ಚಿಕ್ಕೋಡಿ(ಅಕ್ಟೋಬರ್. 24): ಕಾರ್ಖಾನೆಗಳು ಪ್ರಸಕ್ತ ಸಾಲಿನ ಕಬ್ಬು ನುರಿಸಲು ಮುಂದಾದ ಬಳಿಕ ರಾಜ್ಯ ಸರ್ಕಾರದ ಆದೇಶದಂತೆ ಕಬ್ಬಿನ ಎಫ್.ಆರ್.ಪಿ ( ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ) ದರ ನಿಗದಿ ಗೊಳಿಸಿ ಬೆಳಗಾವಿ ಜಿಲ್ಲಾಡಳಿತ ಕೊನೆಗೂ ಆದೇಶ ಹೊರಡಿಸಿದೆ. ಜಿಲ್ಲೆಯ ಎಲ್ಲಾ 23 ಸಕ್ಕರೆ ಕಾರ್ಖಾನೆಗಳು ಕಳೆದ ವರ್ಷ ನುರಿಸಿದ ಕಬ್ಬಿನ ಇಳುವರಿಯ ಆಧಾರದ ಮೇಲೆ ಈ ಬಾರಿ ದರ ನಿಗದಿ ನಿಗದಿಪಡಿಸಿ ಆದೇಶ ಮಾಡಿದೆ. ಕಬ್ಬು ಬೆಲೆ ನಿಗದಿಯ ಬಗ್ಗೆ ನಿರ್ದೇಶಕ ಚನ್ನಬಸಪ್ಪ ಕೊಡ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಇಳುವರಿ ಆಧರಿಸಿ ಬೆಳಗಾವಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಫ್ ಆರ್ಪಿ ಘೋಷಣೆ ಮಾಡಿದ್ದಾರೆ. ಜೊತೆಗೆ ಸರಕಾರ ನಿಗದಿ ಪಡಿಸಿರುವ ಕಟಾವು ಹಾಗೂ ಸಾಗಾಣಿಕೆ ವೆಚ್ಚ ದರಗಳನ್ನ ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ನಾಮ ಫಲಕದಲ್ಲಿ ಕಡ್ಡಾಯವಾಗಿ ಪ್ರದರ್ಶನ ಮಾಡಬೇಕು ಎಂದು ಆದೇಶ ಮಾಡಿದ್ದಾರೆ.
ಕಬ್ಬು ಬೆಳೆಗಾರರ ಕುರಿತು ನ್ಯೂಸ್18 ಕನ್ನಡ ವರದಿ ಪ್ರಕಟ ಮಾಡಿತ್ತು. ಜಿಲ್ಲೆಯಲ್ಲಿ ಸಕ್ಕರೆ ಕಾರ್ಖಾನೆಗಳು ಪ್ರಾರಂಭಗೊಂಡಿವೆ. ಈಗಾಗಲೇ ನಮಗೆ ಕಬ್ಬು ನೀಡಿ ಎಂದು ಕಾರ್ಖಾನೆಯವರು ರೈತರ ದುಂಬಾಲು ಬಿದ್ದಿದ್ದಾರೆ. ಕಬ್ಬು ಕಟಾವು ಶುರುವಾದರು ಸಹ ಸರ್ಕಾರ ಮಾತ್ರ ಯಾವುದೆ ಎಫ್ಆರ್ಪಿ ದರ ಘೋಷಣೆ ಮಾಡಿಲ್ಲಾ ಅಲ್ಲದೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸಿ ಕಬ್ಬು ಹೋರಾಟದ ಕುರಿತು ಸಮಗ್ರ ವರದಿ ಪ್ರಸಾರ ಮಾಡಿತ್ತು. ನ್ಯೂಸ್ 18 ಕನ್ನಡ ವರದಿಗೆ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಹಾಗೂ ಸರ್ಕಾರ ಕೊನೆಗೂ ದರ ನಿಗದಿ ಪಡಿಸಿ ಆದೇಶ ಹೊರಡಿಸಿದೆ.
ಇನ್ನು ಇಳುವರಿಯ ಅನುಸಾರವಾಗಿ ಜಿಲ್ಲೆಯಲ್ಲೆ ಅತಿ ಹೆಚ್ಚು ಇಳುವರಿಯ ಕಬ್ಬು ನುರಿಸಿದ ಚಿಕ್ಕೋಡಿ ತಾಲೂಕಿನ ಬೆಡಕಿಹಾಳ ಗ್ರಾಮದ ವೆಂಕಟೇಶ್ವರ ಪವರ ಪ್ರಾಜೆಕ್ಟ್ ಸಕ್ಕರೆ ಕಾರ್ಖಾನೆ ಜಿಲ್ಲೆಯಲ್ಲಿ ಅತಿ ಹೆಚ್ವು 3477 ರೂಪಾಯಿ ಪ್ರತಿ ಟನ್ ಕಬ್ಬಿಗೆ ದರ ನಿಗದಿ ಯಾಗಿದೆ. ಕಳೆದ ಬಾರಿ ಈ ಕಾರ್ಖಾನೆ 12.20 ಇಳುವರಿಯನ್ನ ಹೊಂದಿತ್ತು.
ಕಾರ್ಖಾನೆ ಹಾಗೂ ದರ ಪಟ್ಟಿ
1. ಅಥಣಿ ಶುಗರ್, ಅಥಣಿ -3035
2. ಲೈಲಾ ಶುಗರ್, ಖಾಮಾಪುರ -3320
3. ಚಿದಾನಂದ ಕೋರೆ ಸಹಕಾರಿ, ಚಿಕ್ಕೋಡಿ -3353
4. ಪ್ಯಾರಿ ಶುಗರ್, ರಾಮದುರ್ಗ -3363
5. ಘಟಪ್ರಭಾ ಸಹಕಾರಿ, ಸಂಗನಕೇರಿ -2864
6. ಗೋಕಾಕ ಶುಗರ್, ಗೋಕಾಕ -3198
7.
ಹಾಲಸಿದ್ದನಾಥ ಸಹಕಾರಿ, ನಿಪ್ಪಾಣಿ -3349
8. ಹಿರಣ್ಯಕೇಶಿ ಸಹಕಾರಿ, ಸಂಕೇಶ್ವರ -3055
9. ಕೃಷ್ಣಾ ಸಹಕಾರಿ, ಅಥಣಿ -2993
10. ಮಲಪ್ರಭಾ ಸಹಕಾರಿ, ಎಂ.ಕೆ.ಹುಬ್ಬಳ್ಳಿ -2779
11. ರೇಣುಕಾ ಶುಗರ್, ರಾಯಬಾಗ -3055
12. ರೇಣುಕಾ ಶುಗರ್, ಅಥಣಿ -2993
13. ರೇಣುಕಾ ಶುಗರ್, ಮುನವಳ್ಳಿ -2841
14. ಸತೀಶ್ ಶುಗರ್, ಗೋಕಾಕ -3229
15. ಶಿರಗುಪ್ಪಿ ಶುಗರ್, ಕಾಗವಾಡ -3425
16. ಸೋಮೇಶ್ವರ ಸಹಕಾರಿ, ಬೈಲಹೊಂಗಲ -3209
17. ಶಿವಶಕ್ತಿ ಶುಗರ್, ರಾಯಬಾಗ -3157
18. ಉಗಾರ ಶುಗರ್, ಉಗಾರ -3067
19. ವೆಂಕಟೇಶ್ವರ ಪಾವರ ಪ್ರಾಜೆಕ್ಟ್, ಬೆಡಕಿಹಾಳ -3477
20. ವಿಶ್ವರಾಜ ಶುಗರ್, ಬಾಗೇವಾಡಿ -3129
21. ಸೌಭಾಗ್ಯ ಲಕ್ಷ್ಮಿ ಶುಗರ್, ಹಿರೆನಂದಿ -3021
22. ಬೆಳಗಾಂ ಶುಗರ್, ಹುದಲಿ -3243
23. ಹರ್ಷಾ ಶುಗರ್, ಸವದತ್ತಿ -3129
ಇದನ್ನೂ ಓದಿ :
ನಿಗದಿಯಾಗದ ಕಬ್ಬಿನ ಎಫ್.ಆರ್.ಪಿ ದರ ; ಕಬ್ಬು ನುರಿಸಲು ಸಕ್ಕರೆ ಕಾರ್ಖಾನೆಗಳ ತಯಾರಿಗೆ ರೈತರ ಆಕ್ರೋಶ
ರಂತೆ ಬೆಲೆ ನಿಗದಿ ಪಡಿಸಿ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ. ಅಲ್ಲದೆ ಪ್ರತಿ ಕಿಲೋ ಮೀಟರ್ಗೆ ನಿಗದಿ ಮಾಡಿದ ಸಾಗಾಟದ ವೆಚ್ಚ ಸಕ್ಕರೆ ಕಾರ್ಖಾನೆಗಳು ಕಡಿತ ಮಾಡಬೇಕು. ತೂಕದ ವಿಷಯದಲ್ಲಿ ಆಗುತ್ತಿರುವ ಮೋಸ ತಡೆಗಟ್ಟಲು ಮಾಪನ ಇಲಾಖೆ ಅಧಿಕಾರಿಗಳ ತಂಡವನ್ನು ಜಿಲ್ಲಾಧಿಕಾರಿ ಮಾಡಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಮಾತ್ರ ಬೆಲೆ ನಿಗದಿ ಮಾಡಿ ಕಾರ್ಖಾನೆಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ .ಆದರೆ, ಬಾಕಿ ಇರುವ ಹಣ ಪಾವತಿ ಕುರಿತು ಮಾತ್ರ ಇದುವರೆಗೂ ಯಾವುದೇ ಭರವಸೆಯನ್ನ ಸರ್ಕಾರ ನೀಡಿಲ್ಲ. ಕೂಡಲೆ ರೈತರ ಬಾಕಿ ಕಬ್ಬಿನ ಬಿಲ್ ಗಳನ್ನ ಕೊಡಿಸುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು ಎನ್ನುವುದು ಕಬ್ಬು ಬೆಳೆಗಾರರ ಒತ್ತಾಯ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ