HOME » NEWS » District » NEGLIGENCE OF FLOOD AFFECTED AREAS VATAL NAGARA MOVEMENT IN KALBURGI SAKLB HK

ನೆರೆ ಪೀಡಿತ ಪ್ರದೇಶಗಳ ನಿರ್ಲಕ್ಷ್ಯ ಆರೋಪ ; ಕಲಬುರ್ಗಿಯಲ್ಲಿ ವಾಟಾಳ್ ನಾಗರಾಜ್ ಹೋರಾಟ

ಕರ್ನಾಟಕದಿಂದ ಬಿಜೆಪಿಯಿಂದ ಅತಿ ಹೆಚ್ಚು ಸಂಸದರು ಆಯ್ಕೆಯಾದರು ನೆರೆ ಸಂತ್ರಸ್ತರ ಪರ ಮಾತಾಡುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ತರುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

news18-kannada
Updated:October 27, 2020, 6:40 PM IST
ನೆರೆ ಪೀಡಿತ ಪ್ರದೇಶಗಳ ನಿರ್ಲಕ್ಷ್ಯ ಆರೋಪ ; ಕಲಬುರ್ಗಿಯಲ್ಲಿ ವಾಟಾಳ್ ನಾಗರಾಜ್ ಹೋರಾಟ
ವಾಟಾಳ್ ನಾಗರಾಜ್
  • Share this:
ಕಲಬುರ್ಗಿ(ಅಕ್ಟೋಬರ್​. 27): ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಹೈದರಾಬಾದ್ ಕರ್ನಾಟಕಕ್ಕೆ ಎಂಟ್ರಿಕೊಟ್ಟಿದ್ದಾರೆ. ಕೆಲ ದಿನಗಳ ಹಿಂದೆ ಕಲಬುರ್ಗಿಗೆ ಆಗಮಿಸಿ ಈಶಾನ್ಯ ಕರ್ನಾಟಕ ಶಿಕ್ಷಕರ ವಿಧಾನ ಪರಿಷತ್​​ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿ ವಾಟಾಳ್ ನಾಗರಾಜ್ ಗಮನ ಸೆಳೆದಿದ್ದರು. ಇದೀಗ ವಿಧಾನ ಪರಿಷತ್ ಚುನಾವಣೆ ಮತದಾನಕ್ಕೆ ಮುನ್ನಾ ದಿನ ಕಲಬುರ್ಗಿಯಲ್ಲಿ ಕಾಣಿಸಿಕೊಂಡ ವಾಟಾಳ್ ಪ್ರವಾಹ ಸಂತ್ರಸ್ತರ ಪರ ಧ್ವನಿ ಎತ್ತಿದ್ದಾರೆ. ಹೈದರಾಬಾದ್‌ ಕರ್ನಾಟಕದ ಪ್ರವಾಹ ನಿರ್ವಹಣೆಯಲ್ಲಿ ಸರಕಾರ ವಿಫಲವಾಗಿದೆ ಎಂದು ಆರೋಪಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕಲಬುರ್ಗಿಯಲ್ಲಿ ಪ್ರತಿಭಟಿಸಲಾಯಿತು. ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟಿಸಲಾಯಿತು. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಅತಿಯಾದ ಪ್ರವಾಹದಿಂದ ಉತ್ತರ ಕರ್ನಾಟಕ ಮುಳುಗಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಆದರೆ ಮುಖ್ಯಮಂತ್ರಿ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಜನರ ಕೂಗನ್ನು ಆಲಿಸುವ ಪ್ರಯತ್ನ ಮಾಡಿಲ್ಲ. ಆಕಾಶದಲ್ಲಿ ಹಾರಾಟ ನಡೆಸಿದರೆ ನೆರೆಸಂತ್ರಸ್ತರ ಗೋಳು ಏನೆಂಬುದು ತಿಳಿಯುವುದಿಲ್ಲ. ಆದರೆ, ಸಂತ್ರಸ್ತರ ಹತ್ತಿರ ಹೋಗುವ ವ್ಯವಧಾನವನ್ನು ಸಿಎಂ ಯಡಿಯೂರಪ್ಪ ತೋರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿರೋಧ ಪಕ್ಷಗಳಿಗೂ ಕೊರೋನಾ ಸೋಂಕು ತಗುಲಿದೆ. ಅವರೂ ಸಹ ನೆರೆಪೀಡಿತ ಪ್ರದೇಶಗಳಲ್ಲಿ ಅಡ್ಡಾಡುತ್ತಿಲ್ಲ. ನೆರೆ ಸಂತ್ರಸ್ತರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಿಡಿ ಕಾರಿದರು. ಕರ್ನಾಟಕದಿಂದ ಬಿಜೆಪಿಯಿಂದ ಅತಿ ಹೆಚ್ಚು ಸಂಸದರು ಆಯ್ಕೆಯಾದರು ನೆರೆ ಸಂತ್ರಸ್ತರ ಪರ ಮಾತಾಡುತ್ತಿಲ್ಲ. ಕೇಂದ್ರದ ಮೇಲೆ ಒತ್ತಡ ತರುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಆರೋಪಿಸಿದರು.

ಇದನ್ನೂ ಓದಿ : Nikhil Kumaraswamy : ಕುರುಕ್ಷೇತ್ರ ಮುಗಿಯುತ್ತಿದ್ದಂತೆ ನನ್ನ ಹಾಗೂ ಮುನಿರತ್ನ ಸಂಬಂಧ ಮುಗಿದಿದೆ : ನಿಖಿಲ್ ಕುಮಾರಸ್ವಾಮಿ

ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಸ್ವತಃ ಪ್ರಧಾನಿಗಳೇ ಹೈದರಾಬಾದ್‌ ಕರ್ನಾಟಕಕ್ಕೆ ಆಗಮಿಸಿ ಹಾನಿಯ ಸಮೀಕ್ಷೆ ನಡೆಸಬೇಕು. ತೀವ್ರ ಹಾನಿಗೆ ತುತ್ತಾದ ಪ್ರದೇಶಕ್ಕೆ ನ್ಯಾಯ ಒದಗಿಸಿಕೊಡಬೇಕು. ಹಾನಿಯ ಸಮೀಕ್ಷೆ ನಡೆಸಿ ಕೂಡಲೇ ಪರಿಹಾರ ನೀಡಬೇಕು. ಬೀದರ್ ನಿಂದ ಹೋರಾಟ ಆರಂಭಿಸುವುದಾಗಿ ಎಚ್ಚರಿಸಿದರು.

ಗಡಿಭಾಗದಲ್ಲಿ ಕನ್ನಡ ಕಣ್ಮರೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಚಳವಳಿ ಹಮ್ಮಿಕೊಳ್ಳಲಾಗುವುದು. ಗಡಿಯಲ್ಲಿ ಕನ್ನಡ ಕಟ್ಟಿ ಬೆಳೆಸಲು ತೀವ್ರತರದ ಹೋರಾಟಗಳನ್ನು ರೂಪಿಸಲಾಗುವುದು. ನವೆಂಬರ್ ತಿಂಗಳಿಂದ ಬಸವೇಶ್ವರರ ಕರ್ಮಭೂಮಿ ಬೀದರ್ ಜಿಲ್ಲೆಯಿಂದ ಹೋರಾಟ ಆರಂಭಿಸುವುದಾಗಿ ವಾಟಾಳ್ ತಿಳಿಸಿದ್ದಾರೆ.
Published by: G Hareeshkumar
First published: October 27, 2020, 6:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories