Fact Check: ಗಣೇಶನ ವಿಗ್ರಹ ಹಿಡಿದ ಎಬಿ ಡಿವಿಲಿಯರ್ಸ್‌ ಫೋಟೋ ವೈರಲ್: ಇದರ ಸತ್ಯಾಸತ್ಯತೆ ಹೀಗಿದೆ..

AB de Villiers: ಈ ವೈರಲ್ ಚಿತ್ರದ ಬ್ಯಾಕ್‌ಗ್ರೌಂಡ್‌ನಲ್ಲಿ "ಚಾಂಪಿಯನ್ಸ್ ಟ್ರೋಫಿ" ಮತ್ತು "2017" ಅನ್ನು ನೋಡಬಹುದು. ಈ ಚಿತ್ರವು 'ಐಸಿಸಿ ಚಾಂಪಿಯನ್ಸ್ ಟ್ರೋಫಿ 2017'ಗೆ ಸಂಬಂಧಿಸಿರಬಹುದು ಎಂಬ ಸುಳಿವನ್ನು ಇದು ನಮಗೆ ನೀಡುತ್ತದೆ.

ವೈರಲ್ ಫೋಟೋ

ವೈರಲ್ ಫೋಟೋ

  • Share this:

ಗಣೇಶ ಚತುರ್ಥಿ ಹಬ್ಬ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಜನಪ್ರಿಯವಾಗಿದೆ. ಅಲ್ಲದೆ, ಹಿಂದೂಗಳು ಮಾತ್ರವಲ್ಲ, ಇತರ ಧರ್ಮದವರೂ ಹಬ್ಬ ಆಚರಿಸುವುದನ್ನು ನೋಡಬಹುದು. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಫೋಟೋಗಳು ವೈರಲ್‌ ಆಗುತ್ತಿರುತ್ತವೆ. ಇದೇ ರೀತಿ, ಈ ಬಾರಿಯ ಗಣೇಶ ಚತುರ್ಥಿಯ ಸಂದರ್ಭದಲ್ಲಿ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್(AB de Villiers) ಗಣಪತಿ ವಿಗ್ರಹವನ್ನು ಹಿಡಿದಿರುವ ಚಿತ್ರವು ವೈರಲ್ ಆಗಿದೆ. ಜನರು ಆ ಫೋಟೋವನ್ನು #happyganeshchaturthi ಹ್ಯಾಶ್‌ಟ್ಯಾಗ್‌ಗಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಶೇರ್‌ ಮಾಡುತ್ತಿದ್ದಾರೆ. ಕ್ರಿಕೆಟಿಗನ ಇನ್‌ಸ್ಟಾಗ್ರಾಮ್ ಅಭಿಮಾನಿಗಳ ಪುಟವೊಂದು "ಹ್ಯಾಪಿ ಗಣೇಶ ಚತುರ್ಥಿ" (Happy Ganesh Chaturthi) ಎಂಬ ಶೀರ್ಷಿಕೆಯೊಂದಿಗೆ ಈ ಚಿತ್ರವನ್ನು ಪೋಸ್ಟ್ ಮಾಡಿದೆ.


ಆದರೆ ಈ ವೈರಲ್‌ ಫೋಟೋ ಅಸಲಿಯಲ್ಲ ನಕಲಿ ಎಂಬುದು ತಿಳಿದುಬಂದಿದೆ.. ಮೂಲ ಚಿತ್ರದಲ್ಲಿ, ಎಬಿ ಡಿವಿಲಿಯರ್ಸ್ ಗಣೇಶ ಮೂರ್ತಿಯನ್ನಲ್ಲ. ಅದರ ಬದಲಾಗಿ ಟ್ರೋಫಿಯನ್ನು ಹಿಡಿದಿರುವುದನ್ನು ಕಾಣಬಹುದು. ಈ ಚಿತ್ರವನ್ನು 'ಐಸಿಸಿ ಚಾಂಪಿಯನ್ಸ್ ಟ್ರೋಫಿ 2017' ಪಂದ್ಯಾವಳಿಯಲ್ಲಿ ಲಂಡನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಗೆಯಲಾಗಿದೆ.


ಆದರೆ ಎಡಿಟ್‌ ಮಾಡಲಾಗಿರುವ ವೈರಲ್‌ ಪೋಸ್ಟ್‌ನಲ್ಲಿ "ಈ ವರ್ಷ ಟ್ರೋಫಿಯೊಂದಿಗೆ ಬಪ್ಪ ಆರ್‌ಸಿಬಿಯನ್ನು ಆಶೀರ್ವದಿಸಲಿ!" ಎಂದು ಕಮೆಂಟ್‌ ವಿಭಾಗದಲ್ಲೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: ಭದ್ರತೆ ಒದಗಿಸುವ ಸಿಬ್ಬಂದಿಯಿಂದಲೇ ನಿವಾಸಿಯ ಮೇಲೆ ಹಲ್ಲೆ: ವಿಡಿಯೋ ವೈರಲ್..!

AFWA ತನಿಖೆ
ಈ ವೈರಲ್ ಚಿತ್ರದ ಬ್ಯಾಕ್‌ಗ್ರೌಂಡ್‌ನಲ್ಲಿ "ಚಾಂಪಿಯನ್ಸ್ ಟ್ರೋಫಿ" ಮತ್ತು "2017" ಅನ್ನು ನೋಡಬಹುದು. ಈ ಚಿತ್ರವು 'ಐಸಿಸಿ ಚಾಂಪಿಯನ್ಸ್ ಟ್ರೋಫಿ 2017'ಗೆ ಸಂಬಂಧಿಸಿರಬಹುದು ಎಂಬ ಸುಳಿವನ್ನು ಇದು ನಮಗೆ ನೀಡುತ್ತದೆ.

ವೈರಲ್ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದ ನಂತರ, ಅದನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಜೂನ್ 3, 2017 ರಂದು ಟ್ವೀಟ್ ಮಾಡಿದೆ ಎಂಬುದು ತಿಳಿದು ಬಂದಿದೆ. ಮೂಲ ಚಿತ್ರದಲ್ಲಿ, ಡಿವಿಲಿಯರ್ಸ್ ವಿಗ್ರಹವಲ್ಲ. ಆದರೆ ಟ್ರೋಫಿಯನ್ನು ಹಿಡಿದಿರುವುದನ್ನು  ಸಾಬೀತಾಗಿದೆ.


ಈ ಚಿತ್ರವನ್ನು ಜೂನ್ 2, 2017ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತೆಗೆಯಲಾಗಿದೆ. ಈ ಪತ್ರಿಕಾಗೋಷ್ಠಿಯಲ್ಲಿ, ಡಿವಿಲಿಯರ್ಸ್ (ಆ ಸಮಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕರಾಗಿದ್ದರು) ಶ್ರೀಲಂಕಾದೊಂದಿಗೆ ಅವರ ತಂಡದ ಪಂದ್ಯದ ಮುನ್ನಾ ದಿನದಂದು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು.


ಜೂನ್ 3,2017 ರಂದು ಬ್ರಿಟಿಷ್ ಸುದ್ದಿ ವೆಬ್‌ಸೈಟ್ 'ಎಕ್ಸ್‌ಪ್ರೆಸ್' ಈ ಫೋಟೋ ಜತೆಗೆ ವರದಿಯೊಂದನ್ನು ಪಬ್ಲಿಷ್‌ ಮಾಡಿತ್ತು.

ಇತ್ತೀಚೆಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫ್ರಾಂಚೈಸಿ ಯುಪಿಎ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ರ ಎರಡನೇ ಭಾಗದ ಪಂದ್ಯಗಳಿಗೆ ಯುಎಇಗೆ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿವಿಲಿಯರ್ಸ್‌ ಆಗಮಿಸಿರುವುದಾಗಿ ಘೋಷಣೆ ಮಾಡಿತ್ತು. ಸೆಪ್ಟೆಂಬರ್ 19 ರಂದು ಐಪಿಎಲ್‌ನ ಮುಂದುವರಿದ ಭಾಗ ಆರಂಭವಾಗಲಿದೆ.


ಹಲವು ದೇಶಗಳಲ್ಲಿ ಗಣೇಶ ಚತುರ್ಥಿಯನ್ನು ಆಚರಿಸಲಾಗುತ್ತದೆ ಎಂಬುದು ನಿಜವಾಗಿದ್ದರೂ, ಎಬಿ ಡಿವಿಲಿಯರ್ಸ್ ಅವರ ಮಾರ್ಫ್‌ ಮಾಡಲಾದ ಅಥವಾ ಎಡಿಟ್‌ ಮಾಡಿದ ಚಿತ್ರವನ್ನು ಈ ಸಂದರ್ಭದಲ್ಲಿ ಶೇರ್‌ ಮಾಡಲಾಗಿದೆ. ಈ ಫೋಟೋದಲ್ಲಿ ಆರ್‌ಸಿಬಿ ಆಟಗಾರ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಗಣೇಶನ ಮೂರ್ತಿ ಹಿಡಿದಿರುವುದನ್ನು ತೋರಿಸುತ್ತದೆ.


ಇದನ್ನೂ ಓದಿ: ನಾಗರಹಾವಿನಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹುಡುಗ..ವಿಡಿಯೋ ನೋಡಿದ್ರೆ ಬೆಚ್ಚಿಬೀಳ್ತಿರ!

ಸಾಮಾಜಿಕ ಜಾಲಾತಾಣಗಳಲ್ಲಿ ಹಾಗೆ ಅನೇಕ ಫೋಟೋ ಮತ್ತು ವಿಡಿಯೋಗಳು ವೈರಲ್ ಆಗುತ್ತದೆ. ಆದರೆ ಪ್ರತಿಯೊಂದು ಸತ್ಯವಾಗಿರುವುದಿಲ್ಲ. ಕೆಲವೊಂದು ಎಡಿಟ್ ಂಆಡಲಾಗಿರುತ್ತದೆ. ತಮಾಷೆಗೆ ಎಡಿಟ್ ಮಾಡಿರುವ ಫೋಟೋಗಳು ತೊಂದರೆಯಲ್ಲ, ಆದರೆ ಕೆಲವೊಮ್ಮೆ ಸಮಾಜದ ಸ್ವಾಸ್ಥ ಕೆಡಿಸುವ ರೀತಿ ಫೋಟೋಗಳನ್ನು  ಎಡಿಟ್ ಮಾಡುವುದು ಹಲವಾರು ಸಮಸ್ಯೆಗೆ ದಾರಿ ಮಾಡಿಕೊಟ್ಟಂತೆ.

First published: