ವೈದ್ಯಕೀಯ ಕೋರ್ಸ್ ಪ್ರವೇಶಾತಿ: ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜಿಗೆ ಎನ್.ಎಂ.ಸಿ. ಅನುಮತಿ ಇಲ್ಲ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್, ಮೆಡಿಕಲ್ ಕಾಲೇಜುಗಳ ವಿವರ ಹಾಗು ಶುಲ್ಕದ ವಿವರಗಳ ಪಟ್ಟಿಯಲ್ಲಿ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಹೆಸರು ಕೈಬಿಡಲಾಗಿದೆ

ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು

ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು

  • Share this:
ಚಾಮರಾಜನಗರ(ನವೆಂಬರ್. 19): ಗಡಿ ಜಿಲ್ಲೆ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನ 2020-21ನೇ ಸಾಲಿನ ಎಂಬಿಬಿಎಸ್ ಕೋರ್ಸ್ ಪ್ರವೇಶಾತಿಗೆ ರಾಷ್ಟ್ರೀಯ ವೈದ್ಯಕೀಯ ಆಯೋಗ ಅನುಮತಿ ನಿರಾಕರಿಸಿದೆ. ಅಗತ್ಯ ಸಂಖ್ಯೆಯ ಹಾಸಿಗೆಯುಳ್ಳ ಬೋಧನಾ ಆಸ್ಪತ್ರೆ ಇಲ್ಲದಿರುವುದೇ ಅನುಮತಿ ನಿರಾಕರಣೆ ಕಾರಣವಾಗಿದೆ. ಈ ಹಿನ್ನಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್, ಮೆಡಿಕಲ್ ಕಾಲೇಜುಗಳ ವಿವರ ಹಾಗು ಶುಲ್ಕದ ವಿವರಗಳ ಪಟ್ಟಿಯಲ್ಲಿ ಚಾಮರಾಜನಗರ ಸರ್ಕಾರಿ ಮೆಡಿಕಲ್ ಕಾಲೇಜು ಹೆಸರು ಕೈಬಿಡಲಾಗಿದೆ. 2016 ರಲ್ಲಿ ಪ್ರಾರಂಭವಾದ ಚಾಮರಾಜನಗರದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಪ್ರತಿ ವರ್ಷ 150 ಸೀಟುಗಳ ಭರ್ತಿಗೆ ಅವಕಾಶ ಸಿಗುತ್ತಿತ್ತು. ಮೆಡಿಕಲ್ ಕಾಲೇಜಿನ ಅನುಕೂಲಕ್ಕಾಗಿ ಚಾಮರಾಜನಗರದ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯನ್ನೇ ಬೊಧನಾ ಆಸ್ಪತ್ರೆಯನ್ನಾಗಿ ಪರಿವರ್ತಿಸಿಕೊಳ್ಳಲಾಗಿತ್ತು. ಇದರ ಜೊತೆಗೆ ನಗರದ ಹೊರವಲಯದಲ್ಲಿರುವ ಸರ್ಕಾರಿ ಮೆಡಿಕಲ್ ಕಾಲೇಜಿನ ಬಳಿಯೇ 113  ಕೋಟಿ ರೂಪಾಯಿ ವೆಚ್ಚದಲ್ಲಿ ನೂತನ ಬೋಧನಾ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದ್ದು ಇದು ಐದು ವರ್ಷ ಕಳೆದರು ಇನ್ನೂ ಪೂರ್ಣಗೊಂಡಿಲ್ಲ

ಸರ್ಕಾರದ ಮಾನದಂಡದಂತೆ ಸದ್ಯಕ್ಕೆ 600 ಹಾಸಿಗೆ ಸೌಕರ್ಯವುಳ್ಳ ಬೋಧನಾ ಆಸ್ಪತ್ರೆ ಇರಬೇಕು. ಆದರೆ, ಚಾಮರಾಜನಗರ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಗಧಿತ ಪ್ರಮಾಣದ ಹಾಸಿಗೆ ಸೌಲಭ್ಯ ಇಲ್ಲದ ಕಾರಣ ನಗರದ ಜೆ.ಎಸ್.ಎಸ್. ಆಸ್ಪತ್ರೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 2019 ರ ಡಿಸೆಂಬರ್​ ನಲ್ಲಿ ಪರಿಶೀಲನೆಗೆ ಭೇಟಿಕೊಟ್ಟಿದ್ದ ಭಾರತೀಯ ವೈದ್ಯಕೀಯ ಮಂಡಳಿಯ ತಂಡ  19 ನ್ಯೂನತೆಗಳನ್ನು ಗುರುತಿಸಿತ್ತು. ಅದರಲ್ಲಿ ಸುಸಜ್ಜಿತ ಬೋಧನಾ ಆಸ್ಪತ್ರೆ ಇಲ್ಲದಿರುವುದು ಒಂದಾಗಿತ್ತು.

ಈ ಎಲ್ಲಾ ನ್ಯೂನ್ನತೆಗಳನ್ನು ಸರಿಪಡಿಸಿ ಅಗತ್ಯ ದಾಖಲೆಗಳೊಂದಿಗೆ ಕಾಲೇಜಿನ ಆಡಳಿತ ವರ್ಗ ವರದಿ ಸಲ್ಲಿಸಿತ್ತು. ಇದರಲ್ಲಿ ಜೆ.ಎಸ್.ಎಸ್.ಆಸ್ಪತ್ರೆಯೊಂದಿಗೆ ಒಂಡಂಬಡಿಕೆ ಮಾಡಿಕೊಂಡಿರುವ ಬಗ್ಗೆ ವರದಿಯುಲ್ಲಿ ತಿಳಿಸಿಲಾಗಿತ್ತು. ಆದರೆ, ಇದನ್ನು ಪರಿಗಣಿಸದ ರಾಷ್ಟ್ರೀಯ ವೈದ್ಯಕೀಯ ಆಯೋಗ ಈ ಬಾರಿಯ ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಅನುಮತಿ  ನೀಡಿಲ್ಲ.

ಇದನ್ನೂ ಓದಿ : ವಿಜಯನಗರ ಬೆನ್ನಲ್ಲೇ ಚಿಕ್ಕೋಡಿ ಜಿಲ್ಲೆಗೆ ಹೆಚ್ಚಿದ ಒತ್ತಡ; ಜಿಲ್ಲೆಗಾಗಿ ಮತ್ತೊಂದು ಸುತ್ತಿನ ಹೋರಾಟದ ಎಚ್ಚರಿಕೆ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಡಿಲ್ ಕಾಲೇಜಿನ ಡೀನ್  ಡಾ.ಸಂಜೀವ್ ತಾಂತ್ರಿಕ ಕಾರಣಗಳಿಂದ ಹೀಗಾಗಿದೆ. ಆಯೋಗದ ಕಾರ್ಯದರ್ಶಿಗನ್ನು ದೆಹಲಿಯಲ್ಲಿ ಭೇಟಿ ಮಾಡಿ ಬೋಧನಾ ಆಸ್ಪತ್ರೆ ಕೊರತೆ ನೀಗಿಸಲು ಜೆ.ಎಸ್.ಎಸ್. ಆಸ್ಪತ್ರೆಯೊಂದಿಗೆ ಒಂಡಂಬಡಿಕೆ ಮಾಡಿಕೊಂಡಿರುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅಲ್ಲದೆ ಈ ಬಗ್ಗೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿದೆ.

ಒಂದೆರೆಡು ದಿನಗಳಲ್ಲಿ ಸಮಸ್ಯೆ ಬಗೆ ಹರಿಯಲಿದ್ದು ವೈದ್ಯಕೀಯ ಕೋರ್ಸ್ ಪ್ರವೇಶಾತಿಗೆ ಅನುಮತಿ ಸಿಗುವ ನಿರೀಕ್ಷೆ ಇದ್ದು ಯಾರು ಆತಂಕ ಪಡಬೇಕಿಲ್ಲ, ಎಂದಿನಂತೆ 150 ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಲಿದೆ ಎಂದು ತಿಳಿಸಿದರು.
Published by:G Hareeshkumar
First published: