'ಬಿಎಚ್' ಭಾರತ್ ಸರಣಿ ವಾಹನ ಸಂಖ್ಯೆಗೆ ಅರ್ಜಿ ಸಲ್ಲಿಸಬೇಕೆ; ಹಂತ-ಹಂತದ ವಿವರ ಇಲ್ಲಿದೆ

ಹಂತ 1: ಬೇರೆ ರಾಜ್ಯದಲ್ಲಿ ಹೊಸ ನೋಂದಣಿ ಸಂಖ್ಯೆಯನ್ನು ನಿಯೋಜಿಸಲು ವಾಹನ ಮಾಲೀಕರಿಗೆ ಮೊದಲು ಮೂಲ ರಾಜ್ಯದಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್' (‘No Objection Certificate’) ಅಗತ್ಯವಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ವಾಹನಗಳನ್ನು ಯಾವುದೇ ತಲೆನೋವಿಲ್ಲದೆ ತಡೆರಹಿತ ವರ್ಗಾವಣೆಯನ್ನು ಸುಲಭಗೊಳಿಸಲು, ಆಗಸ್ಟ್ 28 ರಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೊಸ ವಾಹನಗಳಿಗೆ ಹೊಸ ನೋಂದಣಿ ಪದ್ದತಿಯನ್ನು ಪರಿಚಯಿಸಲಾಗಿದೆ ಎಂದು ಹೇಳಿದೆ. ಅಂದರೆ ಭಾರತ್ ಸರಣಿ (ಬಿಎಚ್-ಸರಣಿ) ನೋಂದಣಿ ಪದ್ದತಿಯನ್ನು ಪರಿಚಯಿಸಲಾಗುತ್ತಿದೆ ಎಂದು ಹೇಳಲಾಗಿದೆ. ಮಾಲೀಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಂಡರೆ ಬಿಎಚ್ ಮಾರ್ಕ್ ಹೊಂದಿರುವ ವಾಹನಕ್ಕೆ ಹೊಸ ನೋಂದಣಿ ಗುರುತು ಮಾಡಿಸುವ ಅಗತ್ಯವಿಲ್ಲ ಎಂದು ಸಾರಿಗೆ ಸಚಿವಾಲಯ ಹೇಳಿದೆ.

  ರಕ್ಷಣಾ ಸಿಬ್ಬಂದಿಗೆ ಈ ಸೌಲಭ್ಯವು ಸ್ವಯಂಪ್ರೇರಿತ ಆಧಾರದ ಮೇಲೆ ಲಭ್ಯವಿರುತ್ತದೆ ಎಂದು ಸಚಿವಾಲಯ ಹೇಳಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರರು, ಮತ್ತು ಕೇಂದ್ರ ಮತ್ತು State PSUಗಳು ಸಹ ಈ ಸೇವೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇವುಗಳ ಜೊತೆಗೆ, ಖಾಸಗಿ ವಲಯದ ಕಂಪನಿಗಳು, 4 ಅಥವಾ ಹೆಚ್ಚಿನ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಮ್ಮ ಕಚೇರಿಗಳನ್ನು ಹೊಂದಿವೆ.

  ವಾಹನವನ್ನು ನೋಂದಾಯಿಸಲು ಪ್ರಯಾಣಿಕ ವಾಹನ ಬಳಕೆದಾರರು ಈ ಕೆಳಗೆ ಹೇಳಿರುವ ಹಂತಗಳನ್ನು ಅನುಸರಿಸಬೇಕು:


  ಹಂತ 1: ಬೇರೆ ರಾಜ್ಯದಲ್ಲಿ ಹೊಸ ನೋಂದಣಿ ಸಂಖ್ಯೆಯನ್ನು ನಿಯೋಜಿಸಲು ವಾಹನ ಮಾಲೀಕರಿಗೆ ಮೊದಲು ಮೂಲ ರಾಜ್ಯದಿಂದ 'ನೋ ಆಬ್ಜೆಕ್ಷನ್ ಸರ್ಟಿಫಿಕೇಟ್'
  (‘No Objection Certificate’) ಅಗತ್ಯವಿದೆ.

  ಹಂತ 2: ಹೊಸ ರಾಜ್ಯದಲ್ಲಿ pro-rata ಆಧಾರದ ಮೇಲೆ ರಸ್ತೆ ತೆರಿಗೆಯನ್ನು ಪಾವತಿಸಿದ ನಂತರ, ಹೊಸ ನೋಂದಣಿ ಅಂಕವನ್ನು ನಿಗದಿಪಡಿಸಲಾಗುತ್ತದೆ.

  ಹಂತ 3: ಮೂರನೇ ಹಂತದಲ್ಲಿ, ಮೂಲ ರಾಜ್ಯದಲ್ಲಿ ರಸ್ತೆ ತೆರಿಗೆ ಮರುಪಾವತಿಗಾಗಿ ಅರ್ಜಿ ಸಲ್ಲಿಸುವುದು. ಮಾತೃ ರಾಜ್ಯದಿಂದ ಮರುಪಾವತಿ ಪಡೆಯುವ ಅವಕಾಶವು ಬಹಳ ನಿಧಾನದ ಹಾಗು ಬೇಸರದ ಪ್ರಕ್ರಿಯೆ ಎಂದು ಹೇಳಲಾಗಿದೆ.

  ಭಾರತ್ ಸರಣಿಯ ಸ್ವರೂಪ ಹೀಗಿರಲಿದೆ (BH- ಸರಣಿ) ನೋಂದಣಿ ಗುರುತು YY BH #### XX.

  ಈ ಚಿಹ್ನೆಯಲ್ಲಿ, YY ಎಂದರೆ ಮೊದಲ ನೋಂದಣಿಯ ವರ್ಷ, BH ಎಂದರೆ ಭಾರತ್ ಸರಣಿಯ ಕೋಡ್, ಆದರೆ ####- 0000 ರಿಂದ 9999 ರವರೆಗಿನ ಸಂಖ್ಯೆ (randomized). XX ಗೆ ಸಂಬಂಧಿಸಿದಂತೆ,  ವರ್ಣಮಾಲೆಗಳು (AA ನಿಂದ ZZ) ಪ್ರಾರಂಭವಾಗುತ್ತದೆ.


  ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಈ ಯೋಜನೆಯು ಸರಿಯಾಗಿ ಕಾರ್ಯರೂಪಕ್ಕೆ ಬಂದರೆ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ವೈಯಕ್ತಿಕ ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುತ್ತದೆ.

  ಇದನ್ನೂ ಓದಿ: ’’ಮನಸ್ಸಿಗೆ ಶಾಂತಿ ಬೇಕು’’ ಎಂದು ಮಥುರಾಕ್ಕೆ ಹೊರಟ ಲಾಲು ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್

  ನಿಲ್ದಾಣದ ಸ್ಥಳಾಂತರವು ಸರ್ಕಾರಿ ಮತ್ತು ಖಾಸಗಿ ವಲಯದ ಉದ್ಯೋಗಿಗಳಿಗೆ ಹೆಚ್ಚಿನ ಉಪಯೋಗವಾಗಲಿದೆ. ಮೋಟಾರು ವಾಹನ ತೆರಿಗೆಯನ್ನು ಹದಿನಾಲ್ಕನೇ ವರ್ಷ ಪೂರ್ಣಗೊಂಡ ನಂತರ ವಾರ್ಷಿಕವಾಗಿ ವಿಧಿಸಲಾಗುತ್ತದೆ ಎಂದು ಸಹ ತಿಳಿದುಬಂದಿದೆ. ಮೊತ್ತವು ಆ ವಾಹನಕ್ಕೆ ಮೊದಲು ವಿಧಿಸಲಾಗುತ್ತಿದ್ದ ಒಟ್ಟು ಮೊತ್ತದ ಅರ್ಧದಷ್ಟು ಇರುತ್ತದೆ ಎಂದು ಹೇಳಲಾಗುತ್ತಿದೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: