HOME » NEWS » District » NELAMANGALA VSSN CEOS ILLEGAL APPOINTMENT MAK

ವಿಎಸ್ಎಸ್ಎನ್ ಸಿಇಓ ನೇಮಕಾತಿಯಲ್ಲಿ ಅಕ್ರಮ: ಸಹಕಾರಿ‌ ಸಂಘಗಳಿಗೂ ಹರಡಿದ ವಂಶ ಪಾರಂಪರ್ಯ ಚಾಳಿ

ಮಣ್ಣೆ ವಿಎಸ್‌ಎಸ್‌ಎನ್ ವ್ಯಾಪ್ತಿಯಲ್ಲಿ ಹಲವಾರು ನಿರುದ್ಯೋಗಿ ಪದವೀಧರರಿದ್ದಾರೆ, ಅವರನ್ನೆಲ್ಲಾ ನಿರ್ಲಕ್ಷಿಸಿ ತಮ್ಮ ಮಗನನ್ನು ಅಧಿಕಾರಕ್ಕೆ ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಓಬಳಾಪುರ ಚಂದ್ರಶೇಖರ್ ನೇರವಾಗಿ ಆರೋಪಿಸಿದರು.

news18-kannada
Updated:August 21, 2020, 7:08 AM IST
ವಿಎಸ್ಎಸ್ಎನ್ ಸಿಇಓ ನೇಮಕಾತಿಯಲ್ಲಿ ಅಕ್ರಮ: ಸಹಕಾರಿ‌ ಸಂಘಗಳಿಗೂ ಹರಡಿದ ವಂಶ ಪಾರಂಪರ್ಯ ಚಾಳಿ
ರೈತ ಸೇವಾ ಸಹಕಾರ ಸಂಘ.
  • Share this:
ನೆಲಮಂಗಲ (ಆ. 20): ಮಣ್ಣೆ ವ್ಯವಸಾಯೋತ್ಪನ್ನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ನಿವೃತ್ತರಾದ ಸಿಇಓ ಬಸವರಾಜು ತನ್ನ ಮಗನನ್ನೇ ಹಂಗಾಮಿ ಸಿಇಓ ಆಗಿ ನೇಮಿಸಿ ಇದೀಗ ಭಾರಿ ವಿವಾದಕ್ಕೆ ಒಳಾಗಾಗಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ಮಣ್ಣೆ ವಿಎಸ್‌ಎಸ್‌ಎನ್‌ಗೆ ಜುಲೈ 31 ರಂದು ನಿವೃತ್ತಿಯಾಗಿದ್ದ ಸಿಇಓ ಆಗಿದ್ದ ಬಸವರಾಜು, ನಿವೃತ್ತರಾದ ಬಳಿಕವೂ ಅಧಿಕಾರ ಉಳಿಸಿಕೊಳ್ಳುವ ಆಸೆಯಲ್ಲಿ ಅವರ ಮಗ ಬಿ.ಗಜೇಂದ್ರ ಅವರನ್ನು ಹಂಗಾಮಿ ಸಿಇಓ ಆಗಿ ನೇಮಕ ಮಾಡಿ ಅವನ ಪರವಾಗಿ ಬಸವರಾಜು ಕೆಲಸ ಮಾಡುತ್ತಿದ್ದಾರೆ. ಇದರಿಂದ ವಿಎಸ್ ಎಸ್ ಎನ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತದೆ ಎಂದು ಮಾಜಿ ಅಧ್ಯಕ್ಷ ಓಬಳಾಪುರ ಚಂದ್ರಶೇಖರ್ ಸಹಕಾರ ಇಲಾಖೆಗೆ ದೂರು ನೀಡಿದ್ದರು. ಈ  ಹಿನ್ನಲೆಯಲ್ಲಿ ಸಹಕಾರಿ ಸಂಘಗಳ ಉಪನಿಂಬಂಧಕ ರಾಮಾಂಜಿನಯ್ಯ ಸ್ಥಳಕ್ಕೆ ಭೇಟಿ ನೀಡಿ ಎಲ್ಲಾ ಕಡತಗಳನ್ನು ಪರಿಶೀಲನೆ ನಡೆಸಿದ್ದಾರೆ.

2011 ರಲ್ಲಿ ನೇಮಕವಾಗಿದ್ದ ವಿರುಪಾಕ್ಷಯ್ಯ ಎಂಬಾತ ಒಂಬತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದು ಸಿಇಒ ಬಸವರಾಜು ನಿವೃತ್ತಿ ನಂತರ ಸೇವಾ ಜೇಷ್ಟತೆ ಮೇರೆಗೆ ಆತನಿಗೆ ಮುಂಬಡ್ತಿ ಸಿಗಬೇಕಿತ್ತು, ಆದರೆ ರಾಜಕೀಯಕ್ಕೆ ಮಾತ್ರ ಸೀಮಿತವಾಗಿದ್ದ ವಂಶಪಾರಂಪರ್ಯ ಆಡಳಿತಕ್ಕೆ ಕಳ್ಳದಾರಿಯ ಮೂಲಕ ಬಸವರಾಜು ಮುಂದಾಗಿದ್ದಾರೆ,

ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲಾ, ಸಿಇಓ ಆಯ್ಕೆಗೆ ಪದವಿ ಅವಶ್ಯಕತೆ ಇದೆ, ಇದನ್ನು ಸಂಘದ ನೋಟೀಸ್ ಫಲಕದಲ್ಲೂ ಘೋಷಣೆ ಮಾಡಿಲ್ಲ, ಯಾವುದೇ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಣೆ ಮಾಡಿಲ್ಲ, ಮಣ್ಣೆ ವಿಎಸ್‌ಎಸ್‌ಎನ್ ವ್ಯಾಪ್ತಿಯಲ್ಲಿ ಹಲವಾರು ನಿರುದ್ಯೋಗಿ ಪದವೀಧರರಿದ್ದಾರೆ, ಅವರನ್ನೆಲ್ಲಾ ನಿರ್ಲಕ್ಷಿಸಿ ತಮ್ಮ ಮಗನನ್ನು ಅಧಿಕಾರಕ್ಕೆ ತರಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಮಾಜಿ ಅಧ್ಯಕ್ಷ ಓಬಳಾಪುರ ಚಂದ್ರಶೇಖರ್ ನೇರವಾಗಿ ಆರೋಪಿಸಿದರು.

ಉಪನಿಂಬಂಧಕ ರಾಮಾಂಜಿನಯ್ಯ ಈ ಬಗ್ಗೆ ಮಾತನಾಡಿ ಸಭೆಯ ನಡಾವಳಿ, ಕಡತ, ಹಾಜರಾತಿ ಎಲ್ಲವನ್ನೂ ಪರಿಶೀಲಿಸಿದ್ದೇನೆ. ನಮ್ಮ ಸಹಕಾರ ಸಂಘಗಳ ಸಹಾಯಕ ನಿಭಂಧಕರ ವರದಿ ನೀಡುತ್ತೇನೆ, ಅದರ ಆಧಾರದ ಮೇಲೆ ಒಂದು ವಾರದೊಳಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂದರು.

ಮಣ್ಣೆ ವಿಎಸ್‌ಎಸ್‌ಎನ್ ಅಧ್ಯಕ್ಷ ಎಂ.ಸೀತಾರಾಮಯ್ಯ ಮಾತನಾಡಿ ಯಾವುದೋ ಸಮಯದಲ್ಲಿ ನಮ್ಮಿಂದ ಸಹಿ ಪಡೆದು ನಿವೃತ್ತ ಸಿಇಒ ಬಸವರಾಜು ಈ ಕೆಲಸ ಮಾಡಿದ್ದಾರೆ, ಈಗಾಗಲೇ ಈ ವಿಷಯದ ಮೇಲೆ ಚರ್ಚೆ ಮಾಡಲು ಆಗಸ್ಟ್ 24ಕ್ಕೆ ಸಭೆ ಕರೆಯಲಾಗಿದೆ. ನೇಮಕ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಕ್ರಮ ಕೈಗೊಳ್ಳಲಾಗುವುದು ಅರ್ಹ ಅಭ್ಯರ್ಥಿಯನ್ನು ನಮ್ಮ ಸಂಘದ ವ್ಯಾಪ್ತಿಯಲ್ಲೇ ಆಯ್ಕೆ ಮಾಡಲಾಗುವುದು ಎಂದರು.

ಆಯ್ಕೆಯ ಹಿಂದೆ ಬಹಳಷ್ಟು ರಾಜಕೀಯ ಹುನ್ನಾರವಿದೆ, ಆಹಾರ ವಿತರಕನಾದ ಪರಮೇಶ್ ಸುಮಾರು 11 ವರ್ಷಗಳಿಂದ ಕಾರ್ಯನಿರ್ವಹಿಸಿದ್ದು ಬಡ್ತಿ ನೀಡಿಲ್ಲ. ಇತ್ತ ಆಯ್ಕೆ ಪ್ರಕ್ರಿಯೆ ಪಾರದರ್ಶಕವಾಗಿಲ್ಲ, ಸಿಇಓ ಆಯ್ಕೆಗೆ ಪದವಿ ಅವಶ್ಯಕತೆ ಇದೆ ಎಂದು ಸಿ‌ಇ‌ಒಗೆ ಆರೋಪಗಳ ಪಟ್ಟಿ ಸಲ್ಲಿಸಿದರು.ಇತ್ತ ಉಪನಿಂಬಂಧಕ ರಾಮಾಂಜಿನಯ್ಯ ಸಭೆಯ ನಡಾವಳಿ, ಕಡತ, ಹಾಜರಾತಿ ಎಲ್ಲವನ್ನೂ ಪರಿಶೀಲಿಸಿದ್ದೇನೆ. ನಮ್ಮ ಮುಖ್ಯ ಕಚೇರಿ ದೊಡ್ಡಬಳ್ಳಾಪುರದ ಮುಖ್ಯಸ್ಥರಿಗೆ ಮಾಹಿತಿ ನೀಡುತ್ತೇನೆ, ವರದಿ ತಯಾರಿಸುತ್ತೇನೆ, ನಂತರ ವರದಿ ಆಧಾರದ ಮೇಲೆ ಒಂದುವಾರದೊಳಗೆ ದೊಡ್ಡಬಳ್ಳಾಪುರ ಸಹಕಾರ ಸಂಘ ಕ್ರಮ ಕೈಗೊಳ್ಳತ್ತದೆ, ಸಂಘ ಸೂಪರ್ ಸೀಡ್ ಮಾಡಲು ಬಿಡದೇ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.

ನಂತರ ಆಹಾರ ದಾಸ್ತಾನು ಮಾರಾಟಗಾರ ವಿರೂಪಾಕ್ಷಯ್ಯ ಮಾತನಾಡಿ  ನಾನು ಸಮಾರು 11 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ, ಎರಡು ಸಾವಿರದಿಂದ ಕಾರ್ಯ ಆರಂಭಿಸಿದ್ದೇನೆ, ನನಗೆ ಬಡ್ತಿ ನೀಡದೇ ವಿದ್ಯಾರ್ಹತೆಯ ನೆಪವೊಡ್ಡಿದ್ದಾರೇ, ನನಗೆ ಕೆಲಸ ನೀಡಿ ಎಂದು ಮೇಲಧಿಕಾರಿಗಳು ಬಳಿ ಮನವಿ ಮಾಡಿದ್ದೇನೆ ಎಂದರು. ಒಟ್ಟಿನಲ್ಲಿ ಮಣ್ಣೆ ವಿಎಸ್ಎಸ್ಎನ್ ನಲ್ಲಿ ಭಾರಿ ಅಕ್ರಮವೊಂದು ವಂಶಪಾರಂಪರರ್ಯ ರೀತಿ ತಲೆ ಎತ್ತಿರುವುದು ವಿಪರ್ಯಾಸವೇ ಸರಿ.
Published by: MAshok Kumar
First published: August 21, 2020, 7:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading