ಕೊಡಗಿಗೆ ಆಗಮಿಸಿದ ಎನ್​ಡಿಆರ್​ಎಫ್ ತಂಡ; ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಜ್ಜು 

ಈ ಬಾರಿಯೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವುದಿರಂದ ಪ್ರವಾಹ, ಭೂ ಕುಸಿತದಂತಹ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಬೇಕಾಗಿರುವ ಬೋಟ್, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಎನ್​ಡಿಆರ್​ಎಫ್ ತಂಡ ಜಿಲ್ಲೆಗೆ ಆಗಮಿಸಿದೆ.

ಕೊಡಗಿಗೆ ಆಗಮಿಸಿದ ಎನ್​ಡಿಆರ್​ಎಫ್ ತಂಡದ ಸದಸ್ಯರು.

ಕೊಡಗಿಗೆ ಆಗಮಿಸಿದ ಎನ್​ಡಿಆರ್​ಎಫ್ ತಂಡದ ಸದಸ್ಯರು.

  • Share this:
ಕೊಡಗು: ಕಳೆದ ಎರಡು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ ಹಿನ್ನೆಲೆಯಲ್ಲಿ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಎನ್​ಡಿಆರ್​ಎಫ್​ ತಂಡ ಜಿಲ್ಲೆಗೆ ಆಗಮಿಸಿದೆ.

ಆಂಧ್ರಪ್ರದೇಶದ ಗುಂಟೂರಿನಿಂದ 10ನೇ ಬೆಟಾಲಿಯನ್​ನ 23 ಜನರಿರುವ ಒಂದು ತಂಡ ಕೊಡಗಿಗೆ ಆಗಮಿಸಿದೆ. ಮಡಿಕೇರಿಯ ಮೈತ್ರಿ ಹಾಲ್​ನಲ್ಲಿ ತಂಡ ಮೊಕ್ಕಾಂ ಹೂಡಿದೆ. ಎರಡು ವರ್ಷಗಳಲ್ಲೂ ಕೊಡಗಿನಲ್ಲಿ ಭಾರೀ ಭೂಕಂಪ ಮತ್ತು ಪ್ರವಾಹ ಎದುರಾಗಿತ್ತು. ಈ ವೇಳೆ ಎನ್​ಡಿಆರ್​ಎಫ್ ತಂಡ, ಅಗ್ನಿ ಶಾಮಕ ದಳ, ಜಿಲ್ಲಾ ಶಸ್ತ್ರಾಸ್ತ್ರ ಪಡೆ ಮತ್ತು ಪೊಲೀಸ್ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಿಬ್ಬಂದಿ ಜನರನ್ನು ರಕ್ಷಿಸುವ ಕೆಲಸ ಮಾಡಿದ್ದರು.

ಈ ಬಾರಿಯೂ ಹೆಚ್ಚು ಮಳೆ ಸುರಿಯುವ ಸಾಧ್ಯತೆ ಇರುವುದಿರಂದ ಪ್ರವಾಹ, ಭೂ ಕುಸಿತದಂತಹ ಪ್ರಾಕೃತಿಕ ವಿಕೋಪವನ್ನು ಎದುರಿಸಲು ಬೇಕಾಗಿರುವ ಬೋಟ್, ಲೈಫ್ ಜಾಕೆಟ್ ಸೇರಿದಂತೆ ಅಗತ್ಯ ಪರಿಕರಗಳೊಂದಿಗೆ ಎನ್​ಡಿಆರ್​ಎಫ್ ತಂಡ ಜಿಲ್ಲೆಗೆ ಆಗಮಿಸಿದೆ. ಇನ್ನೆರಡು ದಿನಗಳಲ್ಲಿ ರಾಜ್ಯಕ್ಕೆ ಮಾನ್ಸೂನ್ ಎಂಟ್ರಿ ಕೊಡಲಿದ್ದು, ಕೊಡಗು ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ.ಇದನ್ನು ಓದಿ: ಇಂದು 110 ಕಿ.ಮೀ. ವೇಗದಲ್ಲಿ ಮುಂಬೈಗೆ ಬಂದಪ್ಪಳಿಸಲಿದೆ ನಿಸರ್ಗ ಚಂಡಮಾರುತ; ಕರ್ನಾಟಕದಲ್ಲೂ ಹೈ ಅಲರ್ಟ್
First published: