• Home
  • »
  • News
  • »
  • district
  • »
  • ಉಗ್ರರ ಅಡಗುದಾಣವಾಗುತ್ತಿದೆಯಾ ಪಶ್ಚಿಮ ಘಟ್ಟ? ಕೊಡಗಿನಲ್ಲೂ ಉಗ್ರರ ಸಂಚಿನ ಸುಳಿವು

ಉಗ್ರರ ಅಡಗುದಾಣವಾಗುತ್ತಿದೆಯಾ ಪಶ್ಚಿಮ ಘಟ್ಟ? ಕೊಡಗಿನಲ್ಲೂ ಉಗ್ರರ ಸಂಚಿನ ಸುಳಿವು

ಕೊಡಗಿನ ಎಸ್​ಪಿ ಕ್ಷಮಾ

ಕೊಡಗಿನ ಎಸ್​ಪಿ ಕ್ಷಮಾ

ಕೊಡಗು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಉಗ್ರರು ತಮ್ಮ ಕಾರ್ಯಾಚರಣೆ ನಡೆಸಲು ಮುಂದಾಗಿದ್ದವು ಎಂದು ಎನ್ಐಎ ಎಚ್ಚರಿಸಿದ ಬೆನ್ನಲ್ಲೇ ಈಗ ಕೊಡಗಿನಲ್ಲಿ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.

  • Share this:

ಕೊಡಗು: ಕೊಡಗು ಕರ್ನಾಟಕದ ಕಾಶ್ಮೀರ ಎನ್ನೋ ಹೆಗ್ಗಳಿಕೆ ಹೊಂದಿದೆ. ಆದರೆ ಅದೇ ವೇಳೆ ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದ ಹಾಗೆ ಕೊಡಗಿನಲ್ಲಿರುವ ಪಶ್ಚಿಮಘಟ್ಟವೂ ಕಾರಣವಾಗುತ್ತಿದೆಯಾ ಎಂಬ ಅನುಮಾನಗಳು ದಟ್ಟವಾಗತೊಡಗಿವೆ. ಎನ್‍ಐಎ ಕೂಡ ಕೊಡಗು, ಚಾಮರಾಜನಗರ ಮತ್ತು ಮಂಡ್ಯದಲ್ಲಿ ಉಗ್ರರು ತಮ್ಮ ಕಾರ್ಯಚರಣೆ ನಡೆಸಲು ಮುಂದಾಗಿದ್ದರು ಎನ್ನೋ ಸಂಗತಿಯನ್ನು ಬಹಿರಂಗಪಡಿಸಿದೆ. ಈ ಮೂರು ಜಿಲ್ಲೆಗಳಲ್ಲಿ ಕೆಲಸ ಮಾಡುವ ಉಗ್ರರಿಗೆ ಮಂಡ್ಯದಲ್ಲಿಯೇ ತರಬೇತಿ ನೀಡುವ ಸಂಚನ್ನೂ ರೂಪಿಸಿತ್ತು ಎನ್ನೋದನ್ನ ಎನ್‍ಐಎ ಬಹಿರಂಗಪಡಿಸಿದೆ. ಇದಕ್ಕೆ ಪೂರಕ ಎನ್ನುವಂತೆ ಕೊಡಗು ಜಿಲ್ಲೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಕೂಡ ಪಶ್ಚಿಮಘಟ್ಟವು ಉಗ್ರರ ನೆಲೆಯಾಗುತ್ತಿದೆ ಎಂದು ಗಂಭೀರವಾಗಿ ಕಳವಳ ವ್ಯಕ್ತಪಡಿಸಿದ್ದಾರೆ.


ಕೊಡಗಿನ ಕಾಫಿ ಬೆಳೆಗಾರರು ಅಸ್ಸಾಂ ಕಾರ್ಮಿಕರನ್ನು ತಮ್ಮ ತೋಟಗಳಿಗೆ ಕರೆತರುತ್ತಿದ್ದಾರೆ. ಈ ವೇಳೆ ಅಸ್ಸಾಂ ಕಾರ್ಮಿಕರ ಹೆಸರಿನಲ್ಲಿ ಬಾಂಗ್ಲಾ ದೇಶಿಗರು ಕೊಡಗು ಸೇರುತ್ತಿದ್ದಾರೆ. ಒಮ್ಮೆ ಇವರು ನೆಲೆಯೂರಿದರೆಂದರೆ ಮುಗಿಯಿತು ಎನ್ನುತ್ತಾರೆ. ತೋಟಗಳಿಗೆ ಕರೆತರುವ ಅಸ್ಸಾಂ ಕಾರ್ಮಿಕರ ಬಗ್ಗೆ ದಾಖಲೆ ಸಹಿತ ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡುವಂತೆ ಹಿಂದಿನಿಂದಲೂ ಹೇಳುತ್ತಿದ್ದೇವೆ, ಆದರೆ ಆ ಕೆಲಸ ಆಗುತ್ತಿಲ್ಲ ಎನ್ನೋ ಆರೋಪ ಮಾಡಿದ್ದಾರೆ. ಜೊತೆಗೆ ಕೇರಳದಿಂದ ಕರ್ನಾಟಕಕ್ಕೆ ಸುಲಭವಾಗಿ ಉಗ್ರರು ನುಸುಳುವ ಸಾಧ್ಯತೆ ಇದೆ. ಹೀಗಾಗಿ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗಿನ ಕುಟ್ಟ ಚೆಕ್ ಪೋಸ್ಟ್, ಮಾಕುಟ್ಟ ಚೆಕ್ ಪೋಸ್ಟ್‍ಗಳಲ್ಲಿ ಕಠಿಣ ತಪಾಸಣೆ ಮಾಡುವಂತೆ ಬೋಪಯ್ಯ ಆಗ್ರಹಿಸಿರುವುದು ಪಶ್ಚಿಮಘಟ್ಟ ನಿಜಕ್ಕೂ ಉಗ್ರರ ತಾಣವಾಗಿಯೇ ಪರಿವರ್ತನೆಯಾಗುತ್ತಿದೆಯಾ ಎನ್ನೋ ಆತಂಕ ಶುರುವಾಗಿದೆ.


ಇದನ್ನೂ ಓದಿ: Narendra Modi - ಸಿಎಂ ಮತ್ತು ಪಿಎಂ ಆಗಿ ಸತತ 20ನೇ ವರ್ಷಕ್ಕೆ ಅಡಿ ಇಟ್ಟ ನರೇಂದ್ರ ಮೋದಿ; ಇಲ್ಲಿದೆ ಅವರ ಪವರ್​ಫುಲ್ ಪ್ರಯಾಣದ ವಿವರ


ಆದರೆ ಎಸ್ ಪಿ ಕ್ಷಮಾ ಮಿಶ್ರಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಈ ವಿಷಯವನ್ನು ನಾವು ಗಂಭೀರವಾಗಿ ಸ್ವೀಕರಿಸಿದ್ದೇವೆ. ತಳಮಟ್ಟದಿಂದಲೂ ಮಾಹಿತಿಗಳು ಕಲೆಹಾಕುತ್ತಿದ್ದು, ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಅಲರ್ಟ್ ಆಗಿರುವಂತೆ ಸೂಚಿಸಿರುವುದಾಗಿ ಹೇಳಿದ್ದಾರೆ.


ಹಾಗೆ ನೋಡಿದರೆ ಕೊಡಗಿನಲ್ಲಿ ಉಗ್ರರ ಹೆಜ್ಜೆ ಗುರುತುಗಳು ಹಿಂದಿನಿಂದಲೂ ಇವೆ. 1986 ರಲ್ಲಿ ಗಣೇಶೋತ್ಸವದ ಸಂದರ್ಭ ಮೆರವಣಿಗೆ ಮೇಲೆ ಉಗ್ರನೊಬ್ಬ ಬಾಂಬ್ ದಾಳಿ ನಡೆಸಲು ಸಜ್ಜುಗೊಂಡು, ಈ ವೇಳೆ ಆಕಸ್ಮಿಕವಾಗಿ ಈ ಬಾಂಬ್ ಸ್ಫೋಟಗೊಂಡು ಉಗ್ರನೇ ಆಹುತಿಯಾಗಿದ್ದ. ಇನ್ನು 2012 ರಲ್ಲಿ ಉಗ್ರ ಅಬ್ದುಲ್ ಮದನಿ ಕೂಡ ಸೋಮವಾರಪೇಟೆ ತಾಲ್ಲೂಕಿನ ಹೊಸತೋಟ ಎಂಬಲ್ಲಿ ವರ್ಷಗಳ ಕಾಲ ಅಡಗಿದ್ದ. ಬಳಿಕ ರಾಷ್ಟ್ರೀಯ ತನಿಖಾ ದಳ ಪೊಲೀಸರು ಆತನನ್ನು ಬಂಧಿಸಿದ್ದರು. ಈ ಎರಡು ಘಟನೆಗಳ ಜೊತೆಗೆ ಇದೀಗ ಎನ್‍ಐಎ ಮತ್ತೆ ಇಂತಹದೊಂದು ಮಾಹಿತಿಯನ್ನು ನೀಡಿರುವುದು ಕೊಡಗಿನಲ್ಲಿ ಉಗ್ರವಾದ ಬೇರೂರುತ್ತಿದೆಯಾ ಎನ್ನೋ ಅನುಮಾನವನ್ನು ಗಟ್ಟಿಗೊಳಿಸಿದೆ.


ವರದಿ: ರವಿ ಎಸ್ ಹಳ್ಳಿ

Published by:Vijayasarthy SN
First published: