• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಹೆಣ್ಣು ಮಕ್ಕಳ ರಕ್ಷಣೆ, ಅಪರಾಧ ಪ್ರಕರಣ ತಡೆಗಾಗಿ ಮಂಡ್ಯ ಜಿಲ್ಲೆಯಲ್ಲಿ ನಿರ್ಭಯ ಪಡೆ ರಚನೆ!

ಹೆಣ್ಣು ಮಕ್ಕಳ ರಕ್ಷಣೆ, ಅಪರಾಧ ಪ್ರಕರಣ ತಡೆಗಾಗಿ ಮಂಡ್ಯ ಜಿಲ್ಲೆಯಲ್ಲಿ ನಿರ್ಭಯ ಪಡೆ ರಚನೆ!

ನಿರ್ಭಯ ಪಡೆಯ ಬೈಕ್.

ನಿರ್ಭಯ ಪಡೆಯ ಬೈಕ್.

ಮಂಡ್ಯ ಜಿಲ್ಲೆಯಲ್ಲಿನ ಅಪರಾಧ ಪ್ರಕರಣಗಳ ಕಡಿವಾಣ ಸೇರಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿರೋ ಮಂಡ್ಯ ಜಿಲ್ಲೆಯ ಪೊಲೀಸರ  ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಜನರ ಮೆಚ್ಚುಗೆ  ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಮತ್ತಷ್ಟು ಜನಸ್ನೇಹಿ ಆಗಲಿ ಅಂತಿದ್ದಾರೆ.

  • Share this:

ಮಂಡ್ಯ : ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದೆ. ಅಲ್ಲದೇ ಹೆಣ್ಣು ಮಕ್ಕಳ ಮೇಲೆ ಶೋಷಣೆ, ಲೈಂಗಿಕ ದೌರ್ಜನ್ಯ ಸೇರಿದಂತೆ‌ ಅತ್ಯಾಚಾರ ಪ್ರಕರಣ ನಡೆಯುತ್ತಿವೆ. ಇಂತಹ ಪ್ರಕರಣಗಳ ತಡೆಗಾಗಿ ಇದೀಗ ಮಂಡ್ಯ ಪೊಲೀಸ್ ಇಲಾಖೆ ಮುಂದಾಗಿದೆ. ಅಲ್ಲದೇ ಇದಕ್ಕಾಗ ಹೊಸದೊಂದು ಪಡೆಯನ್ನು ರಚಿಸಿದೆ. ಈ ಮೂಲಕ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಜೊತೆಗೆ ಅಪರಾಧಗಳಿಗೂ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ.


ಹೌದು! ಮಂಡ್ಯ ಜಿಲ್ಲೆಯಲ್ಲಿ ಇತ್ತೀಚೆಗೆ ಹೆಚ್ಚು ಅಪರಾಧ ಪ್ರಕರಣಗಳು ನಡೆಯುತ್ತಿವೆ. ಅಲ್ಲದೇ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಲೈಂಗಿಕ ಶೋಷಣೆ, ಬೀದಿ ಕಾಮಣ್ಣರ ಹಾವಳಿ ಹಾಗೂ ಅತ್ಯಾಚಾರದಂತಹ ಪ್ರಕರಣಗಳು ನಡೆಯುತ್ತಿದ್ದು, ಹೆಣ್ಣು ಮಕ್ಕಳು‌ ನಿರ್ಭೀತಿ ಯಿಂದ ಓಡಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚಿಗೆ ಮದ್ದೂರಿನ ಉರುಗಲವಾಡಿ ಗ್ರಾಮದಲ್ಲಿ  ಕಬ್ಬು ಕಡಿಯಲು ಬಂದಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆಗೈದ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇದರಿಂದ ಎಚ್ಚೆತ್ತ ಮಂಡ್ಯ ಪೊಲೀಸ್ ಇಲಾಖೆ ಇದೀಗ ಹೊಸ ಯೋಜನೆ ರೂಪಿಸಿದೆ.


ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಲು ನಿರ್ಭಯ ಹೆಸರಿನ ಪಡೆಯೊಂದನ್ನು ರಚಿಸಿದ್ದು,  ಜಿಲ್ಲೆಯಲ್ಲಿರುವ ಪ್ರತಿ ಪೊಲೀಸ್ ಠಾಣೆಯ ಇಬ್ಬರು ಪೊಲೀಸನ್ನು ದಿನದ 24 ಗಂಟೆ ಗಸ್ತಿಗೆ ನಿಯೋಜಿಸಿಲು ಸಿದ್ದತೆ ಮಾಡಿಕೊಂಡಿದೆ. ಅಲ್ಲದೇ ಆ ನಿರ್ಭಯ ಪಡೆಯ ಗಸ್ತಿಗಾಗಿ 32 ಹೊಸ ಬೈಕ್ ಖರೀಸಿದೆ. ಸದ್ಯ ಈ ನಿರ್ಭಯ ಪಡೆಯ ಶೀಘ್ರವಾಗಿ ಜಿಲ್ಲೆಯಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಗಸ್ತಿಗಾಗಿ 32 ಹೊಸ ಬೈಕ್ ಗಳು ಜಿಲ್ಲೆಗೆ ಬಂದಿದ್ದು‌ ಜಿಲ್ಲಾ ಸಶಸ್ತ್ರ ಪಡೆಯ ಕಚೇರಿಯಲ್ಲಿದ್ದು ಶೀಘ್ರವೇ ಅವುಗಳು ಕಾರ್ಯಾಚರಣೆಗೆ ಇಳಿಯಲಿವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ತಿಳಿಸಿದ್ದಾರೆ.


ಇದನ್ನು ಓದಿ: ಜಾನಪದ ಅಕಾಡೆಮಿ ರಾಜ್ಯ ಪ್ರಶಸ್ತಿ ಪ್ರಕಟ: ಡಾ.ಬಸವರಾಜ ಸಬರದ, ಡಾ.ಗಾಯಿತ್ರಿನಾವಡ ಅವರಿಗೆ ಜಾನಪದ ತಜ್ಞ ಪ್ರಶಸ್ತಿ


ಇನ್ನು ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳ ಕಡಿವಾಣ ಹಾಗು ಹೆಣ್ಣು‌ ಮಕ್ಕಳ ರಕ್ಷಣೆಗಾಗಿ ಜಿಲ್ಲೆಯ ಪೊಲೀಸ್ ಇಲಾಖೆ ನಿರ್ಭಯ ಪಡೆ ರಚನೆಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಡಿಸಿದ್ದು, ಶೀಘ್ರವೇ ಜಿಲ್ಲೆಯಲ್ಲಿ ನಿರ್ಭಯ  ಪಡೆ ಕಾರ್ಯಾಚರಣೆ ಆರಂಭಿಸಲಿ ಎಂದಿದ್ದಾರೆ. ನಿರ್ಭಯ ಟೀಂ ಕಾರ್ಯಾಚರಣೆಯಿಂದ  ಜಿಲ್ಲೆಯಲ್ಲಿ ಹೆಣ್ಣು ಮಕ್ಕಳು ನಿರ್ಭಿತಿಯಿಂದ ಓಡಾಡೋದರ ಜೊತೆಗೆ ಧೈರ್ಯವಾಗಿ ನಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಪೊಲೀಸರ ಈ ವಿನೂತನ ಕಾರ್ಯಾಚರಣೆಯನ್ನು ಪ್ರಶಂಸಿದ್ದಾರೆ.


ಒಟ್ಟಾರೆ ಮಂಡ್ಯ ಜಿಲ್ಲೆಯಲ್ಲಿನ ಅಪರಾಧ ಪ್ರಕರಣಗಳ ಕಡಿವಾಣ ಸೇರಿ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ರಕ್ಷಣೆಗೆ ಮುಂದಾಗಿರೋ ಮಂಡ್ಯ ಜಿಲ್ಲೆಯ ಪೊಲೀಸರ  ಈ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಜನರ ಮೆಚ್ಚುಗೆ  ವ್ಯಕ್ತವಾಗಿದ್ದು, ಪೊಲೀಸ್ ಇಲಾಖೆ ಮತ್ತಷ್ಟು ಜನಸ್ನೇಹಿ ಆಗಲಿ ಅಂತಿದ್ದಾರೆ.

Published by:HR Ramesh
First published: