ದಾವಣಗೆರೆ: ಮುಂದಿನ ವಿಧಾನಸಭೆ ಚುನಾವಣೆ ಯಾವ ರೂಪದಲ್ಲಿ ಗೆಲ್ಲಬೇಕು ಅನ್ನೋ ರೂಪುರೇಷೆ ಸಿದ್ಧಪಡಿಸುತ್ತೇವೆ. ಬರುವ ದಿನಗಳಲ್ಲಿ ಸಂಘಟನೆ ಶಕ್ತಿಶಾಲಿ ಮಾಡುವುದಕ್ಕೆ ಸಿದ್ದತೆ ಮಾಡ್ತೇವೆ. 2023 ರ ಚುನಾವಣೆಯಲ್ಲಿ ಬಿಜೆಪಿಗೆ (BJP) ಪೂರ್ಣ ಬಹುಮತ ಪಡೆಯಲು ಸಿದ್ದತೆ ಮಾಡುತ್ತೇವೆ. ಇಲ್ಲಿ ತನಕ ಬಿಜೆಪಿಗೆ ಪೂರ್ಣ ಬಹುಮತ (Majority) ಸಿಕ್ಕಿಲ್ಲ. ಈ ಬಾರಿ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬರುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ (KS Eshwarappa) ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ ಅವರು, ಕಾಂಗ್ರೆಸ್ ಅನೇಕ ಮಿತ್ರರು ಖಾಸಗಿಯಾಗಿ ಬಂದು ಹೇಳಿದ್ದರು ಪಂಚಾಯತ್ ಡೀಲಿಮಿಟೇಷನ್ ಸರಿ ಇಲ್ಲ ಅಂತ. ಡಿಲಿಮಿಟೇಷನ್ ಸರಿ ಆಗಬೇಕು ಅನ್ನೋದು ಒಂದೇ ನಮ್ಮ ಸರ್ಕಾರದ ಉದ್ದೇಶ. ಚುನಾವಣೆ ಬಂದ ಸಂದರ್ಭದಲ್ಲಿ ಜನ ಬುದ್ದಿ ಕಲಿಸ್ತಾರೆ ಅಂತ ಕಾಂಗ್ರೆಸ್ ಹೇಳಿದೆ. ಬೆಲೆ ಏರಿಕೆ ಇದ್ದಾಗಲೂ ಚುನಾವಣೆ ಬಂದಿದೆ, ಮೂರು ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಗೆದ್ದಿದೆ. ಬೆಲೆ ಏರಿಕೆ -ಇಳಿಕೆ ಸ್ವಾಭಾವಿಕ. ಹೇಗೆ ಕಂಟ್ರೋಲ್ ಮಾಡಬೇಕು ಅಂತ ಕೇಂದ್ರದ ನಾಯಕರು ತೀರ್ಮಾನ ತೆಗೆದುಕೊಳ್ಳುತ್ತಾರೆ. ದರ ಏರಿಕೆ, ಇಳಿಕೆ ನಡೆದಾಗಲೇ ಚುನಾವಣೆ ಆಯ್ತು, ಆಗಲೂ ಬಿಜೆಪಿ ಗೆದ್ದಿದೆ ಎಂದು ಹೇಳಿದರು.
ಸಿದ್ದರಾಮಯ್ಯ ನಾಸ್ತಿಕರು. ಇತ್ತೀಚೆಗೆ ದೇವಸ್ಥಾನದ ಮೇಲೆ ಪ್ರೀತಿ ಹೆಚ್ಚಾಗಿರುವುದು ಸತ್ಯ. ಯಾರು ಎಷ್ಟೇ ನಾಸ್ತಿಕರಾದರು ಇವತ್ತಲ್ಲ ನಾಳೆ ದೇವರಿಗೆ ಬೆಲೆ ಕೊಡಲೇಬೇಕು. ಅವರ ಹೇಳಿಕೆಗಳು ಹೇಳಿಕೆಗಷ್ಟೇ ಸೀಮಿತಿ. ಕೇರಳದಲ್ಲಿ ಕಮ್ಯುನಿಸ್ಟ್ ಪಕ್ಷ ನಾವು ನಾಸ್ತಿಕರು ಅಂತ ಗಟ್ಟಿಯಾಗಿ ಹೇಳ್ತಿದ್ರು. ಆದರೆ ಹಣೆಗೆ ಕುಂಕುಮ ಇಟ್ಟುಕೊಂಡು ಚುನಾವಣೆಗೆ ನಾಮ ಪತ್ರ ಸಲ್ಲಿಸುತ್ತಿದ್ದರು. ಸಿದ್ದಾಂತಕ್ಕೂ ಅಚರಣೆಗೂ ಸಂಬಂಧ ಇಲ್ಲ. ದೇವಸ್ಥಾನಗಳು ಭಾರತದ ಸಂಸ್ಕೃತಿ ಪ್ರತೀಕ. ಇವತ್ತಲ್ಲ ನಾಳೆ ದೇವಸ್ಥಾನ ಭಾರತದ ಸಂಸ್ಕೃತಿಗೆ ಬೆಲೆ ಕೊಡಲೇಬೇಕು ಎಂದು ಹೇಳುವ ಮೂಲಕ ದೇವಸ್ಥಾನ ಧ್ವಂಸ ವಿಚಾರವಾಗಿ ಬಿಜೆಪಿ ನಾಯಕರನ್ನು ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಈಶ್ವರಪ್ಪ ತಿರುಗೇಟು ನೀಡಿದರು.
ಯಡಿಯೂರಪ್ಪರನ್ನು ಪಕ್ಷ ಸೈಡ್ ಲೈನ್ ಮಾಡಿಲ್ಲ: ಸದಾನಂದಗೌಡ
ಕೋರ್ ಕಮಿಟಿ ಸಭೆಯಲ್ಲಿ ಭಾಗವಹಿಸಲು ದಾವಣಗೆರೆಗೆ ಬಂದ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಯಡಿಯೂರಪ್ಪ ಅವರನ್ನು ಪಕ್ಷ ಸೈಡ್ ಲೈನ್ ಮಾಡಿಲ್ಲ. ಅಮಿತ್ ಶಾ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಎಂದು ಹೇಳಿದ್ದಾರೆ. ಸಿಎಂ ಶಾಸಕಾಂಗ ಪಕ್ಷ ನಾಯಕರು, ಮುಂಚೂಣಿ ನಾಯಕರು. ಒಬ್ಬ ಸಿಎಂ ಬಗ್ಗೆ ಮಾತ್ರ ಅಮಿತ್ ಶಾ ಮಾತಾಡಿದ್ದಾರೆ. ಯಡಿಯೂರಪ್ಪ ಅವರ ಒಡಗೂಡಿ ಸಾಮೂಹಿಕ ನಾಯಕತ್ವ ಇರಲಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಯಡಿಯೂರಪ್ಪ ಪ್ರವಾಸದ ಬಗ್ಗೆ ಯಾರೂ ಆಕ್ಷೇಪ ಎತ್ತಿಲ್ಲ. ಎಲ್ಲ ಫ್ಲೆಕ್ಸ್ ಗಳಲ್ಲಿ ಯಡಿಯೂರಪ್ಪ ಫೋಟೋ ಕಡ್ಡಾಯವಾಗಿ ಇರಲಿದೆ. ಯಡಿಯೂರಪ್ಪ ಅವರಿಗೆ ಪಕ್ಷ ಕೊಡುವ ಪ್ರಾಮುಖ್ಯತೆ ಇದು ಎಂದು ಹೇಳಿದರು.
ಇದನ್ನು ಓದಿ: Controversy Statement: ನಾವು ಗಾಂಧೀಜಿಯನ್ನೇ ಬಿಟ್ಟಿಲ್ಲ, ಇನ್ನು ನಿಮ್ಮನ್ನು ಬಿಡುತ್ತೇವಾ?: ಸಿಎಂಗೆ ಕೊಲೆ ಬೆದರಿಕೆ ಹಾಕಿದ ಹಿಂದೂ ಮಹಾಸಭಾ
ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ: ಆರ್ ಅಶೋಕ್
ಕಲುಬುರ್ಗಿ ಮೇಯರ್ ಆಯ್ಕೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಸಚಿವ ಆರ್. ಅಶೋಕ್ ಅವರು, ಈ ಬಗ್ಗೆ ಮಾಜಿ ಸಿಎಂ ಎಚ್.ಡಿ.
ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇನೆ. ದೊಡ್ಡಬಳ್ಳಾಪುರ, ಕಲಬುರುಗಿಯಲ್ಲಿ ಜೆಡಿಎಸ್ ಬೆಂಬಲ ಕೋರಿದ್ದೇವೆ. ದೊಡ್ಡಬಳ್ಳಾಪುರದಲ್ಲಿ ಶೇ. 100 ಬೆಂಬಲ ಕೊಡ್ತಾರೆ. ಜನ ಬೆಂಬಲ ಬಿಜೆಪಿ ಪರವಾಗಿದೆ. ಜನತಾ ದಳ ಕೂಡ ಬೆಂಬಲ ಕೊಡುವ ಭರವಸೆ ಇದೆ. ಸೋಮವಾರ ಕುಮಾರಸ್ವಾಮಿ ಜೊತೆಗೆ ಮಾತನಾಡುತ್ತೇನೆ. ಜೆಡಿಎಸ್ ನವರು ಮೇಯರ್ ಸ್ಥಾನ ಕೇಳಿರೋ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ