ನ್ಯೂಸ್ 18 ವರದಿಗೆ ಸ್ಪಂದನೆ; ಆನ್​ಲೈನ್ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಸ್ಮಾರ್ಟ್​ಫೋನ್ ಖರೀದಿಸಿದ ಸಹೋದರಿಯರಿಗೆ ನೆರವು

ವಿದ್ಯಾರ್ಥಿನಿಯರ ಸಂಕಷ್ಟದ ಬಗ್ಗೆ ನ್ಯೂಸ್ 18 ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದನೆ ದೊರಕಿದ್ದು, ವಿದ್ಯಾರ್ಥಿನಿಯರಿಗೆ ಧನಸಹಾಯ ಸಿಕ್ಕಿದೆ. ವರದಿ ಪ್ರಸಾರ ಮಾಡಿದ ನ್ಯೂಸ್ 18ಗೂ ಹಾಗೂ ಧನಸಹಾಯ ಮಾಡಿ ರಕ್ಷಿತಾ ಭರತ ಈಟಿ ಅವರಿಗೂ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.

ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಿದ ರಕ್ಷಿತಾ ಭರತ ಈಟಿ

ವಿದ್ಯಾರ್ಥಿನಿಯರಿಗೆ ಆರ್ಥಿಕ ನೆರವು ನೀಡಿದ ರಕ್ಷಿತಾ ಭರತ ಈಟಿ

  • Share this:
ಬಾಗಲಕೋಟೆ (ಆ. 2): ಬಾಗಲಕೋಟೆ ಜಿಲ್ಲೆಯ ಸಿದ್ದರಾಮಯ್ಯ ಕ್ಷೇತ್ರದ ಸಹೋದರಿಯರಿಬ್ಬರು ಆನ್​ಲೈನ್ ಶಿಕ್ಷಣಕ್ಕಾಗಿ ಕೂಲಿ ಹಣದಿಂದಲೇ ಮೊಬೈಲ್ ಖರೀದಿಸಿದ ವರದಿಯನ್ನು ನ್ಯೂಸ್ 18 ಪ್ರಕಟಿಸಿದ ಬೆನ್ನಲ್ಲೇ ಸಹೋದರಿಯರಿಗೆ ಧನಸಹಾಯದ ನೆರವು ಸಿಕ್ಕಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ಸಹೋದರಿಯರಾದ ಮಹಾದೇವಿ ಹಾಗೂ ಸವಿತಾ ಕುರಿ ಎಂಬ ವಿದ್ಯಾರ್ಥಿನಿಯರು ಆನ್​ಲೈನ್ ಶಿಕ್ಷಣ ಕಲಿಕೆಗಾಗಿ ಕೂಲಿ ಹಣದಿಂದಲೇ ಸ್ಮಾರ್ಟ್ ಫೋನ್ ಖರೀದಿಸಿ ಕೂಲಿಯೊಂದಿಗೆ ಕಲಿಕೆ ಮುಂದುವರಿಸಿದ್ದರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ರಕ್ಷಿತಾ ಭರತ ಈಟಿ ನ್ಯೂಸ್ 18 ವರದಿಗೆ ಸ್ಪಂದಿಸಿದ್ದು, ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮಕ್ಕೆ ತೆರಳಿ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿ, ಆನ್​ಲೈನ್​ ಶಿಕ್ಷಣ ಕಲಿಕೆಗಾಗಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿ‌ಸಿದ್ದ ಹಣ, ಹಾಗೂ ಕಲಿಕೆಗೆ ಪುಸ್ತಕ ಖರೀದಿ, ಮೊಬೈಲ್ ರಿಚಾರ್ಜ್​ಗೆ ಎಂಎಸ್ ಈಟಿ ಪೌಂಡೇಶನ್ ವತಿಯಿಂದ 15 ಸಾವಿರ ಧನಸಹಾಯ ಮಾಡಿದ್ದಾರೆ. ಅಲ್ಲದೇ, ಮುಂದಿನ ಶಿಕ್ಷಣಕ್ಕಾಗಿ ಅಗತ್ಯ ನೆರವು ನೀಡುವ ಭರವಸೆವನ್ನೂ ನೀಡಿದ್ದಾರೆ.

ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ನನ್ನಿಂದ ಅಳಲು ಸೇವೆ ಸಲ್ಲಿಸಿದ್ದೇನೆ. ಸರ್ಕಾರ ಕೊರೋನಾ ಹಿನ್ನೆಲೆಯಲ್ಲಿ ಆನ್​ಲೈನ್​ ಶಿಕ್ಷಣ ಆರಂಭಿಸಿದೆ. ಗ್ರಾಮೀಣ ಪ್ರದೇಶದಲ್ಲಿ ಬಡ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಕೊಡುವ ವ್ಯವಸ್ಥೆ ಮಾಡಬೇಕು. ನ್ಯೂಸ್ 18 ವರದಿ ಮೂಲಕ ಸಹೋದರಿಯರ ಸಂಕಷ್ಟ ಗಮನಕ್ಕೆ ಬಂತು. ನೆರವು ನೀಡಿದ್ದೇನೆ ಎಂದು ರಕ್ಷಿತಾ ಭರತ ಈಟಿ ತಿಳಿಸಿದರು.

ಇದನ್ನು ಓದಿ: ಸಿದ್ದರಾಮಯ್ಯ ಕ್ಷೇತ್ರದಲ್ಲಿ ಆನ್​ಲೈನ್​ ಶಿಕ್ಷಣಕ್ಕಾಗಿ ಕೂಲಿ ಹಣದಲ್ಲಿ ಮೊಬೈಲ್ ಖರೀದಿಸಿದ ಅಕ್ಕ-ತಂಗಿ; ಹಗಲಲ್ಲಿ ಕೂಲಿ ಕೆಲಸ: ರಾತ್ರಿ ಆಫ್​ಲೈನ್ ಕ್ಲಾಸ್

ಇದನ್ನು ಓದಿ: ಚದುರಂಗದಲ್ಲೂ ಸಿದ್ದರಾಮಯ್ಯ ಚತುರರು; ಮೊಮ್ಮಗನೊಂದಿಗೆ ಚೆಸ್​ ಆಡುತ್ತಿರುವ ಫೋಟೋ ವೈರಲ್!

ಗ್ರಾಮದ ಹನುಮಂತ ಕುರಿ ಎಂಬುವರಿಗೆ ಮಹಾದೇವಿ ಮತ್ತು ಸವಿತಾ ಎಂಬ ಇಬ್ಬರು ಹೆಣ್ಣಮಕ್ಕಳಿದ್ದು, ಇವರು 8 ಮತ್ತು 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆನ್​ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಖರೀದಿಗೆ ಕೂಲಿ ಹಣ, ವಿದ್ಯಾರ್ಥಿ ವೇತನದಲ್ಲಿ 9 ಸಾವಿರ ಕೊಟ್ಟು ಸ್ಮಾರ್ಟ್ ಫೋನ್ ಖರೀದಿಸಿದ್ದರು. ಬಡತನದ ಹಿನ್ನೆಲೆಯಲ್ಲಿ ಹಗಲಲ್ಲಿ  ಕೂಲಿ ಕೆಲಸಕ್ಕೆ ಹೋಗಿ, ಒಂದೇ ಮೊಬೈಲ್​ನಲ್ಲಿ ರಾತ್ರಿ ಮಹಾದೇವಿ ಡೌನ್ಲೋಡ್ ವಿಡಿಯೋ ಮೂಲಕ ಕಲಿತರೆ. ಅಕ್ಕ ಸವಿತಾ 9ನೇ ತರಗತಿಯ ವಿಡಿಯೋ ಬೆಳಿಗ್ಗಿನ ಜಾವ ಕಲಿತು, ಆ ಬಳಿಕ ಕೂಲಿಗೆ ಹೋಗುತ್ತಾರೆ. ವಿದ್ಯಾರ್ಥಿನಿಯರ ಸಂಕಷ್ಟದ ಬಗ್ಗೆ ನ್ಯೂಸ್ 18 ವರದಿ ಪ್ರಸಾರ ಮಾಡಿತ್ತು. ವರದಿಗೆ ಸ್ಪಂದನೆ ದೊರಕಿದ್ದು, ವಿದ್ಯಾರ್ಥಿನಿಯರಿಗೆ ಧನಸಹಾಯ ಸಿಕ್ಕಿದೆ. ವರದಿ ಪ್ರಸಾರ ಮಾಡಿದ ನ್ಯೂಸ್ 18ಗೂ ಹಾಗೂ ಧನಸಹಾಯ ಮಾಡಿ ರಕ್ಷಿತಾ ಭರತ ಈಟಿ ಅವರಿಗೂ ವಿದ್ಯಾರ್ಥಿನಿಯರು, ಪೋಷಕರು ಹಾಗೂ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.
Published by:HR Ramesh
First published: