New District Vijayanagar: ರಾಜ್ಯದ 31ನೇ ಜಿಲ್ಲೆಯಾಗಿ ಉದ್ಘಾಟನೆಗೊಂಡ ‘ವಿಜಯನಗರ‘; 2 ದಶಕಗಳ ನಿರಂತರ ಹೋರಾಟಕ್ಕೆ ಸಂದ ಜಯ

New District Vijayanagar: ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾಷಣದಲ್ಲಿ ಸಚಿವ ಆನಂದ್ ಸಿಂಗ್ ಅವರನ್ನ ಹಾಡಿ ಹೊಗಳಿದರು. ನೂತನ ಜಿಲ್ಲೆ ಗಾಂಧಿ ಜಯಂತಿ ದಿನ ಉದ್ಘಾಟನೆಯಾಗುತ್ತಿದೆ. ಸಚಿವ ಆನಂದ್ ಸಿಂಗ್ ಸಂತೋಷ ಪಟ್ಟಿದ್ದಾರೆ. ಇದು ಹಲವು ದಿನಗಳ ಹೋರಾಟದ ಫಲವಾಗಿದೆ ಎಂದರು.

ವಿಜಯನಗರ ಜಿಲ್ಲೆಯ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

ವಿಜಯನಗರ ಜಿಲ್ಲೆಯ ಉದ್ಘಾಟನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಬಳ್ಳಾರಿ(ಅ.03): ಅಖಂಡ ಬಳ್ಳಾರಿ ಇಬ್ಬಾಗ ಆಗ್ಬೇಕು,‌ ನೂತನ ಜಿಲ್ಲೆ ವಿಜಯನಗರ(New District Vijayanagar) ರಚನೆಯಾಗಬೇಕು ಎನ್ನುವ ಎರಡು ದಶಕಗಳ ನಿರಂತರ ಹೋರಾಟದ ಕನಸು ಶನಿವಾರ(ಅಕ್ಟೋಬರ್ 2) ಅಧಿಕೃತವಾಗಿ ನನಸಾಯಿತು. ವಿಜಯನಗರ ಸಾಮ್ರಾಜ್ಯ(Vijayanagar Empire)ದ ಗತ ವೈಭವದ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ(CM Basavaraj Bommai) ವಿಜಯನಗರ ಜಿಲ್ಲೆಯನ್ನು ಉದ್ಘಾಟನೆ ಮಾಡಿದರು. ಅಷ್ಟಕ್ಕೂ ಸುವರ್ಣಾಕ್ಷರಗಳಲ್ಲಿ ಬರೆದಿಡೋ ಕಾರ್ಯಕ್ರಮ ಹೇಗಿತ್ತು ಗೊತ್ತಾ..!

  ರಾಜ್ಯದ 31ನೇ ಜಿಲ್ಲೆಯಾಗಿ ಶನಿವಾರ ವಿಜಯನಗರ ಉದ್ಘಾಟನೆಗೊಂಡಿತು. ಗಾಂಧಿ ಜಯಂತಿ ದಿನವೇ ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ನೂತನ ಜಿಲ್ಲೆಯನ್ನು ಲೋಕಾರ್ಪಣೆ ಮಾಡಿದರು. 80ಕ್ಕೂ ಹೆಚ್ಚು ಕಲಾ ತಂಡಗಳ ಮೂಲಕ ನೂತನ ಜಿಲ್ಲೆ ಉದ್ಘಾಟನೆಗೆ ಮೆರಗು ನೀಡಿತ್ತು. ಹೊಸಪೇಟೆಯ ವಡಕರಾಯನ ದೇವಾಲಯ ಆರಂಭವಾದ ಮೆರವಣಿಗೆ ಸಂಜೆ 6 ಅಷ್ಟೊತ್ತಿಗೆ ಜಿಲ್ಲಾ ಕ್ರೀಡಾಂಗಣದ ವಿದ್ಯಾರಣ್ಯ ವೇದಿಕೆ ತಲುಪಿತು. ಕಂಸಾಳೆ ಡೊಳ್ಳುಕುಣಿತ ವೀರಗಾಸೆ ಸೇರಿದಂತೆ 80 ಕಲಾತಂಡಗಳ ಕಲೆ ಪ್ರದರ್ಶನದ ಸೊಬಗನ್ನು ಹೊಸಪೇಟೆ ಜನ ಕಣ್ತುಂಬಿಕೊಂಡರು.

  ಮೆರವಣಿಗೆ ನೋಡಲು ರಸ್ತೆಬದಿಯಲ್ಲಿ ಜನ ಕಿಕ್ಕಿರಿದು ಸೇರಿದ್ದರು.‌ ಜನದಟ್ಟಣೆ ಆಗದಂತೆ ತಡೆಯೋಕೆ ಸ್ವತ:  ಆನಂದ್ ಸಿಂಗ್ ಅವರೇ ಮುಂದಾದರು. ವಿದ್ಯಾರಣ್ಯ ವೇದಿಕೆಯಲ್ಲಿ ಶ್ರೀ ಕೃಷ್ಣದೇವರಾಯ ಪ್ರತಿಮೆ‌ ಹೂಗುಚ್ಚ ನೀಡಿ. ಬಳಿಕ ಸಿಎಂ ಬೊಮ್ಮಾಯಿ ನೂತನ ಜಿಲ್ಲೆ ಉದ್ಘಾಟಿಸಿದರು. ವಿಜಯನಗರ ಸಂಪತ್ಬರಿತ ಇತಿಹಾಸ ಹೊಂದಿದೆ ಈಗಲೂ ಐತಿಹಾಸಿಕ ನೆಲೆಬೀಡಾಗಿದೆ. ಸರ್ಕಾರ ಸಮಗ್ರ ವಿಜಯನಗರ ಅಭಿವೃದ್ಧಿಗೆ ಸಿದ್ಧ ಅಂತಾ ಸಿಎಂ ವೇದಿಕೆಯಲ್ಲಿ ಹೇಳಿದರು.

  ಇನ್ನು ಕೋವಿಡ್ ಹಿನ್ನಲೆಯಲ್ಲಿ ಕಡಿಮೆ ಜನಸಂಖ್ಯೆ ಸೇರಿಸುವ ಉದ್ದೇಶ ಜಿಲ್ಲಾಡಳಿತ ಮಾಡಿಕೊಂಡಿತು. ಆದ್ರೆ ಸಾವಿರಾರು ಸಂಖ್ಯೆಯಲ್ಲಿ ವೇದಿಕೆಯತ್ತ ಬರುತ್ತಿದ್ದಂತೆ ಜನರನ್ನು ಕಂಟ್ರೋಲ್ ಮಾಡುವುದು ಪೊಲೀಸರಿಗೆ ಹರಸಾಹಸವಾಗಿತ್ತು. ಇನ್ನು ಹೋರಾಟ ನಡೆದು ಬಂದ ಹಾದಿಯ ಕುರಿತು ಉಜ್ಜಯಿನಿ ಶ್ರೀಗಳು ಮೆಲುಕು ಹಾಕಿದರು. ವಿಜಯನಗರದ ಪಶ್ಚಿಮ ತಾಲೂಕುಗಳು ನೀರಾವರಿಯಿಂದ ಮುಚ್ಚಿಕೆ ಆಗಿವೆ ಕೃಷ್ಣ, ಕಾವೇರಿಗೆ ಹೇಗೆ ನೀರಾವರಿ ಯೋಜನೆಗಳ ಆಗುತ್ತದೆ ವಿಜಯನಗರ ಜಿಲ್ಲೆಯಲ್ಲಿ ಆಗಬೇಕು ಅಂತ ಸರ್ಕಾರಕ್ಕೆ ಕಿವಿಮಾತು ಹೇಳಿದರು.

  ಇದನ್ನೂ ಓದಿ:Cauvery Theerthodbhava 2021: ಈ ವರ್ಷವೂ ತೀರ್ಥೋದ್ಭವದಲ್ಲಿ ಭಾಗವಹಿಸಲು ಮುಕ್ತ ಅವಕಾಶವಿಲ್ಲ..!

  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭಾಷಣದಲ್ಲಿ ಸಚಿವ ಆನಂದ್ ಸಿಂಗ್ ಅವರನ್ನ ಹಾಡಿ ಹೊಗಳಿದರು. ನೂತನ ಜಿಲ್ಲೆ ಗಾಂಧಿ ಜಯಂತಿ ದಿನ ಉದ್ಘಾಟನೆಯಾಗುತ್ತಿದೆ. ಸಚಿವ ಆನಂದ್ ಸಿಂಗ್ ಸಂತೋಷ ಪಟ್ಟಿದ್ದಾರೆ. ಇದು ಹಲವು ದಿನಗಳ ಹೋರಾಟದ ಫಲವಾಗಿತ್ತು. ಆನಂದ್ ಸಿಂಗ್ ಕೂಡ ರಾಜಕೀಯ ಬದಿಗಿಟ್ಟು ಜನರ ಆಶೋತ್ತರ ಜಿಲ್ಲೆ ಹೋರಾಟದಲ್ಲಿ ಭಾಗಿಯಾದರು‌. ಜಿಲ್ಲೆಯ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ತಂದಿದ್ದಾರೆ ಮುಂದಿನ ದಿನಗಳಲ್ಲಿ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಿಎಂ ಬೊಮ್ಮಾಯಿ  ಶ್ರಮಿಸಲಿದ್ದಾರೆ ಅಂತ ಹೇಳಿದರು.

  ಇನ್ನು ಕಾರ್ಯಕ್ರಮದ ವೇದಿಕೆಯಲ್ಲಿ ಬಳ್ಳಾರಿ ಜಿಲ್ಲೆ ಶಾಸಕರು ಗೈರಾಗುವ ಮೂಲಕ ತಮ್ಮ ಮುನಿಸು ಪ್ರದರ್ಶನ ಮಾಡಿದರು. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳು ಎರಡು ದೇಹ ಒಂದು ಜೀವ ಪಿ ಹಂತದವರೆಗೂ ನನ್ನನ್ನ ಬೆಳೆಸಿದ್ದು ಇವೆ. ಮುಂದೆಯೋ ಕೂಡ ಅಭಿವೃದ್ಧಿಗೆ ಶ್ರಮಿಸುತ್ತೇವೆ‌. ಆತ್ಮೀಯ ಗೆಳೆಯ ಆನಂದ್ ಸಿಂಗ್ ಅವರಿಗೆ ಇದು ಐತಿಹಾಸಿಕ ಘಳಿಗೆ ಎಂದು ಶ್ರೀರಾಮುಲು ಮಾತನಾಡಿದರು.

  ಆನಂದ್ ಸಿಂಗ್ ಭಾಷಣ ಮಾಡುತ್ತಿದ್ದಂತೆ ಜನರು ಚಪ್ಪಾಳೆ ತಟ್ಟಿದರು. ಇಂದಿನ ಈ ಕಾರ್ಯಕ್ರಮ ಸುವರ್ಣಾಕ್ಷರದಲ್ಲಿ ಬರೆದಿಡಬೇಕು. ಜಿಲ್ಲೆಯ ಜುವಾರಿ ಬಿಎಸ್‌ವೈ ಅಂತ ಹೇಳಿದ್ರು. ಯಡಿಯೂರಪ್ಪ ನಿರ್ಧಾರದಿಂದಲೇ ಜಿಲ್ಲೆ ಆಯಿತು. ಹೋರಾಟಕ್ಕೆ ಪ್ರೇರಣೆ ನೀಡಿದವರು ಉಜ್ಜಯಿನಿ ಶ್ರೀಗಳು. ಸ್ವಾಮೀಜಿಗಳ ನಿಯೋಗ ತೆಗೆದುಕೊಂಡು ಸಿಎಂ ಬಳಿ ಹೋಗಿದ್ದೆ, ಒಂದಿನ ಕ್ಯಾಬಿನೆಟ್ ಮಂತ್ರಿಗಳು ಕೂಡ ನನಗೆ ಸಾಕಾರ ನೀಡಿದ್ರು ಅಂತ ಸಚಿವ ಆನಂದ್ ಸಿಂಗ್ ಮಾತನಾಡಿದ್ರು. ಜನರಿಗಾಗಿ ಹಠ ಮಾಡಿ ಜಿಲ್ಲೆ ಮಾಡಿರುವೆ ಎಂದ ಅವರು, ಎರಡು ತಿಂಗಳ ಹಿಂದೆ ಮೃತಪಟ್ಟ ತಂದೆಯನ್ನ ನೆನೆದು ಗದ್ಗದಿತರಾದರು.

  ಇತ್ತ ವಿಜಯನಗರ ವೈಭವದ ಜಗಮಗಿಸುವ ವೇದಿಕೆಯಲ್ಲಿ ನೂತನ ಇತಿಹಾಸಕ್ಕೆ ಸಾಕ್ಷಿ ಆಯ್ತು. ಸಂಜೆ ವೇಳೆಗೆ ಮನರಂಜನಾ ಕಾರ್ಯಕ್ರಮಗಳು ಕೂಡ ನಡೆದವು.  ಒಟ್ಟಿನಲ್ಲಿ ಹಂಪಿ ಸ್ಮಾರಕಗಳಿಗೆ ಹೋಲುವ ವಿದ್ಯಾರಣ್ಯ ವೇದಿಕೆಯಲ್ಲಿ ಸರ್ಕಾರದ ಅಧಿಕೃತ ಆದೇಶ ಪತ್ರ ಬಿಡುಗಡೆ ಮೂಲಕ ಸಿಎಂ ನೂತನ ಜಿಲ್ಲೆಯ ಚಾಲನೆ ಲೋಕಾರ್ಪಣೆ ಮಾಡಿದರು. ಶನಿವಾರದ ಕಾರ್ಯಕ್ರಮ ವಿಜಯನಗರ ಜಿಲ್ಲೆಯಲ್ಲಿ ಹರ್ಷದ ಪರ್ವವೇ ಬಂದಿಳಿದಂತಿತ್ತು.

  • ವರದಿ: ವಿನಾಯಕ ಬಡಿಗೇರ

  Published by:Latha CG
  First published: