HOME » NEWS » District » NO CHANCE OF LEADERSHIP CHANGE IN THE GOVT SAYS V SOMANNA AT KALBURGI SAKLB SNVS

ಸಿಎಂ ಬದಲಾಗ್ತಾರೆ ಅಂತ ಅದ್ಯಾವ ದೇವ್ರು ನಿಮಗೆ ಸೂಚನೆ ಕೊಟ್ರು - ಸಚಿವ ಸೋಮಣ್ಣ ಪ್ರಶ್ನೆ

ಮುಂದಿನ ಎರಡೂವರೆ ವರ್ಷ ಕಾಲ ಯಡಿಯೂರಪ್ಪ ಸಿಎಂ ಆಗಿರ್ತಾರೆ. ಯಾವ ಶಾಸಕರೂ ಸಿಎಂ ಬದಲಾವಣೆ ಬಯಸಿ ಹೈಕಮಾಂಡ್ಗೆ ಪತ್ರ ಬರೆದಿಲ್ಲ. ನಿಮಗ ಅದ್ಯಾವ ದೇವರು ಸೂಚನೆ ಕೊಟ್ಟಿದ್ದಾನೋ ಗೊತ್ತಿಲ್ಲ ಎಂದು ವಸತಿ ಸಚಿವ ವಿ ಸೋಮಣ್ಣ ಹೇಳಿದ್ದಾರೆ.

news18-kannada
Updated:December 1, 2020, 1:35 PM IST
ಸಿಎಂ ಬದಲಾಗ್ತಾರೆ ಅಂತ ಅದ್ಯಾವ ದೇವ್ರು ನಿಮಗೆ ಸೂಚನೆ ಕೊಟ್ರು - ಸಚಿವ ಸೋಮಣ್ಣ ಪ್ರಶ್ನೆ
ವಿ ಸೋಮಣ್ಣ
  • Share this:
ಕಲಬುರ್ಗಿ(ಡಿ. 01): ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾಗುತ್ತಾರೆ ಎಂದು ಅದ್ಯಾವ ದೇವರು ನಿಮಗೆ ಸೂಚನೆ ಕೊಟ್ಟಿದ್ದಾನೋ ಗೊತ್ತಿಲ್ಲ. ಆದರೆ ಯಡಿಯೂರಪ್ಪ ಬದಲಾವಣೆ ಕೇವಲ ಊಹಪೋಹ ಎಂದು ವಸತಿ ಸಚಿವ ವಿ. ಸೋಮಣ್ಣ ಸ್ಪಷ್ಟಪಡಿಸಿದ್ದಾರೆ. ಕಲಬುರ್ಗಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಬದಲಾವಣೆ ವಿಚಾರ ಕೇವಲ ಊಹಾಪೋಹ. ಹೈಕಮಾಂಡ್ ಬಳಿ ಆ ರೀತಿಯಲ್ಲಿ ಯಾವುದೇ ಚಿಂತನೆ ನಡೆದಿಲ್ಲ ಎಂದರು. ಮುಂದಿನ ಎರಡೂವರೆ ವರ್ಷ ಕಾಲ ಯಡಿಯೂರಪ್ಪ ಸಿಎಂ ಆಗಿರ್ತಾರೆ. ಯಾವ ಶಾಸಕರೂ ಸಿಎಂ ಬದಲಾವಣೆ ಬಯಸಿ ಹೈಕಮಾಂಡ್​ಗೆ ಪತ್ರ ಬರೆದಿಲ್ಲ. ನಿಮಗ ಅದ್ಯಾವ ದೇವರು ಸೂಚನೆ ಕೊಟ್ಟಿದ್ದಾನೋ ಗೊತ್ತಿಲ್ಲ. ಆದರೆ ಸಿಎಂ ಬದಲಾವಣೆ ಅಸಾಧ್ಯದ ಮಾತು ಎಂದು ಅಭಿಪ್ರಾಯಪಟ್ಟರು. 

ಸರ್ಕಾರದಲ್ಲಿ ಬಿ ವೈ ವಿಜಯೇಂದ್ರ ಹಸ್ತಕ್ಷೇಪದ ಬಗ್ಗೆ ಪ್ರತಿಕ್ರಿಯಿಸಿ ಸೋಮಣ್ಣ, ನಮ್ಮಲ್ಲಿ ಯಾರದ್ದೇ ಹಸ್ತಕ್ಷೇಪ ನಡೀತಿಲ್ಲ. ನಾವೆಲ್ಲಾ ಸೀನಿಯರ್ಸ್ ಕಣ್ರಿ. ನಲವತ್ತು ವರ್ಷದಿಂದ ರಾಜಕೀಯ ಮಾಡ್ತಿರೋರು. ಯಡಿಯೂರಪ್ಪ ಅವರ ಅನುಭವ ಏನಿದೇರಿ? ಅಂಥವರ ಬಳಿ ಯಾರಾದರೂ ಹಸ್ತಕ್ಷೇಪ ಮಾಡಲು ಸಾಧ್ಯವೆ? ಯಾರ ಹಸ್ತಕ್ಷೇಪದ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ ನೇತೃತ್ವದಲ್ಲಿ ಅಭಿವೃದ್ಧಿ ಕಾರ್ಯ ಉತ್ತಮವಾಗಿ  ನಡೆಯುತ್ತಿದೆ. ಇದೇ ರೀತಿ ಅಭಿವೃದ್ಧಿ ಕಾರ್ಯಗಳು ಮುಂದುವರಿಯಲಿವೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ ಚುನಾವಣೆ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೈಗೊಂಡ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ ಗ್ರಾಮೀಣ ಪ್ರದೇಶದ ಜನ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ. ಭಾರತೀಯ ಜನತಾ ಪಕ್ಷಕ್ಕೆ ಗ್ರಾಮೀಣ ಭಾಗದ ಜನರ ಆಶೀರ್ವಾದ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸವಿದೆ ಎಂದರು.

ಇದನ್ನೂ ಓದಿ: ಮಗಳ ದೇಶದ್ರೋಹ ಚಟುವಟಿಕೆಯ ತನಿಖೆ ನಡೆಸಿ: ಶೆಹ್ಲಾ ರಷೀದ್ ತಂದೆ ಹೇಳಿಕೆ; ಆರೋಪ ತಳ್ಳಿಹಾಕಿದ ಶೆಹ್ಲಾ

ಸ್ವಯಂ ಪ್ರೇರಣೆಯಿಂದ ಸಿಎಂ ರಾಜೀನಾಮೆಗೆ ದಲಿತ ಸಂಘಟನೆಗಳ ಆಗ್ರಹ...

ಇದೇ ವೇಳೆ, ಸಿಎಂ ಯಡಿಯೂರಪ್ಪ ಕಾರ್ಯವೈಖರಿಗೆ ಕಲಬುರ್ಗಿಯಲ್ಲಿ ದಲಿತ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿವೆ. ಕಲಬುರ್ಗಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ್, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ಹೋಗಿದೆ. ಎಲ್ಲರನ್ನೂ ಮೆಚ್ಚಿಸಲು ಹೋಗಿ ಯಡಿಯೂರಪ್ಪ ಸಿಎಂ ಸ್ಥಾನದ ಘನತೆ ಕಳೆಯುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಜಾತಿಗೊಂದು ನಿಗಮ ಸ್ಥಾಪಿಸುತ್ತಿದ್ದಾರೆ. ಆ ನಿಗಮಗಳ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲು ಮುಂದಾಗಿದ್ದಾರೆ. ಜಾತಿ ಜಾತಿಗೊಂದು ನಿಗಮ ಸ್ಥಾಪನೆ ಸರಿಯಲ್ಲ. ಒಂದು ಕಡೆ ನೆರೆ ಸಂತ್ರಸ್ತರಿಗೆ ಕೊಡಲು ಹಣ ಇಲ್ಲ ಎನ್ನೋ ಯಡಿಯೂರಪ್ಪ, ಮತ್ತೊಂದು ಕಡೆ ಹೊಸದಾಗಿ ಸ್ಥಾನಪನೆಯಾದ ನಿಗಮಗಳಿಗೆ ಭರಪೂರ ಹಣ ನೀಡುತ್ತಿದ್ದಾರೆ. ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ ಆಗಿದ್ದಾರೆ. ಮರ್ಯಾದೆ ಉಳಿಸಿಕೊಳ್ಳಬೇಕೆಂದರೆ ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ವರದಿ: ಶಿವರಾಮ ಅಸುಂಡಿ
Published by: Vijayasarthy SN
First published: December 1, 2020, 1:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories