HOME » NEWS » District » NEED STRONG ACT AGAINST LOVE JIHAD SAYS MP PRATAP SIMHA MAK

ಉದ್ಧವ್ ಠಾಕ್ರೆ ಹುಲಿ ಅಲ್ಲ ಇಲಿ; ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಅಗತ್ಯ: ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ

ಕೆಲವು ವ್ಯಕ್ತಿಗಳು ಪ್ರೀತಿಯ ನಾಟಕವಾಡಿ, ಧರ್ಮಾಂಧತೆ ಜತೆಗೆ ಮತಾಂತರದ ಉದ್ದೇಶ ಹೊಂದಿದ್ದಾರೆ. ಲವ್ ಜಿಹಾದ್ ಗೆ ಇದು ಉದಾಹರಣೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ಬೇಕೇಬೇಕು ಎಂದು ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟಿದ್ದಾರೆ.

news18-kannada
Updated:November 5, 2020, 7:08 AM IST
ಉದ್ಧವ್ ಠಾಕ್ರೆ ಹುಲಿ ಅಲ್ಲ ಇಲಿ; ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಅಗತ್ಯ: ಸಂಸದ ಪ್ರತಾಪ್ ಸಿಂಹ ಅಭಿಪ್ರಾಯ
ಸಂಸದ ಪ್ರತಾಪ್​​ ಸಿಂಹ.
  • Share this:
ಕೊಡಗು : ಮಹಾರಾಷ್ಟ್ರದ ಬಾಳಾಠಾಕ್ರೆ ಹುಲಿಯಂತಿದ್ದರು. ಆದರೆ ಅವರ ಹೊಟ್ಟೆಯಲ್ಲಿ ಮಹಾರಾಷ್ಟ್ರದ ಸಿಎಂ ಆಗಿರುವ ಉದ್ಭವಠಾಕ್ರೆ ಇಲಿಮರಿ ಆಗಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ಮಹಾರಾಷ್ಟ್ರದಲ್ಲಿರೋದು ಶಿವಸೇನೆ ಅಲ್ಲ ಅದು ಸೋನಿಯಾ ಸೇನೆ ಎಂದು ಟೀಕಿಸಿದರು. ತುರ್ತು ಪರಿಸ್ಥಿತಿ ಹೇರಿ ಕಾಂಗ್ರೆಸ್ ಗೆ ಚೆನ್ನಾಗಿ ಅಭ್ಯಾಸ ಆಗಿದೆ. ಅದೇ ರೀತಿ ಸೋನಿಯಾ ಸೇನೆ ಕೆಲಸ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಕರ್ತ ಅರ್ನಬ್ ಗೋಸ್ವಾಮಿ ಬಂಧನಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ ಮಾಧ್ಯಮಗಳು ಯಾವಾಗಲೂ ಪ್ರಶ್ನೆ ಮಾಡುತ್ತಿರಬೇಕು. ಅದನ್ನು ರಾಜಕಾರಣಿಗಳು ಯಾವಾಗಲೂ ಸಕಾರಾತ್ಮಕವಾಗಿ ತೆಗೆದುಕೊಳ್ಳಬೇಕು. ಮಾಧ್ಯಮಗಳು ಮಾಡುವ ಪ್ರಶ್ನೆಗೆ ಸರಿಯಾದ ದಾಖಲೆಗಳು ಇಲ್ಲದಿದ್ದರೆ, ಬೇರೆ ಕ್ರಮ ಕೈಗೊಳ್ಳಬಹುದು. ಅದುಬಿಟ್ಟು ಸೋನಿಯಾ ಸೇನೆ ಈ ರೀತಿ ಮಾಧ್ಯಮದ ಮೇಲೆ ತುರ್ತು ಪರಿಸ್ಥಿತಿ ಹೇರುವುದು ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಪ್ರತಾಪ್ ಸಿಂಹ, ಮದುವೆಗೆ ಮುನ್ನ ಮತಾಂತರ ಕಡ್ಡಾಯ ಎನ್ನುವವರು ಹುಟ್ಟು ಮತಾಂಧರು. ಹೀಗೆ ಒತ್ತಡ ಹೇರುವವರ ವಿರುದ್ದ ಕಠಿಣ ಕಾನೂನು  ಜಾರಿಗೆ ತರುವುದು ಅತ್ಯಗತ್ಯ ಎಂದು ಹೇಳಿದ್ದಾರೆ. ಪ್ರೀತಿ ಮಾಡುವಾಗ ಅಡ್ಡ ಬಾರದ ಧರ್ಮ ಮದುವೆಗೆ ಮಾತ್ರ ಅಡ್ಡ ಬರುವುದೇಕೆ. ಅದು ನಿಜವಾದ ಪ್ರೀತಿಯೂ ಅಲ್ಲ, ಬದಲಾಗಿ ಜಿಹಾದ್ ಗಾಗಿಯೆ ಮಾಡುವ ಪ್ರೀತಿ ಅದು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಇದರ ವಿರುದ್ಧ ಕಠಿಣ ಕ್ರಮ ತರಲು ಮುಂದಾಗಿದ್ದಾರೆ. ರಾಜ್ಯದಲ್ಲೂ ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ತರಲು ಸಚಿವ ಸಿ ಟಿ ರವಿ ಆಲೋಚಿಸುತಿದ್ದಾರೆ. ಅದು ಒಳ್ಳೆಯ ಬೆಳವಣಿಗೆ ಎಂದು ಅಭಿಪ್ರಾಯಿಸಿದ್ದಾರೆ.

ಇದನ್ನೂ ಓದಿ: ಪತ್ರಕರ್ತ ಅರ್ನಾಬ್​ ಗೋಸ್ವಾಮಿ ಬಂಧನ ಸಂತಸ ತಂದಿದೆ; ಮೃತ ಅನ್ವಯ್​ ನಾಯಕ್ ಕುಟುಂಬ

ಕೆಲವು ವ್ಯಕ್ತಿಗಳು ಪ್ರೀತಿಯ ನಾಟಕವಾಡಿ, ಧರ್ಮಾಂದತೆ ಜತೆಗೆ ಮತಾಂತರದ ಉದ್ದೇಶ ಹೊಂದಿದ್ದಾರೆ. ಲವ್ ಜಿಹಾದ್ ಗೆ ಇದು ಉದಾಹರಣೆಯಾಗಿದೆ. ಇದಕ್ಕೆ ಕಡಿವಾಣ ಹಾಕಲು ಸೂಕ್ತ ಕಾನೂನು ಬೇಕೇಬೇಕು ಎಂದರು.

ಲವ್ ಜಿಹಾದ್ ಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಅವರು ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ವಿಶ್ವಾಸ ತನಗಿದೆ ಎಂದೂ ಸಂಸದ ಪ್ರತಾಪ್ ಸಿಂಹ ಹೇಳಿದರು.
ಇನ್ನು ರಾಜ್ಯದಲ್ಲಿ ಶಾಲೆಗಳನ್ನು ತೆರೆಯುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಸಂಸದ ಪ್ರತಾಪ್ ಸಿಂಹ ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳ ತೆರೆಯುವುದಕ್ಕಿಂತ ಸ್ವಲ್ಪ ಯೋಚಿಸುವುದು ಒಳ್ಳೆಯದು. ದೆಹಲಿಯಲ್ಲಿ ಮಾಸ್ ಟೆಸ್ಟ್ ಮಾಡಿ ಶಾಲೆ ಆರಂಭಕ್ಕೆ ಚಿಂತಿಸಲಾಗುತ್ತಿದೆ. ಹಾಗೆ ರಾಜ್ಯದಲ್ಲೂ ಆರಂಭಿಸಲು ಸಚಿವರಾದ ಸುರೇಶ್ ಕುಮಾರ್ ಅವರು ನಿರಂತರ ಸಭೆಗಳನ್ನು ಮಾಡುತ್ತಿದ್ದಾರೆ ಎಂದರು.
Published by: MAshok Kumar
First published: November 5, 2020, 7:03 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories