಸಗಿ ಶಾಲೆಗಳು ಪೋಷಕರನ್ನು ದುಂಬಾಲು ಬಿದ್ದಿವೆ. ಆದರೆ, ಬೆಳಗಾವಿ ಜಿಲ್ಲೆಯ ಗಡಿ ತಾಲೂಕು ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಪಾರ್ಶ್ವಮತಿ ಕನ್ಯಾ ವಿದ್ಯಾಲಯ ಮಾತ್ರ ಮಕ್ಕಳಿಂದ ಇಲ್ಲಿಯರೆಗೂ ಫೀಸ್​​ನ್ನು ಕೇಳಿಲ್ಲ. ಇಲ್ಲಿಗೆ ಬರುವ ಬಹುತೇಕ ಮಕ್ಕಳ ಪೋಷಕರು ಮಹಾರಾಷ್ಟ್ರದ ಎಂ ಐ ಡಿ ಸಿ ಯಲ್ಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ ಬಡವರು ಹೀಗಾಗಿ ಇಲ್ಲಿನ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಈ ನಿರ್ಧಾರಕ್ಕೆ ಬಂದಿದ್ದು, ಶಾಲೆಯಲ್ಲಿ ಕಲಿಯುವ 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಈ ವರ್ಷದ ಸಂಪೂರ್ಣ ಶಾಲಾ ಶುಲ್ಕವನ್ನು ಮನ್ನಾ ಮಾಡಿದೆ.

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕಳೆದ ಭಾರಿ ಭೀಕರ ಪ್ರವಾಹ ಎದುರಾಗಿತ್ತು. 2019 ರಲ್ಲಿ ಈ ಭಾಗ ಸಂಪೂರ್ಣ ನೆರೆಗೆ ತುತ್ತಾಗಿ ಬದುಕು ಬೀದಿಗೆ ಬಂದಿತ್ತು. ಅದಾದ ಬಳಿಕ ಕೊಂಚ ಸುಧಾರಣೆ ಆಗಬೇಕು ಎನ್ನುವಷ್ಟರಲ್ಲಿ ಮತ್ತೆ ದೇಶವ್ಯಾಪಿ ಕೊರೋನಾ ವಕ್ಕರಿಸಿ ಲಾಕ್ ಡೌನ್ ನಿಂದ ಪೋಷಕರು ಕೆಲಸವಿಲ್ಲದೆ ಖಾಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿಯಿತು.

ಇದನ್ನೂ ಓದಿ :  ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಕಮಲ ಅರಳಲಿದೆ ; ಡಿಸಿಎಂ ಅಶ್ವತ್ಥನಾರಾಯಣ

8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳೂ ಸೇರಿ ಶಾಲೆಯಲ್ಲಿ ಬರೊಬ್ಬರಿ 110 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದು, ಪೋಷಕರ ಬಳಿ ಮೊಬೈಲ್ ಇಲ್ಲ ಎನ್ನುವ ಕಾರಣಕ್ಕೆ ಮಕ್ಕಳ ಮನೆಗೆ ಹೋಗಿ ಇಲ್ಲಿನ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.

ನೆರೆ ಹಾಗೂ ಕೋವಿಡ್ ಪರಿಣಾಮವಾಗಿ ಪೋಷಕರಿಗೆ ಹೊರೆ ಆಗಬಾರದು ಎಂದು ನಾವು ಈ ನಿರ್ಧಾರ ಮಾಡಿದ್ದೇವೆ ಅಂತಾರೆ ಇಲ್ಲಿನ ಶಾಲಾ ಶಿಕ್ಷಕರು.

ಒಟ್ಟಿನಲ್ಲಿ ಕೊರೋನಾ ಲಾಕ್ ಡೌನ್ ಎಫೆಕ್ಟ್ ನಿಂದ ಹೊರ ಬರುವುದಕ್ಕೆ ಸರ್ಕಾವೇ ಹೆಣಗಾಡುತ್ತಿದೆ. ದೇಶವನ್ನ ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯೋವುದಕ್ಕೆ ತಜ್ಞರು ಇನ್ನಿಲ್ಲದ ಪ್ಲಾನ್ ಗಳನ್ನು ಮಾಡುತ್ತಿದ್ದಾರೆ.‌ ಇಂತಹ ಸಮಯದಲ್ಲಿ ಪೋಷಕರ ಮನಸ್ಥಿತಿ ಅರ್ಥ ಮಾಡಿಕೊಂಡು ಅವರಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡಿರುವ ಫೀಸ್ ಆಚೆಗೆ ಮಕ್ಕಳ ಭವಿಷ್ಯ ರೂಪಿಸಲು ಮುಂದಾದ ಶಾಲೆಗೆ ಅಭಿನಂದನೆಗಳು ಮಹಾಪೂರವೇ ಹರಿದು ಬರುತ್ತಿದೆ.
Published by:G Hareeshkumar
First published: