ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್ ಕೊಡುಗೆ ಶೂನ್ಯ: ಡಿಸಿಎಂ ಅಶ್ವತ್ಹನಾರಾಯಣ
ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ಇಂಥ ಅಭಿವೃದ್ಧಿಯನ್ನು ಕಡೆಗಣಿಸಿ ಜನರಿಗೆ ವಂಚಿಸಿವೆ. ಬಿಜೆಪಿ ಸರಕಾರ ಈ ಅನ್ಯಾಯವನ್ನು ಸರಿಪಡಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ
ಉಡುಪಿ(ನವೆಂಬರ್. 27): ಕೇವಲ ಅಧಿಕಾರಕ್ಕೆ ಅಂಟಿಕೊಂಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಶೂನ್ಯ. ಆದರೆ, ಕಳೆದ ಒಂದೂವರೆ ವರ್ಷದಲ್ಲಿ ಬಿಜೆಪಿ ಸರಕಾರವು ಈ ಕ್ಷೇತ್ರಕ್ಕೆ ಅತಿಹೆಚ್ಚು ಅನುದಾನ ಒದಗಿಸಿ ಜನರ ಇಚ್ಛೆಯಂತೆ ಕೆಲಸ ಮಾಡುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಉಡುಪಿಯಲ್ಲಿ ʼಗ್ರಾಮ ಸ್ವರಾಜ್ಯʼ ಸಮಾವೇಶದಲ್ಲಿ ಮಾತನಾಡಿದ ಮಾಡಿದ ಅವರು, ನಗರಗಳಂತೆಯೇ ಗ್ರಾಮೀಣ ಪ್ರದೇಶಗಳು ಕೂಡ ಅಭಿವೃದ್ಧಿ ಹೊಂದಬೇಕು. ಪರಸ್ಪರ ಪ್ರಗತಿಯಲ್ಲಿ ನಗರ-ಗ್ರಾಮಗಳ ನಡುವೆ ನ್ಯಾಯಯುತವಾದ ಸಮಾನತೆ ಇರಬೇಕು. ಆದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಸರಕಾರಗಳು ಇಂಥ ಅಭಿವೃದ್ಧಿಯನ್ನು ಕಡೆಗಣಿಸಿ ಜನರಿಗೆ ವಂಚಿಸಿವೆ. ಬಿಜೆಪಿ ಸರಕಾರ ಈ ಅನ್ಯಾಯವನ್ನು ಸರಿಪಡಿಸಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡುತ್ತಿದೆ. ಹಿಂದೆ ಪಂಚಾಯತ್ ಎಂದರೆ ಗೆದ್ದವರು ಬಂದು ಕುರ್ಚಿಯಲ್ಲಿ ಕೂತು ಅಧಿಕಾರ ಚಲಾಯಿಸುವುದಕ್ಕೆ ಮಾತ್ರ ಸೀಮಿತವಾಗಿತ್ತು ಎಂದರು.
ಇನ್ನು ಮುಂದೆ ಹಾಗೆ ಆಗುವುದಿಲ್ಲ. ಎಲ್ಲಡೆ ತಂತ್ರಜ್ಞಾನದ ನೆರವಿನಿಂದ ಆಡಳಿತ ನಡೆಯುತ್ತದೆ. ಖರ್ಚಾಗುವ ಪ್ರತಿ ಪೈಸೆಗೂ ಲೆಕ್ಕವಿರುತ್ತದೆ. ಅಕೌಂಟಬಲಿಟಿ ಇರುತ್ತದೆ. ಅಂಥ ಉತ್ತಮ ವ್ಯವಸ್ಥೆ ಬರಬೇಕಾದರೆ ಪಂಚಾಯತ್ಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಹಾಗೂ ಆಡಳಿತದಲ್ಲಿ ಡಿಜಿಟಲೀಕರಣ ಮಾಡಬೇಕು. ಆಗ ಮಾತ್ರ ಉತ್ತಮ ಆಡಳಿತ ನೀಡಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಪ್ರತಿಪಾದಿಸಿದರು.
ಒಂದು ಹಳ್ಳಿಗೆ ಸಂಬಧಿಸಿದ ಎಲ್ಲ ಕೆಲಸಗಳ ಆ ಹಳ್ಳಿಯಲ್ಲೇ ಆಗಬೇಕು. ಇದೇ ಗ್ರಾಮ ಸ್ವರಾಜ್ಯದ ಪರಿಕಲ್ಪನೆ. ಯಾವುದೇ ಕಾರಣಕ್ಕೂ ಗ್ರಾಮದ ಜನಪ್ರತಿನಿಧಿಗಳು ತಮ್ಮ ಕೆಲಸಕ್ಕಾಗಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳ ಸುತ್ತ ಅಲೆಯುವಂತಿಲ್ಲ. ಮುಂದಿನ ದಿನಗಳಲ್ಲಿ ಪಂಚಾಯಿತಿಗಳಿಗೆ ಎಲ್ಲ ರೀತಿಯ ಶಕ್ತಿ ತುಂಬಲಾಗುವುದು ಎಂದರು.
ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಲೋಕಮಾನ್ಯ ಬಾಲ ಗಂಗಾಧರ ತಿಲಕರು ʼಸ್ವರಾಜ್ಯʼದ ಕಲ್ಪನೆಯನ್ನು ನಮಗೆ ಕೊಟ್ಟರು. ಆಮೇಲೆ ಮಹಾತ್ಮ ಗಾಂದಿ ಅವರು ಗ್ರಾಮ ಸ್ವರಾಜ್ಯದ ಆಶಯವನ್ನು ನಮ್ಮಲ್ಲಿ ತುಂಬಿದರು. ಇದೀಗ ಬಿಜೆಪಿ ಆ ಇಬ್ಬರು ಮಹನೀಯರ ಕನಸುಗಳನ್ನು ಹಳ್ಳಿಹಳ್ಳಿಯಲ್ಲೂ ಸಾಕಾರ ಮಾಡಲು ಮುಂದಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದೊಂದೇ ಮಾರ್ಗ ಎಂದು ಅವರು ಪ್ರತಿಪಾದಿಸಿದರು.
ಈ ನಿಟ್ಟಿನಲ್ಲಿ ಪಕ್ಷದ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮಮಟ್ಟದ ನಾಯಕರು ಪಕ್ಷದ ಆಶಯ, ಗುರಿಗಳ ಬಗ್ಗೆ ಸ್ಟಷ್ಟತೆ ಹೆಚ್ಚಿಸಿಕೊಂಡು ಸಂಘಟನೆ ಮಾಡಬೇಕು. ದೇಶದೆಲ್ಲೆಡೆ ಪಕ್ಷ ಹೇಗೆ ಯಶಸ್ವಿ ಆಗಿತು? ಮಾಡಿರುವ ಜನಪರ ಕೆಲಸಗಳ ಬಗ್ಗೆ ಸಮಾಜದ ಪ್ರತಿಯೊಬ್ಬ ಪ್ರಜೆಗೂ ಮನವರಿಕೆ ಮಾಡಿಕೊಡಬೇಕು ಎಂದು ಡಿಸಿಎಂ ಸಲಹೆ ಮಾಡಿದರು.
Published by:G Hareeshkumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ