ಚಿಕ್ಕಮಗಳೂರು(ನವೆಂಬರ್. 27): ನವ ಜೋಡಿವೊಂದು ಮಂಗಗಳಿಗೆ ಹಣ್ಣು-ಹಂಪಲು ನೀಡಿ ಖುಷಿಪಟ್ಟ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್ ನಲ್ಲಿ ನಡೆಯಿತು. ನಿನ್ನೆ ಬಣಕಲ್ ನ ಜಯಪಾಲ್ ಎಂಬುವವರು ಅನಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮನೆಯಲ್ಲಿ ನೆಂಟರು, ಸ್ನೇಹಿತರು ಇದ್ದರೂ ಕೂಡ ಪರಿಸರ, ಪ್ರಾಣಿ ಪ್ರಿಯರಾಗಿರುವ ಜಯಪಾಲ್, ಇಂದು ಹೆಂಡತಿ ಜೊತೆಗೆ ಹಣ್ಣು ಹಂಪಲಗಳನ್ನು ಹಿಡಿದುಕೊಂಡು ಸೀದಾ ಚಾರ್ಮಾಡಿ ಘಾಟಿಗೆ ಆಗಮಿಸಿದರು. ವಧು-ವರರು ವಾನರ ಸೇನೆಗೆ ಬಾಳೆಹಣ್ಣು, ಸೇಬು, ಟೊಮ್ಯಾಟೊ ಮುಂತಾದ ಹಣ್ಣುಗಳನ್ನು ನೀಡಿ ಹಸಿವನ್ನ ತಣಿಸಿದರು.
ಹಣ್ಣು ಹಂಪಲುಗಳನ್ನು ನೋಡುತ್ತಲೇ ಮಂಗಗಳು, ತಾ ಮುಂದು ನಾ ಮುಂದು ಅಂತ ಹಣ್ಣುಗಳನ್ನು ತಿಂದು ಹಸಿವನ್ನ ನೀಗಿಸಿಕೊಂಡವು. ಮಂಗಗಳು ಚಾರ್ಮಾಡಿ ಘಾಟ್ ನ ರಸ್ತೆಬದಿಯ ತಡೆಗೋಡೆ ಮೇಲೆ ಸಾಲಾಗಿ ಕುಳಿತು ಹಣ್ಣನ್ನ ತಿನ್ನುವ ದೃಶ್ಯ ಕಣ್ಣಿಗೆ ಇಂಪಾಗಿತ್ತು.
ಇದನ್ನು ಓದಿ : ಗ್ರಾಮೀಣಾಭಿವೃದ್ಧಿಗೆ ಕಾಂಗ್ರೆಸ್-ಜೆಡಿಎಸ್ ಕೊಡುಗೆ ಶೂನ್ಯ: ಡಿಸಿಎಂ ಅಶ್ವತ್ಹನಾರಾಯಣ
ಹಣ್ಣುಗಳನ್ನು ವಧು-ವರರ ಕೈಯಿಂದ ಕಿತ್ಕೊಂಡು, ಮಂಗಗಳು ತಿನ್ನುವುದನ್ನ ನೋಡಿ ನವಜೋಡಿ ಖುಷಿಪಟ್ಟರು. ಮಂಗಗಳಿಗೆ ಹಣ್ಣು-ಹಂಪಲು ಕೊಡಲು ದೂರದ ಊರಿಂದ ವಧು-ವರರು ಬಂದಿದನ್ನ ನೋಡಿ, ಪ್ರವಾಸಿಗರು ಮೆಚ್ಚುಗೆ ವ್ಯಕ್ತಪಡಿಸಿದರು. ಮೂಕ ಪ್ರಾಣಿಗಳಿಗೆ ಹಸಿವು ನೀಗಿಸಿದ ಆತ್ಮತೃಪ್ತಿ ನವ ಜೋಡಿದಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ