ಸಿಎಂ ಬದಲಾವಣೆ ಪ್ರಸ್ತಾವನೆ ಇಲ್ಲ, ಯಡಿಯೂರಪ್ಪ ಅವರನ್ನು ಕೆಲಸ ಮಾಡಲು ಬಿಡಿ; ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ, ರಾಹುಲ್ ಗಾಂಧಿ ತಿಗಣೆಯೋ? ಮತ್ತೊಂದೊ ಎಂದು ಜನಕ್ಕೆ ಗೊತ್ತಿದೆ. ಇವರು ತಿಗಣೆಗಿಂತ ಅತೀತವಾಗಿ ದೇಶದಲ್ಲಿ ಭ್ರಷ್ಟಾಚಾರ ಮಾಡಿದ್ರು ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಪ್ರಹ್ಲಾದ್ ಜೋಶಿ.

ಪ್ರಹ್ಲಾದ್ ಜೋಶಿ.

  • Share this:
ಚಿತ್ರದುರ್ಗ: ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಶ್ನೆಯೇ ಇಲ್ಲ, ಮುಖ್ಯಮಂತ್ರಿ ಯಡಯೂರಪ್ಪ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಜನರ ಆರೋಗ್ಯದ ರಕ್ಷಣೆಗೆ ನಮ್ಮ ಆದ್ಯತೆ ಇದೆ. ನಮ್ಮ ಪಕ್ಷದಲ್ಲಿ ಈರೀತಿ ಮಾತನಾಡಿ ಸುದ್ದಿ ಬಿಡುವವರಿಗೆ ಕಟ್ಟನಿಟ್ಟಾಗಿ ಹೇಳುತ್ತೇನೆ. ಬಿಜೆಪಿ ರಾಷ್ಟ್ರೀಯ ನಾಯಕತ್ವದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ, ಸಿಎಂ ಕೆಲಸ ಮಾಡಲು ಯಾರೂ ಡಿಸ್ಟರ್ಬ್ ಮಾಡಬಾರದು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ರಾಜ್ಯ ಬಿಜೆಪಿ ಬಂಡಾಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ವಿರೋಧ ಪಕ್ಷವಾದ ಕಾಂಗ್ರೆಸ್​ ಹಾಗೂ ಸಿದ್ದರಾಮಯ್ಯ ವಿರುದ್ಧವೂ ಟೀಕಾ ಪ್ರಹಾರ ಮಾಡಿರುವ ಪ್ರಹ್ಲಾದ್ ಜೋಶಿ, "ಮೋದಿಯವರನ್ನ ತಿಗಣೆ ಎನ್ನುವ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ  ಕಾಂಗ್ರೇಸ್ ಪಕ್ಷವನ್ನ ಜನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ, ಅಧಿಕೃತ ವಿರೋಧ ಪಕ್ಷವಾಗಿಯೂ ಹೊರ ಹೊಮ್ಮಲು ಅವರಿಗೆ ಸಾಧ್ಯವಾಗಿಲ್ಲ.

ಎಲ್ಲಾ ಕಡೆ ನಡೆದ ಚುನಾವಣೆಗಳಲ್ಲಿ ಇವರನ್ನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ತಿಗಣೆಯೋ? ಮತ್ತೊಂದೊ ಎಂದು ಜನಕ್ಕೆ ಗೊತ್ತಿದೆ. ಇವರು ತಿಗಣೆಗಿಂತ ಅತೀತವಾಗಿ ದೇಶದಲ್ಲಿ ಭ್ರಷ್ಟಾಚಾರ ಮಾಡಿದ್ರು ಎಂದು ಚಿತ್ರದುರ್ಗದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೈ ನಾಯಕರಿಗೆ ಟಾಂಗ್ ನೀಡಿದ್ದಾರೆ.

ಬೆಂಗಳೂರಿಗೆ ತೆರಳುತ್ತಿದ್ದ ಸಚಿವ ಪ್ರಹ್ಲಾದ್ ಜೋಶಿ ಕೊಂಚ ವಿಶ್ರಾಂತಿಗಾಗಿ ಚಿತ್ರದುರ್ಗ ನಗರದ ಹೊರ ವಲಯದ ಖಾಸಗಿ ಹೋಟೆಲ್ ಗೆ ಬಂದಿದ್ದರು, ಈ ವೇಳೆ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿ, "ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್​ ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಸದ್ಯಕ್ಕೆ ಅವರಿಗೆ ಕೆಲಸವೇನಿದೆ? ಪ್ರತಿಭಟನೆ ಮಾಡಲಿ, ಅವರಿಗೆ ಬರೀ ಅಧಿಕಾರ, ದುಡ್ಡು, ಭ್ರಷ್ಟಾಚಾರ ಮಾಡಿ ರೂಢಿಯಾಗಿದೆ. ಬಿಜೆಪಿ ಕೇಂದ್ರ, ರಾಜ್ಯ ಸರ್ಕಾರ ಅತ್ಯುತ್ತಮವಾಗಿ ಕೋವಿಡ್ ನಿರ್ವಹಣೆ ಮಾಡಿದೆ.

ಇದನ್ನೂ ಓದಿ: TamilNadu Politics| ತಮಿಳುನಾಡು ರಾಜಕಾರಣಕ್ಕೆ ಚಿನ್ನಮ್ಮ ಎಂಟ್ರಿ; ಚುನಾವಣೆ ಬೆನ್ನಿಗೆ AIADMK ಯಲ್ಲಿ ಬಂಡಾಯದ ಬಿರುಗಾಳಿ

10-12 ದಿನದೊಳಗೆ ಹತ್ತುಪಟ್ಟು ಆಕ್ಸಿಜನ್ ಜಾಸ್ತಿ ಆಗಿದ್ದು, 900 ಮೆಟ್ರಿಕ್ ಟನ್ ಇದ್ದ ಆಕ್ಸಿಜನ್ 9 ಸಾವಿರ ಮೆಟ್ರಿಕ್ ಟನ್ ಆಗಿದೆ. ಎಲ್ಲಾಕಡೆಗೆ ಟ್ರೇನ್, ಪ್ಲೈಟ್ ಗಳ ಮೂಲಕ ಆಕ್ಸಿಜನ್ ಕಳುಹಿಸಿದೇವೆ ಪ್ರಪಂಚದ ಅನೇಕ ದೇಶಗಳಲ್ಲಿ ಅಮೇರಿಕ ಗೆ ಹೋಲಿಸಿದ್ರೆ ನಮ್ಮ ದೇಶದ ಸ್ಥಿತಿ ಚನ್ನಾಗಿದೆ. ಹಾನಿ, ಸಾವನ್ನಪ್ಪಿರೋ ಜನರ ನೋವನ್ನ ನಾನು  ಅರ್ಥ ಮಾಡಿಕೊಂಡಿದ್ದೇನೆ. ಕೈ ಮೀರಿದ ಈ ಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಅತ್ಯುತ್ತಮ ನಿರ್ವಹಣೆ ಮಾಡಿವೆ. ರಾಜಸ್ಥಾನ, ಮಹರಾಷ್ಠ್ರದಲ್ಲಿ ಏನಾಗಿದೆ ಎಂದು ಕಾಂಗ್ರೆಸ್ ನವರು ನೋಡಲಿ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್​ ಬ್ರೈನ್​ ಡೆಡ್​ ದೃಢಪಡಿಸಿದ ವೈದ್ಯರು; ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ

ಇನ್ನೂ ಮೋದಿಯವರು ತಿಗಣೆ ಇದ್ದಂತೆ ಜನರ ರಕ್ತ ಈರುತ್ತಿದ್ದಾರೆ ಎಂಬ  ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯೆ ನೀಡಿರುವ ಅವರು, "ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷವನ್ನ ಜನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ. ಅಧಿಕೃತ ವಿರೋಧ ಪಕ್ಷವಾಗಿಯೂ ಹೊರ ಹೊಮ್ಮಲು ಕಾಂಗ್ರೆಸ್ಗೆ  ಸಾಧ್ಯವಾಗಿಲ್ಲ. ಎಲ್ಲಾಕಡೆ ನಡೆದ ಚುನಾವಣೆಗಳಲ್ಲಿ ಇವರನ್ನ ಎಲ್ಲಿಡಬೇಕೋ ಅಲ್ಲಿಟ್ಟಿದ್ದಾರೆ. ಸಿದ್ದರಾಮಯ್ಯ, ರಾಹುಲ್ ಗಾಂಧಿ ತಿಗಣೆಯೋ ಮತ್ತೊಂದೊ ಜನಕ್ಕೆ ಗೊತ್ತಿದೆ. ಇವರು ತಿಗಣೆಗಿಂತ ಅತೀತವಾಗಿ ದೇಶದಲ್ಲಿ ಭ್ರಷ್ಟಾಚಾರ ಮಾಡಿದ್ರು, ಭ್ರಷ್ಟಾಚಾರ, ದುರಾಡಳಿತದಿಂದ ಕಾಂಗ್ರೇಸ್, ರಾಹುಲ್ ಗಾಧಿಯನ್ನ ದೂರ ಇಟ್ಟಿದ್ದಾರೆ ಎಂದು ಟಾಂಗ್ ನೀಡಿದರು.

ಇನ್ನೂ ಮೋದಿ ಜನರ ಪಿಕ್ ಪಾಕೇಟ್ ಮಾಡುತ್ತಿದ್ದಾರೆ ಎಂಬ ಡಿ.ಕೆ. ಶಿವಕುಮಾರ್  ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್​ನವರು ಮಾಡಿದ್ದ ಲಕ್ಷಾಂತರ ಕೋಟಿ ಸಾಲದಿಂದ ಹೀಗೆ ಆಗಿದೆ. ಇವರ ಕಾಲಕ್ಕೆ ಹೋಲಿಸಿದರೆ ಹಣದುಬ್ಬರ ನಿಯಂತ್ರಣ ದಲ್ಲಿದೆ ಎಂದು ಹೇಳಿದ್ದಾರೆ.
Published by:MAshok Kumar
First published: