ನ್ಯೂಸ್18 ವರದಿಗೆ ಎಚ್ಚೆತ್ತ ಅಧಿಕಾರಿಗಳು; ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ಸಕ್ಕರೆ ಕಾರ್ಖಾನೆಗೆ ಸಂಕಷ್ಟ!

ಈ ನೀರಿನ ಮಾದರಿಗಳನ್ನು ಲ್ಯಾಬ್ ಗೆ ನೀಡಲಿದ್ದು, ವರದಿ ಬಂದ ಬಳಿಕವೇ ಮೀನುಗಳ ಸಾವಿಗೆ ಸ್ಪಷ್ಟ ಮಾಹಿತಿ ಲಭ್ಯ ವಾಗಲಿದೆ. ಅಲ್ಲದೇ ಕಾರ್ಖಾನೆ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿರೋ ಕಾರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಳಗಾವಿ ಕಚೇರಿಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸೋ ಸಾಧ್ಯತೆಯೂ ಇದೆ.

ಕಲುಷಿತ ನೀರಿನ ಮಾದರಿ ಸಂಗ್ರಹಿಸಿರುವ ಅಧಿಕಾರಿಗಳು.

ಕಲುಷಿತ ನೀರಿನ ಮಾದರಿ ಸಂಗ್ರಹಿಸಿರುವ ಅಧಿಕಾರಿಗಳು.

  • Share this:
ಧಾರವಾಡ : ಬೆಳಗಾವಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್​ ‌ಒಡೆತನದ ಹರ್ಷ ಶುಗರ್  ಫ್ಯಾಕ್ಟರಿಯಿಂದ‌ ತುಪ್ಪರಿ ಹಳ್ಳಕ್ಕೆ ಬಿಡಲಾಗುತ್ತಿರೊ ಕೆಮಿಕಲ್ ಮಿಶ್ರಿತ ನೀರಿನಿಂದ ಮೀನುಗಳ ಮಾರಣಹೋಮ ಆಗಿರೋ ಬಗ್ಗೆ ನ್ಯೂಸ್ 18 ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಹಳ್ಳಕ್ಕೆ ಭೇಟಿ ನೀಡಿ ಹಳ್ಳದ ನೀರಿನ ಮಾದರಿ ಸಂಗ್ರಹಿಸಿ ಲ್ಯಾಬ್ ಗೆ ರವಾನಿಸಿದ್ದಾರೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರೂರ ಮತ್ತು ಐಯಟ್ಟಿ ಭಾಗದಲ್ಲಿರೋ ತುಪ್ಪರಿಹಳ್ಳದಲ್ಲಿ ಸಾವಿರಾರು ಮೀನುಗಳ ಮಾರಣಹೋಮವಾಗಿತ್ತು. ಎಲ್ಲಾ ಮೀನುಗಳು ಸತ್ತು ನೀರಿನಲ್ಲಿ ತೇಲುತ್ತಿದ್ದವು. ಈ ಮೀನುಗಳ ಸಾವಿಗೆ ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕರಿಕಟ್ಟಿ ಬಳಿ ಇರೋ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷ ಶುಗರ್ಸ್ ಫ್ಯಾಕ್ಟರಿಯ ಕೆಮಿಕಲ್ ಮಿಶ್ರಿತ ನೀರೆ ಕಾರಣ ಎಂದು ಸ್ಥಳೀಯರು ಆರೋಪ‌ ಮಾಡಿರೊ ಬಗ್ಗೆ ನ್ಯೂಸ್18 ವರದಿ ಮಾಡಿತ್ತು.

ನ್ಯೂಸ್18 ವರದಿ ಪ್ರಸಾರಗೊಳ್ಳುತ್ತಿದ್ದಂತೆಯೇ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಧಾರವಾಡ ಪ್ರಾದೇಶಿಕ ಕಚೇರಿಯ ಸಹಾಯಕ ಪರಿಸರ ಅಧಿಕಾರಿ ಹಾಗೂ ಬೆಳಗಾವಿ ಕಚೇರಿಯ ಅಧಿಕಾರಿಗಳು ಶಿರೂರ ಗ್ರಾಮಕ್ಕೆ ಭೇಟಿ ನೀಡಿ, ಹಳ್ಳದ ಭಾಗದ ವಿವಿಧೆಡೆಗಳಿಂದ ನೀರಿನ ಮಾದರಿ ಸಂಗ್ರಹಿಸಿದ್ದಾರೆ. ಜೊತೆಗೆ ಸ್ಥಳೀಯ ರೈತರಿಂದ ಎಷ್ಟು ದಿನಗಳಿಂದ ಈ ಸಮಸ್ಯೆ ಆಗಿದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನೂ ಪಡೆದಿದ್ದಾರೆ.

ಈ ನೀರಿನ ಮಾದರಿಗಳನ್ನು ಲ್ಯಾಬ್ ಗೆ ನೀಡಲಿದ್ದು, ವರದಿ ಬಂದ ಬಳಿಕವೇ ಮೀನುಗಳ ಸಾವಿಗೆ ಸ್ಪಷ್ಟ ಮಾಹಿತಿ ಲಭ್ಯ ವಾಗಲಿದೆ. ಅಲ್ಲದೇ ಕಾರ್ಖಾನೆ ಬೆಳಗಾವಿ ಜಿಲ್ಲೆ ವ್ಯಾಪ್ತಿಯಲ್ಲಿರೋ ಕಾರಣಕ್ಕೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಳಗಾವಿ ಕಚೇರಿಯ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸೋ ಸಾಧ್ಯತೆಯೂ ಇದೆ.

ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಜಾಥಾ

ಈ ಕುರಿತು ಪ್ರತಿಕ್ರಿಯೆ ನೀಡಿದ ಮಂಡಳಿಯ ಪರಿಸರ ಅಧಿಕಾರಿ ಶೋಭಾ ಪೋಳ, "ಹೆಚ್ಚಿನ ಸಂಖ್ಯೆಯಲ್ಲಿ ಮೀನುಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಹಳ್ಳದ ನೀರನ್ನು ಸಂಗ್ರಹಿಸಲಾಗಿದೆ. ಈ ನೀರನ್ನು ಧಾರವಾಡದ ಲ್ಯಾಬ್‌ ನಲ್ಲೇ ಪರೀಕ್ಷಿಸಲಾಗುವುದು. ಪರೀಕ್ಷೆ ವರದಿ ಬಂದ ಬಳಿಕವೇ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ. ಪರೀಕ್ಷೆಯ ವರದಿ ಬರಲು ವಾರಕ್ಕೂ ಹೆಚ್ಚು ಸಮಯ ಬೇಕಿದೆ" ಎಂದಿದ್ದಾರೆ.

ಇನ್ನು ತುಪ್ಪರಿ ಹಳ್ಳದಲ್ಲಿ ಮೀನುಗಳ ಮಾರಣಹೋಮ ನಡೆದಿರೊ ಬಗ್ಗೆ ನ್ಯೂಸ್ 18 ವರದಿಗೆ ಮಾಡಿದಕ್ಕೆ ಅಧಿಕಾರಿಗಳು ತುಪ್ಪರಿ ಹಳ್ಳಕ್ಕೆ ಭೇಟಿ‌ನೀಡಿ, ಸಕ್ಕರೆ‌ ಕಾರ್ಖಾನೆ ಯಿಂದ‌ ಕಲುಷಿತ ನೀರನ್ನು ತುಪ್ಪರಿ ಹಳ್ಳಕ್ಕೆ‌ ಬಿಟ್ಟಿರೊ ನೀರಿನ ಸ್ಯಾಂಪಲ್ ತೆಗೆದುಕೊಂಡು ಹೋಗಿದ್ದಾರೆ. ನ್ಯೂಸ್ 18 ವರದಿ ಮಾಡಿದಕ್ಕೆ ಸ್ಥಳೀಯರಾದ ಪ್ರಬುಗೌಡ ಧನ್ಯವಾದ ಹೇಳಿದರು .
Published by:MAshok Kumar
First published: