news18-kannada Updated:January 27, 2021, 5:13 PM IST
ಚೈತ್ರಾ ಮತ್ತು ಮೋಹನ್ ಆರಾಧ್ಯ ಮದುವೆ ಫೋಟೋ.
ಮೈಸೂರು; ಆಕೆ ಕಳೆದ ಐದು ತಿಂಗಳ ಹಿಂದೆ ಪೊಲೀಸ್ ಹುದ್ದೆಯಲ್ಲಿದ್ದವರನ್ನು ಮದುವೆಯಾಗಿದ್ದಳು. ಜೀವನ ಪೂರ್ತಿ ಕೆಲಸದ ಭದ್ರತೆ ಇರುತ್ತೆ, ಮನೆ ಮಂದಿ ಜೊತೆ ನೆಮ್ಮದಿಯಿಂದ ಇರಬಹುದು ಎಂದು ಊಹಿಸಿಕೊಂಡಿದ್ದ ಆಕೆ ಗಂಡನ ಜೊತೆ ಸುಖವಾಗಿಯೇ ಇದ್ದಳು. ಆಕೆ ಮೂರು ತಿಂಗಳ ಗರ್ಭಿಣಿ ಸಹ ಆಗಿ ಇನ್ನೆನು ಪುಟ್ಟ ಮಗುವಿಗೆ ಜನ್ಮ ನೀಡುವವಳಿದ್ದಳು. ಆದರೆ ಆಕೆಗೆ ತಾನು ಬಯಸಿದ ಒಂದು ಸುಖ ಸಿಗಲೇ ಇಲ್ಲದಂತಾಗಿತ್ತು. ತನ್ನ ಹೆತ್ತವರನ್ನ ಬಿಟ್ಟ, ಗಂಡನ ಮನೆಗೆ ಬಂದಿದ್ದ ಆಕೆಯನ್ನ ತನ್ನ ಮಾವ ಸರಿಯಾಗಿ ಮಾತನಾಡಿಸುತ್ತಿರಲಿಲ್ಲ ಎಂಬ ಕೊರಗು ಕಾಡುತ್ತಲೇ ಇತ್ತು. ತನ್ನನ್ನು ದ್ವೇಷಿಸುತ್ತಿದ್ದ ಮಾವನ ಮೇಲೆ ಗಂಡನಿಗೆ ಪತ್ರವೊಂದನ್ನು ಬರೆದು ಆಕೆ ನೇಣಿಗೆ ಕೊರಳೊಡ್ಡಿದ್ದಾಳೆ. ಮಾವನ ಮೇಲಿನ ಸಿಟ್ಟಿಗೆ ಜಗತ್ತು ನೋಡದ ಮಗುವಿನ ಜೊತೆ ಮಸಣ ಸೇರಿದ್ದಾಳೆ.
ಪೋಟೋದಲ್ಲಿರುವಾಕೆಯ ಹೆಸರು ಚೈತ್ರಾ. ಈಕೆ ಹಾಸನ ಜಿಲ್ಲೆಯ ಹೊಳೆನರಸಿಪುರ ತಾಲೂಕಿನ ಕಬ್ಬುರಿನವಳು. ಹುಡುಗ ಸರ್ಕಾರಿ ನೌಕರಿಯಲ್ಲಿದ್ದಾನೆ. ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಂತ ಚೈತ್ರ ತಂದೆ ಮೈಸೂರಿನ ಮೋಹನ್ ಆರಾಧ್ಯ ಎಂಬುವರಿಗೆ 5 ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದರು. ಇಬ್ಬರು ಅನೂನ್ಯವಾಗಿ ಇದ್ದರು. ಆಕೆ ಮೂರು ತಿಂಗಳ ಗರ್ಭಿಣಿ ಸಹ ಆಗಿದ್ದಳು. ನೆಚ್ಚಿನ ಮಡದಿ, ಇಷ್ಟದ ಕೆಲಸ ಎಲ್ಲವು ಚೈತ್ರ ಬಾಳಲ್ಲಿ ಸೊಗಸಾಗಿಯೇ ಇತ್ತು. ಆದರೆ ಈ ಮಧ್ಯೆ ಮೋಹನಾರಾದ್ಯರ ತಂದೆ ಮಲ್ಲಾರಧ್ಯ ಚೈತ್ರಾಳನ್ನ ಸರಿಯಾಗಿ ಮಾತನಾಡಿಸುತ್ತಿರಲಿಲ್ಲವಂತೆ. ಜೊತೆಗೆ ತನ್ನ ಮಾವ ತನ್ನ ತಂದೆ ತಾಯಿಗೆ ಸರಿಯಾಗಿ ಗೌರವ ಕೊಡುತ್ತಿರಲಿಲ್ಲ ಎಂಬ ನೋವು ಚೈತ್ರಳನ್ನು ಕಾಡತೊಡಗಿದೆ. ಗರ್ಭಿಣಿಯಾಗಿದ್ದ ಚೈತ್ರಳಿಗೆ ಈ ನೋವು ಅತಿಯಾದ ಘಾಸಿ ಉಂಟುಮಾಡಿದೆ. ಇದರಿಂದ ಮನನೊಂದ ಚೈತ್ರಾ ಪತಿ ಠಾಣೆಗೆ ಕರ್ತವ್ಯಕ್ಕೆ ತೆರಳಿದ್ದಾಗ ಹೆಬ್ಬಾಳದ ಪೊಲೀಸ್ ಬಡಾವಣೆಯ ತಮ್ಮ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ನೇಣಿಗೆ ಕೊರಳೊಡಿದ್ದಾಳೆ.
ಸಾಯುವ ಮುನ್ನ ಆಕೆ ತನಗಾದ ನೋವನ್ನು ಪತ್ರದಲ್ಲಿ ಬರೆದಿದ್ದಾಳೆ. ತನ್ನ ನೋವಿನ ಕೊನೆ ಮಾತುಗಳನ್ನು ಅಕ್ಷರ ರೂಪದಲ್ಲಿ ಬರೆದು ಗಂಡನಿಗೆ ಕೊನೆಯ ಬಾರಿಗೆ ವಿದಾಯ ಹೇಳಿದ್ದಾಳೆ. ಆಕೆಯ ವಿದಾಯದ ನುಡಿಗಳು ಹೀಗಿವೆ.
ನಿಮ್ಮ ಅಪ್ಪನೇ ನನಗೆ ಈಗೆ ಆಗಲು ಕಾರಣ. ನಿಮ್ಮ ಅಪ್ಪನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದಿದ್ದರು. ಮದುವೆಯಾದ ಎರಡನೆ ದಿನಕ್ಕೆ ಮಾವ ನನ್ನನ್ನು ಸರಿಯಾಗಿ ಮಾತನಾಡಿಸಿಲ್ಲ. ಜೊತೆಗೆ ನನ್ನ ತಂದೆ ಹಾಗೂ ತಾಯಿಗೂ ಮಾವನವರಿಂದ ಗೌರವ ಸಿಕ್ಕಿಲ್ಲ. ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಅವರೇ ಕಾರಣ. ಊರಿಗೆ ಹೋಗುವಾಗ ಹೊಗಬೇಡ ಅಂದಿದ್ದು. ಮನೆಯಲ್ಲಿ ನನ್ನನ್ನು ಇನ್ಡೈರೆಕ್ಟ್ ಆಗಿ ಬೈದಿದ್ದು, ಚೈನ್ ಮಾಡಿಸಿಕೊಡಬೇಕು ಎಂದು ಬೈದಿದ್ದು, ನನ್ನ ಪೋನ್ ರೀಸಿವ್ ಮಾಡದೆ ಇದ್ದದ್ದು ಹೀಗೆ 10 ಕಾರಣ ನೀಡಿ ಸುದೀರ್ಘ ಪತ್ರ ಬರೆದಿರುವ ಚೈತ್ರ ನೇಣಿಗೆ ಕೊರಳೊಡ್ಡಿದ್ದಾಳೆ.
ಇದನ್ನು ಓದಿ: ಯಡಿಯೂರಪ್ಪ ವಿರುದ್ಧದ ಆಪರೇಷನ್ ಕಮಲ ಪ್ರಕರಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವರ್ಗ; ಮುಂದಿನ ವಾರ ವಿಚಾರಣೆ
ಹೌದು, ಚೈತ್ರಾ ತನಗಾದ ನೋವನ್ನು ಡೆತ್ ನೋಟಲ್ಲಿ ಬರೆದು ಸಾವನಪ್ಪಿದ್ದಾಳೆ. ಆದರೆ ತನ್ನ ಅಳಿಯನ್ನಲ್ಲದ ತಪ್ಪಿಗೆ ಅವನಿಗೇಕೆ ಶಿಕ್ಷೆ ಎಂಬ ಮಾನವೀಯತೆ ದೃಷ್ಟಿಯಿಂದ ಚೈತ್ರ ತಂದೆ ಅಳಿಯನ ಹಾಗೂ ಮಾವನ ವಿರುದ್ಧ ದೂರು ಕೊಡಲು ಮುಂದಾಗಿಲ್ಲ. ಬದಲಿಗೆ ಮಗಳಿಗೆ ಹೊಟ್ಟೆ ನೋವಿತ್ತು. ಹೊಟ್ಟೆ ನೋವಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಅಂತ ದೂರು ನೀಡಿದ್ದಾರೆ. ಸದ್ಯ ಹೆಬ್ಬಾಳು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಚೈತ್ರಳ ಡೆತ್ನೋಟ್ ಪೊಲೀಸರ ಕೈಗೆ ಸಿಕ್ಕಿದೆ.
ಸಾವಿಗೆ ನಾನಾ ಕಾರಣ ಎಂಬಂತೆ ಸುಖವಾಗಿ ಸಂಸಾರ ಮಾಡುತ್ತಿದ್ದ ನವವಿವಾಹಿತೆ ತನ್ನ ಮಾವ ಸರಿಯಾಗಿ ಮಾತನಾಡಿಸಲಿಲ್ಲ ಎಂಬ ಕಾರಣಕ್ಕೆ ನೇಣಿಗೆ ಶರಣಾಗಿದ್ದು ನಿಜಕ್ಕೂ ದುರಂತವೆ. ಆಕೆಯಷ್ಟೇ ಅಲ್ಲದೇ ಜಗತ್ತನ್ನು ನೋಡದ ಕಂದ ಕೂಡ ಆಕೆಯ ಜೊತೆಯೇ ಸಾವನಪ್ಪಿದ್ದು, ಸುಂದರ ಸಂಸಾರದ ಕನಸು ಕಂಡಿದ್ದ ಆ ಪೊಲೀಸ್ ಪೇದೆ ಇದೀಗ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
Published by:
HR Ramesh
First published:
January 27, 2021, 5:12 PM IST