ಆನೇಕಲ್: ಸ್ಕೈವಾಕ್-ಸಬ್ ವೇ ಬಳಕೆಗೆ ನಿರ್ಲಕ್ಷ್ಯ, ಪಾದಚಾರಿಗಳಿಂದಲೇ ಅಪಘಾತಕ್ಕೆ ಆಹ್ವಾನ

ಕೆಲ ಪಾದಚಾರಿಗಳು ಹೆದ್ದಾರಿ ದಾಟಲು ಸ್ಕೈವಾಕ್ ಮತ್ತು ಸಬ್ ವೇಗಳನ್ನು ಬಳಕೆ ಮಾಡದೇ ನಿರ್ಲಕ್ಷ್ಯ ತೋರಿತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅಸುರಕ್ಷಿತವಾಗಿ ವಾಹನಗಳ ನಡುವೆ ಅಡ್ಡದಿಡ್ಡಿಯಾಗಿ ಹೆದ್ದಾರಿ ದಾಟಲು ಹೋಗಿ ಅಪಘಾತಗಳಾಗಿ ಸಾವನ್ನಪ್ಪುತ್ತಿದ್ದಾರೆ.

ಸ್ಕೈವಾಕ್.

ಸ್ಕೈವಾಕ್.

  • Share this:
ಆನೇಕಲ್: ಅದು ರಾಜ್ಯದಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ. ನಿತ್ಯಾ ಒಂದಿಲ್ಲೊಂದು ಅಪಘಾತವಾಗಿ ಅಮಾಯಕ ಪಾದಚಾರಿಗಳು ರಸ್ತೆ ದಾಟಲು ಹೋಗಿ ಸಾವನ್ನಪ್ಪುತ್ತಿದ್ರು. ಹಾಗಾಗಿ ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಪ್ರಮುಖ ಸ್ಥಳಗಳಲ್ಲಿ  ಸ್ಕೈ ವಾಕ್ ಮತ್ತು ಸಬ್ ವೇಗಳನ್ನು ನಿರ್ಮಿಸಲಾಗಿದೆ.  ಆದರೆ, ಕೆಲ ಪಾದಚಾರಿಗಳು ಮಾತ್ರ ಸ್ಕೈವಾಕ್ ಮತ್ತು ಸಬ್ ವೇಗಳನ್ನು ಬಳಸದೆ ಅಪಘಾತಕ್ಕೆ ಆಹ್ವಾನ ನೀಡುತ್ತಿದ್ದಾರೆ. ಹೌದು ಪಾದಚಾರಿ  ಗಳಿಗಾಗಿ ನಿರ್ಮಿಸಿರುವ ಸ್ಕೈ ವಾಕ್ ಮತ್ತು ಸಬ್ ವೇಗಳು. ಅವುಗಳನ್ನು ಬಳಸದೇ ವೇಗವಾಗಿ ಸಂಚರಿಸುತ್ತಿರುವ ವಾಹನಗಳ ನಡುವೆ ಅಡ್ಡದಿಡ್ಡಿಯಾಗಿ ಹೆದ್ದಾರಿ ದಾಟುತ್ತಿರುವ ಪಾದಚಾರಿಗಳು. ಈ ಎಲ್ಲಾ ದೃಶ್ಯಗಳು ಕಂಡುಬಂದದ್ದು ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೊಸೂರು ಹೆದ್ದಾರಿಯಲ್ಲಿ.

ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪಾದಚಾರಿಗಳು ಹೆಚ್ಚು ಸಂಚರಿಸುವ ಕಡೆಗಳಲ್ಲಿ ಸ್ಕೈ ವಾಕ್ ಮತ್ತು ಸಬ್ ವೇಗಳನ್ನು ನಿರ್ಮಿಸಿದೆ. ಆದ್ರೆ ಕೆಲ ಪಾದಚಾರಿಗಳು ಹೆದ್ದಾರಿ ದಾಟಲು ಸ್ಕೈವಾಕ್ ಮತ್ತು ಸಬ್ ವೇಗಳನ್ನು ಬಳಕೆ ಮಾಡದೇ ನಿರ್ಲಕ್ಷ್ಯ ತೋರಿತ್ತಿದ್ದಾರೆ. ಬಹುತೇಕ ಸಂದರ್ಭಗಳಲ್ಲಿ ಅಸುರಕ್ಷಿತವಾಗಿ ವಾಹನಗಳ ನಡುವೆ ಅಡ್ಡದಿಡ್ಡಿಯಾಗಿ ಹೆದ್ದಾರಿ ದಾಟಲು ಹೋಗಿ ಅಪಘಾತಗಳಾಗಿ ಸಾವನ್ನಪ್ಪುತ್ತಿದ್ದಾರೆ. ಹೆದ್ದಾರಿ ಪ್ರಾಧಿಕಾರದವರು ಸಬ್ ವೇ ಮತ್ತು ಸ್ಕೈವಾಕ್ ಬಳಕೆ ಮಾಡುವಂತೆ ತಿಳಿಸಿದರು ಪಾದಚಾರಿಗಳು ಪಾಲನೆ ಮಾಡುವುದಿಲ್ಲ ಎಂದು ಸ್ಥಳೀಯರಾದ ಆಟೋ ಚಾಲಕ ರವಿ ತಿಳಿಸಿದ್ದಾರೆ.

ಇನ್ನೂ ಸ್ಕೈವಾಕ್ ಮತ್ತು ಸಬ್ ವೇಗಳು ಇಲ್ಲದಿದ್ದಾಗ ಪಾದಚಾರಿಗಳು ರಸ್ತೆ ದಾಟಲು ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ಬಳಿಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಪ್ರಮುಖರು ಜಂಕ್ಷನ್ಗಳಲ್ಲಿ ಸ್ಕೈವಾಕ್ ವಾಕ್ ಮತ್ತು ಸಬ್ ವೇಗಳನ್ನು ನಿರ್ಮಿಸಿದ್ದಾರೆ. ಆದರೆ ಕೆಲ ಪಾದಚಾರಿಗಳು ಮಾತ್ರ ಸ್ಕೈವಾಕ್ ಮತ್ತು ಸಬ್ ವೇಗಳನ್ನು ಬಳಸದೇ ಅಸುರಕ್ಷಿತವಾಗಿ ರಸ್ತೆ ದಾಟುತ್ತಿದ್ದಾರೆ‌.

ಇದನ್ನೂ ಓದಿ: Ramesh Jarkiholi CD Case: ರಮೇಶ್ ಜಾರಕಿಹೊಳಿಗೆ ಕೊರೋನಾ ಸೋಂಕು; ಐಸಿಯುನಲ್ಲಿ ದಾಖಲಾಗಿರೋ ವಿಡಿಯೋ ಬಿಡುಗಡೆ!

ಇದರಿಂದ ಅಪಘಾತಗಳು ಉಂಟಾಗಿ ಅಮಾಯಕರು ಮರಣಿಸುತ್ತಿದ್ದಾರೆ.  ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಸ್ಕೈವಾಕ್  ಮತ್ತು ಸಬ್ ವೇಗಳನ್ನು ನಿರ್ಮಿಸಿದ್ದಾರೆ. ಆದ್ರೆ ಬಳಕೆ ಮಾಡಲು ಪಾದಚಾರಿಗಳು ಅಸಡ್ಡೆ ತೊರುತ್ತಿದ್ದಾರೆ.  ಸಾರ್ವಜನಿಕರಲ್ಲಿ ಸ್ಕೈವಾಕ್  ಮತ್ತು ಸಬ್ ವೇಗಳ ಬಳಕೆ ಬಗ್ಗೆ ಅರಿವು ಮೂಡಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕು ಎಂದು ವಾಹನ ಸವಾರ ವೇಣು ತಿಳಿಸಿದ್ದಾರೆ.

ಒಟ್ಟಿನಲ್ಲಿ ಸರ್ಕಾರ ಸೌಲಭ್ಯ ಕಲ್ಪಿಸದಿದ್ದಾಗ ಜನ ಬೊಬ್ಬೆ ಹೊಡೆಯುತ್ತಾರೆ. ಆದ್ರೆ ಸೌಲಭ್ಯಗಳು ಒದಗಿಸಿದ ಬಳಿಕ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರುತ್ತಾರೆ. ಇದೆ ಚಾಳಿ ಇದೀಗ ಹೆದ್ದಾರಿ ಪ್ರಾಧಿಕಾರ ನಿರ್ಮಿಸಿರುವ ಸಬ್ ವೇ ಮತ್ತು ಸ್ಕೈ ವಾಕ್ಗಳಿಗು ಬಂದಿದ್ದು, ಇನ್ನಾದರೂ ಪದಚಾರಿಗಳು ಹೆದ್ದಾರಿ ದಾಟುವಾಗ ಕಡ್ಡಾಯವಾಗಿ ಸ್ಕೈವಾಕ್ ಮತ್ತು ಸಬ್ ವೇಗಳನ್ನು ಬಳಸಿ ಅಪಘಾತಗಳನ್ನು ತಪ್ಪಿಸಬೇಕಿದೆ. ಮತ್ತು ತಮ್ಮ ಜೀವಗಳನ್ನು ಉಳಿಸಿಕೊಳ್ಳಬೇಕಿದೆ.

(ವರದಿ : ಆದೂರು ಚಂದ್ರು)
Published by:MAshok Kumar
First published: