• ಹೋಂ
  • »
  • ನ್ಯೂಸ್
  • »
  • ಜಿಲ್ಲೆ
  • »
  • ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ: ನಿರಂಜನಾನಂದಪುರಿ ಸ್ವಾಮೀಜಿ

ಕುರುಬ ಸಮಾಜಕ್ಕೆ ಎಸ್ ಟಿ ಮೀಸಲಾತಿಗೆ ಒತ್ತಾಯಿಸಿ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ: ನಿರಂಜನಾನಂದಪುರಿ ಸ್ವಾಮೀಜಿ

ಮಹಿಳಾ ಚಿಂತನ ಸಭೆ

ಮಹಿಳಾ ಚಿಂತನ ಸಭೆ

ನಮ್ಮ ಸಮುದಾಯದ ಜನರಿಗೆ ಉಚಿತ ಮನೆ, ಜಮೀನು, ಶಿಕ್ಷಣ ಹಾಗೂ ಉದ್ಯೋಗ ಸಿಗಬೇಕು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ . ಎಸ್ ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ

  • Share this:

ಹಾವೇರಿ(ನವೆಂಬರ್​. 09): ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿಗೆ ನೀಡುವಂತೆ ಒತ್ತಾಯಿಸಿ ಜನವರಿ 15 ರಿಂದ ಫೆಬ್ರುವರಿ 7 ರವರೆಗೆ ಕಾಗಿನೆಲೆಯಿಂದ ಬೆಂಗಳೂರು ವರೆಗೆ  ಪಾದಯಾತ್ರೆ ಹಮ್ಮಿಕೊಂಡಿದ್ದೇವೆ‌ ಎಂದು ಕನಕಗುರು ಪೀಠದ ನಿರಂಜನಾನಂದಪುರಿ ಸ್ವಾಮೀಜಿ  ಹೇಳಿದ್ದಾರೆ. ಕುರುಬ ಸಮಾಜವನ್ನು ಎಸ್ ಟಿ ಮೀಸಲಾತಿಗೆ ಸೇರಿಸಲು ಒತ್ತಾಯಿಸಿ ರಾಜ್ಯ ಕುರುಬ ಸಮಾಜದ ಎಸ್ ಟಿ ಹೋರಾಟ ಸಮಿತಿಯ ಮಹಿಳಾ ಚಿಂತನ ಸಭೆಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆಯ ಕನಕ ಗುರುಪೀಠದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆಗೆ ಬರಬೇಕು ಅನ್ನೋರು ಈಗಿನಿಂದಲೇ ಪ್ರತಿ ದಿನ ವಾಕ್ ಮಾಡಿರಿ ಪಾದಯಾತ್ರೆ ಬೇಡ ಅಂತಾ ಸಚಿವ ಈಶ್ವರಪ್ಪನವರು ಕೈ ಮುಗಿದು ಬೇಡಿಕೊಂಡರು. ಸಮಾಜದ ಸ್ವಾಮೀಜಿ ಪಾದಯಾತ್ರೆ ಮಾಡಬಾರರು ಅನ್ನೋದು ಈಶ್ವರಪ್ಪನವರ ಉದ್ದೇಶ ಆಗಿತ್ತು. ಆದರೆ, ನಾನು ಈಗಿನಿಂದಲೇ ವಾಕ್ ಮಾಡುತ್ತಾ ಪಾದಯಾತ್ರೆಗೆ ತಯಾರಿ ಮಾಡುತ್ತಿದ್ದೇನೆ. ಇಟ್ಟ ಹೆಜ್ಜೆ ಹಿಂದೆ ಇಡಬಾರರು ಅಂತಾ ಪಾದಯಾತ್ರೆಗೆ ಈಗಿನಿಂದಲೆ ತಯಾರಿ ಮಾಡ್ತಿದ್ದೇವೆ ಎಂದರು.


ದಿನಕ್ಕೆ ಇಪ್ಪತ್ತು ಕಿ.ಮೀ ನಡೆಯುವ ವಿಚಾರವಿದೆ ಕಾಗಿನೆಲೆಯಿಂದ ಬೆಂಗಳೂರುವರೆಗೆ 340 ಕಿ.ಮೀ ಪಾದಯಾತ್ರೆ ಮಾಡಿ ಕೇಂದ್ರ ಸರಕಾರದ ಟೇಬಲ್ ಗುದ್ದಿ ಹಕ್ಕೊತ್ತಾಯ ಮಾಡಲು ಪಾದಯಾತ್ರೆ ಮಾಡಲಾಗುತ್ತಿದೆ‌. ಜಾತಿ ಕೋಟಾದಲ್ಲಿ ಅಧಿಕಾರ ಅನುಭವಿಸಿದ ಸಮಾಜದ ನಾಯಕರಿಗೆ ಕೈ ಮುಗಿದು ಕೇಳುತ್ತೇನೆ ಸಮಾಜದ ಋಣ ತೀರಿಸಬೇಕು ಅಂದ್ರೆ ನೀವು ಎಸ್ಟಿ ಕೆಟಗೆರಿಗೆ ಸೇರಿಸಿ ಋಣ ತೀರಿಸಿ. ಕನಕಗುರು ಪೀಠ ಮುಂದಿಟ್ಟ ಹೆಜ್ಜೆ ಹಿಂದೆ ಇಡುವುದಿಲ್ಲ. ಗುರಿ ಮುಟ್ಟುವ ವರೆಗೆ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ತಿಳಿಸಿದರು.


ಕೆಲವರು ಕೈ ಹಿಸುಕುವ ಕೆಲಸ ಮಾಡುತ್ತಿದ್ದಾರೆ. ಕೈ ಹಿಸುಕುವವರೆ ಬಹಿರಂಗವಾಗಿ ನಿಮ್ಮ ಹೆಸರುಗಳನ್ನ ಹೇಳ್ಳುತ್ತೇ. ಕೈ ಹಿಸುಕುವ ಕೆಲಸ ಮಾಡಬೇಡಿ, ಕೈ ಸೇರಿಸುವ ಕೆಲಸ ಮಾಡಿ ನಿಮಗೆ ಕೈ ಜೋಡಿಸಲು ಆಗದಿದ್ರೆ ಸುಮ್ಮನಿರಿ ಎಂದು ಮನವಿ ಮಾಡಿಕೊಂಡರು.


ಇನ್ನೂಎಂಥಾ ತಿಮಿಂಗಲುಗಳು ಬಂದರೂ, ನಾವು ಸತ್ತರು ಪರವಾಗಿಲ್ಲ, ಎಸ್ಟಿ ಮೀಸಲಾತಿ ಪಡೆದುಕೊಳ್ಳಲು ಬೇಕಾದ ಎಲ್ಲ ತಯಾರಿ ಮಾಡುತ್ತೇವೆ .ಪ್ರೀತಿಯಿಂದ ಕೇಳೋಣ, ಪ್ರೀತಿಯಿಂದ ಸಿಕ್ಕರೆ ಸರಿ ಪ್ರೀತಿಯಿಂದ ಸಿಗದಿದ್ದರೆ ಹೋರಾಟದ ಮೂಲಕ ನಮ್ಮ ಹಕ್ಕು ಪಡೆಯೋಣ ಎಂದು ಭಕ್ತರಿಗೆ ಕರೆ ನೀಡಿದರು.


ಇದನ್ನೂ ಓದಿ :  ಮೇಕ್‌ ಇನ್ ಇಂಡಿಯಾ ಅಡಿ ಉದ್ಯಮಗಳಿಗೆ ಬೇಕಿದೆ ಕಾಯಕಲ್ಪ; ಪರ್ಯಾಯ ಕೈಗಾರಿಕಾ ಭೂಮಿ ನೀಡಲು ಕೆ.ಎಸ್.ಎಸ್.ಐ.ಡಿ.ಸಿ ಮೀನಾಮೇಷ


ಸಚಿವ ಕೆ ಎಸ್ ಈಶ್ವರಪ್ಪ ಮಾತನಾಡಿ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಮೊದಲ ಸ್ಥಾನ ಇದೆ. ಹೀಗಾಗಿ ಮಹಿಳಾ ಸಮಾವೇಶ ಮಾಡುವ ಮೂಲಕ ಕುರುಬ ಸಮುದಾಯವನ್ನು ಎಸ್ ಟಿ ಸೇರಿಸುವ ಮೊದಲ ಸಮಾವೇಶ ಪ್ರಾರಂಭವಾಗಿದೆ. ಪಕ್ಷವನ್ನು ಬಿಟ್ಟು ಸಮುದಾಯವನ್ನು ಎಸ್ ಟಿ ಗೆ ಸೇರಿಸಲು ಹೋರಾಟ ಮಾಡುತ್ತಿದ್ದೆವೆ. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿ ಸಂಬಂಧ ನಮ್ಮ ಹೋರಾಟ ನಡೆಯುತ್ತಿದೆ.


ನಮ್ಮ ಸಮುದಾಯದ ಜನರಿಗೆ ಉಚಿತ ಮನೆ, ಜಮೀನು, ಶಿಕ್ಷಣ ಹಾಗೂ ಉದ್ಯೋಗ ಸಿಗಬೇಕು ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆ ಇಲ್ಲ . ಎಸ್ ಟಿ ಮೀಸಲಾತಿ ಸಿಗುವವರೆಗೂ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದರು.


ಇನ್ನೂ ವೇದಿಕೆ ಮೇಲೆ ಮಾಜಿ ಸಚಿವ ಹೆಚ್ ಎಮ್ ರೇವಣ್ಣ, ಮಾಜಿ ಸಚಿವ ಎಂಟಿಬಿ ನಾಗರಾಜ್,  ಕುರುಬ ಸಮಾಜದ ರಾಜಕೀಯ ಮುಖಂಡರು, ಸ್ವಾಮೀಜಿಗಳು ಹಾಗೂ ರಾಜ್ಯಾದ್ಯಂತ ಆಗಮಿಸಿದ ಸಾವಿರಾವಿರು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.

Published by:G Hareeshkumar
First published: