ಪುಂಡಪೋಕರಿಗಳ ಹಾವಳಿಗೆ ಬ್ರೇಕ್ ಹಾಕಲು ನಿರ್ಭಯ ಪಡೆ ಎಂಟ್ರಿ; ಮಹಿಳೆಯರ ರಕ್ಷಣೆಗೆ ಪೊಲೀಸರ ನಿಯೋಜನೆ!

ಸರಕಾರದ ನಿರ್ಭಯ ಯೋಜನೆಯಡಿ ಸರಕಾರ ಯಾದಗಿರಿ ‌ಜಿಲ್ಲೆಗೆ 15 ನಿರ್ಭಯ ಬೈಕ್ ಗಳನ್ನು ಪೂರೈಸಿದ್ದು ಜಿಲ್ಲೆಯಲ್ಲಿ 14 ಪೊಲೀಸ್ ಠಾಣೆಗಳಿದ್ದು ಮಹಿಳಾ ಠಾಣೆಗೆ ಎರಡು ಸೇರಿ ಒಟ್ಟು 15 ನಿರ್ಭಯ ಪೊಲೀಸ್ ಬೈಕ್ ಪೂರೈಕೆ ಮಾಡಲಾಗಿದೆ.

ನಿರ್ಭಯಾ ಪೊಲೀಸ್ ಪಡೆ.

ನಿರ್ಭಯಾ ಪೊಲೀಸ್ ಪಡೆ.

  • Share this:
ಯಾದಗಿರಿ: ಇತ್ತೀಚೆಗೆ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಕ್ಷುಲ್ಲಕ ಕಾರಣಕ್ಕೆ ದಂಪತಿಗಳು ಜಗಳವಾಡಿ ಕೊಲೆ ಘಟನೆಗಳು ಕೂಡ ಜರುಗುತ್ತಿರುವ ಸಾಕಷ್ಟು ಉದಾಹರಣೆಗಳಿವೆ. ಹೀಗಾಗಿ ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಈಗ ನಿರ್ಭಯ ಬೈಕ್ ಪಡೆ ರಚನೆ ಮಾಡಿದ್ದು ಜಿಲ್ಲಾದ್ಯಂತ ನಿರ್ಭಯ ಬೈಕ್ ಪೊಲೀಸರು ಈಗ ಹದ್ದಿನ ಕಣ್ಣೀಡಲಿದ್ದಾರೆ. ಪುಂಡ ಪೋಕರಿಗಳ ಮೇಲೆ ಪೊಲೀಸರು ಕಣ್ಗಾವಲು ವಹಿಸಲಿದ್ದಾರೆ. ಯಾದಗಿರಿ ಜಿಲ್ಲೆಯ 14 ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಭಯ ಬೈಕ್ ಗಳು ಈಗ ಸಂಚರಿಸಲಿವೆ. ನಿರ್ಭಯ ಬೈಕ್ ಗಳ ಮೇಲೆ ಪೊಲೀಸ್ ಠಾಣೆಯ ಮಹಿಳಾ  ನೆರವು ಕೇಂದ್ರದ ಪೊಲೀಸ್ ಸಿಬ್ಬಂದಿಗಳು ಸಂಚಾರ ಮಾಡಲಿದ್ದಾರೆ. ದೂರು ಬಂದರೆ ತಕ್ಷಣವೇ ಬೈಕ್ ಗಳ ಮೇಲೆ ತೆರಳಿ ಪೊಲೀಸರು ಮಹಿಳೆಯರಿಗೆ ರಕ್ಷಣೆ ನೀಡಿ ಪುಂಡ ಪೋಕರಿಗಳಿಗೆ ತಕ್ಕ ಪಾಠ ಕಲಿಸಲಿದ್ದಾರೆ.ಕೇಂದ್ರ ಸರಕಾರದ ನಿರ್ಭಯ ಯೋಜನೆಯಡಿ ಯಾದಗಿರಿ ಜಿಲ್ಲೆಗೆ 15 ಬೈಕ್ ಗಳನ್ನು ಸರಕಾರ ಪೂರೈಕೆ ಮಾಡಿದ್ದು, ನಿರ್ಭಯ ಬೈಕ್ ಗಳಿಗೆ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಚಾಲನೆ ನೀಡಿದ್ದಾರೆ. ಯಾದಗಿರಿ ನಗರದ ಗಾಂಧಿ ವೃತ್ತದಲ್ಲಿ ಚಾಲನೆ ನೀಡಿದ್ದು,ಪೊಲೀಸರು ಯಾದಗಿರಿ ನಗರದಲ್ಲಿ ಸಂಚಾರ ಮಾಡಿ ಪುಂಡಪೋಕರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ನ್ಯೂಸ್ 18 ಕನ್ನಡಕ್ಕೆ ಎಸ್ಪಿ ಋಷಿಕೇಶ್ ಭಗವಾನ್ ಸೋನವಣೆ ಮಾತನಾಡಿ, ಸರಕಾರದ ನಿರ್ಭಯ ಯೋಜನೆಯಡಿ ಸರಕಾರ ಯಾದಗಿರಿ ‌ಜಿಲ್ಲೆಗೆ 15 ನಿರ್ಭಯ ಬೈಕ್ ಗಳನ್ನು ಪೂರೈಸಿದ್ದು ಜಿಲ್ಲೆಯಲ್ಲಿ 14 ಪೊಲೀಸ್ ಠಾಣೆಗಳಿದ್ದು ಮಹಿಳಾ ಠಾಣೆಗೆ ಎರಡು ಸೇರಿ ಒಟ್ಟು 15 ನಿರ್ಭಯ ಪೊಲೀಸ್ ಬೈಕ್ ಪೂರೈಕೆ ಮಾಡಲಾಗಿದೆ. ಈಗಾಗಲೇ ಪ್ರತಿ ಠಾಣೆಯಲ್ಲಿ ಮಹಿಳಾ ನೆರವು ಕೇಂದ್ರ ವಿದ್ದು ಮಹಿಳಾ ನೆರವು ಕೇಂದ್ರಕ್ಕೆ ನಿಯೋಜನಗೊಂಡ ಪೊಲೀಸ್ ಸಿಬ್ಬಂದಿ ನಿರ್ಭಯ ಪೊಲೀಸ್ ಬೈಕ್ ಮೂಲಕ ಠಾಣೆ ವ್ಯಾಪ್ತಿ ಸಂಚಾರ ಮಾಡಲಿದ್ದಾರೆ.

ಇದನ್ನೂ ಓದಿ: Cabinet Expansion: ಮಗ ವಿಜಯೇಂದ್ರ ಜೊತೆಗೆ ಅಮಿತ್​ ಶಾ ಭೇಟಿಗೆ ಹೊರಟ ಯಡಿಯೂರಪ್ಪ; ರಾಜ್ಯ ಸಂಪುಟ ವಿಸ್ತರಣೆ ಸಾಧ್ಯತೆ?

ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೆ ನಿರ್ಭಯ ಪೊಲೀಸ್ ಪಡೆ ಮಹಿಳೆಯರ ರಕ್ಷಣೆ ಮಾಡಲಿದೆ. ಸಾರ್ವಜನಿಕರು ನಿಮ್ಮ ಸುತ್ತಮುತ್ತಲು ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಇನ್ನಿತರ ಘಟನೆಗಳು ನಡೆಯುತ್ತಿದ್ದರೆ ಯಾವುದೇ ಭಯಗೊಳ್ಳದೇ ಮಹಿಳೆಯರ ರಕ್ಷಣೆಗಾಗಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರೆ, ಆ ಮಹಿಳೆಯನ್ನು‌ರಕ್ಷಣೆ ಮಾಡಿ ದೌರ್ಜನ್ಯ ಪ್ರಕರಣಗಳು ಕಡಿಮೆ ಮಾಡಬಹುದಾಗಿದೆ‌. ಕಾರಣ ಜನರು ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಸಹಕರಿಸಬೇಕೆಂದರು.

ಜಿಲ್ಲೆಯಲ್ಲಿ ಮಹಿಳೆಯರ ರಕ್ಷಣೆಗೆ ಈಗ ನಿರ್ಭಯ ಬೈಕ್ ಗಳ ಪೊಲೀಸರು ಮಹಿಳೆಯರಿಗೆ ಭಯ ನಿರ್ಮೂಲನೆ ಮಾಡಿದ್ದಾರೆ. ಜನರು ಮಹಿಳೆಯರು ಮೇಲೆ ನಡೆಯುತ್ತಿರುವ ದೌರ್ಜನ್ಯ ಕಂಡು ಬಂದರೆ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಅವಶ್ಯವಾಗಿದೆ.
Published by:MAshok Kumar
First published: