ನ್ಯೂಸ್18 ಬಿಗ್ ಇಂಪ್ಯಾಕ್ಟ್ : ಕೊರೋನಾ ವಾರಿಯರ್ಸ್ ಕುಟುಂಬಗಳಿಗೆ ಸಿಕ್ತು ತಲಾ 30 ಲಕ್ಷ ರೂಪಾಯಿ ವಿಮಾ ಪರಿಹಾರ

ಈ ಬಗ್ಗೆ ನಿನ್ನೆ  ನ್ಯೂಸ್ 18 ಸಮಗ್ರ ವರದಿ ಮಾಡಿ ಬೆಳಕು ಚಲ್ಲಿತ್ತು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವೈದ್ಯಕೀಯ ವಿಮಾ ಯೋಜನೆಯಡಿ ಮರಣ ಪರಿಹಾರ ನೀಡಲು ವರದಿ  ತಯಾರಿಸಿ ಜಿಲ್ಲಾಧಿಕಾರಿಗೆ ಕಡತ ಸಲ್ಲಿಸಿದ್ದರು

ಕೊರೋನಾ ವಾರಿಯರ್ ಕುಟುಂಬ

ಕೊರೋನಾ ವಾರಿಯರ್ ಕುಟುಂಬ

  • Share this:
 ಚಾಮರಾಜನಗರ (ಏ.21) ನ್ಯೂಸ್ 18 ವರದಿಯ ಪರಿಣಾಮವಾಗಿ ಚಾಮರಾಜನಗರ ಜಿಲ್ಲೆಯ ಎರಡು ಕೊರೋನಾ ವಾರಿಯರ್ಸ್ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ವಿಮಾ ಪರಿಹಾರ  ದೊರಕಿದೆ. ಚಾಮರಾಜನಗರ ತಾಲೂಕಿನ ಗೂಳೀಪುರದ ಅಂಗನವಾಡಿ ಕಾರ್ಯಕರ್ತೆ  ರತ್ನಮ್ಮ ಹಾಗೂ ಕೊಳ್ಳೇಗಾಲ ತಾಲೋಕು ಪಾಳ್ಯ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮೇರಿ ರತ್ನಕುಮಾರಿ ಕೋವಿಡ್ -19 ನಿಂದ ಮೃತಪಟ್ಟು 5 ತಿಂಗಳು ಕಳೆದರು  ಅವರ ಕುಟುಂಬಕ್ಕೆ ವಿಮಾ ಪರಿಹಾರ ದೊರಕಿರಲಿಲ್ಲ. ವಿಮಾ ಪರಿಹಾರಕ್ಕಾಗಿ ಮೃತ ಅಂಗನವಾಡಿ ಕಾರ್ಯಕರ್ತೆಯ ಪತಿ ವಿಕಲಚೇತನರಾದ ನಂಜುಂಡಸ್ವಾಮಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪೂರಕವಾಗಿ ಬೇಕಾಗಿದ್ದ ದೃಢೀಕರಣ ಹಾಗು ಪ್ರಮಾಣ ಪತ್ರಗಳಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ತಾಲೂಕು ಕಚೇರಿ ಹೀಗೆ ಬೇರೆ ಬೇರೆ ಕಚೇರಿಗಳಿಗೆ ಅಲೆದಾಡಿ ಬೇಸತ್ತಿದ್ದರು. ಕಚೇರಿಯಿಂದ ಕಚೇರಿಗೆ ಅಲೆದು ಅಲೆದು ಹೈರಾಣಾಗಿದ್ದರು  ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರೂ ಅವರಿಗೆ ವಿಮೆ ಪರಿಹಾರ ದೊರಕದೆ ಭ್ರಮನಿರಸನಗೊಂಡುಪರಿಹಾರದ ಆಸೆ ಕೈ ಚಲ್ಲಿದ್ದರು.

ಈ ಬಗ್ಗೆ ನಿನ್ನೆ  ನ್ಯೂಸ್ 18 ಸಮಗ್ರ ವರದಿ ಮಾಡಿ ಬೆಳಕು ಚಲ್ಲಿತ್ತು. ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ವೈದ್ಯಕೀಯ ವಿಮಾ ಯೋಜನೆಯಡಿ ಮರಣ ಪರಿಹಾರ ನೀಡಲು ವರದಿ  ತಯಾರಿಸಿ ಜಿಲ್ಲಾಧಿಕಾರಿಗೆ ಕಡತ ಸಲ್ಲಿಸಿದ್ದರು

ತಕ್ಷಣವೇ ವರದಿ ಪರಿಶೀಲಿಸಿ ಕಡತಕ್ಕೆ ಸಹಿ ಹಾಕಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ 30 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದ್ದಾರೆ. ಕಾಗಲವಾಡಿಯ ರತ್ನಮ್ಮ ಅವರ ಕುಟುಂಬಕ್ಕಷ್ಟೇ  ಅಲ್ಲದೆ  ಕೊಳ್ಳೇಗಾಲ ತಾಲೋಕು ಪಾಳ್ಯ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಮೇರಿ ರತ್ನಕುಮಾರಿ ಕುಟುಂಬಕ್ಕು 30 ಲಕ್ಷ ರೂಪಾಯಿ ಪರಿಹಾರ ಮಂಜೂರು ಮಾಡಿದ್ದಾರೆ.

ವಿಮಾ ಪರಿಹಾರ ಮಂಜೂರು ಮಾಡಿದ ಆದೇಶ ಹೊರಬೀಳುತ್ತಿದ್ದಂತೆ ಮೃತ ರತ್ನಮ್ಮ ಅವರ ಪತಿ ವಿಕಲಚೇತನರಾದ  ನಂಜುಂಡಸ್ವಾಮಿ  ನ್ಯೂಸ್18 ಗೆ ಕೃತಜ್ಞತೆ ಸಲ್ಲಿದ್ದಾರೆ. ತೀವ್ರ ಅನಾರೋಗ್ಯ ದಿಂದ ಬಳಲುತ್ತಿದ್ದ ನನಗೆ  ಪತ್ನಿಯೇ ಆಸರೆಯಾಗಿದ್ದಳು.  ಆಕೆಯನ್ನು  ಕಳೆದು ಕೊಂಡು ದಿಕ್ಕು ತೋಚದಂತಾಗಿತ್ತು.  ವಿಮೆ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿ ನಾಲ್ಕು ತಿಂಗಳಾದರು ಪರಿಹಾರ ಸಿಕ್ಕಿರಲಿಲ್ಲ. ಇದೀಗ ನ್ಯೂಸ್ 18 ವರದಿಯ ಫಲವಾಗಿ 30 ಲಕ್ಷ ರೂಪಾಯಿ ವಿಮೆ ಪರಿಹಾರ ಮಂಜೂರಾಗಿದೆ. ಬೆನ್ನುಮೂಳೆ ಸಮಸ್ಯೆ ಹಾಗೂ ಸೋಡಿಯಂ ಕೊರತೆ ಯಿಂದ ಬಳಲುತ್ತಿರುವ ತಮ್ಮ ಚಿಕಿತ್ಸಾ ವೆಚ್ಚ ಹಾಗೂ ನನ್ನ ಮುಂದಿನ ಜೀವನಕ್ಕೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಚಾಮರಾಜನಗರದಲ್ಲಿ ಕೊರೋನಾ ವಾರಿಯರ್ ಕುಟುಂಬಕ್ಕೆ ಇನ್ನೂ ಸಿಗದ ಪರಿಹಾರ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜು ಕೋವಿಡ್ - ನಿಂದ ಮೃತಪಟ್ಟ ರತ್ನಮ್ಮ ಹಾಗೂ ಮೇರಿ ರತ್ನಕುಮಾರಿ ಅವರ ಕುಟುಂಬಗಳಿಗೆ ತಲಾ 30 ಲಕ್ಷ ರೂಪಾಯಿ ಮಂಜೂರಾತಿ ದೊರಕಿದ್ದು, ಶೀಘ್ರದಲ್ಲೇ ಅವರ ವಾರಸುದಾರರಿಗೆ ಹಣ ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದಾರೆ

ರಾಜ್ಯದಲ್ಲಿ ಕೊರೋನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ 28 ಅಂಗನವಾಡಿ ಕಾರ್ಯಕರ್ತೆಯರು ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದು ಕೇವಲ 3 ಮಂದಿಗೆ ಮಾತ್ರ  ಪರಿಹಾರ ದೊರಕ್ಕಿತ್ತು. ಇದೀಗ ನ್ಯೂಸ್ 18 ವರದಿ ಯ ಫಲವಾಗಿ ಚಾಮರಾಜನಗರ ಜಿಲ್ಲೆಯ ಇಬ್ಬರು ಕಾರ್ಯಕರ್ತೆಯರ ಕುಟುಂಬಗಳಿಗೆ ಪರಿಹಾರ ಮಂಜೂರಾಗಿದೆ.  ಉಳಿದವರ ಕುಟುಂಬಗಳು ಸಂಕಷ್ಟದಲ್ಲಿದ್ದು  ಕೂಡಲೇ ರಾಜ್ಯ ಸರ್ಕಾರ ತುರ್ತು ಗಮನ ಹರಿಸಬೇಕು ಎಂದು ಅವರು ಚಾಮರಾಜನಗರ ಜಿಲ್ಲಾ ಅಂಗನವಾಡಿ ಕಾರ್ಯಕರ್ತೆಯರ ಹಾಗು ಸಹಾಯಕಿಯರ ಸಂಘದ ಅಧ್ಯಕ್ಷೆ ಸುಜಾತ ಒತ್ತಾಯಿಸಿದ್ದಾರೆ.

(ವರದಿ: ಎಸ್.ಎಂ.ನಂದೀಶ್)

.

.
Published by:Seema R
First published: