HOME » NEWS » District » NIDAGUNDA GRAMEENA BANK THEFT IN KALBURGI SAKLB HK

Bank Theft: ನಿಡಗುಂದಾ ಗ್ರಾಮೀಣ ಬ್ಯಾಂಕ್ ಗೆ ಕನ್ನ ; ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಲೂಟಿ

ಬ್ಯಾಂಕ್ ಗೆ ಸೂಕ್ತ ಭದ್ರತೆ ಇಲ್ಲದಿದ್ದುದೇ ಕಳ್ಳತನ ಕೃತ್ಯ ನಡೆಸಲು ಕಾರಣವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ

news18-kannada
Updated:December 21, 2020, 8:42 PM IST
Bank Theft: ನಿಡಗುಂದಾ ಗ್ರಾಮೀಣ ಬ್ಯಾಂಕ್ ಗೆ ಕನ್ನ ; ಲಕ್ಷಾಂತರ ರೂಪಾಯಿ ನಗದು, ಚಿನ್ನಾಭರಣ ಲೂಟಿ
ನಿಡಗುಂದಾ ಗ್ರಾಮೀಣ ಬ್ಯಾಂಕ್
  • Share this:
ಕಲಬುರ್ಗಿ(ಡಿಸೆಂಬರ್​. 21): ಗ್ರಾಮೀಣ ಬ್ಯಾಂಕೊಂದಕ್ಕೆ ಖದೀಮರು ಕನ್ನ ಹಾಕಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಘಟನೆ ಕಲಬುರ್ಗಿ ಜಿಲ್ಲೆ ಚಿಂಚೋಳಿ ತಾಲೂಕಿನ ನಿಡಗುಂದಾ ಗ್ರಾಮದಲ್ಲಿ ನಡೆದಿದೆ. ನಿಡಗುಂದಾ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಕಳ್ಳರು ಕನ್ನ ಹಾಕಿ 50 ಲಕ್ಷ ಮೌಲ್ಯದ ಚಿನ್ನಾಭರಣ, 12 ಲಕ್ಷಕ್ಕೂ ಅಧಿಕ ನಗದನ್ನು ದೋಚಿದ್ದಾರೆ. ಇಬ್ಬರು ಮುಸುಕುಧಾರಿ ವ್ಯಕ್ತಿಗಳು ರಾತ್ರಿ ವೇಳೆಯಲ್ಲಿ ಈ ಕೃತ್ಯ ಎಸಗಿದ್ದಾರೆ. ನಿಡಗುಂದಾ ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್‌ ಗೆ ಕನ್ನ ಹಾಕಿದ್ದಾರೆ. ಬ್ಯಾಂಕ್ ಕಿಟಕಿಯಿಂದ ಒಳನುಗ್ಗಿದ ಕಳ್ಳರು ನಗ, ನಾಣ್ಯ ದೋಚಿ ಪರಾರಿಯಾಗಿದ್ದಾರೆ. ಸಿಸಿಟಿವಿ ಕ್ಯಾಮೆರಾ ಲೈನ್ ಕಟ್ ಮಾಡಿ ನಂತರ ಬ್ಯಾಂಕ್ ಒಳ ನುಗ್ಗಿದ ಕಳ್ಳರು, ಲಾಕರ್ ನಲ್ಲಿದ್ದ ಹಣ, ಚಿನ್ನಾಭರಣ ಲೂಟಿ ಮಾಡಿ ಅಲ್ಲಿಂದ ಲಾಕ್ಕಿತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ.

ಬ್ಯಾಂಕ್ ಗೆ ಸೂಕ್ತ ಭದ್ರತೆ ಇಲ್ಲದಿದ್ದುದೇ ಕಳ್ಳತನ ಕೃತ್ಯ ನಡೆಸಲು ಕಾರಣವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಸುಲೇಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಕುಖ್ಯಾತ ಬೈಕ್ ಕಳ್ಳರ ಬಂಧನ :

ಕಲಬುರ್ಗಿ ನಗರದ ಸ್ಟೇಷನ್ ಬಜಾರ್ ಠಾಣೆ ಪೊಲೀಸರು  ಕಾರ್ಯಾಚರಣೆ ನಡೆಸಿ ಇಬ್ಬರು ಕುಖ್ಯಾತ ಬೈಕ್ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಕಲಬುರ್ಗಿ ನಗರದ ಪಿ. ಅಂಡ್ ಟಿ. ಕಾಲೋನಿಯ 20 ವರ್ಷದ ರುಘು ಬಾಬು ಕಟ್ಟಿಮನಿ ಮತ್ತು ಡಬರಾಬಾದ್ ಪ್ರದೇಶದ ಉಮಾಕಾಂತ್ ಎಂದು ಗುರುತಿಸಲಾಗಿದೆ. ಬಂಧಿತರಿಂದ 4 ಲಕ್ಷ ರೂಪಾಯಿ ಮೌಲ್ಯದ 10 ಬೈಕ್ ಜಪ್ತಿ ಮಾಡಲಾಗಿದೆ.

ಪೊಲೀಸ್ ಇನ್ಸಪೆಕ್ಟರ್ ಸಿದ್ಧರಾಮ ಗುಡೇದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಜಿ.ಡಿ.ಎ. ಲೇಔಟ್ ನಲ್ಲಿ ಅನುಮಾನಾಸ್ಪದವಾಗಿ ತಿರುಗುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ; ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

ಬಂಧಿತ ಆರೋಪಿಗಳು ಹೀರೋ ಹೋಂಡಾ, ಹೀರೋ ಸ್ಪೆಲೆಂಡರ್ ಪ್ಲಸ್, ಪಲ್ಸರ್, ಪ್ಯಾಷನ್ ಪ್ರೋ, ಬಜಾಜ್ ಪಲ್ಸರ್, ಟಿವಿಎಸ್ ಹೆವಿ ಡ್ಯೂಟಿ ಮತ್ತಿತರ ವಾಹನಗಳನ್ನು ಕದ್ದಿದ್ದರು. ನಂತರ ಅವುಗಳನ್ನು ಬೇರೆಯವರಿಗೆ ಮಾರಾಟ ಮಾಡಿದ್ದರು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಮಾರಾಟ ಮಾಡಲಾದ ಬೈಕ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಕುಖ್ಯಾತ ಕಳ್ಳರ ಬಂಧನಕ್ಕೆ ಕಲಬುರ್ಗಿ ಪೊಲೀಸ್ ಕಮೀಷನರ್ ಸತೀಶ್ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
Published by: G Hareeshkumar
First published: December 21, 2020, 7:33 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories