ಧಾರೆ ಮುಗಿಯುತ್ತಿದ್ದಂತೆ ಹಸೆಮಣೆಯಿಂದ ಎದ್ದು ಮದುವೆ ಉಡುಗೆಯಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಬಂದ ನವ ವಧು!
ಪತಿ ಸುರೇಶ್ ಕೂಡ ಮದುವೆ ಯಾವಾಗ ಬೇಕಾದರೂ ಆಗಬಹುದು. ಆದರೆ ಪರೀಕ್ಷೆಗಳು ಮತ್ತೆ ಮತ್ತೆ ಸಿಗೋದಿಲ್ಲ. ಹೀಗಾಗಿ ನಾನೇ ಸ್ವತಃ ಪರೀಕ್ಷೆಗೆ ಕರೆದುಕೊಂಡು ಬಂದಿದ್ದೇನೆ ಎಂದರು. ಒಟ್ಟಿನಲ್ಲಿ ಅತ್ತ ಹಸೆಮಣೆ ಏರಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಮದುವೆ ಉಡುಗೆಯಲ್ಲೇ ವಧು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು.
ಕೊಡಗು: ಮದುವೆ ಅಂದರೆ ಜೀವನದಲ್ಲಿ ಒಂದು ಬಾರಿ ಬರುವ ಮಹತ್ವದ ಘಳಿಗೆ. ಮದುವೆಯ ಹಿಂದಿನ ದಿನಗಳು, ಮದುವೆಯ ದಿನ ಹಾಗೂ ಮದುವೆ ನಂತರದಲ್ಲೂ ಹಲವು ದಂಪತಿಗಳು ಯಾವುದೇ ಇನ್ನಿತರ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಆದರೆ ಇಲ್ಲೊಬ್ಬ ನವ ವಧು ಧಾರಾ ಮೂಹೂರ್ತ ಮುಗಿಯುತ್ತಿದ್ದಂತೆ ಸ್ಪರ್ಧಾತ್ಮಕ ಪರೀಕ್ಷೆಗೆ ಮದುವೆಯ ಉಡುಗೆಯಲ್ಲಿಯೇ ತೆರಳಿ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಮಡಿಕೇರಿಯ ಅಶೋಕಪುರಂ ಬಡಾವಣೆಯ ಸ್ವಾತಿ ಹೀಗೆ ಹಸೆಮಣೆ ಏರಿ, ನವಜೀವನಕ್ಕೆ ಕಾಲಿರಿಸಿದ ತಕ್ಷಣವೇ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದವರು. ಇಂದು ಮಡಿಕೇರಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಕೊಡಗು ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳಿಗೆ ಪರೀಕ್ಷೆ ನಡೆಯುತಿತ್ತು. ಈ ಪರೀಕ್ಷೆಗೆ ಸ್ವಾತಿ ಮದುವೆ ಗೆಟಪ್ ನಲ್ಲೇ ಹಾಜರಾಗಿ ಎಲ್ಲರ ಗಮನ ಸೆಳೆದರು.
ಸ್ವಾತಿ ಅವರ ಮದುವೆ ಕೆಲವು ತಿಂಗಳ ಹಿಂದೆಯೇ ನವೆಂಬರ್ 22 ಕ್ಕೆಂದು ನಿಗಧಿಯಾಗಿತ್ತು. ಆ ಬಳಿಕ ಕೊಡಗು ಡಿಸಿಸಿ ಬ್ಯಾಂಕಿನ ವಿವಿಧ ಹುದ್ದೆಗಳ ಭರ್ತಿಗಾಗಿ ಪರೀಕ್ಷೆ ಕೂಡ ಅದೇ ದಿನಾಂಕಕ್ಕೆ ನಿಗಧಿಯಾಯಿತು. ಹೀಗಾಗಿ ಬೇರೆ ದಾರಿ ಇಲ್ಲದೆ ಸ್ವಾತಿ ಹಸಮಣೆಯಿಂದ ನೇರವಾಗಿ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆಗೆ ಹಾಜರಾದರು. ಬೆಳಿಗ್ಗೆ 6 ಗಂಟೆಯಿಂದ 7 ಗಂಟೆವರೆಗೆ ಒಂದು ಮುಹೂರ್ತವಿದ್ದರೆ, ಮಧ್ಯಾಹ್ನ 12 ಗಂಟೆಗೆ ಮತ್ತೊಂದು ಮುಹೂರ್ತವಿತ್ತು. ಮೊದಲು 12 ಗಂಟೆ ಮುಹೂರ್ತದಲ್ಲೇ ಧಾರೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪರೀಕ್ಷೆ ಬಂದಿದ್ದರಿಂದ ಬೆಳಿಗ್ಗೆ 6 ಗಂಟೆ ಮುಹೂರ್ತದಲ್ಲೇ ಧಾರೆ ಮುಗಿಸಿ ಬಳಿಕ ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ನಂತರ ಮತ್ತೆ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರ್ಧರಿಸಿ ಪರೀಕ್ಷೆಗೆ ಬಂದಿದ್ದರು. ಪರೀಕ್ಷೆಗಾಗಿ ಕಳೆದ ಒಂದು ವರ್ಷದಿಂದಲೇ ತಯಾರಿ ನಡೆಸಿದ್ದೆ. ಹೀಗಾಗಿ ಪರೀಕ್ಷೆಗೆ ಹಾಜರಾಗಲೇಬೇಕೆಂದು ನಿರ್ಧರಿಸಿ ಪರೀಕ್ಷೆಗೆ ಬಂದಿದ್ದೇನೆ. ಆದರೆ ಎರಡು ಒಂದೇ ದಿನ ಇರುವುದರಿಂದ ಸ್ವಲ್ಪ ಒತ್ತಡವಿತ್ತು. ಆದರೂ ಇಂತಹ ಚಾನ್ಸ್ ಯಾರಿಗೂ ಸಿಗೋದಿಲ್ಲ ಎಂದು ವಧು ಖುಷಿಯಿಂದಲೇ ಪರೀಕ್ಷೆಗೆ ಹಾಜರಾದರು.
ಇನ್ನು ಪತಿ ಸುರೇಶ್ ಕೂಡ ಮದುವೆ ಯಾವಾಗ ಬೇಕಾದರೂ ಆಗಬಹುದು. ಆದರೆ ಪರೀಕ್ಷೆಗಳು ಮತ್ತೆ ಮತ್ತೆ ಸಿಗೋದಿಲ್ಲ. ಹೀಗಾಗಿ ನಾನೇ ಸ್ವತಃ ಪರೀಕ್ಷೆಗೆ ಕರೆದುಕೊಂಡು ಬಂದಿದ್ದೇನೆ ಎಂದರು. ಒಟ್ಟಿನಲ್ಲಿ ಅತ್ತ ಹಸೆಮಣೆ ಏರಿದ ಕೆಲವೇ ನಿಮಿಷಗಳಲ್ಲಿ ಮತ್ತೆ ಮದುವೆ ಉಡುಗೆಯಲ್ಲೇ ವಧು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವ ಮೂಲಕ ಎಲ್ಲರ ಗಮನ ಸೆಳೆದರು.
Published by:HR Ramesh
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ