ನ್ಯೂಸ್ 18 ಕನ್ನಡ ಬಿಗ್ ಇಂಪ್ಯಾಕ್ಟ್ : ಕೋವಿಡ್ ಕೇರ್ ಸೆಂಟರ್ ಗೆ ಹಿರಿಯ ಅಧಿಕಾರಿಗಳ ಭೇಟಿ

ನ್ಯೂಸ್ 18 ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಅಲ್ಲಿಗೆ ತೆರಳಿ ಶುಚಿತ್ವ ಕಾರ್ಯ ಕೈಗೊಳ್ಳುವ ಮೂಲಕ ಸೋಂಕಿತರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ.

news18-kannada
Updated:August 3, 2020, 7:55 AM IST
ನ್ಯೂಸ್ 18 ಕನ್ನಡ ಬಿಗ್ ಇಂಪ್ಯಾಕ್ಟ್ : ಕೋವಿಡ್ ಕೇರ್ ಸೆಂಟರ್ ಗೆ ಹಿರಿಯ ಅಧಿಕಾರಿಗಳ ಭೇಟಿ
ಕೋವಿಡ್​ ಕೇರ್ ಕೇಂದ್ರಕ್ಕೆ ಭೇಟಿ ನೀಡಿದ ಅಧಿಕಾರಿಗಳು
  • Share this:
ವಿಜಯಪುರ(ಆ.03): ಇದು ನ್ಯೂಸ್ 18 ಕನ್ನಡ ಬಿಗ್ ಇಂಫ್ಯಾಕ್ಟ್. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಜಮ್ಮಲದಿನ್ನಿ ಕೋವಿಡ್ ಕೇರ್ ಸೆಂಟರ್ ನಲ್ಲಿರುವ ಅವ್ಯವಸ್ಥೆಯ ಕುರಿತು ನ್ಯೂಸ್ 18 ಕನ್ನಡ ವರದಿ ಪ್ರಸಾರ ಮಾಡಿತ್ತು. ವರದಿಯ ಪ್ರಸಾರದ ಬೆನ್ನಲ್ಲೆ ವಿಜಯಪುರ ಉಪವಿಭಾಗಾಧಿಕಾರಿ ಸೋಮನಿಂಗ ಗೆಣ್ಣೂರ ನೇತೃತ್ವದ ಅಧಿಕಾರಿಗಳ ತಂಡ ಜಮ್ಮಲದಿನ್ನಿ ಕೊವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದೆ. ಅಲ್ಲದೇ, ಇಡೀ ಕೋವಿಡ್ ಕೇರ್ ಸೆಂಟರ್ ಬೇಕೆಂದರಲ್ಲಿ ಬಿದ್ದಿದ್ದ ಕಸವನ್ನು ಸ್ವಚ್ಛಗೊಳಿಸಿದೆ. ಮಾತ್ರವಲ್ಲ ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ.

ಈ ಕೋವಿಡ್ ಕೇಂದ್ರ ಸೆಂಟರ್ ನಲ್ಲಿ ಸುಮಾರು 30 ಜನ ಕೊರೋನಾ ಸೋಂಕಿತರಿದ್ದು, ಮಕ್ಕಳಿಂದ ಹಿಡಿದು ಹಿರಿಯರು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ಇಲ್ಲಿ ಆರೋಗ್ಯ ಇಲಾಖೆ ಕಾರ್ಯಕರ್ತರನ್ನು ಹೊರತು ಪಡಿಸಿ ಯಾರೂ ಬಂದಿರಲಿಲ್ಲ. ಕಸವನ್ನೂ ಸ್ವಚ್ಥಗೊಳಿಸಿರಲಿಲ್ಲ. ಶೌಚಾಲಯವೂ ಗಬ್ಬೆದ್ದು ನಾರುತ್ತಿತ್ತು. ಮಳೆಗಾಲದಲ್ಲಿ ಬಿಸಿ ನೀರಿಲ್ಲದೆ ಇಲ್ಲಿನ ಸೋಂಕಿತರು ಪರದಾಡುುತ್ತಿದ್ದರು. ಈ ಕುರಿತು ಅಲ್ಲಿನ ಸೋಂಕಿತರ ಮೊಬೈಲಿನಲ್ಲಿ ವಿಡಿಯೋ ಮಾಡಿ ಕಳುಹಿಸಿದ್ದರು.

ರೋಗಿಗಳ ಪಾಲಿಗೆ ಶುಚಿತ್ವದ ಕೇಂದ್ರವಾಗಿ ಆರೋಗ್ಯವರ್ಧನೆಗೆ ಪೂರಕವಾಗಬೇಕಿದ್ದ ಕೋವಿಡ್ ಕೇರ್ ಸೆಂಟರ್ ಅವ್ಯವಸ್ಥೆಯ ಆಗರವಾಗಿತ್ತು. ಜಮ್ಮಲದಿನ್ನಿ ಗ್ರಾಮದ ಹೊರಗಡೆ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಕೊವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಈ ಕೇಂದ್ರದಲ್ಲಿ ಕೊರೋನಾ ಸೋಂಕಿತ ಆದರೆ ಅಸಿಂಪ್ಟೋಮೇಟಿಕ್ ಇರುವ ರೋಗಿಗಳನ್ನು ಇಡಲಾಗಿದೆ.  ಇಲ್ಲಿ ಚಿಕಿತ್ಸೆಗೆ ವೈದ್ಯರಿದ್ದರೂ ಈ ಕೇಂದ್ರ ಮಾತ್ರ ಅವ್ಯವಸ್ಥೆಯ ಆಗರವಾಗಿದೆ ಎಂದು ಅಲ್ಲಿನ ರೋಗಿಗಳು ಆರೋಪಿಸಿದ್ದರು.  ಅಷ್ಟೇ ಅಲ್ಲದೇ, ಅಲ್ಲಿರುವ ಅವ್ಯವಸ್ಥೆಯ ಕುರಿತು ವಿಡಿಯೋ ಕೂಡ ಮಾಡಿ ಹರಿ ಬಿಟ್ಟಿದ್ದರು.

ಸಮಾಜ ಕಲ್ಯಾಣ ಇಲಾಖೆಗೆ ಸೇರಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯನ್ನು ಈಗ ಕೊರೋನಾ ಲಕ್ಷಣವಿಲ್ಲದ ಆದರೆ, ಕೊರೋನಾ ಸೋಂಕು ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಲಾಗಿದೆ.  ಹೊಸ ಕಟ್ಟಡ, ಹೊಸ ಮಂಚ ಬೆಡ್ ಗಳ ಸೌಲಭ್ಯವಿದ್ದರೂ ಶುಚಿತ್ವ ಮಾಯವಾಗಿದೆ ಎಂದು ದೂರಿದ್ದರು.

ಇದನ್ನೂ ಓದಿ : ಬೆಳಗಾವಿಯ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಬಿದ್ದಿದೆ ರಾಶಿ ರಾಶಿ ಕೊರೋನಾ ತ್ಯಾಜ್ಯ!

ಈ ಕೋವಿಡ್ ಕೇರ್ ಕೇಂದ್ರದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದ್ದು, ಗಬ್ಬೆದ್ದು ನಾರುತ್ತಿದೆ. ಸೂಕ್ತ ನೀರಿನ ವ್ಯವಸ್ಥೆಯೂ ಇಲ್ಲವಾಗಿದೆ. ಮಳೆಗಾಲ ಆರಂಭವಾಗಿದ್ದರೂ ಬಿಸಿ ನೀರಿನ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಇಲ್ಲಿರುವ ಸೋಂಕಿತರು ಪರದಾಡುವಂತಾಗಿದೆ. ಮಕ್ಕಳಿಂದ ಹಿಡಿದು ಹಿರಿಯ ವೃದ್ಧರವರೆಗೂ ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ಹಲವಾರು ದಿನಗಳಿಂದ ಇಲ್ಲಿನ ಸೋಂಕಿತರ ಸ್ನಾನವನ್ನೇ ಮಾಡದೆ ಪರದಾಡುವಂತಾಗಿದೆ.
ಈ ಕೋವಿಡ್ ಕೇರ್ ಸೆಂಟರ್ ಹೊಸ ಕಟ್ಟಡವಾಗಿದ್ದು, ಮೇಲ್ಭಾಗದಲ್ಲಿ ಸುಮಾರು 300 ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ಇಡಲಾಗಿದೆ. ಅಲ್ಲಿಗೆ ಹೋಗಿಯೇ ನೀರು ತರುವ ದುಸ್ಥಿತಿ ಇದೆ. ಅಷ್ಟೇ ಅಲ್ಲ, ಇಲ್ಲಿರುವ ವೃದ್ದರಿಗೆ ಇತರ ಸೋಂಕಿತರು ನೀರು ತಂದು ಕೊಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಕುರಿತು ನ್ಯೂಸ್ 18 ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಅಲ್ಲಿಗೆ ತೆರಳಿ ಶುಚಿತ್ವ ಕಾರ್ಯ ಕೈಗೊಳ್ಳುವ ಮೂಲಕ ಸೋಂಕಿತರ ಸಮಸ್ಯೆಗಳಿಗೆ ಸ್ಪಂಧಿಸಿದ್ದಾರೆ.
Published by: G Hareeshkumar
First published: August 3, 2020, 7:55 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading